• Home
  • »
  • News
  • »
  • business
  • »
  • Aadhaar Card And DL: ಇನ್ಮುಂದೆ ಡಿಎಲ್‌ ಜೊತೆ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು, ಈ ಸ್ಟೆಪ್ಸ್ ಬಗ್ಗೆ ತಿಳಿದುಕೊಂಡಿರಿ

Aadhaar Card And DL: ಇನ್ಮುಂದೆ ಡಿಎಲ್‌ ಜೊತೆ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು, ಈ ಸ್ಟೆಪ್ಸ್ ಬಗ್ಗೆ ತಿಳಿದುಕೊಂಡಿರಿ

ಆಧಾರ್ ಕಾರ್ಡ್‌ ಮತ್ತು ಡ್ರೈವಿಂಗ್‌ ಲೈಸೆನ್ಸ್‌

ಆಧಾರ್ ಕಾರ್ಡ್‌ ಮತ್ತು ಡ್ರೈವಿಂಗ್‌ ಲೈಸೆನ್ಸ್‌

ದೇಶದಲ್ಲಿ ಹೆಚ್ಚುತ್ತಿರುವ ನಕಲಿ ಡ್ರೈವಿಂಗ್‌ ಲೈಸೆನ್ಸ್‌ ಗಳನ್ನು ತಡೆಯಲು ಪ್ರತಿಯೊಬ್ಬರೂ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಇದರಿಂದ ನಕಲಿ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಪತ್ತೆ ಹಚ್ಚಬಹುದು ಎಂದು ಹೇಳಲಾಗಿದೆ. ಡ್ರೈವಿಂಗ್ ಲೈಸೆನ್ಸ್‌ಗೆ ಸಂಬಂಧಿಸಿದಂತೆ ದೇಶದಲ್ಲಿ ವಂಚನೆ ಮತ್ತು ಭ್ರಷ್ಟಾಚಾರ ಹೆಚ್ಚಾಗುತ್ತಿರುವ ಕಾರಣ ಈ ಕ್ರಮವನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.

ಮುಂದೆ ಓದಿ ...
  • Share this:

ಪ್ರತಿ ದಾಖಲೆಗಳಿಗೂ ಪ್ರಸ್ತುತ ಆಧಾರ್‌ ಕಾರ್ಡ್‌ (Aadhar Card) ಕಡ್ಡಾಯವಾಗಿದೆ. ಆಧಾರ್‌ ಕಾರ್ಡ್‌ ಅನ್ನು ಸದ್ಯ ನಮ್ಮ ಗುರುತಿನ ಚೀಟಿಯನ್ನಾಗಿಯೂ ಸಹ ಬಳಸಬಹುದಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಆಧಾರ್‌ ಕಾರ್ಡ್‌ ಅನ್ನು ಪಾಸ್‌ ಬುಕ್‌, ಪ್ಯಾನ್‌ ಕಾರ್ಡ್‌ (Pan Card), ಅಕೌಂಟ್‌ ಹೀಗೆ ಅನೇಕ ಸೇವೆಗಳ ಜೊತೆಗೆ ಲಿಂಕ್‌ ಮಾಡಲಾಗುತ್ತಿದೆ. ಮುಂದುವರಿದ ಭಾಗವಾಗಿ ಆಧಾರ್‌ ಕಾರ್ಡ್‌ ಅನ್ನು ಡ್ರೈವಿಂಗ್‌ ಲೈಸೆನ್ಸ್‌ (Driving license) ಜೊತೆ ಸಹ ಲಿಂಕ್‌ (Link) ಮಾಡಲು ಆದೇಶಿಸಲಾಗಿದೆ. ಈ ಹಿಂದೆಯೇ ಆದೇಶವನ್ನು ಹೊರಡಿಸಲಾಗಿದ್ದರೂ ಸಹ ಕೋವಿಡ್‌ ನಿಂದ ಈ ಕೆಲಸ ವಿಳಂಬವಾಗಿತ್ತು. ಮತ್ತೆ ಇದು ಈಗ ಮುನ್ನೆಲೆಗೆ ಬಂದಿದ್ದು ಡ್ರೈವಿಂಗ್‌ ಲೈಸೆನ್ಸ್‌ ಹೊಂದಿರುವವರು ತಕ್ಷಣವೇ ನಿಮ್ಮ ಆಧಾರ್‌ ಜೊತೆ ಚಾಲನಾ ಪರವಾನಗಿಯನ್ನು ಲಿಂಕ್‌ ಮಾಡಬೇಕು.


ನಕಲಿ ಡ್ರೈವಿಂಗ್‌ ಲೈಸೆನ್ಸ್‌ ತಡೆಯಲು ಈ ಕ್ರಮ
ದೇಶದಲ್ಲಿ ಹೆಚ್ಚುತ್ತಿರುವ ನಕಲಿ ಡ್ರೈವಿಂಗ್‌ ಲೈಸೆನ್ಸ್‌ ಗಳನ್ನು ತಡೆಯಲು ಪ್ರತಿಯೊಬ್ಬರೂ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಇದರಿಂದ ನಕಲಿ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಪತ್ತೆ ಹಚ್ಚಬಹುದು ಎಂದು ಹೇಳಲಾಗಿದೆ. ಡ್ರೈವಿಂಗ್ ಲೈಸೆನ್ಸ್‌ಗೆ ಸಂಬಂಧಿಸಿದಂತೆ ದೇಶದಲ್ಲಿ ವಂಚನೆ ಮತ್ತು ಭ್ರಷ್ಟಾಚಾರ ಹೆಚ್ಚಾಗುತ್ತಿರುವ ಕಾರಣ ಈ ಕ್ರಮವನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.


ಇದನ್ನೂ ಓದಿ: Traffic Rules: ಹುಷಾರ್‌! ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಬೀಳುತ್ತೆ 1 ಲಕ್ಷ ದಂಡ


ನಿಮಗೇ ಈಗಾಗ್ಲೇ ಹೇಳಿದಂತೆ ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಇದರ ಸಹಾಯದಿಂದ, ನಾವು ಸರ್ಕಾರದ ಅನೇಕ ಯೋಜನೆಗಳ ಲಾಭವನ್ನು ಸುಲಭವಾಗಿ ಪಡೆಯಬಹುದು. ಇದೀಗ ವಾಹನ ಚಾಲನೆ ಪರಿಶೀಲನೆಗೆ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ


ಡ್ರೈವಿಂಗ್ ಲೈಸೆನ್ಸ್‌ಗೆ ಸಂಬಂಧಪಟ್ಟ ಕೆಲಸ ಪುನಾರಂಭ
ದೇಶದಲ್ಲಿ ಹರಡಿದ್ದ ಕೊರೊನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ವಾಹನ ಚಾಲನೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳು ವಿಳಂಬವಾಗಿದ್ದವು. ಇದೀಗ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಕೆಲಸಗಳು ಪುನಾರಂಭವಾಗಿವೆ.


ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಏನು?
ನಿಮ್ಮ ಆಧಾರ್ ಕಾರ್ಡ್ ಅನ್ನು ಚಾಲನಾ ಪರವಾನಗಿಯೊಂದಿಗೆ ಲಿಂಕ್ ಮಾಡಲು ನೀವು ಬಯಸಿದರೆ, ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ.
ಈಗ ನೀವು ಮನೆಯಲ್ಲಿ ಕುಳಿತು ನಿಮ್ಮ ಡ್ರೈವಿಂಗ್ ಲೈಸೆನ್ಸ್‌ನೊಂದಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು. ನಿಮ್ಮ ಡಿಎಲ್‌ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಲು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಆಧಾರ್‌ ಜೊತೆಗೆ ಡಿಎಲ್‌ ಲಿಂಕ್‌ ಮಾಡುವುದು ಹೇಗೆ ಅನ್ನೊದನ್ನ ಇಲ್ಲಿ ತಿಳಿಯಿರಿ.


ಇದನ್ನೂ ಓದಿ: YouTube: ಯೂಟ್ಯೂಬ್​ನಿಂದ ಗುಡ್​ ನ್ಯೂಸ್, ಇನ್ಮುಂದೆ ವಿಡಿಯೋ ಮಾಡೋರಿಗೆಲ್ಲಾ ಫುಲ್​ ದುಡ್ಡು!


ನಿಮ್ಮ ಡಿಎಲ್‌ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಅನುಸರಿಸಬೇಕಾದ ಹಂತಗಳು
1. ನೀವು ನಿಮ್ಮ ರಾಜ್ಯದ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ನಂತರ ಹೋಮ್ ಸ್ಕ್ರೀನ್‌ನಲ್ಲಿ ಕಾಣುವ 'ಲಿಂಕ್ ಆಧಾರ್' ಆಯ್ಕೆಯನ್ನು ಕ್ಲಿಕ್ ಮಾಡಿರಿ
3. ನಂತರ, ನೀವು ಡ್ರಾಪ್-ಡೌನ್‌ ಮೆನುಗೆ ಹೋಗಿ 'ಚಾಲನಾ ಪರವಾನಗಿ' ಆಯ್ಕೆಯನ್ನು ಕ್ಲಿಕ್ ಮಾಡಬೇಕು.
4. ಇದರ ನಂತರ ಮುಂದಿನ ಹಂತದಲ್ಲಿ ನೀಡಿರುವ ಜಾಗದಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯನ್ನು ನೀವು ನಮೂದಿಸಿರಿ.
5. ನಂತರ 'ಗೆಟ್‌ ಡಿಟೇಲ್ಸ್‌' ಆಯ್ಕೆ ಮೇಲೆ ಕ್ಲಿಕ್ ಮಾಡಿ
6. ಇದಾದ ನಂತರ ನೀವು ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
7. ಬಳಿಕ 'ಸಬ್ಮಿಟ್‌' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
8. ಈ ಪ್ರಕ್ರಿಯೆಗಳು ಮುಗಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್‌ (SMS) ಮೂಲಕ ಒಟಿಪಿ (OTP) ಬರುತ್ತದೆ.
9. ಇದೀಗ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

Published by:Ashwini Prabhu
First published: