ನೀವು ಕಾಫಿ ಪ್ರಿಯರಾಗಿದ್ದರೇ (Coffee Lover) , ಬೆಂಗಳೂರು (Bengaluru) , ಹೈದರಾಬಾದ್ (Hyderabad) ಮತ್ತು ಮುಂಬೈ (Mumbai) ಅಂತಹ ದೇಶದ ಮಹಾನಗರಗಳಲ್ಲಿರುವ ಸ್ಟಾರ್‌ಬಕ್ಸ್ (Starbucks) ಬಗ್ಗೆ ಖಂಡಿತವಾಗಿಯೂ ಕೇಳಿರುತ್ತೀರಿ ಮತ್ತು ಅವಕಾಶ ಸಿಕ್ಕಾಗ ಅಲ್ಲಿ ಹೋಗಿ ನಾನಾ ಬಗೆಯ ಕಾಫಿಗಳನ್ನು ಸಹ ಕುಡಿದು ಖುಷಿ ಪಟ್ಟಿರುತ್ತೀರಿ. ಹೌದು.. ವಿಶ್ವದಲ್ಲಿ ಅನೇಕ ಕಂಪನಿಗಳ ಕಾಫಿ ಶಾಪ್ ಗಳಿವೆ, ತುಂಬಾನೇ ಜನಪ್ರಿಯ ಆದ ಕಾಫಿ ಶಾಪ್ ಗಳಲ್ಲಿ ಸ್ಟಾರ್‌ಬಕ್ಸ್ ಸಹ ಒಂದು ಅಂತ ಹೇಳಬಹುದು. ನಾವು ಇಲ್ಲಿ ಹೇಳಲು ಹೊರಟಿರುವುದು ಲಕ್ಷ್ಮಣ್ ನರಸಿಂಹನ್ (Laxman Narasimhan )ಅವರ ಬಗ್ಗೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅರೇ ಸ್ಟಾರ್‌ಬಕ್ಸ್ ಮತ್ತು ಲಕ್ಷ್ಮಣ್ ನರಸಿಂಹನ್ ಅವರಿಗೆ ಹೇಗೆ ಸಂಬಂಧ ಅಂತ ನೀವು ಕೇಳಬಹುದು.
ಸ್ಟಾರ್‌ಬಕ್ಸ್ ನ ಹೊಸ ಸಿಇಒ ಅಂತೆ ಲಕ್ಷ್ಮಣ್ ನರಸಿಂಹನ್!
ಲಕ್ಷ್ಮಣ್ ನರಸಿಂಹನ್ ಅವರು ಈ ಅಮೆರಿಕದ ಕಂಪನಿಗೆ ಸೇರಿದ ತಿಂಗಳ ನಂತರ ಸೋಮವಾರ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪಾತ್ರವನ್ನು ವಹಿಸಿಕೊಂಡಿದ್ದಾರೆ ಎಂದು ಘೋಷಿಸಿದೆ. 55 ವರ್ಷದ ಲಕ್ಷ್ಮಣ್ ನರಸಿಂಹನ್ ಅವರು ಸ್ಟಾರ್‌ಬಕ್ಸ್ ನ ನಿರ್ದೇಶಕರ ಮಂಡಳಿಗೆ ಸೇರಿದರು.
ಅವರು ಅಕ್ಟೋಬರ್ ನಲ್ಲಿ ಈ ಕಂಪನಿಗೆ ಸೇರಿದ್ದರು, ಅವರು 30 ಮಳಿಗೆಗಳಿಗೆ ಆಗಾಗ್ಗೆ ಭೇಟಿ ನೀಡುವ ಮೂಲಕ ಕಂಪನಿಯ ಕಾರ್ಯಾಚರಣೆಗಳನ್ನು ಕಲಿಯುತ್ತಿದ್ದರು. ಅವರು ಬ್ಯಾರಿಸ್ಟಾ ಕೂಡ ಆದರು, ಎಂದರೆ ಎಸ್ಪ್ರೆಸೊ ಕಾಫಿ ತಯಾರಿಸುವಲ್ಲಿ ಪರಿಣತರಾದವರಿಗೆ ಈ ಪದವನ್ನು ಬಳಸಲಾಗುತ್ತದೆ. ಅವರು ಕಂಪನಿಯ ಸ್ಥಾಪಕ ಹೊವಾರ್ಡ್ ಷುಲ್ಟ್ಜ್ ಅವರ ಸ್ಥಾನವನ್ನು ತುಂಬಿದ್ದಾರೆ ಅಂತ ಹೇಳಬಹುದು. ತಿಂಗಳಿಗೊಮ್ಮೆ ಕಂಪನಿಯಲ್ಲಿ ಲಕ್ಷ್ಮಣ್ ಬ್ಯಾರಿಸ್ಟಾ ಆಗಿ ಕಾರ್ಯ ನಿರ್ವಹಿಸ್ತಾರಂತೆ.
ಲಕ್ಷ್ಮಣ್ ನರಸಿಂಹನ್ ಮೂಲತಃ ಭಾರತದವರಂತೆ!
ಲಕ್ಷ್ಮಣ್ ನರಸಿಂಹನ್ ಅವರು ಭಾರತೀಯ ಮೂಲದವರಾಗಿದ್ದು, ಸ್ಟಾರ್‌ಬಕ್ಸ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುವ ಮೊದಲು, ಅವರು ರೆಕಿಟ್ ಬೆಂಕಿಸರ್ ಗ್ರೂಪ್ ಪಿಎಲ್‌ಸಿಯ ಸಿಇಒ ಆಗಿದ್ದರು. ಈ ಹಿಂದೆ, ಅವರು ಪೆಪ್ಸಿಕೋ, ಮೆಕಿನ್ಸೆ ಮತ್ತು ಇನ್ನಿತರೆ ಕಂಪನಿಗಳಲ್ಲಿಯೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: Starbucks ಹುಟ್ಟು ಹಾಕಿದವರಿಗೂ ಬೆಂಗಳೂರಿನ ದೋಸೆಯೇ ಇಷ್ಟವಂತೆ, ಅವ್ರ ಫೇವರಿಟ್ ರೆಸ್ಟೊರೆಂಟ್ ಇದೇ ನೋಡಿ
ನರಸಿಂಹನ್ ಅವರು ಮಹಾರಾಷ್ಟ್ರದಲ್ಲಿರುವ ಪುಣೆಯಲ್ಲಿ ಹುಟ್ಟಿ ಬೆಳೆದರು ಮತ್ತು ಅವರು ಪುಣೆಯ ಕಾಲೇಜ್ ಆಫ್ ಎಂಜಿನಿಯರಿಂಗ್ ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ನಂತರ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಜರ್ಮನ್ ಭಾಷೆಯಲ್ಲಿ ಎಂಎ ಮಾಡಿದರು. ನಂತರ ಅವರು ಫೈನಾನ್ಸ್ ನಲ್ಲಿ ಎಂಬಿಎ ಪದವಿಯನ್ನು ಸಹ ಪಡೆದುಕೊಂಡರು.
ಸ್ಟಾರ್‌ಬಕ್ಸ್ ನಲ್ಲಿ ಲಕ್ಷ್ಮಣ್ ಅವರಿಗಿರುವ ಸಂಬಳ ಎಷ್ಟು?
ಸ್ಟಾರ್‌ಬಕ್ಸ್ ಕಂಪನಿಯಲ್ಲಿ ವರ್ಷಕ್ಕೆ 17.5 ಮಿಲಿಯನ್ ಡಾಲರ್ ಗಳ ದೊಡ್ಡ ಮೊತ್ತದ ಸಂಬಳವನ್ನು ಅವರು ಪಡೆಯುತ್ತಿರುವುದಾಗಿ ಬಹಿರಂಗಪಡಿಸಿದ ನಂತರ ಅವರು ಕಳೆದ ವರ್ಷ ಸುದ್ದಿಯಾಗಿದ್ದರು. ಇದು ಪ್ರಸ್ತುತ ವಿನಿಮಯ ದರದಲ್ಲಿ ವರ್ಷಕ್ಕೆ 144 ಕೋಟಿ ರೂಪಾಯಿಯಾಗುತ್ತದೆ. ಈ ದೊಡ್ಡ ಮೊತ್ತದ ಸಂಬಳ ಅವರ ವಾರ್ಷಿಕ ಪ್ರೋತ್ಸಾಹಕಗಳನ್ನು ಸಹ ಒಳಗೊಂಡಿದೆ ಅಂತ ಹೇಳಲಾಗುತ್ತಿದೆ.
ಅವರು 1.6 ಮಿಲಿಯನ್ ಡಾಲರ್ (ಬೋನಸ್ ಆಗಿ 13 ಕೋಟಿ ರೂಪಾಯಿ) ಮತ್ತು 9.3 ಮಿಲಿಯನ್ ಡಾಲರ್ ಮೌಲ್ಯದ ಕಂಪನಿಯ ಷೇರುಗಳನ್ನು ಸಹ ಪಡೆದರು. ಅವರ ಹಿಂದಿನ ಕಂಪನಿಯಲ್ಲಿ, ಅವರ ವೇತನ ಪ್ಯಾಕೇಜ್ 6 ಮಿಲಿಯನ್ ಡಾಲರ್ ಆಗಿತ್ತು ಎಂದು ಹೇಳಲಾಗುತ್ತಿದೆ.
ಸ್ಟಾರ್‌ಬಕ್ಸ್ ಕಂಪನಿಯು ಪ್ರಪಂಚದಾದ್ಯಂತ 34000 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಕಳೆದ ವರ್ಷ ಕಂಪನಿಯ ಆದಾಯ 100 ಬಿಲಿಯನ್ ಡಾಲರ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ