ಏರುತ್ತಿರುವ ಹಣದುಬ್ಬರದಿಂದ ಸಾಮಾನ್ಯ ನಾಗರಿಕರ ಬಜೆಟ್ (Budget) ಕುಸಿಯುತ್ತಿದೆ. ದಿನೇ ದಿನೇ ಹೆಚ್ಚುತ್ತಿರುವ ಬೆಲೆಗಳನ್ನು ನೋಡಿ ಎಷ್ಟೋ ಜನ ಎಷ್ಟು ಸಾಧ್ಯವೋ ಅಷ್ಟು ಉಳಿಸಲು ಪ್ರಯತ್ನಿಸುತ್ತಾರೆ. ಆದರೆ, ಗ್ಯಾಸ್ ಸಿಲಿಂಡರ್ (Gas Cylinder) ನಂತಹ ಅಗತ್ಯ ವಸ್ತುಗಳನ್ನು ಎಷ್ಟೇ ದುಬಾರಿಯಾದರೂ ಖರೀದಿಸಬೇಕು. ಕೆಲವು ಸಿಲಿಂಡರ್ ವಿತರಣೆ ಮಾಡುವವರು ಸಾಮಾನ್ಯ ಜನರ ಈ ಅಗತ್ಯದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಸಿಲಿಂಡರ್ ಡೆಲಿವರಿ (Cylinder Delivery) ಮಾಡುವವರು ಗ್ರಾಹಕರಿಂದ 25-30 ರೂ.ಗಳನ್ನು ಹೆಚ್ಚುವರಿಯಾಗಿ ವಸೂಲಿ ಮಾಡುತ್ತಾರೆ ಎಂದು ಹಲವರು ಹೇಳಿರುವುದನ್ನು ನೀವು ಕೇಳಿರುತ್ತೀರಾ. ಈ ರೀತಿ ಹೆಚ್ಚುವರಿ ಹಣ ಕೇಳುವುದು ಕಾನೂನು ಬಾಹಿರ. ನೀವು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳಬೇಕು.
ಎಕ್ಸ್ಟ್ರಾ ದುಡ್ಡು ಕೇಳಿದ್ರೆ ಕೊಡ್ಬೇಡಿ!
ಬೆಂಗಳೂರಿನಲ್ಲಿ ಗ್ಯಾಸ್ ಸೇವೆಗಳನ್ನು ಭಾರತ್ ಗ್ಯಾಸ್, ಇಂಡೇನ್ ಗ್ಯಾಸ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HP) ಒದಗಿಸುತ್ತದೆ. ಅದರಲ್ಲಿ ಭಾರತ್ ಗ್ಯಾಸ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಗ್ರಾಹಕರ ಸಂಖ್ಯೆಯೇ ಹೆಚ್ಚು. ಈ ಸಿಲಿಂಡರ್ಗಳನ್ನು ಮನೆ ಮನೆಗೆ ತಲುಪಿಸುವ ನೌಕರರಿಗೆ ಮಾಸಿಕ ವೇತನ ನೀಡಲಾಗುತ್ತದೆ. ಅದರ ನಂತರವೂ ಗ್ರಾಹಕರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಾರೆ, ಯಾರಾದರೂ ಅಂತಹ ಬೇಡಿಕೆ ಇಟ್ಟರೆ ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಬಹುದು ಎಂದು ಗ್ಯಾಸ್ ಏಜೆನ್ಸಿ ನೌಕರರು ತಿಳಿಸಿದ್ದಾರೆ.
ಈ ನಂಬರ್ಗೆ ಕರೆ ಮಾಡಿ ಕಂಪ್ಲೇಂಟ್ ಮಾಡಿ!
ಭಾರತ್ ಗ್ಯಾಸ್ - 1800224344
ಇಂಡೇನ್ ಗ್ಯಾಸ್ - 18002333555
ಹಿಂದೂಸ್ತಾನ್ ಪೆಟ್ರೋಲಿಯಂ (HP) - 18002333555
ಸಂಬಂಧಪಟ್ಟ ನೌಕರನ ವಿರುದ್ಧ ಕ್ರಮ ಜರುಗಿಸುತ್ತೆ!
ಗ್ರಾಹಕರು ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬೇಕು ಮತ್ತು ಅವರ ಗ್ರಾಹಕ ಸಂಖ್ಯೆ, ವಿಳಾಸ ಮತ್ತು ಹೆಚ್ಚುವರಿ ಹಣವನ್ನು ವಿನಂತಿಸಿದ ಉದ್ಯೋಗಿಯ ಹೆಸರನ್ನು ನಮೂದಿಸಬೇಕು. ಗ್ಯಾಸ್ ಕಂಪನಿಯು ನಂತರ ವಿಷಯವನ್ನು ತನಿಖೆ ಮಾಡುತ್ತದೆ. ಹಣವನ್ನು ಗ್ಯಾಸ್ ಗ್ರಾಹಕರಿಗೆ ಹೆಚ್ಚುವರಿ ಪಾವತಿಸಲಾಗಿದೆ ಎಂದು ಖಚಿತಪಡಿಸುತ್ತದೆ. ಅಲ್ಲದೇ ಸಂಬಂಧಪಟ್ಟ ನೌಕರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಈ ಉದ್ಯೋಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 10 ಸಿಲಿಂಡರ್ ಬೆಲೆಗೆ 12 ಸಿಲಿಂಡರ್ ಸಿಗುತ್ತೆ, ಆದ್ರೆ ಕಂಡೀಷನ್ಸ್ ಅಪ್ಲೈ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ