• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Laid off: ಕೆಲಸ ಹೋಯ್ತು ಅಂತ ಕುಂದಲಿಲ್ಲ, ಜಗ್ಗಲಿಲ್ಲ; ಹೊಸ ಸಂಸ್ಥೆ ಸ್ಥಾಪನೆಗೆ ಮುಂದಾದ ಗೂಗಲ್ ಉದ್ಯೋಗಿಗಳು

Laid off: ಕೆಲಸ ಹೋಯ್ತು ಅಂತ ಕುಂದಲಿಲ್ಲ, ಜಗ್ಗಲಿಲ್ಲ; ಹೊಸ ಸಂಸ್ಥೆ ಸ್ಥಾಪನೆಗೆ ಮುಂದಾದ ಗೂಗಲ್ ಉದ್ಯೋಗಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆನ್ರಿ ಕಿರ್ಕ್ ಎಂಬ ವ್ಯಕ್ತಿಯು ಗೂಗಲ್ ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರನ್ನು ಹೀಗೆ ಕಂಪನಿಯು ಆರ್ಥಿಕ ಸಂಕಷ್ಟದ (ಕಾಸ್ಟ್ ಕಟಿಂಗ್) ಕಾರಣ ಹೇಳಿ ಇತ್ತೀಚೆಗೆ ಕಂಪನಿಯು ಕೆಲಸದಿಂದ ವಜಾಗೊಳಿಸಿತ್ತು.

  • Trending Desk
  • 2-MIN READ
  • Last Updated :
  • Share this:

ಈ ಎರಡೂವರೆ ವರ್ಷದಿಂದ ಕೋವಿಡ್-19 ಸಾಂಕ್ರಾಮಿಕ (COVID 19 Pandemic) ರೋಗದ ಹಾವಳಿಂದಾಗಿ ಅನೇಕ ಚಿಕ್ಕ-ಪುಟ್ಟ ಕಂಪನಿಗಳು (Company) ಕೆಲಸ ಇಲ್ಲದೆ ತಮ್ಮ ಕಂಪನಿಗಳಿಗೆ ಬೀಗ ಜಡಿದು ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು (Employees) ವಜಾಗೊಳಿಸಿದ್ದನ್ನು ನಾವು ನೋಡಿದ್ದೇವೆ. ಇಷ್ಟೇ ಅಲ್ಲದೆ, ಗಾಯದ ಮೇಲೆ ಬರೆ ಎಳೆದಂತೆ ಆರ್ಥಿಕ ಸಂಕಷ್ಟದ (Economic Crisis) ಕಾರಣ ಹೇಳಿ ಅನೇಕ ದೊಡ್ಡ ದೊಡ್ಡ ಐಟಿ ಕಂಪನಿಗಳು (IT Company) ರಾತ್ರೋರಾತ್ರಿ ತಮ್ಮಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ಏಕಾಏಕಿ ವಜಾಗೊಳಿಸಿವೆ.


ಹೀಗೆ ಹಠಾತ್ತನೆ ಕೆಲಸ ಕಳೆದುಕೊಂಡ ಉದ್ಯೋಗಿಗಳು ತಕ್ಷಣವೇ ಲಿಂಕ್ಡ್ ಇನ್ ನಂತಹ ಜಾಲತಾಣಗಳಲ್ಲಿ ತಮ್ಮ ರೆಸ್ಯೂಮ್‌ ಹಾಕಿ ತಮಗೆ ಪರಿಚಯ ಇರುವ ಜನರಿಗೆ ‘ಯಾವುದಾದರೂ ಕೆಲಸ ಇದ್ದರೆ ಹೇಳಿ’ ಅಂತ ಕೆಲಸ ಹುಡುಕುವ ವಿದ್ಯಾಮಾನ ತುಂಬಾ ಸಾಮಾನ್ಯವಾಗಿತ್ತು. ಆದರೆ ಇಲ್ಲಿ ಒಂದು ನಿಜವಾದ ಘಟನೆಯನ್ನು ನಿಮಗೆ ಹೇಳಲಿದ್ದೇವೆ, ಇದು ಅನೇಕ ಉದ್ಯೋಗ ಕಳೆದುಕೊಂಡ ಜನರಿಗೆ ನಿಜಕ್ಕೂ ಸ್ಪೂರ್ತಿ ಆಗಬಹುದು.


ಸೀನಿಯರ್ ಮ್ಯಾನೇಜರ್ ಅವರನ್ನೇ ಕೆಲಸದಿಂದ ವಜಾಗೊಳಿಸಿದ ಗೂಗಲ್


ಹೆನ್ರಿ ಕಿರ್ಕ್ ಎಂಬ ವ್ಯಕ್ತಿಯು ಗೂಗಲ್ ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರನ್ನು ಹೀಗೆ ಕಂಪನಿಯು ಆರ್ಥಿಕ ಸಂಕಷ್ಟದ (ಕಾಸ್ಟ್ ಕಟಿಂಗ್) ಕಾರಣ ಹೇಳಿ ಇತ್ತೀಚೆಗೆ ಕಂಪನಿಯು ಕೆಲಸದಿಂದ ವಜಾಗೊಳಿಸಿತ್ತು.


ಕಿರ್ಕ್ ಕೆಲಸದಿಂದ ವಜಾ ಆದ ನಂತರ ಬೇರೆ ಕಂಪನಿಗಳಲ್ಲಿ ಉದ್ಯೋಗ ಹುಡುಕದೆ, ತಮ್ಮದೇ ಆದ ಸ್ವಂತ ವ್ಯವಹಾರವನ್ನು ಶುರು ಮಾಡಲು ಮುಂದಾಗಿದ್ದಾರೆ. ಇವರಂತೆಯೇ ಗೂಗಲ್ ನಿಂದ ಕೆಲಸ ಕಳೆದುಕೊಂಡ ಇನ್ನೂ ಬೆರಳೆಣಿಕೆಯಷ್ಟು ಉದ್ಯೋಗಿಗಳು ಇವರ ಜೊತೆ ಕೈ ಜೋಡಿಸಿದ್ದಾರೆ ಅಂತ ಹೇಳಲಾಗುತ್ತಿದೆ.


ಇತ್ತೀಚೆಗೆ ಗೂಗಲ್ 12,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಇದರಲ್ಲಿ ಹೆನ್ರಿ ಕಿರ್ಕ್ ಸಹ ಒಬ್ಬರಾಗಿದ್ದರು. ಸುಮಾರು ಎಂಟು ವರ್ಷಗಳ ಕಾಲ ಇವರು ಗೂಗಲ್ ನಲ್ಲಿ ಕೆಲಸ ಮಾಡಿದರು.


ಈಗ ಆರು ವಾರದಲ್ಲಿಯೇ ಇವರು ತಮ್ಮ ತಂಡಕ್ಕೆ ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಡಿಸೈನ್ ಮತ್ತು ಅದನ್ನು ಅಭಿವೃದ್ದಿ ಪಡಿಸುವಂತಹ ಒಂದು ಸುಸಜ್ಜಿತವಾದ ಸ್ಟುಡಿಯೋವನ್ನು ಸೆಟ್ ಅಪ್ ಮಾಡಲು ಹೇಳಿದ್ದಾರೆ.




ಕಿರ್ಕ್ ತನ್ನ ಜೊತೆ ನಡೆದ ಈ ಘಟನೆಯನ್ನು ಲಿಂಕ್ಡ್ ಇನ್ ನಲ್ಲಿ ಹಂಚಿಕೊಂಡಿದ್ದು, ಅವರಿಗೆ ತಮ್ಮದೇ ಆದ ಸ್ವಂತ ವ್ಯವಹಾರವನ್ನು ಗೂಗಲ್ ನೀಡಿರುವ 60 ದಿನಗಳ ನೋಟಿಸ್ ಅವಧಿ ಮುಗಿಯುವುದರೊಳಗೆ ಶುರು ಮಾಡಬೇಕಾಗಿದೆ ಅಂತ ಸಹ ಇವರು ಹೇಳಿದ್ದಾರೆ.


ತಮ್ಮ ಪೋಸ್ಟ್ ನಲ್ಲಿ ಏನಂತ ಬರೆದಿದ್ದಾರೆ ನೋಡಿ ಹೆನ್ರಿ ಕಿರ್ಕ್?


“ನನಗೆ ಇನ್ನೂ 52 ದಿನಗಳ ಸಮಯ ಇದೆ, ಅಷ್ಟರೊಳಗೆ ನಾನು ನನ್ನ ಸ್ವಂತ ವ್ಯವಹಾರವನ್ನು ಸೆಟ್ ಅಪ್ ಮಾಡಿಕೊಳ್ಳಬೇಕು. ಇದಕ್ಕೆ ನಿಮ್ಮೆಲ್ಲರ ಸಹಾಯ ನನಗೆ ತುಂಬಾನೇ ಅವಶ್ಯಕವಾಗಿದೆ. ಕಠಿಣ ಪರಿಶ್ರಮ ನಮಗೆ ಜೀವನದಲ್ಲಿ ಯಶಸ್ಸು ತಂದು ಕೊಡುತ್ತದೆ ಅಂತ ಬಲವಾಗಿ ನಂಬಿದವನು ನಾನು.


ಆದರೆ ಕೆಲಸದಿಂದ ವಜಾಗೊಳಿಸಿರುವ ಘಟನೆ ಈ ಮಾತಿನ ಬಗ್ಗೆ ನನಗಿರುವ ನಂಬಿಕೆಯನ್ನು ಸ್ವಲ್ಪ ಹುಸಿ ಮಾಡಿದೆ. ಆದರೂ ಜೀವನದಲ್ಲಿ ನಡೆಯುವ ಇಂತಹ ಅನಿರೀಕ್ಷಿತ ಘಟನೆಗಳು ತುಂಬಾನೇ ಪಾಠ ಕಲಿಸುತ್ತವೆ” ಎಂದು ಕಳೆದ ವಾರ ಲಿಂಕ್ಡ್ ಇನ್ ನಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಹೆನ್ರಿ ಬರೆದಿದ್ದಾರೆ.


ಇದನ್ನೂ ಓದಿ: Small Business: ಸಣ್ಣ ವ್ಯಾಪಾರೋದ್ಯಮಗಳನ್ನು ಹೇಗೆ ಆರಂಭಿಸಬಹುದು? ಪಾಲಿಸಬೇಕಾದ ಸಲಹೆ ಸೂಚನೆಗಳೇನು?


“ನನ್ನ ಜೊತೆಗೆ ಇನ್ನೂ ಆರು ಜನರು ಇದ್ದಾರೆ. ಅವರು ಸಹ ನನ್ನಂತೆಯೇ ಕೆಲಸದಿಂದ ವಜಾಗೊಳಿಸಲ್ಪಟ್ಟಿದವರಾಗಿದ್ದಾರೆ. ನಾವೆಲ್ಲಾ ಸೇರಿ ಈ ನೋವಿನ ಸಂಗತಿಯನ್ನು ಒಂದು ಹೊಸ ಮೆಟ್ಟಿಲಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತೇವೆ” ಎಂದು ಹೆನ್ರಿ ಬರೆದಿದ್ದಾರೆ.


ಗುರುವಾರ ಇನ್ನೂ 450 ಉದ್ಯೋಗಿಗಳನ್ನು ವಜಾಗೊಳಿಸಿದೆಯಂತೆ ಗೂಗಲ್


ಗುರುವಾರ ಸಹ ಗೂಗಲ್ ತನ್ನಲ್ಲಿ ಕೆಲಸ ಮಾಡುವ 450 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಗುರುವಾರ ಸಂಜೆಗೆ ಕಂಪನಿಯು ತನ್ನ ಉದ್ಯೋಗಿಗಳಿಗೆ ಕೆಲಸದಿಂದ ವಜಾಗೊಳಿಸಿರುವ ಮಾಹಿತಿಯನ್ನು ಇ-ಮೇಲ್ ಮೂಲಕ ನೀಡಿದ್ದಾರೆ ಅಂತ ಸುದ್ದಿ ಮಾಧ್ಯಮವೊಂದು ಮೂಲಗಳು ತಿಳಿಸಿವೆ ಅಂತ ವರದಿ ಮಾಡಿದೆ.

Published by:Mahmadrafik K
First published: