Billionaire: 5 ಸಾವಿರದಿಂದ ಕೋಟ್ಯಧಿಪತಿಯಾದ ಯುವಕನ ಕಥೆ ಇದು! ಸೈನಿಕನಾಗಬೇಕಿದ್ದವ ಈಗ ಸೂಪರ್​ ಟ್ರೇಡರ್​

ಸೈನ್ಯ ಸೇರಲು ಬಯಸಿದ್ದ ಇಂದೋರ್‌ನ ಚಿಕ್ಕ-ಪಟ್ಟಣದ ಲಕ್ಷ್ಯ ಸಿಂಗ್ ಎಂಬ ಯುವಕನೊಬ್ಬ ಪ್ರಸ್ತುತ ನಿಫ್ಟಿ ಆಯ್ಕೆಗಳನ್ನು ಮಾರುವ ಮೂಲಕ ಮತ್ತು ಅದರ ಬಗ್ಗೆ ತನ್ನ ಅರಿವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಕೋಟ್ಯಧಿಪತಿಯಾಗಿದ್ದಾನೆ. ‘ಸೂಪರ್ ಟ್ರೇಡರ್ ಲಕ್ಷ್ಯ’ ಎಂಬ ಹೆಸರಿನ ಯೂಟ್ಯೂಬ್ ಚಾನಲ್ ಮೂಲಕ ಸದ್ದು ಮಾಡುತ್ತಿರುವ ಈತ ಕೇವಲ 5ಸಾವಿರ ರೂದಲ್ಲಿ ಆಯ್ಕೆಗಳನ್ನು ಮಾಡುವ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಪ್ರಸ್ತುತ ಯಶಸ್ವಿ ವ್ಯಾಪಾರಿಯಾಗಿದ್ದಾನೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸೈನ್ಯ ಸೇರಲು ಬಯಸಿದ್ದ ಇಂದೋರ್‌ನ ಚಿಕ್ಕ-ಪಟ್ಟಣದ ಲಕ್ಷ್ಯ ಸಿಂಗ್ ಎಂಬ ಯುವಕನೊಬ್ಬ ಪ್ರಸ್ತುತ ನಿಫ್ಟಿ ಆಯ್ಕೆಗಳನ್ನು ಮಾರುವ ಮೂಲಕ ಮತ್ತು ಅದರ ಬಗ್ಗೆ ತನ್ನ ಅರಿವನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಳ್ಳುವ ಮೂಲಕ ಕೋಟ್ಯಧಿಪತಿಯಾಗಿದ್ದಾನೆ (Billionaire). ‘ಸೂಪರ್ ಟ್ರೇಡರ್ ಲಕ್ಷ್ಯ’ ಎಂಬ ಹೆಸರಿನ ಯೂಟ್ಯೂಬ್ ಚಾನಲ್ ಮೂಲಕ ಸದ್ದು ಮಾಡುತ್ತಿರುವ ಈತ ಕೇವಲ 5ಸಾವಿರ ರೂದಲ್ಲಿ ಆಯ್ಕೆಗಳನ್ನು ಮಾಡುವ ಷೇರು ಮಾರುಕಟ್ಟೆಯಲ್ಲಿ (Share market) ಹೂಡಿಕೆ (Investment) ಮಾಡಿ ಪ್ರಸ್ತುತ ಯಶಸ್ವಿ ವ್ಯಾಪಾರಿಯಾಗಿದ್ದಾನೆ. ಸಾಲದ ಸುಳಿಯಲ್ಲಿ ಪರದಾಡುತ್ತಿದ್ದವನ ಬದುಕು ಬದಲಿಸಿದ ಕೆಲಸದ ಮಾರ್ಗದ ಬಗ್ಗೆ ಸ್ವತಃ ಆತನೇ ಹಲವಾರು ವಿಚಾರಗಳನ್ನು ಬಿಚ್ಚಿಟ್ಟಿದ್ದು, ಏನೆಲ್ಲಾ ಹೇಳಿದ್ದಾರೆ ನೋಡೋಣ. ಲಕ್ಷ್ಯ ಸಿಂಗ ಜೊತೆಗಿನ ಪ್ರಶ್ನೆ ರೂಪದ ಸಂದರ್ಶನದ ಕೆಲವು ಭಾಗಗಳು ಇಲ್ಲಿವೆ.

ಈ ಕೆಲಸಕ್ಕೆ ಹೇಗೆ ಪ್ರವೇಶಿಸಿದಿರಿ?
ನಾನು ನನ್ನ ಸಹೋದರನಂತೆ ಸೈನ್ಯಕ್ಕೆ ಸೇರಲು ಬಯಸಿದ್ದೆ ಆದರೆ ನಾನು ಎನ್‌ಡಿಎಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದೆ. ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ, ನನ್ನ ಸ್ನೇಹಿತರು ನನಗೆ ಷೇರು ಮಾರುಕಟ್ಟೆ ಬಗ್ಗೆ ಪರಿಚಯಿಸಿದರು. ನಾನು 2008ರಲ್ಲಿ ಷೇರು ಮಾರುಕಟ್ಟೆಗೆ ಕೇವಲ 5,000 ರೂಗಳ ಮೂಲಕ ಪ್ರವೇಶಿಸಿದೆ. ನಾನು ಆಯ್ಕೆಗಳು, ಇಂಟ್ರಾ-ಡೇ ಟ್ರೇಡಿಂಗ್ ಮತ್ತು ಚೇಸ್ಡ್ ಐಒಪಿ ಗಳಲ್ಲಿ ಹೂಡಿಕೆ ಮಾಡಿದೆ. ಆದರೆ ಮೊದಮೊದಲು ಕೈ ಸುಟ್ಟುಕೊಂಡು ನಷ್ಟ ಅನುಭವಿಸಿದೆ. ಯುನಿಟೆಕ್ NSE 0.00 %, Jaypee, HDIL, ಇತ್ಯಾದಿಗಳ ಷೇರುಗಳಲ್ಲಿ ನಾನು ಹಣವನ್ನು ಕಳೆದುಕೊಂಡೆ. ನನ್ನ ಒಟ್ಟು ರೂ. 3 ಲಕ್ಷ ಹೂಡಿಕೆಯು ಬರೋಬ್ಬರಿ ರೂ 60,000ಕ್ಕೆ ಇಳಿಕೆಯಾಗಿ ನಷ್ಟ ಅನುಭವಿಸಿದೆ.

ಇದನ್ನೂ ಓದಿ: PPF Returns: ಕಡಿಮೆ ಇನ್ವೆಸ್ಟ್​ ಮಾಡಿ, ಕೋಟಿ ಕೋಟಿ ಗಳಿಸಿ! ಜನಸಾಮಾನ್ಯರಿಗೆ ಹೇಳಿ ಮಾಡಿಸಿದ ಯೋಜನೆ ರೀ

ಕ್ರಮೇಣ, ನಾನು ಸೂಚ್ಯಂಕ ಆಯ್ಕೆಗಳಲ್ಲಿ ವ್ಯಾಪಾರವನ್ನು ಪ್ರಾರಂಭಿಸಿದೆ ಮತ್ತು 2012ರಲ್ಲಿ ಸ್ವಲ್ಪ ಮಟ್ಟಿಗೆ ಸ್ಥಿರತೆ ಕಂಡುಕೊಂಡು ಲಾಭದ ರುಚಿ ನೋಡಿದೆ. ಆ ಸಮಯದಲ್ಲಿ ನನಗೆ ಮೂವತ್ತೈದು ಸಾವಿರ ರೂ ಸಂಬಳ ಬರುತ್ತಿದ್ದರೂ ಸಹ ವ್ಯಾಪಾರಕ್ಕೆ ಮಾಡಿದ ಸಾಲ ತೀರಿಸುವಲ್ಲಿ ನನ್ನ ಸಂಬಳದ 30% ವ್ಯಯಿಸಬೇಕಿತ್ತು. ಇದೆಲ್ಲಾ ನಡೆದರೂ ಇದರಲ್ಲಿಯೇ ಏನನ್ನಾದರೂ ಸಾಧಿಸಬೇಕು ಎನ್ನುವ ನನ್ನ ಗುರಿ ಮತ್ತಷ್ಟು ದೃಢವಾಯಿತು ಎಂದು ಹೇಳಿದ್ದಾರೆ ಲಕ್ಷ್ಯ ಸಿಂಗ್.

2016 ರಲ್ಲಿ ಮತ್ತೆ 26 ಲಕ್ಷ ಸಾಲ ಮಾಡಿದೆ. ಆಗ ನನ್ನ ಬೈಕ್, ಫೋನ್, ಅಮೂಲ್ಯವಾದ ಎಲ್ಲಾ ವಸ್ತುಗಳನ್ನು ಮಾರಾಟ ಮಾಡ ಬೇಕಾಯಿತು. ಬಾಸ್ ಜೊತೆ ಜಗಳವಾಡಿಕೊಂಡು ಕೆಲಸ ಸಹ ಬಿಟ್ಟೆ. ಬದುಕು ನಡೆಸುವುದು ಕಷ್ಟವಾಯಿತು. ಈ ಸಂದರ್ಭದಲ್ಲಿ ನಾನು ಫುಡ್ ಸ್ಟಾಲ್ ಮಾಡಿ ಚಹಾ, ತಿಂಡಿ ಮಾರಲು ಶುರು ಮಾಡಿದೆ. ನನ್ನ ಸಾಲದ ಇಎಂಐ ಕಟ್ಟಲು ನಾನು ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿದ್ದೆ. ಅದೇ ನಿರ್ಧಾರ ನನ್ನ ಬದುಕು ಬದಲಿಸಿತು ಎನ್ನುತ್ತಾರೆ ಲಕ್ಷ್ಯ ಸಿಂಗ್.

ಶೂನ್ಯದಿಂದ ಕೋಟ್ಯಧಿಪತಿಯಾಗಲು ತಿರುವು ಸಿಕ್ಕಿದ್ದೆಲ್ಲಿ?
ಇದೆಲ್ಲಾ ಆದ ಬಳಿಕ ಮತ್ತೆ ಹೊಸ ಕೆಲಸ ಸಿಕ್ಕಿತು. ಮತ್ತೆ ಷೇರು ಮಾರುಕಟ್ಟೆಯಲ್ಲಿ ಸ್ವಲ್ಪ ಹಣ ಗಳಿಸಲು ಆರಂಭಿಸಿದೆ. ನಂತರ ನಾನು ಕಲಿತ ಎಲ್ಲಾ ಪಾಠಗಳನ್ನು ವಿದ್ಯಾರ್ಥಿಗಳಿಗೆ, ಯುವಕರಿಗೆ, ನನ್ನಂತೆ ಇರುವ ಬೇರೆಯವರಿಗೆ ತಿಳಿಸಲು ನಿರ್ಧರಿಸಿ ಯೂಟ್ಯೂಬ್ ಚಾನಲ್ ಆರಂಭಿಸಿದೆ. ಈ ಯೂಟ್ಯೂಬ್ ಚಾನಲ್ ಮೂಲಕ ಸ್ಟಾಕ್ ಮಾರ್ಕೆಟ್ ಗೆ ಪ್ರವೇಶಿಸುವವರಿಗೆ ತರಬೇತಿ, ಶಿಕ್ಷಣ ನೀಡಲು ಪ್ರಾರಂಭ ಮಾಡಿದೆ.

ನಿಮ್ಮಈ ಹಾದಿಯಲ್ಲಿ ನೀವು ಮಾಡಿದ ದೊಡ್ಡ ತಪ್ಪು ಏನು?
ಇಂದಿನ ಅವಕಾಶವೇ ಉತ್ತಮ ಎಂದು ಭಾವಿಸುವುದು ವ್ಯಾಪಾರಿ ಮಾಡುವ ದೊಡ್ಡ ತಪ್ಪು. ಬರುವ ಅವಕಾಶಗಳೆಲ್ಲವನ್ನೂ ಉತ್ತಮ ಎಂದು ಭಾವಿಸಿದರೆ ತಪ್ಪಾದ ವಹಿವಾಟುಗಳನ್ನು ಮಾಡುವುದಿಲ್ಲ.

ನನ್ನ ಜೀವನದುದ್ದಕ್ಕೂ ನಾನು ಆಯ್ಕೆಗಳ ಖರೀದಿದಾರನಾಗಿದ್ದೇನೆ. ಅದು ನಗೆ ಸ್ವಲ್ಪ ಮುಳುವಾಯಿತು. ಇಲ್ಲಿ ನನ್ನ ಮೂಲ ಸಮಸ್ಯೆ ಓವರ್‌ಟ್ರೇಡಿಂಗ್, ಕ್ಯಾರಿ ಫಾರ್ವರ್ಡ್ ಮತ್ತು ಎಕ್ಸ್‌ಪೈರಿ ಟ್ರೇಡಿಂಗ್ ಆಗಿತ್ತು ಎಂದರು.

ನೀವು ನಿಮ್ಮ ಕೆಲಸವನ್ನು ತೊರೆದು ಇದರಲ್ಲಿಯೇ ಮುಂದುವರೆಯಲು ಕಾರಣವೇನು?
ನನ್ನ ಯೂಟ್ಯೂಬ್ ವಿಡಿಯೋಗಳು ಜನಪ್ರಿಯವಾಗುತ್ತಿರುವ ಕಾರಣ ಮತ್ತು ಜನರು ನನ್ನಿಂದ ಕಲಿಯಲು ಬಯಸಿದ್ದರಿಂದ ನಾನು ನನ್ನ ಕೆಲಸವನ್ನು ಬಿಟ್ಟು ಇಲ್ಲೇ ಮುಂದುವರೆಯುತ್ತಿದ್ದೇನೆ. ನನ್ನ ಉದ್ಯೋಗದಲ್ಲಿ ಉತ್ತಮ ಸಂಬಳ ಪಡೆಯುತ್ತಿದ್ದರೂ ಕೂಡ, ನನ್ನ ಕನಸಿನ ಕೆಲಸದಷ್ಟು ಅದು ತೃಪ್ತಿ ನೀಡಲಿಲ್ಲ ಎನ್ನುತ್ತಾರೆ ಸಿಂಗ್.

ಇದನ್ನೂ ಓದಿ:  Vintage Electric Cars: ರೈತನ ಮಗನಿಂದ 9 ವಿಂಟೇಜ್ ಎಲೆಕ್ಟ್ರಿಕ್ ಕಾರುಗಳ ಆವಿಷ್ಕಾರ! ಬರ್ತಿರೋ ಆರ್ಡರ್​ ಕಂಡು ಶಾಕ್​ ಆದ ಯುವಕ

ನೀವು ಈಗ ನಿಮ್ಮ ಹಣವನ್ನು ಹೇಗೆ ನಿರ್ವಹಿಸುತ್ತೀರಿ?
ನಾನು ಗೆಲ್ಲುವ ದಿನಗಳಲ್ಲಿ ತುಂಬಾ ಕಡಿಮೆ ಹೂಡಿಕೆ ಮಾಡುತ್ತಿದ್ದೆ ಮತ್ತು ಕಳೆದುಕೊಳ್ಳುತ್ತಿದ್ದೆ. ನಂತರ ನಾನು ನನ್ನ ಸೂತ್ರವನ್ನು ಬದಲಾಯಿಸಿದೆ. ನಾನು 10% ಪಾವತಿಯನ್ನು ಮಾಡಲು ಪ್ರಾರಂಭಿಸಿದೆ ನಂತರ ಕೇವಲ 1.5 ವರ್ಷಗಳಲ್ಲಿ 3.5 ಕೋಟಿ ರೂ. ಸಂಪಾದಿಸಿದೆ. ಕ್ರಿಪ್ಟೋ ಪೋರ್ಟ್‌ಫೋಲಿಯೊ ಜೊತೆಗೆ, ನಾನು ಬ್ಯಾಂಕ್ ಎಫ್‌ಡಿ ಮಾಡಿದ್ದೇನೆ ಅದು ನನ್ನ ತಿಂಗಳ ಖರ್ಚುಗಳನ್ನು ನೋಡಿಕೊಳ್ಳುತ್ತದೆ. ನನ್ನ ಡಿಮ್ಯಾಟ್ ಖಾತೆಯಲ್ಲಿ ನನ್ನ ಒಟ್ಟು ನಿಧಿಯ ಶೇಕಡಾ 20 ಕ್ಕಿಂತ ಹೆಚ್ಚಾದರೆ, ನಾನು ಮಾರಾಟ ಮಾಡುತ್ತೇನೆ. ನಾನು ಬ್ಲೂಚಿಪ್ ಸ್ಟಾಕ್‌ಗಳ ದೀರ್ಘಾವಧಿಯ ಪೋರ್ಟ್‌ಫೋಲಿಯೊವನ್ನು ಸಹ ಹೊಂದಿದ್ದೇನೆ ಎಂದಿದ್ದಾರೆ ಲಕ್ಷ್ಯ ಸಿಂಗ್.
Published by:Ashwini Prabhu
First published: