ಲಿಬಿಯಾದ ರಾಷ್ಟ್ರೀಯ ತೈಲ ಕಂಪನಿಯು ನಿರ್ವಹಿಸುತ್ತಿದ್ದ ತೈಲ ಕ್ಷೇತ್ರವೊಂದು (Al-Fil oil field) ಬೆದರಿಕೆಯ ಕಾರಣಗಳಿಗಾಗಿ ಮುಚ್ಚಲ್ಪಟ್ಟಿದೆ. ಉತ್ತರ ಆಫ್ರಿಕಾದ (North Africa) ರಾಷ್ಟ್ರವಾದ ಲಿಬಿಯಾವನ್ನು (Libya) ಮತ್ತೆ ಸಶಸ್ತ್ರ ಸಂಘರ್ಷಕ್ಕೆ (Protest forces) ಎಳೆಯುವ ಬೆದರಿಕೆಯೊಡ್ಡುವ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಈ ಮಧ್ಯೆ ತಾನು ನಿರ್ವಹಿಸುತ್ತಿದ್ದ ತೈಲ ಕ್ಷೇತ್ರವನ್ನು (National Oil Corporation) ಒತ್ತಾಯಪೂರ್ವಕವಾಗಿ ಮುಚ್ಚಲಾಯಿತು ಎಂದು ಸ್ವತಃ ಲಿಬಿಯಾದ ರಾಷ್ಟ್ರೀಯ ತೈಲ ಕಂಪನಿಯು (Oil Company) ಭಾನುವಾರ ಹೇಳಿದೆ. ಶನಿವಾರದಂದು ದೇಶದ ದಕ್ಷಿಣದಲ್ಲಿರುವ ಅಲ್-ಫೀಲ್ ಕ್ಷೇತ್ರಕ್ಕೆ ಜನರ ಗುಂಪೊಂದು ಪ್ರವೇಶಿಸಿ ತೈಲ ಉತ್ಪಾದನೆಯನ್ನು ಪರಿಣಾಮಕಾರಿಯಾಗಿ ನಿಲ್ಲಿಸಿದೆ ಎಂದು ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಆಯಿಲ್ ಕಾರ್ಪೊರೇಷನ್ ಹೇಳಿದೆ.
ಆದರೆ ತೈಲ ಉತ್ಪಾದನೆ ಮಾಡುವುದನ್ನು ಬೆದರಿಕೆ ಒಡ್ಡಿ ನಿಲ್ಲಿಸಿದ ಜನರು ಯಾರು? ಅಥವಾ ಅವರು ಶಸ್ತ್ರಸಜ್ಜಿತರಾಗಿದ್ದಾರೆಯೇ ಎಂದು ಸಂಸ್ಥೆಯು ಬಹಿರಂಗಪಡಿಸಿಲ್ಲ.
ಲಿಬಿಯಾದ ಮೂರು ಪ್ರಮುಖ ಪ್ರದೇಶಗಳಿಗೆ ತೈಲ ಆದಾಯ ಹಂಚಿಕೆ ಆದರೆ ದಕ್ಷಿಣ ಪ್ರದೇಶದ ಬುಡಕಟ್ಟು ಮುಖಂಡರು ಶನಿವಾರ ವೀಡಿಯೊ ಹೇಳಿಕೆಯಲ್ಲಿ ತೈಲ ಉತ್ಪಾದನಾ ಕ್ಷೇತ್ರವನ್ನು ಮುಚ್ಚುವುದಾಗಿ ಘೋಷಿಸಿದರು. ನ್ಯಾಷನಲ್ ಆಯಿಲ್ ಕಾರ್ಪೊರೇಷನ್ ಅಧ್ಯಕ್ಷರಾದ ಮುಸ್ತಫಾ ಸನಲ್ಲಾ ಅವರನ್ನು ವಜಾಗೊಳಿಸುವಂತೆ ಮತ್ತು ಲಿಬಿಯಾದ ಮೂರು ಪ್ರಮುಖ ಪ್ರದೇಶಗಳಿಗೆ ತೈಲ ಆದಾಯವನ್ನು ನ್ಯಾಯಯುತವಾಗಿ ವಿತರಿಸಬೇಕೆಂದು ಒತ್ತಾಯಿಸಿದರು.
ಅಧಿಕಾರ ಹಸ್ತಾಂತರಿಸಿ ಅವರು ಲಿಬಿಯಾದ ಪ್ರಧಾನಿ ಅಬ್ದುಲ್ ಹಮೀದ್ ದ್ಬೀಬಾ ಅವರನ್ನು ಪ್ರತಿಸ್ಪರ್ಧಿ ಪ್ರಧಾನಿ ಫಾತಿ ಬಶಾಘಾ ಅವರ ಸಂಸತ್ತು ನೇಮಿಸಿದ ಸರ್ಕಾರಕ್ಕೆ ಅಧಿಕಾರವನ್ನು ಹಸ್ತಾಂತರಿಸುವಂತೆ ಕರೆ ನೀಡಿದರು.
ದಿನಕ್ಕೆ ಸುಮಾರು 1.2 ಬಿಲಿಯನ್ ಬ್ಯಾರೆಲ್ ಉತ್ಪಾದನೆ ಬೃಹತ್ ತೈಲ ಉತ್ಪಾದನಾ ಕ್ಷೇತ್ರದ ಸ್ಥಗಿತಗೊಳಿಸುವಿಕೆಯಿಂದಾಗಿ ಲಿಬಿಯಾ ಎಷ್ಟು ಬ್ಯಾರೆಲ್ ತೈಲ ಉತ್ಪಾದನೆಯನ್ನು ಕಳೆದುಕೊಳ್ಳುತ್ತದೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಆದರೆ ಲಿಬಿಯಾ ದೇಶದ ಉತ್ಪಾದನೆಯು ದಿನಕ್ಕೆ ಸುಮಾರು 1.2 ಬಿಲಿಯನ್ ಬ್ಯಾರೆಲ್ಗಳಷ್ಟಿತ್ತು.
ಸಂಘರ್ಷ ತಾರಕಕ್ಕೆ ಏರಲಿದೆಯೇ? ಲಿಬಿಯಾದ ಟೋಬ್ರೂಕ್ ಎಂಬ ನಗರದಲ್ಲಿ ನೆಲೆಗೊಂಡಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಿಂದ ಫೆಬ್ರವರಿಯಲ್ಲಿ ಬಶಾಘಾ ಅವರನ್ನು ಪ್ರಧಾನ ಮಂತ್ರಿಯಾಗಿ ಹೆಸರಿಸಲಾಯಿತು. ಟ್ರಿಪೋಲಿ ರಾಜಧಾನಿಯಲ್ಲಿ ನೆಲೆಸಿರುವ ದ್ಬೀಬಾ ಅವರು ಕೆಳಗಿಳಿಯಲು ನಿರಾಕರಿಸಿದ್ದಾರೆ. ಚುನಾಯಿತ ಸರ್ಕಾರಕ್ಕೆ ಮಾತ್ರ ಅಧಿಕಾರವನ್ನು ಹಸ್ತಾಂತರಿಸುವುದಾಗಿ ಒತ್ತಾಯಿಸಿದ್ದಾರೆ. ಹೀಗಾಗಿ ಲಿಬಿಯಾದಲ್ಲಿ ರಾಜಕೀಯ ಸಂಘರ್ಷ ತಾರಕಕ್ಕೆ ಏರುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ಕಳೆದ ಎರಡು ತಿಂಗಳುಗಳಲ್ಲಿ ಲಿಬಿಯಾ ದೇಶದಲ್ಲಿ ರಾಜಕೀಯ ಬಣಗಳ ನಡುವಿನ ವಿಭಜನೆಗಳು ಗಾಢವಾಗಿವೆ. ವಿಶೇಷವಾಗಿ ಪಶ್ಚಿಮ ಪ್ರದೇಶದಲ್ಲಿ ಸೇನೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಇದು 1.5 ವರ್ಷಗಳಿಗಿಂತಲೂ ಹೆಚ್ಚು ಕಾಲ ಶಾಂತವಾಗಿದ್ದ ಲಿಬಿಯಾವನ್ನು ಮತ್ತೆ ಸಂಘರ್ಷದ ಭೂಮಿಯನ್ನಾಗಿ ಪರಿವರ್ತಿಸಬಹುದು ಎಂಬ ಭಯವನ್ನು ಹುಟ್ಟುಹಾಕಿದೆ.
ಭಾನುವಾರ ತೈಲ ಉತ್ಪಾದನಾ ಕ್ಷೇತ್ರದ ಮುಚ್ಚುವಿಕೆಯಿಂದ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಲ್ಲಿ ಆದಂತೆಯೇ ವಿಶ್ವಾದ್ಯಂತ ತೈಲ ಮಾರುಕಟ್ಟೆಗಳಲ್ಲಿ ಸಂಚಲನ ಮೂಡಿಸಿದೆ. ಇದರಿಂದಾಗಿ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್ಗೆ 106 ಡಾಲರ್ನ್ನು ಮೀರಿ ಹೆಚ್ಚಾಗಿದೆ ಎಂದು ಸಹ ವರದಿಯಾಗಿದೆ.
ಅಂತರ್ಯುದ್ಧದಲ್ಲಿ ದೀರ್ಘಕಾಲ ಪ್ರಮುಖ ಪಾತ್ರ ಕಳೆದ ತಿಂಗಳು ಸಶಸ್ತ್ರ ಗುಂಪು ಅಲ್-ಫೀಲ್ ಮತ್ತು ಇನ್ನೊಂದು ನಿರ್ಣಾಯಕ ತೈಲ ಕ್ಷೇತ್ರವನ್ನು ಮುಚ್ಚಿತ್ತು. ಲಿಬಿಯಾದ ಅಮೂಲ್ಯವಾದ ಕಚ್ಚಾ ತೈಲವು ಉತ್ತರ ಆಫ್ರಿಕಾದ ಲಿಬಿಯಾ ದೇಶದ ಅಂತರ್ಯುದ್ಧದಲ್ಲಿ ದೀರ್ಘಕಾಲ ಪ್ರಮುಖ ಪಾತ್ರ ವಹಿಸಿತ್ತು. ಪ್ರತಿಸ್ಪರ್ಧಿ ಸೇನಾಪಡೆಗಳು ಮತ್ತು ವಿದೇಶಿ ಶಕ್ತಿಗಳು ಆಫ್ರಿಕಾದ ಅತಿದೊಡ್ಡ ತೈಲ ನಿಕ್ಷೇಪಗಳ ನಿಯಂತ್ರಣಕ್ಕಾಗಿ ಜಗಳವಾಡುತ್ತಿವೆ.
ನ್ಯಾಟೋ ಬೆಂಬಲಿತ ದಂಗೆಯು 2011 ರಲ್ಲಿ ದೀರ್ಘಕಾಲದ ಸರ್ವಾಧಿಕಾರಿ ಮೊಅಮ್ಮರ್ ಗಡಾಫಿಯನ್ನು ಉರುಳಿಸಿ ಕೊಂದ ನಂತರ ತೈಲ ಸಮೃದ್ಧ ಉತ್ತರ ಆಫ್ರಿಕನ್ ದೇಶವು ಸಂಘರ್ಷದಿಂದ ಧ್ವಂಸಗೊಂಡಿತ್ತು. ದೇಶವು ಪೂರ್ವ ಮತ್ತು ಪಶ್ಚಿಮದಲ್ಲಿ ಪ್ರತಿಸ್ಪರ್ಧಿ ಆಡಳಿತಗಳ ನಡುವೆ ಹಲವಾರು ವರ್ಷಗಳಿಂದ ವಿಭಜಿಸಲ್ಪಟ್ಟಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ