ತೈಲ ಕಂಪನಿಗಳು ಗ್ರಾಹಕರಿಗೆ ದೊಡ್ಡ ಹೊಡೆತವನ್ನು ನೀಡಿವೆ. ಏಪ್ರಿಲ್ 1 ರಿಂದ ಅಂದರೆ ಯುಗಾದಿಯ (Ugadi 2022) ಶುಭ ದಿನದಿಂದಲೇ ಎಲ್ಪಿಜಿ ಸಿಲಿಂಡರ್ ಬೆಲೆ 250 ರೂ. ಹೆಚ್ಚಳವಾಗಿದೆ. ತೈಲ ಕಂಪನಿಗಳು ವಾಣಿಜ್ಯ LPG ಗ್ಯಾಸ್ ಸಿಲಿಂಡರ್ ಬೆಲೆ (LPG Cylinder Price Hike) ಏರಿಕೆಯ ಬೆಲೆಯನ್ನು ಹೆಚ್ಚಿಸಿವೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳನ್ನು ಬಳಸುವ ಗ್ರಾಹಕರಿಗೆ ಸದ್ಯ ಈ ಬೆಲೆ ಹೆಚ್ಚಳದ ಬಿಸಿ ನೇರವಾಗಿ ತಟ್ಟುವುದಿಲ್ಲವಾದರೂ ಪರೋಕ್ಷ ಪರಿಣಾಮವಂತೂ ಬೀರಲಿದೆ. ಇದರಿಂದ ಹೋಟೆಲ್ ಆಹಾರಗಳ (Hotel Food) ಬೆಲೆ ಗಗನ ಮುಟ್ಟುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿದೆ.
ಅಂದಹಾಗೆ ಯುಗಾದಿಯ ದಿನವೇ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 250 ರೂ. ಹೆಚ್ಚಳ ಮಾಡಲಾಗಿದೆ. ಹೀಗಾಗಿ ಯುಗಾದಿಯ ದಿನದಿಂದ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಖರೀದಿಸಲು ಗ್ರಾಹಕರು 2253 ರೂ. ಪಾವತಿಸಬೇಕಾಗಿದೆ.
ಎಲ್ಲೆಲ್ಲಿ ಎಷ್ಟಿದೆ ಎಲ್ಪಿಜಿ ಸಿಲಿಂಡರ್ ಬೆಲೆ?
ಹೊಸ ಆರ್ಥಿಕ ವರ್ಷದ ಆರಂಭದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಮುಂಬೈನಲ್ಲಿ 19 ಕೆ.ಜಿ.ಗೆ 250 ರೂ.ನಿಂದ 2,205 ರೂ.ಗೆ 1,955 ರೂ.ಗೆ ಏರಿದೆ. ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,253 ರೂ.ಗೆ ಏರಿಕೆಯಾಗಿದೆ. ಮಾರ್ಚ್ 1 ರಂದು 2,012 ರೂ.ಗಳಷ್ಟಿದ್ದ ದರ ಮಾರ್ಚ್ 22 ರಂದು 2,003 ರೂ.ಗೆ ಕುಸಿದಿದೆ.
ಕೋಲ್ಕತ್ತಾದಲ್ಲಿ ಹೆಚ್ಚಳದ ನಂತರ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಈ ಹಿಂದೆ ಇದ್ದ ಬೆಲೆ 2,087 ರಿಂದ 2,351 ಕ್ಕೆ ಏರಿದೆ. ಚೆನ್ನೈನಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 2,138 ರೂ.ನಿಂದ 2,406 ರೂ.ಗೆ ಏರಿಕೆಯಾಗಿದೆ.
ಇದನ್ನೂ ಓದಿ: Good News: ಹಣ ಇಲ್ಲದಿದ್ದರೂ ರೈಲು ಟಿಕೆಟ್ ಬುಕ್ ಮಾಡೋದು ಹೀಗೆ!
ವಿಮಾನ ಯಾನ ಬೆಲೆಯೂ ಏರಿಕೆಯಾಗುತ್ತದೆಯೇ?
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ವಿಮಾನಯಾನ ಟರ್ಬೈನ್ ಇಂಧನ (ಎಟಿಎಫ್) ಬೆಲೆಗಳನ್ನು ಪ್ರತಿ ಕಿಲೋಲೀಟರ್ಗೆ (ಕೆಎಲ್) ಶೇಕಡಾ 2 ರಷ್ಟು ಏರಿಕೆ ಮಾಡಲಾಗಿದೆ. ಇದರಿಂದ ವಿಮಾನ ಪ್ರಯಾಣ ದರಗಳೂ ಏರಿಕೆಯಾಗಿವ ಸಾಧ್ಯತೆಯಿದೆ. ಸರಾಸರಿ ಅಂತಾರಾಷ್ಟ್ರೀಯ ಬೆಲೆಯ ಆಧಾರದ ಮೇಲೆ ಪ್ರತಿ ತಿಂಗಳ 1 ಮತ್ತು 16 ರಂದು ಜೆಟ್ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. 2022 ರ ಆರಂಭದಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ATF ಬೆಲೆಗಳು ಹೆಚ್ಚಾಗುತ್ತಿವೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:
ಬಾಗಲಕೋಟೆ - 107.82 ರೂ. (3 ಪೈಸೆ ಏರಿಕೆ)
ಬೆಂಗಳೂರು -107.30ರೂ. (00)
ಬೆಂಗಳೂರು ಗ್ರಾಮಾಂತರ -107.30ರೂ. (7 ಪೈಸೆ ಇಳಿಕೆ)
ಬೆಳಗಾವಿ - 107.09 ರೂ. (22 ಪೈಸೆ ಇಳಿಕೆ)
ಬಳ್ಳಾರಿ - 108.94 ರೂ. (30 ಪೈಸೆ ಇಳಿಕೆ)
ಬೀದರ್ - 107.60 ರೂ. (24 ಪೈಸೆ ಇಳಿಕೆ)
ಬಿಜಾಪುರ - 107.55 ರೂ. (53 ಪೈಸೆ ಏರಿಕೆ)
ಚಾಮರಾಜನಗರ - 107.43 ರೂ. (69 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - 107.30 ರೂ. (00)
ಚಿಕ್ಕಮಗಳೂರು - 109.63 ರೂ. (64 ಪೈಸೆ ಏರಿಕೆ)
ಚಿತ್ರದುರ್ಗ - 108.37 ರೂ. (35 ಪೈಸೆ ಇಳಿಕೆ)
ದಕ್ಷಿಣ ಕನ್ನಡ - 107.02 ರೂ. (44 ಪೈಸೆ ಏರಿಕೆ)
ದಾವಣಗೆರೆ - 108.61 ರೂ. (69 ಪೈಸೆ ಇಳಿಕೆ)
ಧಾರವಾಡ - 107.05 ರೂ. (00)
ಗದಗ – 107.71 ರೂ. (12 ಪೈಸೆ ಏರಿಕೆ)
ಗುಲಬರ್ಗ - 107.02 ರೂ. (29 ಪೈಸೆ ಇಳಿಕೆ)
ಹಾಸನ – 107.13 ರೂ. (24 ಪೈಸೆ ಇಳಿಕೆ)
ಇದನ್ನೂ ಓದಿ: Alert: ನಿಮ್ಮ ಬೈಕ್, ಕಾರ್ ರೋಡಿಗಿಳಿಸೋ ಮುನ್ನ ಎಚ್ಚರ! ಭಾರೀ ದಂಡ ತುಂಬಬೇಕಾದೀತು ಜೋಕೆ!
ಹಾವೇರಿ - 107.74 ರೂ. (18 ಪೈಸೆ ಇಳಿಕೆ)
ಕೊಡಗು – 108.57 ರೂ. (2 ಪೈಸೆ ಏರಿಕೆ)
ಕೋಲಾರ - 107.17 ರೂ. (00)
ಕೊಪ್ಪಳ- 108.32 ರೂ. (73 ಪೈಸೆ ಏರಿಕೆ)
ಮಂಡ್ಯ – 106.82 ರೂ. (16 ಪೈಸೆ ಏರಿಕೆ)
ಮೈಸೂರು – 106.82 ರೂ. (23 ಪೈಸೆ ಇಳಿಕೆ)
ರಾಯಚೂರು – 107.12 ರೂ. (45 ಪೈಸೆ ಇಳಿಕೆ)
ರಾಮನಗರ – 107.75 ರೂ. (2 ಪೈಸೆ ಇಳಿಕೆ)
ಶಿವಮೊಗ್ಗ – 108.10 ರೂ. (1.01 ರೂ. ಇಳಿಕೆ)
ತುಮಕೂರು – 108.18 ರೂ. (19 ಪೈಸೆ ಇಳಿಕೆ)
ಉಡುಪಿ - 107.18 ರೂ. (30 ಪೈಸೆ ಏರಿಕೆ)
ಉತ್ತರ ಕನ್ನಡ – 109.15 ರೂ. (36 ಪೈಸೆ ಇಳಿಕೆ)
ಯಾದಗಿರಿ – 107.74 ರೂ. (36 ಪೈಸೆ ಇಳಿಕೆ)a
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ