Pan Card: ನಿಮ್ ಪ್ಯಾನ್ ಕಾರ್ಡ್ ಕಳೆದು ಹೋಗಿದ್ಯಾ? ಹೀಗೆ​ ಸಿಂಪಲ್ಲಾಗಿ ಮೊಬೈಲ್​ನಲ್ಲಿ ಡೌನ್​ಲೋಡ್​ ಮಾಡಿ

ನೀವು ಪ್ಯಾನ್​ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ಸುಲಭವಾಗಿ ಡೌನ್‌ಲೋಡ್ (Download) ಮಾಡಿಕೊಳ್ಳಬಹುದು. ಪ್ಯಾನ್ ಕಾರ್ಡ್ ಡೌನ್‌ಲೋಡ್ ಮಾಡಲು ಯಾವುದೇ ಕಂಪ್ಯೂಟರ್ (Computer) ಅಥವಾ ಲ್ಯಾಪ್‌ಟಾಪ್ (Laptop) ಅಗತ್ಯವಿಲ್ಲ. ಮೊಬೈಲ್ (Mobile)​ ಇದ್ದರೆ ಸಾಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತ (India) ದೇಶದಲ್ಲಿ ಪ್ಯಾನ್​ ಕಾರ್ಡ್​ (Pan Card) ಅಗತ್ಯ ದಾಖಲೆ (Document) ಯಾಗಿದೆ. ಹಣಕಾಸಿ ವಹಿವಾಟುಗಳಿಗೆ ಈ ಪ್ಯಾನ್​ ಕಾರ್ಡ್ ಬೇಕೇ ಬೇಕು. ಎಲ್ಲ ರೀತಿಯ ಸಾಲಗಳನ್ನು ತೆಗೆದುಕೊಳ್ಳಲು ಪ್ಯಾನ್​ ಕಾರ್ಡ್​. ಆಧಾರ್​ ಕಾರ್ಡ್ (Aadhaar Card) ಎಷ್ಟು ಪ್ರಾಮುಖ್ಯವೋ, ಪ್ಯಾನ್​ ಕಾರ್ಡ್ ಕೂಡ ಅಷ್ಟೇ ಪ್ರಾಮುಖ್ಯತೆ ಹೊಂದಿದೆ. ಆದರೆ, ಕೆಲವೊಂದು ಬಾರಿ ಇಂತಹ ಪ್ಯಾನ್​ ಕಾರ್ಡ್​ಗಳನ್ನು ಜನ ಕಳೆದು (Pan Card Lost) ಕೊಳ್ಳುತ್ತಾರೆ. ಅಥವಾ ಮನೆಯಲ್ಲಿ ಎಲ್ಲೋ ಇಟ್ಟು ಮರೆತು ಬಿಡುತ್ತಾರೆ. ಒಂದು ವೇಳೆ ನೀವು ಏನಾದರೂ ನಿಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡರೆ, ಟೆನ್ಶನ್ (Tension)​ ಮಾಡಿಕೊಳ್ಳಬೇಡಿ. ನೀವು ಪ್ಯಾನ್​ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ಸುಲಭವಾಗಿ ಡೌನ್‌ಲೋಡ್ (Download) ಮಾಡಿಕೊಳ್ಳಬಹುದು. ಪ್ಯಾನ್ ಕಾರ್ಡ್ ಡೌನ್‌ಲೋಡ್ ಮಾಡಲು ಯಾವುದೇ ಕಂಪ್ಯೂಟರ್ (Computer) ಅಥವಾ ಲ್ಯಾಪ್‌ಟಾಪ್ (Laptop) ಅಗತ್ಯವಿಲ್ಲ. ಮೊಬೈಲ್ (Mobile)​ ಇದ್ದರೆ ಸಾಕು.

ಕೈಯಲ್ಲಿ ಸೆಲ್​ ಫೋನ್​ ಒಂದು ಇದ್ದರೆ ಸಾಕು. ಪ್ಯಾನ್​ ಕಾರ್ಡ್ ಡೌನ್‌ಲೋಡ್ ಅನ್ನು ಸುಲಭವಾಗಿ ಮಾಡಬಹುದು. ಈ ಹಂತಗಳನ್ನು ಅನುಸರಿಸಿ.

ಹಂತ 1- ಮೊದಲು onlineservices.nsdl.com/paam/requestAndDownloadEPAN.html ವೆಬ್‌ಸೈಟ್ ತೆರೆಯಿರಿ.

ಹಂತ 2- ಮುಖಪುಟದಲ್ಲಿ ಸ್ವೀಕೃತಿ ಸಂಖ್ಯೆ ಮತ್ತು ಪ್ಯಾನ್ ಎಂಬ ಎರಡು ಆಯ್ಕೆಗಳಿರುತ್ತವೆ.

ಹಂತ 3- ಪ್ಯಾನ್ ಆಯ್ಕೆಮಾಡಿ.

ಹಂತ 4- ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿ.

ಸಾಂದರ್ಭಿಕ ಚಿತ್ರ


ಹಂತ 5- ಅದರ ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ.

ಹಂತ 6- ಹುಟ್ಟಿದ ವರ್ಷ ಮತ್ತು ತಿಂಗಳನ್ನು ಆಯ್ಕೆಮಾಡಿ.

ಹಂತ 7- ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಓದಿ ಮತ್ತು ಬಾಕ್ಸ್ ಅನ್ನು ಟಿಕ್ ಮಾಡಿ.

ಹಂತ 8- ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಸಲ್ಲಿಸಿ.

ಹಂತ 9- ಅದರ ನಂತರ PAN ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ.

ಹಂತ 10- ಡೌನ್‌ಲೋಡ್ ಮಾಡಿ ಮತ್ತು ಸ್ಮಾರ್ಟ್‌ಫೋನ್‌ನಲ್ಲಿ ಡೌನ್​ಲೋಡ್​ ಮಾಡಿ ಸೇವ್ ಮಾಡಿಕೊಳ್ಳಿ.

ಇದನ್ನೂ ಓದಿ: ಕೇಂದ್ರದಿಂದ ಮಹತ್ವದ ನಿರ್ಧಾರ, ಸರ್ಕಾರಿ ನೌಕರರಿಗೆ ಭಾರೀ ನಿರಾಸೆ!

ಇತ್ತೀಚೆಗೆ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರು ಕೂಡ ಅದೇ ಪ್ರಕ್ರಿಯೆಯೊಂದಿಗೆ ಪ್ಯಾನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಇದಕ್ಕೆ ಸ್ವೀಕೃತಿ ಸಂಖ್ಯೆ ನಮೂದಿಸಬೇಕು. ಕಳೆದ 30 ದಿನಗಳಲ್ಲಿ ತಮ್ಮ ಪ್ಯಾನ್ ಕಾರ್ಡ್ ಅನ್ನು ನವೀಕರಿಸಿದವರೂ ಅದನ್ನು ಡೌನ್‌ಲೋಡ್ ಮಾಡಬಹುದು. ಇ-ಪ್ಯಾನ್ ಕಾರ್ಡ್ ಅನ್ನು ಮೂರು ಬಾರಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದು. 30 ದಿನಗಳ ಮೊದಲು ಪ್ಯಾನ್ ಕಾರ್ಡ್ ಹಂಚಿಕೆಯಾದವರು ಇ-ಪ್ಯಾನ್ ಕಾರ್ಡ್ ಡೌನ್‌ಲೋಡ್ ಮಾಡಲು ರೂ.8.26 ಪಾವತಿಸಬೇಕು. ಇದುವರೆಗೆ ಪಾನ್ ಕಾರ್ಡ್ ತೆಗೆದುಕೊಳ್ಳದೇ ಇರುವವರೂ ಕೇವಲ 10 ನಿಮಿಷದಲ್ಲಿ ಪಾನ್ ಕಾರ್ಡ್ ಪಡೆಯಬಹುದು.

ಸಾಂದರ್ಭಿಕ ಚಿತ್ರ


ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಜನರು ವಂಚನೆಗೆ ಒಳಗಾಗ್ತಿರೋದು ಹೀಗೆ; ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಆಘಾತಕಾರಿ ಅಂಶ

ಈ ರೀತಿಯ ಹೊಸ ಪ್ಯಾನ್ ಕಾರ್ಡ್ ಪಡೆಯಿರಿ

ಹಂತ 1- ಮೊದಲು incometax.gov.in/iec/foportal ವೆಬ್‌ಸೈಟ್ ತೆರೆಯಿರಿ.

ಹಂತ 2- ಮುಖಪುಟದಲ್ಲಿ ಇ-ಪ್ಯಾನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 3- ಅದರ ನಂತರ Get New e-PAN ಮೇಲೆ ಕ್ಲಿಕ್ ಮಾಡಿ.

ಹಂತ 4- ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಮುಂದುವರಿಸು ಕ್ಲಿಕ್ ಮಾಡಿ.

ಹಂತ 5- ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಅನ್ನು ನಮೂದಿಸಿ.

ಹಂತ 6- ಸಲ್ಲಿಕೆ ಪೂರ್ಣಗೊಂಡ ನಂತರ ಸ್ವೀಕೃತಿ ಸಂಖ್ಯೆ ಬರುತ್ತದೆ.

ಅದರ ನಂತರ ನೀವು ಆಧಾರ್ KYC ಪ್ರಕಾರ ನಿಮ್ಮ ವಿವರಗಳನ್ನು ನವೀಕರಿಸಬಹುದು ಮತ್ತು ಇ-ಪ್ಯಾನ್ ಕಾರ್ಡ್ ಪಡೆಯಬಹುದು.
Published by:Vasudeva M
First published: