• Home
  • »
  • News
  • »
  • business
  • »
  • Reliance Jio 5G: ರಿಲಯನ್ಸ್ ಜಿಯೋದಿಂದ ರಾಜಸ್ಥಾನದಲ್ಲಿ 5G ಸೇವೆಗಳ ಪ್ರಾರಂಭ

Reliance Jio 5G: ರಿಲಯನ್ಸ್ ಜಿಯೋದಿಂದ ರಾಜಸ್ಥಾನದಲ್ಲಿ 5G ಸೇವೆಗಳ ಪ್ರಾರಂಭ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದಲ್ಲಿ 5ಜಿ ಸೇವೆಯು 4ಜಿ ಸೇವೆಗಿಂತ 10 ಪಟ್ಟು ವೇಗವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಂದಿನ 2 ವರ್ಷಗಳಲ್ಲಿ ಜಿಯೋದ 5ಜಿ ಸೇವೆಗಳು ಇಡೀ ದೇಶವನ್ನು ಆವರಿಸಲಿದೆ ಎಂದು ಭರವಸೆಯನ್ನು ನೀಡಿದ್ದಾರೆ.

  • Share this:

    ರಿಲಯನ್ಸ್ ಜಿಯೋದ (Reliance Jio) ಇನ್ಫೋಕಾಮ್ (Infocomm) ಅಧ್ಯಕ್ಷ ಆಕಾಶ್ ಅಂಬಾನಿಯವರು ಶನಿವಾರ ರಾಜಸ್ಥಾನದ ನಾಥದ್ವಾರ ಪಟ್ಟಣದ ಪ್ರಸಿದ್ಧ ಶ್ರೀನಾಥ್‌ಜಿ ದೇವಸ್ಥಾನದಿಂದ ರಾಜಸ್ಥಾನದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಈಗಿನ ತಂತ್ರಜ್ಞಾನಗಳು (Technology) ಎಲ್ಲವೂ 5G ಸೇವೆಗೆ ಸಿದ್ಧವಾಗಿದೆ. ಇದೀಗ ಜಿಯೋ ರಿಲಯನ್ಸ್‌ ಸಂಸ್ಥೆ ರಾಜಸ್ಥಾನದಲ್ಲೂ 5G ಸೇವೆಯನ್ನು ಪ್ರಾರಂಭಿಸಿದರು. ಇದು ಈಗಿನ ತಂತ್ರಜ್ಞಾನ ಯುಗದಲ್ಲಿ ಅಗುತ್ತಿರುವ ಮಹತ್ತರ ಬದಲಾವಣೆಯಾಗಿದೆ. ಇದು ನೆಟ್‌ವರ್ಕ್‌ನ (Network) ವೇಗವು ಹೆಚ್ಚಿಸುತ್ತದೆ.


    “5G ಸೇವೆಗಳು ಇನ್ನುಮುಂದೆ ಎಲ್ಲರಿಗೂ ಲಭ್ಯವಾಗಲಿದೆ. ಇಂದಿನಿಂದ ರಾಜಸ್ಥಾನದ ನಾಥದ್ವಾರದೊಂದಿಗೆ ಚೆನ್ನೈಯಲ್ಲೂ ಕೂಡ 5G ಸೇವೆಗಳು ಆರಂಭವಾಗಲಿದೆ”. ಎಂದು ಆಕಾಶ್‌ ಅಂಬಾನಿಯವರು ಹೇಳಿದ್ದಾರೆ.


    ಆಕಾಶ್‌ ಅಂಬಾನಿಯವರ ಮೊದಲ ಘೋಷಣೆ


    ಜೂನ್‌ 28 ರಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌  ಇಂಡಸ್ರ್ಟೀಸ್‌ ಆಕಾಶ್‌ ಅಂಬಾನಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಿದರು. ಇದರ ಮುಖ್ಯಸ್ಥರಾದ ನಂತರ ಇದು ಆಕಾಶ್‌ ಅಂಬಾನಿಯವರ ಮೊದಲ ಘೋಷಣೆಯಾಗಿದೆ.


    Reliance Jio Chairman Akash Ambani Launches 5G Services In Rajasthan
    ಸಾಂದರ್ಭಿಕ ಚಿತ್ರ


    ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್‌ ಅಂಬಾನಿ ಕಳೆದ ತಿಂಗಳು ಈ ದೇವಸ್ಥಾನಕ್ಕೆ ಭೇಟಿ  ನೀಡಿದ್ದರು ಮತ್ತು ರಾಜ್ಯದಲ್ಲಿ ಸೇವೆಗಳನ್ನು ಪ್ರಾರಂಭಿಸುವುದಾಗಿ ಭರವಸೆಯನ್ನೂ ನೀಡಿದ್ದರು.


    ಇದನ್ನೂ ಓದಿ: ರಿಲಯನ್ಸ್‌ ಜಿಯೋದಿಂದ ಮೊದಲ ಲ್ಯಾಪ್​ಟಾಪ್​ ಬಿಡುಗಡೆ, ಅದು ಇಷ್ಟು ಕಡಿಮೆ ಬೆಲೆಗೆ!


    ಇದಲ್ಲದೆ 2015ರಲ್ಲಿ ಮುಖೇಶ್‌ ಅಂಬಾನಿಯವರ ನೇತೃತ್ವದಲ್ಲಿ 4ಜಿ ಸೇವೆಯನ್ನು ಆರಂಭಿಸುವ ಮೊದಲು ಶ್ರೀನಾಥ ಜೀ ದೇವಾಲಯಕ್ಕೆ ಭೇಟಿ ನೀಡಿದ್ದರು.


    ಪ್ರಧಾನಿ ನರೇಂದ್ರ ಮೋದಿಯವರ ಭರವಸೆ


    ಅಕ್ಟೋಬರ್‌ 1 ರಂದು ಪ್ರಧಾನಿ ನರೇಂದ್ರ ಮೋದಿಯವರು ಸ್ಮಾರ್ಟ್‌ ಫೋನ್‌ಗಳಲ್ಲಿ ಹೈ ಸ್ಪೀಡ್‌ ಇಂಟರ್ನೆಟ್‌ ಒದಗಿಸುವ ಭರವಸೆ ನೀಡುವ 5ಜಿ ಸೇವೆಗಳನ್ನು ಆರಂಭಿಸಿದರು.


    ಅದೇ ಹೊತ್ತಿಗೆ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್‌ ಜಿಯೋ ಡಿಸೆಂಬರ್‌ 2023 ರೊಳಗೆ ದೇಶದ ಎಲ್ಲಾ ಭಾಗಗಳಿಗೆ ವಿಸ್ತರಿಸಲಿದೆ ಎಂದು ಮುಖೇಶ್‌ ಅಂಬಾನಿಯವರು ಹೇಳಿದ್ದರು.


    Reliance Jio Chairman Akash Ambani Launches 5G Services In Rajasthan
    ಸಾಂದರ್ಭಿಕ ಚಿತ್ರ


    ಎಲ್ಲೆಲ್ಲಿ 5ಜಿ ಸೇವೆಯ ಅಗತ್ಯವಿದೆ


    ಭಾರತದಲ್ಲಿ 5ಜಿ ಸೇವೆಯು 4ಜಿ ಸೇವೆಗಿಂತ 10 ಪಟ್ಟು ವೇಗವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 5ಜಿ ಸೇವೆಯು ಕಾರುಗಳು, ಉನ್ನತ ಮಟ್ಟದ ತಂತ್ರಜ್ಞಾನಗಳಿಗೆ, ಅರೋಗ್ಯ, ಶಿಕ್ಶಣ, ಕೃಷಿ ಮತ್ತು ವಿಪತ್ತು ಮೇಲ್ವಿಚಾರಣೆಯಂತಹ ಕ್ಷೇತ್ರಗಳಿಗೆ ಈ ಸೇವೆ ಪ್ರಮುಖವಾಗಿದೆ. ಹಾಗೆ ಇನ್ನು ಮುಂದಿನ 2 ವರ್ಷಗಳಲ್ಲಿ ಜಿಯೋದ 5ಜಿ ಸೇವೆಗಳು ಇಡೀ ದೇಶವನ್ನು ಆವರಿಸಲಿದೆ ಎಂದು ಭರವಸೆಯನ್ನು ನೀಡಿದ್ದಾರೆ.


    ಏರ್ಟೆಲ್‌ನ 5ಜಿ ಸೇವೆಯ ಭರವಸೆ


    ಮಾರ್ಚ್‌ 2024ರ ವೇಳೆಗೆ  ಏರ್ಟೆಲ್‌ ಕೂಡಾ 5ಜಿ ಸೇವೆಯನ್ನು ದೇಶದಾದ್ಯಂತ ಆರಂಭ ಮಾಡಲಿದೆ. ಎಂದು ಭರವಸೆ ನೀಡಿದೆ.


    ಕಳೆದ ವರ್ಷ ಮತ್ತು ಈ ವರ್ಷದ ಲಾಭ:


    ರಿಲಯನ್ಸ್‌ ಕಂಪನಿ ಈ ಹಿಂದೆಗಿಂತ ಈ ವರ್ಷ ಹೆಚ್ಚಿನ ಲಾಭವನ್ನು ಪಡೆದಿದೆ. 22521 ಕೋಟಿಯಷ್ಟು ಇದು ಅದಯವನ್ನು ಗಳಿಸಿದೆ. ಈ ಬಾರಿ ಇದಕ್ಕಿಂತ ಶೇಕಡಾ 3% ನಷ್ಟು ಹೆಚ್ಚಾಗಿದೆ. ಎಂದು ವರದಿ ನೀಡಿದ್ದಾರೆ. ಇದು ಗ್ರಾಹಕರು ಬಳಸುವ ರೀತಿಯಿಂದ ಲೆಕ್ಕಾಚಾರ ಮಾಡಲಾಗಿದೆ.


    42 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಜಿಯೋ ಕಂಪನಿಗೆ ನೋಕಿಯಾ ಕಂಪನಿ 5ಜಿ ರೇಡಿಯೋ ಅಕ್ಸೆಸ್‌ ನೆಟ್‌ವರ್ಕ್‌ (RAN) ಗಳನ್ನು ಪೂರೈಸಲಿದೆ ಎಂದು ಕಂಪನಿ ವರದಿಯಲ್ಲಿ ತಿಳಿಸಿದೆ.


    ಇದನ್ನೂ ಓದಿ: ಟಾಪ್ 5 ಬೆಸ್ಟ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಫೋನ್‌ಗಳು ಇಲ್ಲಿವೆ!


    ಪ್ರತಿಷ್ಠಿತ ಕಂಪನಿಗಳೊಂದಿಗೆ ಒಪ್ಪಂದ


    "ಎರಿಕ್ಸನ್, ನೋಕಿಯಾ, ಸ್ಯಾಮ್ಸಂಗ್ ಮತ್ತು ಸಿಸ್ಕೊದಂತಹ ಪ್ರಮುಖ ಜಾಗತಿಕ ನೆಟ್‌ವರ್ಕ್ ತಂತ್ರಜ್ಞಾನ ಪೂರೈಕೆದಾರರೊಂದಿಗೆ ನಾವು ಸುಸ್ಥಾಪಿತ ಸಂಬಂಧವನ್ನು ಹೊಂದಿದ್ದೇವೆ" ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

    Published by:Harshith AS
    First published: