LIC Jeevan Umang Policy: ಎಲ್​ಐಸಿಯ ಈ​ ಪಾಲಿಸಿ ಮೂಲಕ ತಿಂಗಳಿಗೆ ಕೇವಲ 1,302 ರೂ ಹೂಡಿಕೆ ಮಾಡಿ 28 ಲಕ್ಷ ಗಳಿಸಿ

ಈ ಯೋಜನೆ ಮಧ್ಯಮ ವರ್ಗದ ಕುಟುಂಬಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

LIC logo

LIC logo

  • Share this:
ಲೈಫ್ ಇನ್ಶೂರೆನ್ಸ್ (Life Insurance) ಜೀವನ ಭದ್ರತೆಗಾಗಿ ಇರುವ ಒಂದು ಭರವಸೆಯ ಹೆಜ್ಜೆ. ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಇರುವ ಒಂದು ಆತ್ಮವಿಶ್ವಾಸವೆಂದೇ ಹೇಳಬಹುದು.ಲೈಫ್ ಇನ್ಶೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (LIC) ನಾಗರಿಕರ ಜೀವನ ಭದ್ರತೆಗಾಗಿ ಹಲವಾರು ವಿಭಿನ್ನ ಜೀವ ವಿಮಾ ಯೋಜನೆಗಳು ಮತ್ತು ಪಾಲಿಸಿಗಳನ್ನು ಹೊಂದಿದೆ. ಸಣ್ಣ ಪ್ರೀಮಿಯಂ ಮೊತ್ತದಿಂದಲೂ ಕೂಡ ನಾವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಕಂಪನಿಯ ಅಂತಹ ಇನ್ನೊಂದು ಜೀವ ವಿಮಾ ಪಾಲಿಸಿ ಎಂದರೆ ಎಲ್‍ಐಸಿ ಜೀವನ್ ಉಮಂಗ್ ಪಾಲಿಸಿ (LIC Jeevan Umang Policy).

ಎಲ್‍ಐಸಿ ಜೀವನ್ ಉಮಂಗ್ ಪಾಲಿಸಿಯು ಸರಾಸರಿ ಮೊತ್ತದ ಪ್ರೀಮಿಯಂ ಪಾವತಿಸಿ, ದೊಡ್ಡ ಮೊತ್ತ ಪಡೆಯಲು ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾದ ಯೋಜನೆಯಾಗಿದೆ. ಈ ಯೋಜನೆ ಮಧ್ಯಮ ವರ್ಗದ ಕುಟುಂಬಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಪ್ರೀಮಿಯಂ ಪಾವತಿಸುವ ಅವಧಿಯ ಮುಕ್ತಾಯದ ನಂತರ ವಾರ್ಷಿಕ ಪ್ರಯೋಜನಗಳು ಮುಕ್ತಾಯಗೊಳ್ಳುವವರೆಗೆ ಮತ್ತು ಪಾಲಿಸಿಯು ಪಕ್ವವಾದ ನಂತರ ಒಟ್ಟು ಮೊತ್ತವನ್ನು ಒಳಗೊಂಡಿರುತ್ತದೆ.

ಎಲ್‍ಐಸಿ ಜೀವನ್ ಉಮಂಗ್ ಪಾಲಿಸಿಯ ವಿವರಗಳು

1. ನೀವು ಆಯ್ಕೆ ಮಾಡುವ ಪಾಲಿಸಿಯ ನಿರ್ದಿಷ್ಟ ಯೋಜನೆಯನ್ನು ಅವಲಂಬಿಸಿ ವಯಸ್ಸಿನ ಮಿತಿಯು ಬದಲಾಗಬಹುದು, ಆದರೆ ಮೂಲಭೂತ ಕನಿಷ್ಠ ವಯಸ್ಸು 90 ದಿನಗಳು ಮತ್ತು ಗರಿಷ್ಠ ವಯಸ್ಸು 55 ವರ್ಷಗಳು. ಪೋಷಕರು ತಮ್ಮ ನವಜಾತ ಶಿಶುಗಳಿಗೆ ಈ ಪಾಲಿಸಿಗೆ ಅರ್ಜಿ ಸಲ್ಲಿಸಬಹುದು

2. ಈ ಪಾಲಿಸಿಗೆ ಕನಿಷ್ಠ ವಿಮಾ ಮೊತ್ತವು 2 ಲಕ್ಷ ರೂ ಆಗಿದ್ದು, ಯಾವುದೇ ನಿರ್ದಿಷ್ಟವಾಗಿ ಹೆಚ್ಚಳದ ಮಿತಿಯಿಲ್ಲ.

3. ಎಲ್‍ಐಸಿ ಜೀವನ್ ಉಮಂಗ್ ಪಾಲಿಸಿಯಲ್ಲಿ ನಾಲ್ಕು ಅವಧಿಗಳಿವೆ. ಒಂದು 15 ವರ್ಷಗಳು, ಎರಡನೇಯದು 20 ವರ್ಷಗಳು, ಮೂರನೇಯದು 25 ವರ್ಷಗಳು ಮತ್ತು ನಾಲ್ಕನೇಯದು 30 ವರ್ಷಗಳು. ಕನಿಷ್ಠ ಮತ್ತು ಗರಿಷ್ಠ ವಯಸ್ಸಿನ ಮಿತಿಗಳು ನಿಮ್ಮ ಆಯ್ಕೆಯನ್ನು ಅವಲಂಬಿಸಿರುತ್ತದೆ.

4. ಪಾಲಿಸಿ ನಿಯಮಗಳ ಪ್ರಕಾರ, ಪ್ರೀಮಿಯಂ ಪಾವತಿಸುವ ಅವಧಿಯು 70 ವರ್ಷಗಳಲ್ಲಿ ಕೊನೆಗೊಳ್ಳುವುದರಿಂದ 30-ವರ್ಷದ ಯೋಜನೆಯನ್ನು ಆಯ್ಕೆ ಮಾಡುವ ವ್ಯಕ್ತಿಗೆ ಕನಿಷ್ಠ 40 ವರ್ಷ ವಯಸ್ಸಾಗಿರಬೇಕು. 15 ವರ್ಷಗಳ ಯೋಜನೆಯನ್ನು ಆಯ್ಕೆ ಮಾಡುವ ವ್ಯಕ್ತಿ 55 ವರ್ಷಕ್ಕಿಂತ ಹೆಚ್ಚಿರಬಾರದು.

ಇದನ್ನು ಓದಿ: ಈ ದೀಪಾವಳಿಗೆ HDFC Bank Festive Treatsನೊಂದಿಗೆ ಸಣ್ಣ EMIಗಳೊಂದಿಗೆ ದೊಡ್ಡ ಖರೀದಿಗಳನ್ನು ಮಾಡಿ

5. ಪಾಲಿಸಿಯ ಮುಕ್ತಾಯ ದಿನಾಂಕವನ್ನು 100 ವರ್ಷಗಳಿಗೆ ಹೊಂದಿಸಲಾಗಿದೆ. ಪ್ರೀಮಿಯಂ ಪಾವತಿಸುವ ಅವಧಿಯು ಮುಕ್ತಾಯದ ಸಮಯದವರೆಗೆ ಮುಗಿದ ನಂತರ ವಿಮಾ ಮೊತ್ತದ 8 ಪ್ರತಿಶತವನ್ನು ವಾರ್ಷಿಕವಾಗಿ ಪಾವತಿಸಲು ಎಲ್‌ಐಸಿ ಯೋಜಿಸಿದೆ.

6. ಪಾಲಿಸಿದಾರರು 100 ವರ್ಷ ತುಂಬಿದ ನಂತರ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಾರೆ. ಅವರು 100 ವರ್ಷಕ್ಕಿಂತ ಮೊದಲು ಮರಣ ಹೊಂದಿದರೆ, ಉಳಿದಿರುವ ನಾಮಿನಿಗೆ ಒಟ್ಟು ಮೊತ್ತ ನೀಡಲಾಗುತ್ತದೆ.

ಇದನ್ನು ಓದಿ: ದಿನಕ್ಕೆ ಕೇವಲ ರೂ 50 ಹೂಡಿಕೆ ಮಾಡಿ, ಬರೋಬ್ಬರಿ 34 ಲಕ್ಷ ಲಾಭ ಗಳಿಸಿ; ಇಲ್ಲಿದೆ ಡಿಟೇಲ್ಸ್​

7. ಎಲ್‍ಐಸಿ ಜೀವನ್ ಉಮಂಗ್ ಪಾಲಿಸಿಯು ನಾನ್-ಲಿಂಕ್ಡ್ ಇನ್ಶೂರೆನ್ಸ್ ಮತ್ತು ಗ್ರಾಹಕರು ಆದಾಯವನ್ನು ಖಾತರಿಪಡಿಸಬಹುದು ಎಂಬುದನ್ನು ಗಮನಿಸಬೇಕು. ಪ್ರೀಮಿಯಂಗಳಿಗೆ ಪಾವತಿಸಿದ ಹಣವನ್ನು ಈಕ್ವಿಟಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲಾಗುವುದಿಲ್ಲ.

8. ಕಂಪನಿಯ ನಿಯಮಗಳ ಪ್ರಕಾರ, ಪಾಲಿಸಿದಾರರು ಸಿಂಪಲ್ ರಿವರ್ಷನರಿ ಬೋನಸ್ ಮತ್ತು ಅಂತಿಮ ಹೆಚ್ಚುವರಿ ಬೋನಸ್‍ಗೆ ಅರ್ಹರಾಗುತ್ತಾರೆ, ಇದು ಪಕ್ವವಾದ ನಂತರ ಅವರ ಒಟ್ಟು ಮೊತ್ತಕ್ಕೆ ಸೇರಿಸಲಾಗುತ್ತದೆ.

9. ತಿಂಗಳಿಗೆ 1302 ರೂ. ಕಟ್ಟಿದರೆ ಕೊನೆಯಲ್ಲಿ ನಿಮಗೆ 28 ಲಕ್ಷ ಸಿಗುತ್ತದೆ ಎಂದು ಪಾಲಿಸಿ ಹೇಳುತ್ತದೆ.
Published by:Sharath Sharma Kalagaru
First published: