Breaking News: ಹೂಡಿಕೆ ದಿಗ್ಗಜ ರಾಕೇಶ್ ಜುಂಜುನ್ವಾಲಾ ಇನ್ನಿಲ್ಲ, ದೇಶದ 36ನೇ ಶ್ರೀಮಂತ ನಡೆದು ಬಂದ ಹಾದಿಯೇ ವಿಭಿನ್ನ

ದಿಗ್ಗಜ ಹೂಡಿಕೆದಾರ ರಾಕೇಶ್​ ಜುಂಜುನ್ವಾಲಾ ಕೊನೆಯುಸಿರೆಳೆದಿದ್ದಾರೆ. ಬಿಲಿಯನೇರ್ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ 62ನೇ ವಯಸ್ಸಿಗೆ ತಮ್ಮ ಜೀವನದ ಆಟ ಮುಗಿಸಿದ್ದಾರೆ.

ರಾಕೇಶ್ ಜುಂಜುನ್ವಾಲಾ ಇನ್ನಿಲ್ಲ

ರಾಕೇಶ್ ಜುಂಜುನ್ವಾಲಾ ಇನ್ನಿಲ್ಲ

  • Share this:
ದಿಗ್ಗಜ ಹೂಡಿಕೆದಾರ ರಾಕೇಶ್​ ಜುಂಜುನ್ವಾಲಾ (Rakesh Jujanwala) ಕೊನೆಯುಸಿರೆಳೆದಿದ್ದಾರೆ. ಬಿಲಿಯನೇರ್ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ 62ನೇ ವಯಸ್ಸಿಗೆ ತಮ್ಮ ಜೀವನದ ಆಟ ಮುಗಿಸಿದ್ದಾರೆ. ಷೇರು ಮಾರುಕಟ್ಟೆ (Share Mareker) ಯಲ್ಲಿ ತಮ್ಮ ಹೆಸರನ್ನು ಟ್ರೆಂಡ್​ ಮಾಡಿಕೊಂಡಿದ್ದರು ರಾಕೇಶ್​ ಜುಂಜುನ್ವಾಲಾ, ಷೇರುಪೇಟೆಯಲ್ಲಿ ಕಿಂಗ್ (Stock Market King)​ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಷೇರು ಪೇಟೆಯಲ್ಲಿ ಹೂಡಿಕೆ ಮಾಡಿ, ಸಾಕಷ್ಟು ಹಣ, ಖ್ಯಾತಿ ಗಳಿಸಿದ್ದರು. ಭಾರತದ 36 ನೇ ಶ್ರೀಮಂತ ವ್ಯಕ್ತಿ  ಈ ರಾಕೇಶ್​ ಜುಂಜನ್ವಾಲಾ.  ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಮಿಡಾಸ್ ಟಚ್ ಹೊಂದಿರುವ ಹೂಡಿಕೆದಾರರನ್ನು "ಭಾರತದ ವಾರೆನ್ ಬಫೆಟ್" ಎಂದು ಕರೆಯಲಾಗುತ್ತಿತ್ತು.

ಷೇರು  ಪೇಟೆಯ ಕಿಂಗ್​ ರಾಕೇಶ್​ ಜುಂಜನ್ವಾಲಾ!

ರಾಕೇಶ್​ ಜುಂಜನ್ವಾಲಾ ವ್ಯಾಪಾರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದರು. ದೇಶದ ಜುಂಜುನ್‌ವಾಲಾ ಅವರು ಹಂಗಾಮಾ ಮೀಡಿಯಾ ಮತ್ತು ಆಪ್ಟೆಕ್‌ನ ಅಧ್ಯಕ್ಷರಾಗಿದ್ದರು. ಜೊತೆಗೆ ವೈಸ್‌ರಾಯ್ ಹೋಟೆಲ್‌ಗಳು, ಕಾನ್‌ಕಾರ್ಡ್ ಬಯೋಟೆಕ್, ಪ್ರೊವೊಗ್ ಇಂಡಿಯಾ ಮತ್ತು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ಗಳ ನಿರ್ದೇಶಕರಾಗಿದ್ದರು. ಜುಂಜುನ್‌ವಾಲಾ ಅವರು ಕಾಲೇಜಿನಲ್ಲಿದ್ದಾಗ, ಅವರು ಸ್ಟಾಕ್ ಮಾರ್ಕೆಟ್‌ನಲ್ಲಿ ಡಬ್ಲಿಂಗ್ ಮಾಡಲು ಪ್ರಾರಂಭಿಸಿದರು.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರಾಕೇಶ್!

ರಾಕೇಶ್​ ಜುಂಜನ್ವಾಲಾ ಇತ್ತೀಚೆಗೆ ಆಕಾಸ ಏರ್​​ಲೈನ್​ ಅನ್ನು  ಸ್ಥಾಪಿಸಿದ್ದರು. ಇತ್ತೀಚೆಗೆ ಡಯಾಬಿಟೀಸ್ ಕಾಯಿಲೆಯಿಂದ ತೀವ್ರ ಬಳಲುತ್ತಿದ್ದರು. ಆಸ್ಪತ್ರೆಯಿಂದ ಕೆಲ ದಿನಗಳ ಹಿಂದೆಯಷ್ಟೇ ಡಿಸ್ಚಾರ್ಜ್ ಆಗಿದ್ದರು. ಇಂದು ಬೆಳಗ್ಗೆ ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗದಲ್ಲಿ ರಾಕೇಶ್​ ನಿಧನರಾಗಿದ್ದಾರೆ. ರಾಕೇಶ್​ ಜುಂಜನ್ವಾಲಾ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ. ಸಣ್ಣ ವಯಸ್ಸಿನಲ್ಲೇ ಷೇರು ಪೇಟೆಯಲ್ಲಿ ಹೂಡಿಕೆ ಮಾಡವುದನ್ನು ಆರಂಭಿಸಿದ್ದರು ರಾಕೇಶ್​ ಜುಂಜನ್ವಾಲಾ.


ಇದನ್ನೂ ಓದಿ: ರಾಕೇಶ್ ಜುಂಜುನ್​ವಾಲಾ ಲೆಕ್ಕ ಉಲ್ಟಾಪಲ್ಟಾ! 3,500 ಕೋಟಿ ಲಾಸ್

ಪ್ರಧಾನಿ ಮೋದಿ ಸಂತಾಪ!

ಹೂಡಿಕೆ ದಿಗ್ಗಜ ರಾಕೇಶ್​ ಜುಂಜನ್ವಾಲಾ ಸಒಂದು ಅದಮ್ಯ ಚೇತನವಾಗಿದ್ದರು. ತುಂಬ ಒಳನೋಟವುಳ್ಳ ವ್ಯಕ್ತಿತ್ವ. ಆರ್ಥಿಕ ಜಗತ್ತಿಗೆ ಅವರ ಕೊಡುಗೆ ಅಪಾರ. ಭಾರತದ ಅಭಿವೃದ್ಧಿಗಾಗಿ ಸದಾ ತುಡಿಯುತ್ತಿದ್ದರು. ಅವರ ಸಾವು ದುಃಖ ತಂದಿದೆ. ಅವರ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಓಂ ಶಾಂತಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: 861 ಕೋಟಿ ಆಸ್ತಿ ಹೆಚ್ಚಾಗಲು ಎರಡೇ ಎರಡು ಷೇರು ಸಾಕು! ಇದು ರಾಕೇಶ್ ಜುಂಜುನ್​ವಾಲಾ ಉದಾಹರಣೆ!

5 ಸಾವಿರದಿಂದ ಇನ್ವೆಸ್ಟ್​ ಮಾಡಿದ್ದ ರಾಕೇಶ್​!

ಜುಂಜುನ್‌ವಾಲಾ ಅವರು 1985ರಲ್ಲಿ ರೂ. 5,000 ಬಂಡವಾಳ ಹೂಡಿಕೆ ಮಾಡಿದರು. ಆ ಬಂಡವಾಳವು ಸೆಪ್ಟೆಂಬರ್ 2018ರ ವೇಳೆಗೆ ರೂ.11,000 ಕೋಟಿಗೆ ಬೆಳೆದಿತ್ತು. ಆದರೆ, ರಾಕೇಶ್ ಜುಂಜುನ್ವಾಲಾ ಮತ್ತು ಅವರ ಪತ್ನಿ ರೇಖಾ ಜುಂಜುನ್ವಾಲಾ ಕಳೆದ ಮೂರು ತಿಂಗಳಲ್ಲಿ 3,500 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದರು.
Published by:Vasudeva M
First published: