• Home
  • »
  • News
  • »
  • business
  • »
  • EPFO: ಪಿಂಚಣಿದಾರರು ಈಗ ಯಾವಾಗ ಬೇಕಾದರೂ ಜೀವನ್ ಪ್ರಮಾಣಪತ್ರ ಸಲ್ಲಿಸಬಹುದು!

EPFO: ಪಿಂಚಣಿದಾರರು ಈಗ ಯಾವಾಗ ಬೇಕಾದರೂ ಜೀವನ್ ಪ್ರಮಾಣಪತ್ರ ಸಲ್ಲಿಸಬಹುದು!

 ಅಡೆತಡೆಯಿಲ್ಲದೆ ಪಿಂಚಣಿ (Pension) ಪಡೆಯಲು, ಪಿಂಚಣಿದಾರರು ಪ್ರತಿ ವರ್ಷ ಜೀವಿತ ಪ್ರಮಾಣಪತ್ರವನ್ನು ನೀಡುವುದು ಕಡ್ಡಾಯವಾಗಿದೆ.

ಅಡೆತಡೆಯಿಲ್ಲದೆ ಪಿಂಚಣಿ (Pension) ಪಡೆಯಲು, ಪಿಂಚಣಿದಾರರು ಪ್ರತಿ ವರ್ಷ ಜೀವಿತ ಪ್ರಮಾಣಪತ್ರವನ್ನು ನೀಡುವುದು ಕಡ್ಡಾಯವಾಗಿದೆ.

ಅಡೆತಡೆಯಿಲ್ಲದೆ ಪಿಂಚಣಿ (Pension) ಪಡೆಯಲು, ಪಿಂಚಣಿದಾರರು ಪ್ರತಿ ವರ್ಷ ಜೀವಿತ ಪ್ರಮಾಣಪತ್ರವನ್ನು ನೀಡುವುದು ಕಡ್ಡಾಯವಾಗಿದೆ.

  • Share this:

ಉದ್ಯೋಗ ಭವಿಷ್ಯ ನಿಧಿ ಸಂಸ್ಥೆ (EPFO) ಪಿಂಚಣಿದಾರರಿಗೆ ಲೈಫ್ ಸರ್ಟಿಫಿಕೇಟ್ (Life Certificate) ಸಲ್ಲಿಕೆ(ಜೀವಿತ ಪ್ರಮಾಣಪತ್ರ) ಯಲ್ಲಿ ಸಡಿಲಿಕೆಯನ್ನು ಘೋಷಿಸಿ ದೇಶದ ಕೋಟ್ಯಾಂತರ ಪಿಂಚಣಿದಾರರಿಗೆ ದೊಡ್ಡ ನಿರಾಳತೆಯನ್ನು ಉಂಟುಮಾಡಿದೆ. ಈ ಸಡಿಲಿಕೆಯ ಅನ್ವಯ ಪಿಂಚಣಿದಾರರು (Pensioners) ತಮ್ಮ ಜೀವಿತ ಪ್ರಮಾಣಪತ್ರವನ್ನು ಯಾವುದೇ ಸಮಯದಲ್ಲಿ ಸಲ್ಲಿಸಬಹುದು. ಮೊದಲು ಪ್ರತಿ ವರ್ಷ ನವೆಂಬರ್ (November) ತಿಂಗಳಲ್ಲಿ ಪಿಂಚಣಿದಾರರು ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಅಡೆತಡೆಯಿಲ್ಲದೆ ಪಿಂಚಣಿ (Pension) ಪಡೆಯಲು, ಪಿಂಚಣಿದಾರರು ಪ್ರತಿ ವರ್ಷ ಜೀವಿತ ಪ್ರಮಾಣಪತ್ರವನ್ನು ನೀಡುವುದು ಕಡ್ಡಾಯವಾಗಿದೆ. ಪಿಂಚಣಿದಾರ ಮೃತರಾಗಿದ್ದಾರೆಯೇ ಇಲ್ಲವೇ ಎಂಬ ಆಧಾರವನ್ನು ಈ ಪ್ರಮಾಣಪತ್ರ ಸಂಕೇತಿಸುತ್ತದೆ.

ಒಂದು ವರ್ಷದ ಮಾನ್ಯತೆ


EPFO ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದ್ದು EPS-95 ಪಿಂಚಣಿದಾರರು ಈಗ ಯಾವಾಗ ಬೇಕಾದರೂ ಪ್ರಮಾಣಪತ್ರವನ್ನು ಸಲ್ಲಿಸಬಹುದು ಎಂದು ಟ್ವೀಟ್ ಮಾಡಿದೆ. ಪ್ರಮಾಣಪತ್ರ ಸಲ್ಲಿಸಿದ ದಿನಾಂಕದಿಂದ 1 ವರ್ಷದವರೆಗೆ ಮಾನ್ಯತೆಯನ್ನು ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ. ಈ ಹಿಂದೆ, ಎಲ್ಲಾ ಇಪಿಎಸ್ ಪಿಂಚಣಿದಾರರು ನವೆಂಬರ್ ತಿಂಗಳಲ್ಲಿ ಡಿಎಲ್‌ಸಿಯನ್ನು ಸಲ್ಲಿಸಬೇಕಾಗಿತ್ತು.


ಇದರಿಂದಾಗಿ ಪಿಂಚಣಿದಾರರು ಉದ್ದನೆಯ ಸರತಿ ಸಾಲುಗಳಿಂದಾಗಿ ತೊಂದರೆಗಳನ್ನು ಎದುರಿಸಬೇಕಾಗಿತ್ತು ಮತ್ತು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ನೂಕುನುಗ್ಗಲು ಉಂಟಾಗಿತ್ತು. ಇದರಿಂದ ನವೆಂಬರ್‌ನಲ್ಲಿ ಪ್ರಮಾಣಪತ್ರ ಸಲ್ಲಿಸುವ ನೂಕಾಟದಿಂದ ಪಿಂಚಣಿದಾರರು ನೆಮ್ಮದಿಯನ್ನು ಕಂಡುಕೊಂಡಿದ್ದಾರೆ.


ಪ್ರಮಾಣಪತ್ರವನ್ನು ಇಲ್ಲಿ ಸಲ್ಲಿಸಬಹುದು


ಪಿಂಚಣಿದಾರರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಜೀವನ್ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಇದಲ್ಲದೇ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲೂ ಠೇವಣಿ ಇಡಬಹುದು.


ಇದನ್ನೂ ಓದಿ: ಹಳ್ಳಿಗಳಲ್ಲಿ ಆಧಾರ್‌ ತಿದ್ದುಪಡಿ ಈಗ ಇನ್ನಷ್ಟು ಸುಲಭ!

ಮನೆಯಲ್ಲೇ ಕುಳಿತುಕೊಂಡು ಠೇವಣಿ ಇರಿಸಬಹುದು


ಮನೆಯಲ್ಲೇ ಕುಳಿತುಕೊಂಡು ಇದೀಗ ಪಿಂಚಣಿದಾರರು ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಪಿಂಚಣಿದಾರ ಬ್ಯಾಂಕ್ ಇಲ್ಲವೇ ಕಚೇರಿಗೆ ಹೋಗಬೇಕಾಗಿಲ್ಲ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಪ್ರಕಾರ, ಪಿಂಚಣಿದಾರರು 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಬ್ಯಾಂಕಿಂಗ್ ಮೈತ್ರಿ ಅಥವಾ ಅಂಚೆ ಇಲಾಖೆಯ ಸೇವೆಯನ್ನು ಬಳಸಿಕೊಂಡು ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು.


ಹಿರಿಯ ಪಿಂಚಣಿದಾರರಿಗೆ ಪರಿಹಾರ


ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಲು ವಯಸ್ಸಾದ ಕಾರಣ ಬಯೋಮೆಟ್ರಿಕ್ಸ್ (ಬೆರಳಚ್ಚು ಮತ್ತು ಕಣ್ಣಿನ ಗುರುತಿಸುವಿಕೆ) ಸಂಗ್ರಹಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿರುವ ಹಿರಿಯ ಪಿಂಚಣಿದಾರರಿಗೆ ಮುಖ ಗುರುತಿಸುವಿಕೆ ದೃಢೀಕರಣವು ಸಹಾಯ ಮಾಡುತ್ತದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಅವರು ಪಿಂಚಣಿದಾರರಿಗೆ ಫೇಸ್ ಅಥೆಂಟಿಕೇಶನ್ ಟೆಕ್ನಾಲಜಿ ಸೌಲಭ್ಯವನ್ನು ಪ್ರಾರಂಭಿಸಿದ್ದಾರೆ ಎಂದು ಕಾರ್ಮಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.


ಪಿಂಚಣಿಯ ಕೇಂದ್ರೀಕೃತ ವಿತರಣೆ


ಇದಕ್ಕೂ ಮೊದಲು, ಇಪಿಎಫ್‌ಒದ ಅಪೆಕ್ಸ್ ಬಾಡಿ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ (ಸಿಬಿಟಿ) ತನ್ನ 231 ನೇ ಸಭೆಯಲ್ಲಿ ಪಿಂಚಣಿದಾರರಿಗೆ ಇಪಿಎಫ್‌ಒ ಸೇವೆಗಳನ್ನು ಇನ್ನಷ್ಟು ಸುಧಾರಿಸಲು ಪಿಂಚಣಿಯ ಕೇಂದ್ರೀಕೃತ ವಿತರಣೆಯ ಪ್ರಸ್ತಾಪಕ್ಕೆ ತಾತ್ವಿಕ ಅನುಮೋದನೆಯನ್ನು ನೀಡಿತು. ಸಂಸ್ಥೆಯ ಕೊಡುಗೆಗಳು ವಿವಿಧ ಹಂತಗಳಲ್ಲಿ ಇದ್ದು ಮತ್ತು ವಿಧಾನಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.\


ಇದನ್ನೂ ಓದಿ: ಇದು ನಿಮ್ಮ ಹಣವನ್ನು ದ್ವಿಗುಣಗೊಳಿಸುವ ಉಳಿತಾಯ ಯೋಜನೆ!

ಮಾರ್ಗಸೂಚಿಗಳ ಪ್ರಕಾರ, ಇಪಿಎಸ್ ಪಿಂಚಣಿದಾರರು ಈಗ ತಮ್ಮ ಅನುಕೂಲಕ್ಕೆ ಅನುಗುಣವಾಗಿ ವರ್ಷದಲ್ಲಿ ಯಾವುದೇ ಸಮಯದಲ್ಲಿ DLC (ಡಿಜಿಟಲ್ ಜೀವನ ಪ್ರಮಾಣಪತ್ರ) ಅನ್ನು ಸಲ್ಲಿಸಬಹುದು. DLC ಸಲ್ಲಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಪ್ರಮಾಣಪತ್ರವು ಮಾನ್ಯವಾಗಿರುತ್ತದೆ. 2020 ರಲ್ಲಿ ಪಿಂಚಣಿ ಪಾವತಿ ಆದೇಶವನ್ನು (PPO) ನೀಡಿರುವ ಪಿಂಚಣಿದಾರರು ಒಂದು ವರ್ಷ ಪೂರ್ಣಗೊಳ್ಳುವವರೆಗೆ JPP (ಜೀವನ್ ಪ್ರಮಾಣ ಪತ್ರ) ಅನ್ನು ಅಪ್‌ಲೋಡ್ ಮಾಡಬೇಕಾಗಿಲ್ಲ.


Published by:ವಾಸುದೇವ್ ಎಂ
First published: