Loan Apps: ಆ್ಯಪ್‌ಗಳಿಂದ ಸಾಲ ಪಡೆಯುವ ಮುನ್ನ ಹುಷಾರು, ಯಾಮಾರಿದ್ರೆ ಅಷ್ಟೇ ಕಥೆ!

ಹೆಚ್ಚು ಸಂಘಟಿತ ಸಾಲದಾತ ಫ್ಲ್ಯಾಟ್​ಫಾರ್ಮ್‌ಗಳು ಲೋನ್ ಅಪ್ಲಿಕೇಶನ್‌ಗಳನ್ನು ಅನುಮೋದಿಸುವ ಮುನ್ನ ಹೆಚ್ಚು ಜಾಗರೂಕರಾಗಿರುತ್ತವೆ. ಇನ್ನು ಕೆಲವು ಆ್ಯಪ್‌ಗಳು ಇಲ್ಲವೇ ಸಂಸ್ಥೆಗಳು ನಿಮ್ಮನ್ನು ಕಬಳಿಸುವ ಸಲುವಾಗಿ ಮೋಸದ ಜಾಲವನ್ನೇ ಬೀಸಿರುತ್ತವೆ. ಹೆಚ್ಚುವರಿ ಸಾಲಗಳನ್ನು ಮಾಡುವಾಗ ಜಾಗರೂಕರಾಗಿರಿ ಅಂತೆಯೇ ಹಣವನ್ನು ವಿವೇಚನೆಯಿಂದ ನಿರ್ವಹಿಸುವುದು ನಿಮ್ಮ ಕೈಯಲ್ಲೇ ಇದೆ. ನಿಮ್ಮ ಸಾಲವು ಸಾವಿನ ಜಾಲವೇ ಎಂಬುದನ್ನು ತಿಳಿದುಕೊಳ್ಳುವ ವಿಧಾನ ನಿಮ್ಮಲ್ಲಿಯೇ ಇದೆ.

ಲೋನ್ ಆ್ಯಪ್‌ಗಳು

ಲೋನ್ ಆ್ಯಪ್‌ಗಳು

  • Share this:
ಇದೀಗ ತ್ವರಿತ ಗತಿಯಲ್ಲಿ ಲೋನ್ (Loan) ನೀಡುವ ಆ್ಯಪ್‌ಗಳ ಹಾವಳಿ ತುಸು ಹೆಚ್ಚುತ್ತಿದೆ. ಇತ್ತೀಚೆಗೆ ತಾನೇ ಬೆಂಗಳೂರು (Bengaluru) ಮೂಲದ ವ್ಯಕ್ತಿಯೊಬ್ಬರು ಇಂತಹುದ್ದೇ ಆ್ಯಪ್‌ಗಳಿಂದ (App) ಲೋನ್ ಪಡೆದುಕೊಂಡು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ತಾಳಿ ತಮ್ಮ ಜೀವನವನ್ನೇ ಅಂತ್ಯಗೊಳಿಸಿದರು. ಈ ಲೋನ್‌ಗಳೇನೋ ಯಾವುದೇ ಜಂಜಾಟವಿಲ್ಲದೆ ನಿಮಗೆ ಕೂಡಲೇ ಹಣವನ್ನು (Money) ದಯಪಾಲಿಸುತ್ತವೆ ಆದರೆ ನಂತರ ಬಾಕಿ ವಸೂಲಿಯ ಹೆಸರಿನಲ್ಲಿ ಇವು ನೀಡುವ ಕಿರುಕುಳಗಳಿಂದ ಹೀಗೆಯೇ ಪ್ರಾಣ ತೆತ್ತವರು ಎಷ್ಟೋ? ರಾಷ್ಟ್ರೀಯ ಕ್ರೈಮ್ (Crime) ದಾಖಲೆಗಳ ಪ್ರಕಾರ ಸಾಂಕ್ರಾಮಿಕದ ನಂತರ ಆತ್ಮಹತ್ಯೆಯಂತಹ (Suicide) ಪ್ರಕರಣಗಳಲ್ಲಿ ಅತ್ಯಂತ ಏರಿಕೆ ಕಂಡುಬಂದಿದೆ. ಇದಕ್ಕೆ ಮುಖ್ಯ ಕಾರಣ ನಿರುದ್ಯೋಗ, ಇನ್ನೊಂದು ಸಾಲ.

ಲೋನ್ ಆ್ಯಪ್‌ಗಳ ಮೂಲಕ ಸಾಲ ಪಡೆದ್ರೆ ಏನಾಗುತ್ತೆ?
ಲೋನ್ ಆ್ಯಪ್‌ಗಳು ಸಣ್ಣ ಪ್ರಮಾಣದ ಲೋನ್‌ಗಳನ್ನು ನೀಡುತ್ತವೆ. ಇದರಿಂದ ಒಬ್ಬ ವ್ಯಕ್ತಿ ಎಷ್ಟು ಸಾರಿ ಬೇಕಾದರೂ ಲೋನ್ ಪಡೆದುಕೊಳ್ಳಬಹುದು ಹಾಗೂ ಇದಕ್ಕಾಗಿ ಬೇರೆ ಬೇರೆ ಆ್ಯಪ್ ಆಧಾರಿತ ಲೋನ್ ನೀಡುಗರನ್ನು ಸಂಪರ್ಕಿಸಿ ಸಾಲ ಪಡೆದುಕೊಳ್ಳಬಹುದು. ಇಲ್ಲಿ ಮಾಸಿಕ ಇನ್‌ಸ್ಟಾಲ್‌ಮೆಂಟ್‌ಗಳು ಬೆಳೆಯುತ್ತಲೇ ಹೋಗುತ್ತವೆ. ಹೀಗೆ ಲೋನ್ ಮರುಪಾವತಿಯು ಬೃಹತ್ ಗಾತ್ರದ ಮೊತ್ತವಾಗಿ ನಿಮ್ಮ ಕೊರಳಿಗೆ ಉರುಳಾಗಿ ಪರಿಣಮಿಸುತ್ತದೆ.

ಆರ್‌ಬಿಐನಿಂದ ನಿಗಾ

ಆರ್‌ಬಿಐ ಇತ್ತೀಚೆಗೆ ತಾನೇ ಡಿಜಿಟಲ್ ಸಾಲನೀಡುವ ಕಾರ್ಯನಿರತ ಗುಂಪಿನ ನಿಯಮಾವಳಿಗಳನ್ನು ಪ್ರಕಟಿಸಿದ್ದು ಗ್ರಾಹಕರ ರಕ್ಷಣೆ ಮತ್ತು ಹಿತದೃಷ್ಟಿಯನ್ನು ಕೇಂದ್ರೀಕರಿಸಿದೆ. ಇದರಿಂದ ನಿಯಮಾವಳಿಗಳ ನಿಯಂತ್ರಕರು ಇಂತಹ ಸಾಲದ ಜಾಲ ಹಾಗೂ ಸಾಲದಾತರ ದುಷ್ಕ್ರತ್ಯ ನಡವಳಿಕೆಗಳ ಮೇಲೆ ಕಣ್ಣಿಟ್ಟಿರುತ್ತಾರೆ.

ಲೋನ್ ಆ್ಯಪ್‌ನಿಂದ ಮೋಸವಾಗ್ಬೋದು ಹುಷಾರ್

ಹೆಚ್ಚು ಸಂಘಟಿತ ಸಾಲದಾತ ಫ್ಲ್ಯಾಟ್​​ಫಾರ್ಮ್‌ಗಳು ಲೋನ್ ಅಪ್ಲಿಕೇಶನ್‌ಗಳನ್ನು ಅನುಮೋದಿಸುವ ಮುನ್ನ ಹೆಚ್ಚು ಜಾಗರೂಕರಾಗಿರುತ್ತವೆ. ಇನ್ನು ಕೆಲವು ಆ್ಯಪ್‌ಗಳು ಇಲ್ಲವೇ ಸಂಸ್ಥೆಗಳು ನಿಮ್ಮನ್ನು ಕಬಳಿಸುವ ಸಲುವಾಗಿ ಮೋಸದ ಜಾಲವನ್ನೇ ಬೀಸಿರುತ್ತವೆ. ಹೆಚ್ಚುವರಿ ಸಾಲಗಳನ್ನು ಮಾಡುವಾಗ ಜಾಗರೂಕರಾಗಿರಿ ಅಂತೆಯೇ ಹಣವನ್ನು ವಿವೇಚನೆಯಿಂದ ನಿರ್ವಹಿಸುವುದು ನಿಮ್ಮ ಕೈಯಲ್ಲೇ ಇದೆ.

ನೀವು ಮಾಡುವ ಸಾಲ ಅಗತ್ಯದ್ದೇ ?
ಸಾಲ ಪಡೆದ ಹಣದಿಂದ ಜೀವನ ನಡೆಸುವುದು ಶಾಶ್ವತವಾಗಿ ಅನುಸರಿಸಬಹುದಾದ ಯೋಜನೆ ಅಲ್ಲ. ಕೆಲವು ಹಂತದಲ್ಲಿ ನೀವು ಮುಂದಿನ ಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಹಾಗಾದಲ್ಲಿ ಹಿಂದಿನ ಸಾಲವನ್ನು ಮರುಪಾವತಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಇಲ್ಲಿ ನೀವು ಗಮನಿಸಬೇಕಾದ್ದು, ಆಸ್ತಿಯನ್ನು ನಿರ್ಮಿಸಲು ತೆಗೆದುಕೊಂಡ ಸಾಲಗಳು ಮತ್ತು ಬಳಕೆಗಾಗಿ ತೆಗೆದುಕೊಂಡ ಸಾಲಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದಾಗಿದೆ.

ಇದನ್ನೂ ಓದಿ:  Blink It: ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ನಿಮ್ಗೆ ಬೇಕಾದ ಪ್ರಿಂಟ್​ಔಟ್​​! ಬ್ಲಿಂಕ್ ಇಟ್​ನಿಂದ ಹೊಸ ಸೇವೆ

ಸಾಲ ಮಾಡುವ ಮುನ್ನ ನೆನಪಿಡಬೇಕಾದ ಅಂಶಗಳೇನು?

  • ಅತಿಯಾಗಿ ಸಾಲ ಮಾಡುವುದೂ ಕೂಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾದರೆ ಅದಕ್ಕಾಗಿ ಕೆಲವು ನಿಯಮಗಳನ್ನು ರೂಪಿಸಿಕೊಳ್ಳುವುದು ಸಹಕಾರಿಯಾಗಿದೆ

  • ನಿಮ್ಮ ಗೃಹ ಸಾಲವು ಖರೀದಿಸುತ್ತಿರುವ ಮನೆಯ ಮೌಲ್ಯದ 50% ವನ್ನು ಮೀರಬಾರದು.

  • ಗೃಹ ಸಾಲವು EMI ಗೆ ಅನುಗುಣವಾಗಿ ನಿಮ್ಮ ಮಾಸಿಕ ಆದಾಯದ 40% ಕ್ಕಿಂತ ಹೆಚ್ಚಿರಬಾರದು.

  • ನೀವು ಕಾರ್ ಲೋನ್ ಹೊಂದಿದ್ದರೆ, ಮಾಸಿಕ ಮರುಪಾವತಿಯು ನಿಮ್ಮ ಮಾಸಿಕ ಆದಾಯದ 5 ಪ್ರತಿಶತದವರೆಗೆ ಇರುವುದನ್ನು ಖಚಿತಪಡಿಸಿಕೊಳ್ಳಿ

  • ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ನಿಮ್ಮ ಮಾಸಿಕ ಖರ್ಚು ಕ್ರೆಡಿಟ್ ಮಿತಿಯ 10-12% ಕ್ಕಿಂತ ಹೆಚ್ಚಿಲ್ಲ ಎಂದು ಖಚಿತಪಡಿಸಿಕೊಳ್ಳಿ ಮತ್ತು ಪ್ರತಿ ತಿಂಗಳು ನಿಗದಿತ ದಿನಾಂಕದ ಮೊದಲು ಪೂರ್ಣವಾಗಿ ಮಿತಿಮೀರಿದ ಮೊತ್ತವನ್ನು ಮರುಪಾವತಿಸಿ.

  • ಕೈತುಂಬಾ ಸಂಬಳ ಪಡೆಯುವ ಉದ್ಯೋಗ ನಿಮ್ಮದಾಗಿಲ್ಲದೇ ಇದ್ದರೆ ಶಿಕ್ಷಣ ಸಾಲ ಹೊರೆಯಾಗಿ ಪರಿಣಮಿಸಬಹುದು. ಹಾಗಾಗಿ ಈ ಸಾಲ ಕೊನೆಯ ಆಯ್ಕೆಯಾಗಿರಲಿ

  • ಎಲ್ಲಾ ರೀತಿಯ ವೈಯಕ್ತಿಕ ಸಾಲಗಳು ಮತ್ತು ಆ್ಯಪ್-ಆಧಾರಿತ ಸಾಲಗಳನ್ನು ತಪ್ಪಿಸಿ ಇದು ಮೂಲಭೂತ ಬಳಕೆಗೆ ಖರ್ಚು ಮಾಡಲು ನಿಮ್ಮನ್ನು ತಳ್ಳುತ್ತದೆ.

  • ವೈಯಕ್ತಿಕ ಬಳಕೆಗಾಗಿ ತೆಗೆದುಕೊಂಡ ಸಾಲದೊಂದಿಗೆ ವ್ಯಾಪಾರ ಸಾಲವನ್ನು ಸಮ್ಮಿಳಿತಗೊಳಿಸಬೇಡಿ.


ಆ್ಯಪ್ ಮೂಲಕ ಸಾಲ ಪಡೆಯುವುದು ಸುಲಭವಾದ ವಿಧಾನವಾಗಿದೆ. ಇನ್ನು ಪ್ರೊಸೆಸಿಂಗ್ ವಿಧಾನ ಕೂಡ ಇಲ್ಲಿ ಸುಲಭ. ಸಾಲ ಮಾಡುವಾಗ ಜಾಗರೂಕತೆಯನ್ನು ಪಾಲಿಸಬೇಕು ಏಕೆಂದರೆ ಇಲ್ಲಿ ಸಾಲ ಪಡೆಯುವುದು ಸರಳವಾಗಿದ್ದರೂ ಸಾಲವನ್ನು ಮರುಪಾವತಿಸುವುದು ಸವಾಲಿನದ್ದಾಗಿರುತ್ತದೆ. ಮೋಸದ ಜಾಲ ಕೂಡ ಆಗಿರುತ್ತದೆ ಎಂಬುದನ್ನು ಸಾಲಗಾರರು ಮರೆಯಬಾರದು.

ಇದನ್ನೂ ಓದಿ: Millionaires: 2030ರಲ್ಲಿ ಶ್ರೀಮಂತ ರಾಷ್ಟ್ರವಾಗಲಿದ್ಯಾ ಭಾರತ? ಮಿಲಿಯನೇರ್‌ಗಳ ಸಂಖ್ಯೆ ಹೆಚ್ಚಾಗಲಿದೆ ಅಂತಿದೆ ಈ ರಿಪೋರ್ಟ್!

ನಿಮ್ಮ ಖರ್ಚುಗಳ ಮೇಲೆ ಗಮನಹರಿಸುವುದು ಉತ್ತಮವಾಗಿದೆ. ಆದಾಯ ಹಾಗೂ ಬದ್ಧತೆಯ ವ್ಯತ್ಯಾಸವನ್ನು ತಿಳಿದುಕೊಳ್ಳಿ. ನಿಮ್ಮ ಖರ್ಚು ಹಾಗೂ ನಿಮಗಿರುವ ಸಾಲದ ಬದ್ಧತೆಗಳ ನಡುವೆ ಸಮತೋಲವನ್ನು ಏರ್ಪಡಿಸಿಕೊಳ್ಳಿ. ಆದಾಯದೊಳಗೆ ಖರ್ಚುಮಾಡುವಂತೆ ಅರಿತುಕೊಳ್ಳುವುದು ಸುಲಭವಾದ ಕೆಲಸವಲ್ಲ. ಗಳಿಸುವುದಕ್ಕಿಂತ ಹೆಚ್ಚು ಖರ್ಚುಮಾಡಲು ಹಣವನ್ನು ವ್ಯಯಿಸಿದಲ್ಲಿ ಒಳ್ಳೆಯ ವಿಷಯಗಳಿಗೆ ಖರ್ಚುಮಾಡುವುದನ್ನು ಕಲಿತುಕೊಳ್ಳಿ. ಇದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು.
Published by:Ashwini Prabhu
First published: