ಜೀವನ ಎನ್ನುವುದು ಹೀಗೆ ನೋಡಿ, ಯಾರು? ಯಾವಾಗ? ಹೇಗೆ ಶ್ರೀಮಂತರಾಗುತ್ತಾರೆ (Rich) ಮತ್ತು ಯಶಸ್ಸು ಗಳಿಸುತ್ತಾರೆ ಅಂತ ಹೇಳುವುದಕ್ಕೆ ಆಗುವುದೇ ಇಲ್ಲ. ಜೀವನದಲ್ಲಿ ಒಬ್ಬ ಶ್ರೀಮಂತ ಕೆಟ್ಟ ಚಟಕ್ಕೆ ಬಿದ್ದು ತನ್ನ ಬಳಿ ಇರುವ ಎಲ್ಲಾ ಹಣವನ್ನು ಕಳೆದುಕೊಂಡು ಬೀದಿಗೆ ಬರಬಹುದು ಮತ್ತು ಒಂದೊತ್ತು ಊಟಕ್ಕೂ ಪರದಾಡುತ್ತಿರುವ ಒಬ್ಬ ಬಡವ ತನ್ನ ಅದೃಷ್ಟದ ಬಲದಿಂದ ಶ್ರೀಮಂತ ವ್ಯಕ್ತಿಯಾಗಬಹುದು. ಆದ್ದರಿಂದಲೇ ಹೇಳುತ್ತಾರೆ ಹಿರಿಯರು “ಹಣ (Money) ಯಾವಾಗಾದರೂ ಬರಬಹುದು ಮತ್ತು ಯಾವಾಗಾದರೂ ಹೋಗಬಹುದು, ಮನುಷ್ಯತ್ವ ಮುಖ್ಯ ಅಂತ”.
ಕ್ಯಾಲಿಫೋರ್ನಿಯಾದ ಈ ವ್ಯಕ್ತಿಯ ಜೀವನ ಬದಲಾದದ್ದು ಹೇಗೆ ಗೊತ್ತೇ?
ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ. ಅಮೆರಿಕದ ಎಡ್ವಿನ್ ಕ್ಯಾಸ್ಟ್ರೊ ಎಂಬ ವ್ಯಕ್ತಿಗೆ ದೊಡ್ಡ ಮೊತ್ತದ ಲಾಟರಿಯ ಜಾಕ್‌ಪಾಟ್ ಹೊಡೆದಿದ್ದು, ಅವನ ಜೀವನವು ಈಗ ಸಂಪೂರ್ಣವಾಗಿ ಬದಲಾಗಿದೆ ಅಂತ ಹೇಳಬಹುದು.
ಇಷ್ಟು ದೊಡ್ಡ ಮೊತ್ತದ ಲಾಟರಿ ಗೆದ್ದ ಈತ ಅದರಿಂದ ಏನು ಮಾಡುತ್ತಾನೆ ಅಂತ ಅನೇಕರಿಗೆ ಕುತೂಹಲವಿತ್ತು. ಇತಿಹಾಸದಲ್ಲಿಯೇ ಅತಿ ಹೆಚ್ಚು ಮೊತ್ತದ ಲಾಟರಿ ಹಣವನ್ನು ಪಡೆದ ಕ್ಯಾಲಿಫೋರ್ನಿಯಾದ ವ್ಯಕ್ತಿ ಈಗ ತಾನು ಆ ಲಾಟರಿ ಹಣದಿಂದ ಏನೆಲ್ಲಾ ಮಾಡಿದ್ದಾನೆ ಅಂತ ನೀವೇ ನೋಡಿ.
ಇದನ್ನೂ ಓದಿ: ರಾಜಮೌಳಿ ಸಿನಿಮಾಂತ್ರಿಕ ಅಷ್ಟೇ ಅಲ್ಲ, ಗ್ರೇಟ್ ಬ್ಯುಸಿನೆಸ್ಮೆನ್! ಇವ್ರನ್ನು ನೋಡಿ ದುಡ್ಡು ಮಾಡೋದು ಹೇಗೆ ಅಂತ ಕಲೀಬೇಕು!
ಈ ವ್ಯಕ್ತಿ ಈಗ ರತನ್ ಟಾಟಾಗಿಂತಲೂ ಹೆಚ್ಚು ಶ್ರೀಮಂತ ಅಂತೆ..
ಈ ದೊಡ್ಡ ಮೊತ್ತದ ಲಾಟರಿ ಹಣವನ್ನು ಗೆದ್ದ ವ್ಯಕ್ತಿಯನ್ನು ಈಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯ ಅಂತಸ್ತಿಗೆ ಹೋಲಿಸಿ ನೋಡಲಾಗುತ್ತಿದೆ. ಹೌದು.. ಭಾರತದ ಅತ್ಯಂತ ಪ್ರಸಿದ್ಧ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾದ ರತನ್ ಟಾಟಾ ಅವರ ವೈಯಕ್ತಿಕ ಆಸ್ತಿಗಿಂತ ನಾಲ್ಕು ಪಟ್ಟು ಹೆಚ್ಚು ಆಸ್ತಿಯ ಮಾಲೀಕರಂತೆ ಈ ವ್ಯಕ್ತಿ ಈಗ. ರತನ್ ಟಾಟಾ ಸುಮಾರು 4,000 ಕೋಟಿ ರೂಪಾಯಿ ಮೌಲ್ಯದ ವೈಯಕ್ತಿಕ ಆಸ್ತಿಯನ್ನು ಹೊಂದಿದ್ದಾರೆ.
16,000 ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ ಜಾಕ್‌ಪಾಟ್ ಗೆದ್ದ ನಂತರ, ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬರು ತ್ವರಿತವಾಗಿ ವಿಶ್ವದ ಅತ್ಯಂತ ದುಬಾರಿ ಪ್ರದೇಶದಲ್ಲಿ ಒಂದು ಆಸ್ತಿಯನ್ನು ಖರೀದಿಸಿದ್ದಾರೆ.
ಅವರು ಖರೀದಿಸಿದ ಐಷಾರಾಮಿ ಬಂಗಲೆಯ ಬೆಲೆ 200 ಕೋಟಿ ರೂಪಾಯಿಗಿಂತಲೂ ಹೆಚ್ಚು ಎಂದು ವರದಿಯಾಗಿದೆ. ಬ್ರಿಟಿಷ್ ದಿನಪತ್ರಿಕೆ ಇಂಡಿಪೆಂಡೆಂಟ್ ನ ವರದಿಯ ಪ್ರಕಾರ, 30 ವರ್ಷದ ವ್ಯಕ್ತಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಂಗಲೆಗಾಗಿ ಸುಮಾರು 25 ಮಿಲಿಯನ್ ಡಾಲರ್ ಪಾವತಿಸಿದ್ದಾರೆ ಎಂದು ವರದಿಯಾಗಿದೆ.
ಹಾಲಿವುಡ್ ಸೆಲೆಬ್ರಿಟಿಗಳು ಇರುವ ಸ್ಥಳದಲ್ಲಿ ಬಂಗಲೆ ಖರೀದಿಸಿದ್ದಾರಂತೆ
ಇವರು ಬಂಗಲೆಯನ್ನು ಖರೀದಿಸಿದ ಸ್ಥಳದಲ್ಲಿ ಹಾಲಿವುಡ್ ಸೆಲೆಬ್ರಿಟಿಗಳು ವಾಸಿಸುತ್ತಿದ್ದಾರಂತೆ, ಇದು ವಿಶ್ವದ ಅತ್ಯಂತ ದುಬಾರಿ ಸ್ಥಳಗಳಲ್ಲಿ ಒಂದಾಗಿದೆಯಂತೆ. ಎಡ್ವಿನ್ ಗೆ ವೆಂಬರ್ ತಿಂಗಳಲ್ಲಿ 2 ಬಿಲಿಯನ್ ಡಾಲರ್ ಎಂದರೆ 16,407 ಕೋಟಿ ರೂಪಾಯಿ ಮೌಲ್ಯದ ಮೆಗಾ ಲಾಟರಿ ಹೊಡೆದಿದೆ. ಎಡ್ವಿನ್ ಅವರ ಬಗ್ಗೆ ವ್ಯಾಪಕವಾದ ಮಾಧ್ಯಮ ಪ್ರಸಾರದ ಹೊರತಾಗಿಯೂ ಮಾಧ್ಯಮಗಳೊಂದಿಗೆ ಇವರು ಯಾವುದೇ ಮಾತುಕತೆ ನಡೆಸಲಿಲ್ಲ.
ಲಾಟರಿಯನ್ನು ಗೆದ್ದ ಎಡ್ವಿನ್ ಹಣವನ್ನು ಒಂದೇ ಬಾರಿಗೆ ಸ್ವೀಕರಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರು ತೆರಿಗೆ ಮತ್ತು ಇತರ ಕಡಿತಗಳ ನಂತರ ಒಟ್ಟು 997 ಮಿಲಿಯನ್ ಡಾಲರ್ ಎಂದರೆ 8,180 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಇಷ್ಟು ದೊಡ್ಡ ಮೊತ್ತವನ್ನು ಗೆದ್ದ ನಂತರವಷ್ಟೆ 30 ವರ್ಷದ ವ್ಯಕ್ತಿ ಭವ್ಯವಾದ ಬಂಗಲೆಯನ್ನು ಖರೀದಿಸಿದ ಸುದ್ದಿ ಹೊರ ಬಂದಿದೆ. ಕ್ಯಾಲಿಫೋರ್ನಿಯಾದ ಹಾಲಿವುಡ್ ಹಿಲ್ಸ್ ಪ್ರದೇಶದಲ್ಲಿ ಕ್ಯಾಸ್ಟ್ರೊ ಆಸ್ತಿ ಖರೀದಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ವೆಬ್ಸೈಟ್ ಡರ್ಟ್ ತಿಳಿಸಿದೆ.
ಎಂತಹ ಐಷಾರಾಮಿ ಬಂಗಲೆ ಗೊತ್ತಾ ಇದು?
ವರದಿಯ ಪ್ರಕಾರ, ಈ ಬಂಗಲೆಯ ಬೆಲೆ 30 ಮಿಲಿಯನ್ ಡಾಲರ್ ಆಗಿತ್ತು, ಆದರೆ ಕ್ಯಾಸ್ಟ್ರೊ 5 ಮಿಲಿಯನ್ ಡಾಲರ್ ರಿಯಾಯಿತಿಯನ್ನು ಪಡೆದರು. ಈ ಐಷಾರಾಮಿ ಆಸ್ತಿಯ ಒಟ್ಟು ವಿಸ್ತೀರ್ಣ 13,578 ಚದರ ಅಡಿಗಳು ಆಗಿದ್ದು, ಇದರಲ್ಲಿ ಎರಡು ಮೇಕಪ್ ಕೋಣೆಗಳು, ಆರು ಶೌಚಾಲಯ-ಸ್ನಾನಗೃಹಗಳು ಮತ್ತು ಐದು ಮಲಗುವ ಕೋಣೆಗಳಿವೆ.
ಈ ಮೂರು ಅಂತಸ್ತಿನ ಬಂಗಲೆಯ ನೆಲ ಮಹಡಿಯಲ್ಲಿ ಗಾಜಿನ ವಿಭಜಕಗಳಿವೆ. ಹೊರಗೆ ಬಾರ್ಬೆಕ್ಯೂ ಗ್ರಿಲ್ ಇದೆ. ಇದರ ಬದಿಯಲ್ಲಿ ಜಿಮ್, ಸಿನೆಮಾ ಥಿಯೇಟರ್, ವೈನ್ ಸೆಟ್ ಅಪ್ ಮತ್ತು ಈಜುಕೊಳ ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಇದು ಹೊಂದಿದೆ ಅಂತ ಹೇಳಲಾಗುತ್ತಿದೆ. ಇದು ಮೇಲ್ಛಾವಣಿಯ ಡೆಕ್ ಮತ್ತು ತನ್ನದೇ ಆದ ಬಾಲ್ಕನಿಯನ್ನು ಹೊಂದಿದೆ. ಕನಿಷ್ಠ ಏಳು ವಾಹನಗಳನ್ನು ಆರಾಮಾಗಿ ನಿಲ್ಲಿಸಲು ಬೇಕಾದ ಸ್ಥಳಾವಕಾಶವಿರುವ ಎರಡು ಗ್ಯಾರೇಜ್ ಗಳನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ