ನಿಮ್ಮ ಬಳಿ ಒಂದು ದೊಡ್ಡ ಮೊತ್ತದ ಹಣವಿದೆ. ಅದನ್ನು ಎಫ್ಡಿ (FD) ಅಥವಾ ಆರ್ಡಿಯಲ್ಲಿ (RD) ಸಂಪೂರ್ಣವಾಗಿ ಇಡುವುದಕ್ಕಿಂತಲೂ ಉತ್ತಮ ಆಯ್ಕೆಗಳನ್ನು ಹುಡುಕುತ್ತಿದ್ದರೆ ಈ ಕೆಳಗಿನ ಅಂಶಗಳನ್ನು ಯೋಚಿಸಿ ಪರಿಗಣಿಸಬಹುದು. ಇದು ನಿಮ್ಮ ಮುಂದಿನ ಜೀವನಕ್ಕೆ ಬಹುದೊಡ್ಡ ಮಟ್ಟದಲ್ಲಿ ಲಾಭವನ್ನು (Profit) ನೀಡುತ್ತದೆ. ಹಾಗಿದ್ರೆ ಹೂಡಿಕೆ (Investment) ಮಾಡಲಿರುವಂತಹ ಬೆಸ್ಟ್ ಯೋಜನೆಗಳು ಯಾವುದೆಲ್ಲಾ ಎಂಬುದನ್ನು ಈ ಲೇಖನದಲ್ಲಿದೆ ಓದಿ.
ಸೂಚ್ಯಂಕ ನಿಧಿ ಮತ್ತು ಎಸ್ಡಬ್ಲೂಪಿ
ಸೂಚ್ಯಂಕ ನಿಧಿಯು ನಿಫ್ಟಿ 50 ಅಥವಾ ಸೆನ್ಸೆಕ್ಸ್ನಂತಹ ಸೂಚ್ಯಂಕವವನ್ನು ಅನುಸರಿಸುವ ಒಂದು ರೀತಿಯ ಹೂಡಿಕೆಯಾಗಿದೆ. ಸೂಚ್ಯಂಕ ನಿಧಿಯಲ್ಲಿ ಹೂಡಿಕೆ ಮಾಡುವ ಮೂಲಕ ಅದು ಟ್ರ್ಯಾಕ್ ಮಾಡುವ ಇಂಡೆಕ್ಸ್ನ ಕಾರ್ಯಕ್ಷಮತೆಯಂತೆಯೇ ನೀವು ಆದಾಯವನ್ನು ಸ್ವೀಕರಿಸಲು ನಿರೀಕ್ಷಿಸಬಹುದು.
ಎಸ್ಡಬ್ಲೂಪಿ ವ್ಯವಸ್ಥಿತ ವಾಪಸಾತಿ ಯೋಜನೆ ಅಂದರೆ ಕಾಲ ಕ್ರಮೇಣ ನಿಮ್ಮ ಹೂಡಿಕೆಗಳನ್ನು ಹಿಂತೆಗೆದುಕೊಳ್ಳುವ ಒಂದು ವಿಧಾನವಾಗಿದೆ. ಎಸ್ಡಬ್ಲೂಪಿಯೊಂದಿಗೆ ನೀವು ನಿಯಮಿತವಾಗಿ ನಿರ್ದಿಷ್ಟ ಮೊತ್ತದ ಹಣವನ್ನು ಹಿಂಪಡೆಯಬಹುದಾಗಿದೆ.
ಇದನ್ನೂ ಓದಿ: ನಿಮ್ಮ ಬ್ಯಾಂಕ್ ಅಕೌಂಟ್ನಿಂದಲೂ 436 ರೂಪಾಯಿ ಕಟ್ ಆಗಿದ್ಯಾ? ಇದೇ ಕಾರಣ!
ಉದಾ: ನೀವು ನಿಯತಕಾಲಿಕವಾಗಿ ನಿಗದಿತ ಮೊತ್ತದ ಹಣವನ್ನು ಹಿಂಪಡೆಯಬಹುದು. ಅಂದರೆ ಹತ್ತು ತಿಂಗಳವರೆಗೆ ಪ್ರತಿ ತಿಂಗಳು 10,000 ರೂ ನಂತೆ ಒಟ್ಟು 1 ಲಕ್ಷವನ್ನು ನೀವು ಪಡೆಯಬಹುದು.
ಎಸ್ಐಪಿ
ನಿಮ್ಮ ಬಳಿ ಒಂದು ದೊಡ್ಡ ಮೊತ್ತವಿದ್ದರೆ ಅದನ್ನು ನೀವು ಈಕ್ವಿಟಿ ಫಂಡ್ನಲ್ಲಿ ಹೂಡಿಕೆ ಮಾಡಲು ಬಯಸಿದರೆ ಅದನ್ನು ಎಸ್ಐಪಿ ಅಂದರೆ ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ 6 ರಿಂದ 12 ತಿಂಗಳ ಅವಧಿಯಲ್ಲಿ ಹೂಡಿಕೆ ಮಾಡಲು ಆರ್ಥಿಕ ಸಲಹೆಗಾರರು ಸಲಹೆ ನೀಡುತ್ತಾರೆ.
ಅಂದರೆ ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಹೂಡಿಕೆ ಮಾಡುವ ಬದಲಿಗೆ, ಪ್ರತಿ ತಿಂಗಳು ಒಟ್ಟು ಮೊತ್ತದ ಒಂದು ಭಾಗವನ್ನು ಹೂಡಿಕೆ ಮಾಡುತ್ತೀರಿ. ಈ ವಿಧಾನವು ನಿಮ್ಮ ಹೂಡಿಕೆಯ ಮೇಲೆ ಮಾರುಕಟ್ಟೆಯ ಏರಿಳಿತದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ದೀರ್ಘಾವಧಿಯಲ್ಲಿ ಆದಾಯವನ್ನು ಸಮರ್ಥವಾಗಿ ಸುಧಾರಿಸುತ್ತದೆ.
ನಿಯಮಿತ ಆದಾಯ ಯೋಜನೆಯನ್ನು ಆರಂಭಿಸಲು ನೀವು ಈ ತತ್ವಗಳನ್ನು ಅನುಸರಿಸಬಹುದು.
ಈಕ್ವಿಟಿ
ನಿಮ್ಮ ಹಣದ ಮೂರನೇ ಒಂದು ಭಾಗವನ್ನು ಈಕ್ಷಿಟಿಗಳಲ್ಲಿ ಹೂಡಿಕೆ ಮಾಡಿ. ಫ್ಲೆಕ್ಸಿ ಕ್ಯಾಪ್ ಫಂಡ್ಗಳಿಗೆ ಆದ್ಯತೆಗಳೊಂದಿಗೆ ನಿಮ್ಮ ಹೂಡಿಕೆಯ ಮೂರನೇ ಒಂದು ಭಾಗವನ್ನು ಈಕ್ಷಿಟಿಗೆ ನಿಯೋಜಿಸುವುದು ಸರಳ ಹೂಡಿಕೆಯಾಗಿದೆ. ಸಂಪ್ರದಾಯವಾದಿ ಹೂಡಿಕೆದಾರರಿಗೆ ದೊಡ್ಡ ಕ್ಯಾಪ್ ನಿಧಿಗಳು ಅಥವಾ ಸೂಚ್ಯಂಕ ನಿಧಿಗಳು ಸಹ ಸೂಕ್ತವಾದ ಆಯ್ಕೆಯಾಗಿದೆ.
ಅಂದರೆ ನಿಮ್ಮ ಮೂರನೇ ಎರಡು ಭಾಗದ ಮೊತ್ತ ಬಾಂಡ್ಗಳು ಅತವಾ ನಗದು ಮುಂತಾದ ಇತರ ಆಸ್ತಿ ವರ್ಗಗಳಲ್ಲಿ ಹೂಡಿಕೆ ಮಾಡಲಾಗುವುದು. ಈ ವಿಧಾನವು ನಿಮ್ಮ ಹೂಡಿಕೆ ಬಂಡವಾಳವನ್ನು ವೈವಿಧ್ಯಗೊಳಿಸಲು ಸಹಾಯ ಮಾಡುತ್ತದೆ ಜೊತೆಗೆ ದೀರ್ಘಾವಧಿಯಲ್ಲಿ ಉತ್ತಮ ಆದಾಯ ನಿರೀಕ್ಷಿಸಬಹುದು.
ಲಿಕ್ವಿಡ್ ಫಂಡ್
ನಿಮ್ಮ ವಾರ್ಷಿಕ ಆದಾಯದ ಅಗತ್ಯಗಳನ್ನು ಲಿಕ್ವಿಡ್ ಫಂಡ್ನಲ್ಲಿ ಹೂಡಿಕೆ ಮಾಡುವುದು ಸೂಕ್ತ. ಈ ಮೊತ್ತವು ನಿಮ್ಮ ಒಟ್ಟು ಹೂಡಿಕೆ ಬಂಡವಾಳದ 6% ನಷ್ಟು ಮೀರಬಾರದು. ಹೀಗೆ ಮಾಡುವುದರಿಂದ ತುರ್ತು ಸಂದರ್ಭದಲ್ಲಿ ಹಣಕಾಸಿನ ಅಗತ್ಯದಲ್ಲಿ ನಿಮಗೆ ಇದು ನೆರವಾಗುತ್ತದೆ.
ಅಲ್ಪಾವಧಿ ಬಾಂಡ್ಗಳು
ಉಳಿದ ಮೊತ್ತವನ್ನು ಸ್ಥಿರ ಆದಾಯದಲ್ಲಿ, ಅಲ್ವಾವಧಿಯ ನಿಧಿಗಳಲ್ಲಿ ಹೂಡಿಕೆ ಮಾಡಿ. ಅಂದರೆ ಮೇಲೆ ತಿಳಿಸಿರುವ ಹೂಡಿಕೆಗಳ ನಂತರ ಉಳಿದ ಹಣವನ್ನು ಬಾಂಡ್ಗಳು ಅಥವಾ ಸಾಲ ನಿಧಿಗಳಂತಹ ಸ್ಥಿರ ಆದಾಯದ ಭದ್ರತೆಗಳಲ್ಲಿ ಹೂಡಿಕೆ ಮಾಡಬಹುದು. ಈ ಅವಧಿ 1 ರಿಂದ 3 ವರ್ಷವಿದ್ದರೆ ಉತ್ತಮ.
ಪೋರ್ಟ್ಪೋಲಿಯೋ ಮರುಸಮತೋಲನಗೊಳಿಸಿ
ಈಕ್ವಿಟಿಗಳು ಶೇಕಡಾ 33-35 ರಷ್ಟು ಹಂಚಿಕೆ ಹೊಂದಿದೆ ಎನ್ನವುದನ್ನು ಅರಿತುಕೊಂಡು ಪ್ರತಿ ವರ್ಷ ನಿಮ್ಮ ಪೋರ್ಟ್ಪೋಲಿಯೋ ಮರು ಸಮತೋಲನಕ್ಕೆ ಒಳಪಡಿಸಿ.
ಆದಾಯ ಲಿಕ್ವಿಡ್ ಫಂಡ್ಗಳಿಗೆ ವರ್ಗಾಯಿಸಿ
ಪ್ರತಿ ವರ್ಷ ಅಗತ್ಯವಿರುವ ವಾರ್ಷಿಕ ಆದಾಯವನ್ನು ಲಿಕ್ವಿಡ್ ಫಂಡ್ಗಳಿಗೆ ವರ್ಗಾಯಿಸುವುದು ಉತ್ತಮ. ಇದು 6% ನಷ್ಟಿರಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ