LIC Housing Finance: ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಯ ನಿವ್ವಳ ಲಾಭ 925.48 ಕೋಟಿ ರೂಪಾಯಿಗೆ ಏರಿಕೆ

ಹೌಸಿಂಗ್ ಫೈನಾನ್ಸ್ ಕಂಪನಿಯ ನಿವ್ವಳ ಬಡ್ಡಿ ಆದಾಯವು ಶೇಕಡಾ 26 ರಷ್ಟು ಏರಿಕೆಯಾಗಿ 1,610.19 ಕೋಟಿ ರೂಪಾಯಿಗಳಿಗೆ ತಲುಪಿದೆ, ಹಿಂದಿನ ವರ್ಷದ ಇದೇ ಅವಧಿಗೆ 1,275.31 ಕೋಟಿ ರೂಪಾಯಿಗಳಷ್ಟಿತ್ತು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ (LIC Housing Finance Ltd) ಪ್ರಕಟಿಸಿರುವ ಹಣಕಾಸಿನ ಫಲಿತಾಂಶದ ಪ್ರಕಾರ, 925.48 ಕೋಟಿ ರೂ ಲಾಭವನ್ನು ವರದಿ ಮಾಡಿದೆ. ಹಣಕಾಸು ವರ್ಷ 2023ರ (Financial year 2023) ಮೊದಲ ತ್ರೈಮಾಸಿಕದಲ್ಲಿ ಸಂಸ್ಥೆ ಹೆಚ್ಚು ನಿವ್ವಳ ಲಾಭವನ್ನು ಗಳಿಸಿದೆ. ಇದು ಹಿಂದಿನ ವರ್ಷ ಇದೇ ಅವಧಿಯಲ್ಲಿ ವರದಿಯಾದ ರೂ. 153.44 ಕೋಟಿಗೆ ಹೋಲಿಸಿದರೆ ನಿವ್ವಳ ಬಡ್ಡಿ ಆದಾಯದ ಹೆಚ್ಚಳದ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ.503 ರಷ್ಟು ಏರಿಕೆಯಾಗಿದೆ. ಇಡೀ ಹಣಕಾಸು ವರ್ಷದಲ್ಲಿ ಕಂಪನಿಯು ನಿವ್ವಳ ಲಾಭವು (Company's net profit) 925.48 ಕೋಟಿ ಎಂದು ವರದಿ ಮಾಡಿದೆ. ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಡಿಮೆ ಪ್ರಾವಿಶನಿಂಗ್ ಮತ್ತು ಹೆಚ್ಚಿನ ಸಾಲದ ಬೆಳವಣಿಗೆಯಿಂದಾಗಿ ತೆರಿಗೆಯ ನಂತರದ ಲಾಭದಲ್ಲಿ 925 ಕೋಟಿಯಷ್ಟು ಬಹುಪಟ್ಟು ಏರಿಕೆಯಾಗಿದೆ.

ನಿವ್ವಳ ಬಡ್ಡಿ ಆದಾಯದಲ್ಲಿ 26% ಏರಿಕೆ
ಹೌಸಿಂಗ್ ಫೈನಾನ್ಸ್ ಕಂಪನಿಯ ನಿವ್ವಳ ಬಡ್ಡಿ ಆದಾಯವು ಶೇಕಡಾ 26 ರಷ್ಟು ಏರಿಕೆಯಾಗಿ 1,610.19 ಕೋಟಿ ರೂಪಾಯಿಗಳಿಗೆ ತಲುಪಿದೆ, ಹಿಂದಿನ ವರ್ಷದ ಇದೇ ಅವಧಿಗೆ 1,275.31 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ. ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಮಾರ್ಜಿನ್ ಶೇಕಡಾ 2.54 ರಷ್ಟಿತ್ತು. ಪ್ರಸಕ್ತ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯವು ಶೇಕಡ 9ರಷ್ಟು ಹೆಚ್ಚಾಗಿದ್ದು 5,285.46 ಕೋಟಿ ರೂ ಆಗಿದೆ.

ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಗೆ ವರದಾನವಾದ ವರ್ಕ್ ಫ್ರಮ್ ಹೋಮ್
"ಸಾಂಕ್ರಾಮಿಕ ಮತ್ತು ಉತ್ತಮ ಆರ್ಥಿಕ ಚಟುವಟಿಕೆಯ ಸರಾಗಗೊಳಿಸುವಿಕೆಯೊಂದಿಗೆ, ನಮ್ಮ ವಿಭಾಗದಲ್ಲಿ ಒಟ್ಟಾರೆ ಸುಧಾರಣೆ ಕಂಡುಬಂದಿದೆ. ಹೈಬ್ರಿಡ್ ಕೆಲಸದ ಮಾದರಿಯು ದೇಶದಾದ್ಯಂತ ವ್ಯಾಪಕವಾಗಿ ನಡೆಯುತ್ತಿದೆ, ಇದರ ಪರಿಣಾಮವಾಗಿ ಉತ್ತಮ, ದೊಡ್ಡ ವಸತಿ ಘಟಕಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಮಾರುಕಟ್ಟೆ ಪ್ರವೃತ್ತಿಯು ನಮಗೆ ಹೆಚ್ಚಿನ ಲಾಭ ತಂದು ಕೊಟ್ಟಿತು. ಈ ಅವಧಿಯಲ್ಲಿ ಸಾಲದ ಬೆಳವಣಿಗೆಯು 10ರಷ್ಟು ಉತ್ತಮವಾಗಿತ್ತು," ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೈ.ವಿಶ್ವನಾಥ ಗೌಡ್ ಹೇಳಿದರು.

ಇದನ್ನೂ ಓದಿ:  Multibagger Stock: 15 ವರ್ಷಗಳಲ್ಲಿ ಭಾರಿ ಏರಿಕೆ ಕಂಡ ಮಲ್ಟಿಬ್ಯಾಗರ್ ಸ್ಟಾಕ್; ಇದರ ಈಗಿನ ಮೊತ್ತವೆಷ್ಟು ಗೊತ್ತಾ?

ಕಳೆದ ವರ್ಷದ ಇದೇ ಅವಧಿಯಲ್ಲಿನ 8,652 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಪರಿಶೀಲನೆಯಲ್ಲಿರುವ ತ್ರೈಮಾಸಿಕದಲ್ಲಿ ಒಟ್ಟು ವಿನಿಯೋಗಗಳು 76 ಪ್ರತಿಶತದಷ್ಟು 15,201 ಕೋಟಿ ರೂಪಾಯಿಗಳಾಗಿವೆ. ಹಣಕಾಸು ವರ್ಷ 22 ರಲ್ಲಿ 7,650 ಕೋಟಿ ರೂ.ಗೆ ಹೋಲಿಸಿದರೆ ವೈಯಕ್ತಿಕ ಗೃಹ ಸಾಲ ವಿಭಾಗದಲ್ಲಿ ವಿತರಣೆಗಳು 13,131 ಕೋಟಿ ರೂ ಆಗಿವೆ.

ವೈಯಕ್ತಿಕ ಗೃಹ ಸಾಲದಲ್ಲೂ ಲಾಭ
ಈ ಪೈಕಿ, ವೈಯಕ್ತಿಕ ಗೃಹ ಸಾಲ ವಿಭಾಗದಲ್ಲಿ ವಿತರಣೆಯು 7,650 ಕೋಟಿ ರೂ.ಗೆ ಹೋಲಿಸಿದರೆ 13,131 ಕೋಟಿ ರೂ.ಗಳಾಗಿದ್ದು, ಶೇ.72 ರಷ್ಟು ಬೆಳವಣಿಗೆಯಾಗಿದೆ.

ಬಾಕಿ ಸಾಲದ ವಿಭಾಗದಲ್ಲಿ 10% ಹೆಚ್ಚಿನ ಲಾಭ
ಯೋಜನಾ ಸಾಲದ ಪೋರ್ಟ್‌ಫೋಲಿಯೊ ಜೂನ್ 30, 2022ಕ್ಕೆ ರೂ 12,443 ಕೋಟಿಗಳಷ್ಟಿತ್ತು, ಕಳೆದ ವರ್ಷ ಇದೇ ದಿನಾಂಕದಂದು ರೂ 15,601 ಕೋಟಿ ಇತ್ತು. ಒಟ್ಟು ಬಾಕಿ ಸಾಲದ ಬಂಡವಾಳವು ಹಿಂದಿನ ವರ್ಷದಲ್ಲಿ 2.32 ಲಕ್ಷ ಕೋಟಿ ರೂ.ಗಳಿಂದ 10 ಪ್ರತಿಶತದಷ್ಟು ಬೆಳೆದು 2.56 ಲಕ್ಷ ಕೋಟಿ ರೂ.ಲಾಭ ಕಂಡಿದೆ.

ಇದನ್ನೂ ಓದಿ:  GST On Rice: ಅಕ್ಕಿ ಮೇಲಿನ ಜಿಎಸ್​ಟಿ ಉಳಿಸಲು ತಮಿಳುನಾಡಿನಲ್ಲಿ ಹೊಸ ಉಪಾಯ!

IndAS 16 ಅಡಿಯಲ್ಲಿ, ಭವಿಷ್ಯದ ಕ್ರೆಡಿಟ್ ನಷ್ಟಕ್ಕೆ ಆಸ್ತಿ ವರ್ಗೀಕರಣ ಮತ್ತು ನಿಬಂಧನೆ ಬದಲಾವಣೆಗಳನ್ನು ನಿರೀಕ್ಷಿತ ಕ್ರೆಡಿಟ್ ನಷ್ಟ (ECL) ಆಧಾರದ ಮೇಲೆ ಈ ವರದಿ ಮಾಡಲಾಗುತ್ತದೆ

ಎಲ್ಐಸಿ ಹೌಸಿಂಗ್ ಫೈನಾನ್ಸಿಂದ ಬೆಂಚ್ ಮಾರ್ಕ್ ಪ್ರೈಮ್ ಲೆಂಡಿಂಗ್ ದರವನ್ನು 60 ಬೇಸಿಸ್ ಪಾಯಿಂಟ್ ಗಳಷ್ಟು ಇದೇ ಜೂನ್ ನಲ್ಲಿ ಹೆಚ್ಚಿಸಿತ್ತು. ಗೃಹ ಸಾಲಗಳ ಮೇಲಿನ ಪರಿಷ್ಕೃತ ಬಡ್ಡಿ ದರಗಳು ಜೂನ್ 20, 2022 ರಿಂದ ಜಾರಿಗೆಬಂದಿದ್ದು, ಶೇಕಡಾ 7.50 ರಿಂದ ಬಡ್ಡಿ ದರದಿಂದ ಪ್ರಾರಂಭವಾಗುತ್ತದೆ. ಈ ಅಂಶ ಕೂಡ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ ನ ವಾರ್ಷಿಕ ಆದಾಯದ ಹೆಚ್ಚಳಕ್ಕೆ ನೇರವಾಗಿ ಕಾರಣವಾಗಿದೆ.
Published by:Ashwini Prabhu
First published: