ಭಾರತೀಯ ಜೀವ ವಿಮಾ ನಿಗಮ (LIC) ಕಾಲ ಕಾಲಕ್ಕೆ ಅತ್ಯುತ್ತಮ ಯೋಜನೆಗಳನ್ನು ಒದಗಿಸುತ್ತಿದ್ದು ಇದೀಗ ಭಾರತೀಯ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಗುರಿಯನ್ನಿಟ್ಟುಕೊಂಡು ವಿಶೇಷ ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಯ ಮುಖಾಂತರ ತ್ವರಿತವಾಗಿ ಹಣ ಅಭಿವೃದ್ಧಿಪಡಿಸುವ ಅವಕಾಶವನ್ನು ಮಹಿಳೆಯರು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿ ಫಂಡ್ ರಚಿಸಲು ಸುರಕ್ಷಿತ ಹೂಡಿಕೆ ಆಯ್ಕೆಗಾಗಿ ಎದುರು ನೋಡುತ್ತಿದ್ದರೆ ಈ ಯೋಜನೆ ಅತ್ಯಂತ ಪ್ರಶಸ್ತವಾದುದಾಗಿದೆ.
ವಿಶೇಷವಾಗಿ ಮಹಿಳೆಯರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ಹೆಸರು ಎಲ್ಐಸಿ ಆಧಾರ್ ಶಿಲಾ ಯೋಜನೆ (LIC Aadhaar Shila Plan). ಈ ಯೋಜನೆಯಡಿಯಲ್ಲಿ 8 ವರ್ಷದಿಂದ - 55ರ ಹರೆಯದ ಮಹಿಳೆಯರು ಹೂಡಿಕೆ ಮಾಡಬಹುದಾಗಿದೆ. ಹಾಗಿದ್ದರೆ ಈ ಯೋಜನೆಯ ಕುರಿತು ಮತ್ತಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.
LIC ಆಧಾರ್ ಶಿಲಾ ಯೋಜನೆ ಕುರಿತು:
LIC ಆಧಾರ್ ಶಿಲಾ ಯೋಜನೆಯು ತನ್ನ ಗ್ರಾಹಕರಿಗೆ ಭದ್ರತೆ ಹಾಗೂ ಉಳಿತಾಯ ಹೀಗೆ ಎರಡೂ ರೀತಿಯ ಪ್ರಯೋಜನ ಒದಗಿಸುತ್ತದೆ. ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅಂಗೀಕೃತ ಆಧಾರ್ ಕಾರ್ಡ್ (Aadhar Card) ಅನ್ನು ಮಹಿಳೆಯರು ಹೊಂದಿರುವುದು ಕಡ್ಡಾಯವಾಗಿದೆ. ಯೋಜನೆಯ ಮುಕ್ತಾಯದ ಸಮಯದಲ್ಲಿ ಪಾಲಿಸಿದಾರರು ಹಣ ಪಡೆಯುತ್ತಾರೆ. ಇದೇ ಸಮಯದಲ್ಲಿ ಪಾಲಿಸಿದಾರರು ಯೋಜನೆಯ ಮುಕ್ತಾಯಕ್ಕಿಂತ ಮುಂಚೆಯೇ ಮರಣ ಹೊಂದಿದಲ್ಲಿ ಪಾಲಿಸಿದಾರರ ಕುಟುಂಬಕ್ಕೆ ಆರ್ಥಿಕ ನೆರವನ್ನು ಈ ಯೋಜನೆಯು ಒದಗಿಸಲಿದೆ.
LIC (Life Insurance Corporation) ಆಧಾರ್ ಶಿಲಾ ಯೋಜನೆಯಡಿಯಲ್ಲಿ ಪಾಲಿಸಿದಾರರು 75,000 ರೂ. ನಿಂದ ಆರಂಭಿಸಿ 3 ಲಕ್ಷ ರೂ. ಗಳವರೆಗೆ ಹೂಡಿಕೆ ಮಾಡಬಹುದಾಗಿದೆ. ಪ್ರತಿ ದಿನ 29 ರೂ. ಉಳಿತಾಯ ಮಾಡುವ ಮೂಲಕ ನೀವು ಬರೋಬ್ಬರಿ 4 ಲಕ್ಷದವರೆಗೆ ಲಾಭ ಗಳಿಸಬಹುದಾಗಿದೆ. ಈ ಯೋಜನೆಯ ಮುಕ್ತಾಯ ಕನಿಷ್ಠ ಅವಧಿ ಹತ್ತು ವರ್ಷಗಳಾಗಿದ್ದು ಗರಿಷ್ಠ ಅವಧಿ 20 ವರ್ಷಗಳಾಗಿವೆ. ಗರಿಷ್ಠ ವಯೋಮಿತಿ 70 ವರ್ಷಗಳಾಗಿವೆ. ಈ ಯೋಜನೆಯ ಪ್ರೀಮಿಯಂ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಮಾಡಲಾಗುತ್ತದೆ.
ಈ ಯೋಜನೆಯನ್ನು ಮತ್ತಷ್ಟು ವಿವರವಾಗಿ ಉದಾಹರಣೆಯ ಮೂಲಕ ಮನದಟ್ಟು ಮಾಡಿಕೊಳ್ಳೋಣ. ನಿಮಗೆ 30 ವರ್ಷಗಳಾಗಿದ್ದು ನೀವು 20 ವರ್ಷಗಳ ಕಾಲ ನಿತ್ಯವೂ 29 ರೂ. ಗಳಂತೆ ಡಿಪಾಸಿಟ್ ಮಾಡುತ್ತೀರಿ. ಮೊದಲ ವರ್ಷದಲ್ಲಿ, ನೀವು ಒಟ್ಟು 10,959 ರೂ. ಡೆಪಾಸಿಟ್ ಹೊಂದಿರುತ್ತೀರಿ. ಇದೀಗ ಈ ಮೊತ್ತವು 4.5% ತೆರಿಗೆ ಹೊಂದಿರುತ್ತದೆ. ಮುಂದಿನ ವರ್ಷ, ನೀವು 10,723 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಹೀಗೆ ಈ ಪ್ರೀಮಿಯಂಗಳನ್ನು ನೀವು ಪ್ರತಿ ತಿಂಗಳು ಅಥವಾ ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಆಧಾರದಲ್ಲಿ ನೀವು ಡಿಪಾಸಿಟ್ ಮಾಡಬಹುದಾಗಿದೆ. ನೀವು 20 ವರ್ಷಗಳಲ್ಲಿ 2,14,696 ರೂ. ಡೆಪಾಸಿಟ್ ಮಾಡಬೇಕಾಗುತ್ತದೆ ಇದರಿಂದ ಯೋಜನೆಯ ಮುಕ್ತಾಯ ಸಮಯದಲ್ಲಿ ನೀವು ಒಟ್ಟು 3,97,000 ರೂ.ಗಳನ್ನು ಪಡೆದುಕೊಳ್ಳುತ್ತೀರಿ. ಒಟ್ಟಾರೆ ದಿನವೊಂದಕ್ಕೆ 29 ರೂ. ಉಳಿಸಿ ಆಧಾರ್ ಶಿಲಾ ಯೋಜನೆಯಲ್ಲಿ (Aadhar Shila Yojana) ಹೂಡಿಕೆ ಮಾಡಬಹುದಾಗಿದೆ.
Published by:Sharath Sharma Kalagaru
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ