• Home
  • »
  • News
  • »
  • business
  • »
  • Anil Agarwal: ತಮ್ಮ ಉದ್ಯೋಗಿಯ ಮಗ ಬರೆದ ಪತ್ರ ನೋಡಿ ಅನಿಲ್​ ಅಗರ್ವಾಲ್ ಭಾವುಕ​, ಫೋಟೋ ವೈರಲ್!

Anil Agarwal: ತಮ್ಮ ಉದ್ಯೋಗಿಯ ಮಗ ಬರೆದ ಪತ್ರ ನೋಡಿ ಅನಿಲ್​ ಅಗರ್ವಾಲ್ ಭಾವುಕ​, ಫೋಟೋ ವೈರಲ್!

ಅನಿಲ್​ ಅಗರ್ವಾಲ್

ಅನಿಲ್​ ಅಗರ್ವಾಲ್

ಭಾರತದ ಅತ್ಯಂತ ಪ್ರಸಿದ್ಧ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾದ ವೇದಾಂತ ರಿಸೋರ್ಸಸ್ ಲಿಮಿಟೆಡ್ (Vendata Resources Limted) ನ ಸ್ಥಾಪಕ ಮತ್ತು ಅಧ್ಯಕ್ಷ ಅನಿಲ್ ಅಗರ್ವಾಲ್ (Anil Agarwal) ಅವರು ತಮ್ಮ ಜೀವನದಲ್ಲಿ ಸರಳ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದ್ದಾರೆ. 

  • Trending Desk
  • 2-MIN READ
  • Last Updated :
  • Share this:

ಕೆಲ ದೊಡ್ಡ ದೊಡ್ಡ ಉದ್ಯಮಿಗಳು (Businessman) ತಮಗೆ ಸಿಕ್ಕ ಯಶಸ್ಸ (Sucess) ನ್ನು ತುಂಬಾನೇ ತಲೆಗೆ ತೆಗೆದುಕೊಳ್ಳದೆ ಜೀವನದಲ್ಲಿ ತುಂಬಾನೇ ಸರಳವಾಗಿ ಇರುತ್ತಾರೆ ಅಂತ ಹೇಳಬಹುದು. ಇಲ್ಲಿಯೂ ಒಬ್ಬ ಅಂತಹ ವ್ಯಕ್ತಿಯ ಬಗ್ಗೆಯೇ ನಾವು ಹೇಳಲು ಹೊರಟಿದ್ದೇವೆ ನೋಡಿ. ಭಾರತದ ಅತ್ಯಂತ ಪ್ರಸಿದ್ಧ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾದ ವೇದಾಂತ ರಿಸೋರ್ಸಸ್ ಲಿಮಿಟೆಡ್ (Vendata Resources Limted) ನ ಸ್ಥಾಪಕ ಮತ್ತು ಅಧ್ಯಕ್ಷ ಅನಿಲ್ ಅಗರ್ವಾಲ್ (Anil Agarwal) ಅವರು ತಮ್ಮ ಜೀವನದಲ್ಲಿ ಸರಳ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದ್ದಾರೆ. ಅವರಿಗೆ ದೊರೆತಿರುವ ಅತಿದೊಡ್ಡ ಸಾಧನೆ ಎಂದರೆ ಅದು ತಮ್ಮ ಉದ್ಯೋಗಿಗಳು ಮತ್ತು ಇತರ ಜನರಿಂದ ಪಡೆಯುವ ಶುಭ ಹಾರೈಕೆಗಳು ಮತ್ತು ಪ್ರೀತಿ ಎಂದು ಹೇಳುತ್ತಾರೆ.


ಆಸ್ತಾ ತ್ಯಾಗಿ ಹಂಚಿಕೊಂಡ ಪೋಸ್ಟ್ ನಲ್ಲಿ ಏನಿದೆ?


ಅಗರ್ವಾಲ್ ಅವರ ಪಿಆರ್ ಮ್ಯಾನೇಜರ್ ಆಸ್ತಾ ತ್ಯಾಗಿ ಅವರು ಪೋಸ್ಟ್ ಮಾಡಿದ ಇತ್ತೀಚಿನ ಲಿಂಕ್ಡ್ಇನ್ ಪೋಸ್ಟ್ ನಲ್ಲಿ ವಿದ್ಯಾರ್ಥಿಯೊಬ್ಬ ಈ ಕೈಗಾರಿಕೋದ್ಯಮಿಗೆ ಬರೆದ ಕಂದು ಬಣ್ಣದ ನ್ಯಾಪ್ಕಿನ್ ಮೇಲೆ ಬರೆದ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ.


ಇದನ್ನು ನೋಡಿ ತುಂಬಾನೇ ಭಾವುಕರಾದ ಅಗರ್ವಾಲ್ ಅವರು ತಾವು ಪಡೆಯುವ ಅಂತಹ ಪ್ರೀತಿಯೇ ತಮ್ಮ ಜೀವನದ ತುಂಬಾ ದೊಡ್ಡ ಸಾಧನೆ ಎಂದು ಉತ್ತರಿಸಿದರು.ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾರ್ಥಿ ಗೌರವ್ ಅಗರ್ವಾಲ್ ಅವರು ಬರೆದ ಪತ್ರದಲ್ಲಿ ತಾನು ಸ್ಟೆರ್ಲೈಟ್ ನ ಲೆಕ್ಕಪರಿಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಅಗರ್ವಾಲ್ ಅವರ ಮಗ ಎಂದು ಬರೆದಿದ್ದಾರೆ.


ಮಗ, ತಂದೆಗೆ ಬರೆದ ಪತ್ರದಲ್ಲಿ ಏನಿದೆ?


ಮಹೇಶ್ ಅಗರ್ವಾಲ್, ಎಚ್‌ಪಿ ಪಟೋಡಿಯಾ ಮತ್ತು ಜಿಡಿ ಅಗರ್ವಾಲ್ ಅವರೊಂದಿಗೆ ದಾಸ್ ಮತ್ತು ಪ್ರಸಾದ್ ಅಕೌಂಟಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರ ಮಗ ಹೇಳಿದರು.


ಗೌರವ್ ಅಗರ್ವಾಲ್ ಅವರು ಕೋಲ್ಕತ್ತಾದಿಂದ ಬಂದಿದ್ದಾರೆ ಮತ್ತು ಅನಿಲ್ ಅಗರ್ವಾಲ್ ಅವರ ಮಾರ್ಗದರ್ಶನವನ್ನು ಶಾಶ್ವತವಾಗಿ ಕೋರಿದ್ದಾರೆ ಎಂದು ಹೇಳಿದರು.ಸಾಮಾಜಿಕ ಮಾಧ್ಯಮದಲ್ಲಿ ಪತ್ರವನ್ನು ಪೋಸ್ಟ್ ಮಾಡಿದ ಆಸ್ತಾ ತ್ಯಾಗಿ ಅವರು "ಇನ್‌ಸ್ಟಾಗ್ರಾಮ್ ಸ್ಟೋರಿ ಮತ್ತು ವಾಟ್ಸಾಪ್ ಸಂದೇಶಗಳ ಜಗತ್ತಿನಲ್ಲಿ "ಗೌರವ್ ಅಗರ್ವಾಲ್ ತನ್ನ ಬಾಸ್ ಅನಿಲ್ ಅಗರ್ವಾಲ್ ಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ: ಹೊಸ ವರ್ಷದಲ್ಲಿ ಹಣದ ಮಳೆಗರೆಯುವ 6 ಷೇರುಗಳಿವು, ನೀವೂ ಖರೀದಿಸಿ!


"ಗೌರವ್ ಅವರ ತಂದೆ 14 ವರ್ಷಗಳ ಕಾಲ ನಮ್ಮೊಂದಿಗೆ ಕೆಲಸ ಮಾಡಿದರು. ಇಂದಿಗೂ, ವೇದಾಂತ ಕುಟುಂಬದ ಭಾಗವಾಗಲು ಅವರು ಎಷ್ಟು ಗೌರವಿಸುತ್ತಾರೆ ಎಂದು ನೀವು ತಿಳಿಯಬಹುದು. ನನ್ನ ಬಾಸ್ ನಿಂದ ನಾನು ಕಲಿತ ಒಂದು ವಿಷಯವೆಂದರೆ ದಯೆ" ಎಂದು ಅವರು ಬರೆದಿದ್ದಾರೆ.


ಪೋಸ್ಟ್ ಗೆ ಎಮೋಷನಲ್ ಆದ ಅನಿಲ್ ಅಗರ್ವಾಲ್..


ಅನಿಲ್ ಅಗರ್ವಾಲ್ ತಮ್ಮ ಕುರಿತಾದ ಈ ಪೋಸ್ಟ್ ಗೆ ಭಾವನಾತ್ಮಕ ಉತ್ತರದಲ್ಲಿ "ಗೌರವ್ ಅವರನ್ನು ಭೇಟಿಯಾಗಿರುವುದು ನನಗೆ ತುಂಬಾನೇ ಖುಷಿ ಕೊಟ್ಟಿತು. ನಿಮ್ಮೆಲ್ಲರಿಂದ ನಾನು ಪಡೆಯುವ ಈ ಪ್ರೀತಿಯು ನನ್ನ ಜೀವನದ ನಿಜವಾದ ಸಂಪಾದನೆಯಾಗಿದೆ” ಎಂದು ಹೇಳಿದರು.


ಭಾವುಕರಾದ್ರಂತೆ  ಅನಿಲ್ ಅಗರ್ವಾಲ್!


ಇತ್ತೀಚಿನ ಪೋಸ್ಟ್ ನಲ್ಲಿ ಗೌರವ್ ಅಗರ್ವಾಲ್ ತನ್ನ ತಂದೆಯ ಬಾಸ್ ತನ್ನ ಮೊದಲ ಮಾರ್ಗದರ್ಶಕ ಮತ್ತು ನಂತರ ತನ್ನ ಶಾಲಾ ಶಿಕ್ಷಕ ಮತ್ತು ಅಂತಿಮವಾಗಿ ಪ್ರತಿದಿನವೂ ಹೊಸದನ್ನು ಕಲಿಸುವ ಯುವಕರು ಎಂದು ಹೇಳಿದ್ದರು."ದುನಿಯಾದಾರಿಯ ಮೂಲಭೂತ ಜ್ಞಾನದೊಂದಿಗೆ ಗ್ರಾಮೀಣ ಭಾರತದಲ್ಲಿ ಬೆಳೆದ ವ್ಯಕ್ತಿಯಾಗಿ, ನನ್ನ ಮೊದಲ ಮಾರ್ಗದರ್ಶಕನನ್ನು ನಾನು ನನ್ನ ತಂದೆ ಅವರ ಬಾಸ್ ನಲ್ಲಿ ಕಂಡುಕೊಂಡೆ.


ಇದನ್ನೂ ಓದಿ: ನೋಡೋಕೆ ಸಖತ್​ ಸ್ಟೈಲಿಶ್​ ಈ ಬೈಕ್, ಜಸ್ಟ್​ 2500 ಕೊಟ್ಟು ಬುಕ್​ ಮಾಡಿ!​


ಎರಡನೆಯದಾಗಿ ನನ್ನ ಶಾಲಾ ಶಿಕ್ಷಕರಲ್ಲಿ ಕಂಡುಕೊಂಡೆ. ನಿಮ್ಮೆಲ್ಲರಲ್ಲಿ, ಪ್ರತಿದಿನ ನನಗೆ ಹೊಸದನ್ನು ಕಲಿಸುವ ಯುವಕರನ್ನು ಕಂಡು ಕೊಂಡಿದ್ದೇನೆ" ಎಂದು ಅವರು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

Published by:ವಾಸುದೇವ್ ಎಂ
First published: