Cadbury Bournvita ಬಗ್ಗೆ ತಪ್ಪು ಮಾಹಿತಿ ರವಾನೆ- ಇನ್​ಫ್ಲೂಯೆನ್ಸರ್​​ ರೇವಂತ್​ಗೆ ಲೀಗಲ್ ನೋಟೀಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೋರ್ನ್​ವೀಟಾದಲ್ಲಿ ಕೊಕಾ, ಸಕ್ಕರೆ, ಕ್ಯಾನ್ಸರ್​​ಗೆ ಕಾರಣವಾಗುವ ಕೆಮಿಕಲ್, ಲಿಕ್ವಿಡ್ ಗ್ಲುಕೋಸ್ ಇದೆ ಎಂದು ವಿಡಿಯೋ ಮಾಡಿದ್ದರು.

  • Share this:

ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಇನ್​ಫ್ಯೂಯೆನ್ಸರ್ಸ್​​​ ಜಾಬ್​ ಟ್ರೆಂಡ್​ಗಳು ಯುವ ಜನತೆಯನ್ನು ಕಷ್ಟರಹಿತ ದುಡಿಮೆಯ ಮಾದರಿಗೆ ಒಗ್ಗಿಸುತ್ತಿವೆ. ಈಗಿನ ಕಾಲಘಟ್ಟದಲ್ಲಿ ಇದು ಒಪ್ಪಿತವೇ ಆದರೂ ಇದರ ನಿರ್ವಹಣೆಯಲ್ಲಿ ಅನುಭವದ ಕೊರತೆ, ಮುಂದಾಲೋಚನೆಯ ಪರಿವೆ ಇಲ್ಲದೇ ಮನಸ್ಸೋ ಇಚ್ಛೆ ವಿಡಿಯೋಗಳನ್ನು(Videos) ಮಾಡಿ ಆಮೇಲೆ ಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈಗ ಇಂತಹದ್ದೇ ಒಂದು ಘಟನೆ ನಡೆದಿದ್ದು ಇನ್​ಫ್ಲೂಯೆನ್ಸರ್ (Influencer)​​ ಒಬ್ಬರಿಗೆ ಕಾನೂನಿನ ನೋಟೀಸ್ (Notice)​ ಜಾರಿಯಾಗಿದೆ.


ಕ್ಯಾಡ್ಬರಿ ಬೋರ್ನ್​ವೀಟಾ ವಿಡಿಯೋ ವೈರಲ್​​


ಕ್ಯಾಡ್ಬರಿಯ ಬೋರ್ನ್​ವೀಟಾವು ಆರೋಗ್ಯಕ್ಕೆ ಸಂಬಂಧಿಸಿದ ಪಾನೀಯವಾಗಿದೆ. ಈ ಉತ್ಪನ್ನದ ಬಗ್ಗೆ ಸಾಮಾಜಿಕ ಮಾಧ್ಯಮದ ಇನ್​ಫ್ಲೂಯೆನ್ಸರ್​ ರೇವಂತ್​ ಹಿಮತ್ಸಿಂಕಾ ಎನ್ನುವವರು ವಿಡಿಯೋ ಮಾಡಿದ್ದರು.


ಬ್ರ್ಯಾಂಡ್​​ ಮತ್ತು ನ್ಯೂಟ್ರಿಷಿಯನ್​ ವ್ಯಾಲ್ಯೂ ಬಗ್ಗೆ ತಪ್ಪು ಮಾಹಿತಿ ರವಾನೆ ಮಾಡಿದ್ದರಿಂದ ಕಾನೂನಿಂದ ನೋಟೀಸ್ ಪಡೆದುಕೊಂಡಿದ್ದಾರೆ.


ಉತ್ಪನ್ನಗಳ ಬಗ್ಗೆ ಸುಳ್ಳು ಹೇಳುವ ಕಂಪನಿಗಳನ್ನು ನಮ್ಮ ಸರ್ಕಾರ ಅನುಮತಿಸಬೇಕೇ? ಅಲ್ಲದೇ ಪೋಷಕರು ಬಾಲ್ಯದಿಂದಲೇ ಮಕ್ಕಳನ್ನು ಸಕ್ಕರೆ ವ್ಯಸನಿಗಳಾಗಿಸುತ್ತಿದ್ದಾರೆ. ಈ ಕಾರಣದಿಂದ ಮಕ್ಕಳು ಜೀವನಪೂರ್ತಿ ಸಕ್ಕರೆಯ ಸ್ವಾದಕ್ಕೆ ಅಂಟಿಕೊಳ್ಳುತ್ತಾರೆ' ಎಂದು ರೇವಂತ್​ ತಮ್ಮ ರೀಲ್ಸ್​ನ ಶಿರ್ಷೀಕೆಯಲ್ಲಿ ಬರೆದಿದ್ದಾರೆ.


ವೈರಲ್​ ಆಯ್ತು ವಿಡಿಯೋ


ಈ ವಿಡಿಯೋವನ್ನು ನಟ ಮತ್ತು ರಾಜಕಾರಣಿ ಪರೇಶ್​ ರಾವಲ್​, ಮಾಜಿ ಕ್ರಿಕೆಟಿಗ ಮತ್ತು ಸಂಸದ ಕೀರ್ತಿ ಆಜಾದ್​​​ ಅವರು ಸೇರಿದಂತೆ ಅನೇಕರು ತಮ್ಮ ಟ್ವಿಟ್ಟರ್​ ಮತ್ತು ಲಿಂಕ್ಡ್​​ ಇನ್​ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ವಿಡಿಯೋ 12 ಮಿಲಿಯನ್ ವೀಕ್ಷಣೆ ಗಳಿಸಿಕೊಂಡಿದೆ.


ಇದನ್ನೂ ಓದಿ:Meta Layoff: ವಜಾಗೊಂಡ ಮೆಟಾ ಹೆಚ್ಆರ್! ಏನೂ ಕೆಲಸವಿಲ್ಲದಿದ್ರೂ 1.5 ಕೋಟಿ ಸಂಬಳ ಸಿಕ್ಕಿದೆಯಂತೆ


ವಿಡೀಯೋದಲ್ಲಿ ಏನಿತ್ತು?


ಡಿಲೀಟ್​ ಮಾಡಿದ್ದ ವಿಡಿಯೋದಲ್ಲಿ ಬೋರ್ನ್​ವೀಟಾ ಆರೋಗ್ಯದ ಪ್ರಯೋಜನಗಳ ಬಗ್ಗೆಯೂ ಹೇಳಲಾಗಿತ್ತು. ನಂತರ ಬೋರ್ನ್​ವೀಟಾದಲ್ಲಿ ಕೊಕಾ, ಸಕ್ಕರೆ, ಕ್ಯಾನ್ಸರ್​​ಗೆ ಕಾರಣವಾಗುವ ಕೆಮಿಕಲ್, ಲಿಕ್ವಿಡ್ ಗ್ಲುಕೋಸ್ ಇದೆ ಎಂದು ವಿಡಿಯೋ ಮಾಡಿದ್ದರು.


ಕ್ಯಾಡ್ಬರಿ ಬೋರ್ನ್​ವೀಟಾ ಸ್ಪಷ್ಟನೆ


ಈ ವಿಡಿಯೋ ವೈರಲ್​ ಆಗ್ತಿದ್ದಂತೆ 9 ನೇ ತಾರೀಖು ಏಪ್ರಿಲ್​ 2023 ರಂದು ಕ್ಯಾಡ್ಬರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​​ ಒಂದನ್ನು ಪ್ರಕಟಿಸಿದೆ. ಬೋರ್ನ್​ವೀಟಾದಲ್ಲಿ ವಿಟಮಿನ್​ ಎ, ಸಿ, ಡಿ , ಕಬ್ಬಿಣ ಸತು, ತಾಮ್ರ ಮತ್ತು ಸೆಲೆನಿಯಮ್​​ ಪೋಷಕಾಂಶಗಳಿವೆ.




ಇದು ರೋಗನಿರೋಧಕ ಶಕ್ತಿ ನೀಡುತ್ತದೆ. ಹಲವಾರು ವರ್ಷಗಳಿಂದ ನಾವು ಇದೇ ಸೂತ್ರ ಅನುಸರಿಸುತ್ತಿದ್ದೇವೆ, ಆರೋಗ್ಯದ ರಕ್ಷಣೆ ಮತ್ತು ರೋಗನಿರೋಧಕ ಶಕ್ತಿಯೇ ನಮ್ಮ ನಿಲುವು ಎನ್ನುವುದನ್ನು ಕೋವಿಡ್​ ಮೊದಲಿನಿಂದಲೂ ಪ್ಯಾಕ್​ ಹಿಂಭಾಗದಲ್ಲಿ ಉಲ್ಲೇಖಿಸುತ್ತಿದ್ದೇವೆ ಎಂದಿದ್ದಾರೆ.


ರೇವಂತ್​ ಕ್ಷಮಾಪಣೆ ಪೋಸ್ಟ್​


ರೇವಂತ್​​ ಹಿಮತ್ಸಿಂಕಾ ಅವರಿಗೆ ನೋಟೀಸ್​ ಬಂದ ಕೂಡಲೇ ವಿಡಿಯೋವನ್ನು ಡಿಲಿಟ್​​ ಮಾಡಿ, ಕ್ಷಮಾಪಣೆ ಕೋರಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ.


ಇದನ್ನೂ ಓದಿ:Tata Nexon: ಆ್ಯಕ್ಸಿಡೆಂಟ್​ ಆದ್ರೂ ಈ ಕಾರಿನೊಳಗೆ ಕೂತವರಿಗೆ ಏನೂ ಆಗಲ್ವಂತೆ, ಅಷ್ಟು ಸೇಫ್ಟಿ ಇದ್ಯಂತೆ!


‘ನಾನು ಏಪ್ರಿಲ್​ 13 ರಂದು ಭಾರತದ ಕಾನೂನಿನ ನೋಟೀಸ್ ಸ್ವೀಕರಿಸಿದ ಬಳಿಕ ವಿಡಿಯೋವನ್ನು ತೆಗೆಯುತ್ತಿದ್ದೇನೆ. ಈ ವಿಡಿಯೋ ಮಾಡಿದ್ದಕ್ಕಾಗಿ ನಾನು ಕ್ಯಾಡ್ಬರಿಯವರಲ್ಲಿ ಕ್ಷಮೆ ಯಾಚಿಸುತ್ತೇನೆ.


ಯಾವುದೇ ಕಂಪನಿ ಅಥವಾ ಟ್ರೇಡ್​ ಮಾರ್ಕ್​ ಮಾನಹಾನಿಯನ್ನುಂಟು ಮಾಡುವ ಯಾವುದೇ ಉದ್ದೇಶ ಹೊಂದಿಲ್ಲ. ಅಲ್ಲದೇ ನ್ಯಾಯಾಲಯದ ಪ್ರಕರಣಗಳಲ್ಲಿ ಭಾಗವಹಿಸಲು ನನಗೆ ಆಸಕ್ತಿ ಅಥವಾ ಸಂಪನ್ಮೂಲಗಳಿಲ್ಲ. ಇದನ್ನು ಕಾನೂನು ಬದ್ಧವಾಗಿ ಮುಂದಕ್ಕೆ ತೆಗೆದುಕೊಂಡು ಹೋಗದಂತೆ ನಾನು ಎಮ್​ಎನ್​ಸಿ ಗಳಲ್ಲಿ ವಿನಂತಿಸಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.


ಒಟ್ಟಿನಲ್ಲಿ ಸಾಮಾಜಿಕ ಮಾಧ್ಯಮಗಳು ಯಾವುದೇ ವಿಷಯವನ್ನು ಸತ್ಯ ಮತ್ತು ಸಾಕ್ಷಿ ಸಮೇತ ಪ್ರಸ್ತುತಪಡಿಸಿದರೆ ಮಾತ್ರವೇ ಅದಕ್ಕೆ ಬೆಲೆ ಬರುತ್ತದೆ.


ಇಲ್ಲವಾದರೆ ಅದರಲ್ಲಿ ಹುರುಳಿದ್ದರು, ಇಲ್ಲದಿದ್ದರೂ ಅದು ಅವರಿಗೆ ಉರುಳಾಗುವ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚರ ವಹಿಸಲೇಬೇಕು. ಸಾಮಾಜಿಕ ಮಾಧ್ಯಮವನ್ನು ಜವಾಬ್ದಾರಿಯಿಂದ ಬಳಸಬೇಕು.

First published: