Kris Gopalakrishnan: ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣನ್‌ ಬಗ್ಗೆ ನಿಮಗೆಷ್ಟು ಗೊತ್ತು?

ಕ್ರಿಶ್​ ಗೋಪಾಲಕೃಷ್ಣನ್‌

ಕ್ರಿಶ್​ ಗೋಪಾಲಕೃಷ್ಣನ್‌

ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಭಾರತದ ಐಟಿ ಉದ್ಯಮದಲ್ಲಿ ಪ್ರಮುಖವಾಗಿ ನಿಲ್ಲುವ ಗಣ್ಯ ವ್ಯಕ್ತಿ ಮತ್ತು ಭಾರತೀಯ ಬಿಲಿಯನೇರ್ ಉದ್ಯಮಿ.

  • Share this:

ಭಾರತದ ಐಟಿ ಉದ್ಯಮ (IT Industry) ವಿಶ್ವದಲ್ಲೇ ಮಾದರಿ ಕ್ಷೇತ್ರವಾಗಿ ಬೆಳೆಯುತ್ತಿದೆ. ಹೀಗೆ ವೇಗವಾಗಿ ಬೆಳೆಯುತ್ತಿರುವ ಈ ಕ್ಷೇತ್ರದ ಹಿಂದೆ ಅದೆಷ್ಟೋ ಖ್ಯಾತ ಕಂಪನಿಗಳು (Famous Comapny) , ಸಂಸ್ಥೆ ಹುಟ್ಟುಹಾಕಿದವರು, ಬುದ್ಧಿವಂತ ತಲೆಗಳು, ಲಕ್ಷಾಂತರ ಉದ್ಯೋಗಿಗಳು ಇದ್ದಾರೆ. ಹೀಗೆ ಭಾರತದ ಐಟಿ ಉದ್ಯಮದಲ್ಲಿ ಅನೇಕ ಖ್ಯಾತ ವ್ಯಕ್ತಿಗಳು ಇದ್ದಾರೆ. ಅವರಲ್ಲಿ ಪ್ರಮುಖರು ಎಂದರೆ ಕ್ರಿಸ್ ಗೋಪಾಲಕೃಷ್ಣನ್ (Kris Gopalakrishnan).ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಭಾರತದ ಐಟಿ ಉದ್ಯಮದಲ್ಲಿ ಪ್ರಮುಖವಾಗಿ ನಿಲ್ಲುವ ಗಣ್ಯ ವ್ಯಕ್ತಿ ಮತ್ತು ಭಾರತೀಯ ಬಿಲಿಯನೇರ್ ಉದ್ಯಮಿ.


ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್


ಐಟಿ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆ ಇಂದು ಅವರನ್ನು ಬಿಲಿಯನೇರ್‌ ಮಾಡಿರುವುದರ ಜೊತೆ ಸಾವಿರಾರು ಜನರಿಗೆ ಉದ್ಯೋಗದಾತರಾಗಿದ್ದಾರೆ.
ವಿಶ್ವದಾದ್ಯಂತ ಐಟಿ ಸೇವಾ ಉದ್ಯಮವನ್ನು ಬೆಳೆಸುವಲ್ಲಿ ಗೋಪಾಲಕೃಷ್ಣನ್ ಅವರ ಪಾತ್ರ ಮಹತ್ವದ್ದಾಗಿದ್ದು, ಜಾಗತಿಕ ವ್ಯಾಪಾರ ಮತ್ತು ತಂತ್ರಜ್ಞಾನ ಚಿಂತನೆಯ ನಾಯಕರಾಗಿ ಗುರುತಿಸಲ್ಪಟ್ಟಿದ್ದಾರೆ.


ಇನ್ಫೋಸಿಸ್‌ ಎಂಬ ದೊಡ್ಡ ಟೆಕ್‌ ಕಂಪನಿಯ ಸಹ ಸಂಸ್ಥಾಪಕರಾಗಿರುವ ಇವರು ಈ ಕಂಪನಿಯಿಂದ 2014ರಲ್ಲಿ ನಿವೃತ್ತಿ ಪಡೆದರು. 2007 ರಿಂದ 2014ರವರೆಗೆ ಇನ್ಫೋಸಿಸ್‌ನ ಸಾರಥಿಯಾಗಿದ್ದು, ಕಂಪನಿಯಲ್ಲಿ ವಿವಿಧ ಸ್ಥಾನಗಳನ್ನು ಅಲಂಕರಿಸಿ, ನಿಭಾಯಿಸಿದರು.


2015 ರಲ್ಲಿ ಆಕ್ಸಿಲರ್ ವೆಂಚರ್ಸ್ ಕಂಪನಿ ಕಟ್ಟಿದ ಕ್ರಿಸ್


ಸುದೀರ್ಘ 33 ವರ್ಷ ಇನ್ಫೋಸಿಸ್‌ಗಾಗಿ ದುಡಿದ ಇವರು 68 ವರ್ಷದಲ್ಲಿ ಕಂಪನಿಯಿಂದ ನಿರ್ಗಮಿಸಿದರು. ಸಂಸ್ಥೆ ಬಿಟ್ಟ ನಂತರವೂ ನಿವೃತ್ತಿ ದಿನಗಳನ್ನು ಹಾಯಾಗಿ ಕಳೆಯುವ ಮನಸ್ಸು ಮಾಡದ ಇವರು, ಅಲ್ಲಿಂದ ಮತ್ತೊಂದು ಕಂಪನಿಯ ಸ್ಥಾಪನೆಗೆ ಮುಂದಾದರು.


ಹೌದು ಕ್ರಿಸ್‌ ಗೋಪಾಲಕೃಷ್ಣನ್‌ ಅವರು 2015 ರಲ್ಲಿ ಆಕ್ಸಿಲರ್ ವೆಂಚರ್ಸ್ ಎಂಬ ತಮ್ಮದೇ ಕಂಪನಿಯನ್ನು ಹುಟ್ಟುಹಾಕಿದರು. ಹೊಸದಾಗಿ ತಲೆ ಎತ್ತುವ ಉದ್ಯಮಗಳಿಗೆ ಪ್ರೋತ್ಸಾಹ, ಆರಂಭಿಕ ಹಂತದಲ್ಲಿ ಸ್ಟಾರ್ಟ್-ಅಪ್‌ಗಳಿಗೆ ಸಹಾಯ ಮಾಡುವುದು ಕಂಪನಿಯ ಉದ್ದೇಶವಾಗಿದ್ದು, ಪ್ರಸ್ತುತ ಕ್ರಿಸ್‌ ಗೋಪಾಲಕೃಷ್ಣನ್‌ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ಬೆಂಗಳೂರಲ್ಲಿ 76 ಕೋಟಿ ಮೌಲ್ಯದ ಆಸ್ತಿ ಖರೀದಿಸಿದ ಇನ್ಫೋಸಿಸ್​​ನ ಕ್ರಿಸ್ ಗೋಪಾಲಕೃಷ್ಣನ್


ಕ್ರಿಸ್‌ ಗೋಪಾಲಕೃಷ್ಣನ್‌ ತಮ್ಮ ಕಂಪನಿ ಆಕ್ಸಿಲರ್ ವೆಂಚರ್ಸ್ ಮತ್ತು ಕೆಲವು ವೆಂಚರ್ ಫಂಡ್‌ಗಳ ಮೂಲಕ ಹಲವಾರು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಗೋಪಾಲಕೃಷ್ಣನ್ ಅವರು ಭಾರತದ ಐಟಿ ಉದ್ಯಮದ ವಿಕಸನವನ್ನು ವಿವರಿಸುವ ಡಿಜಿಟಲ್ ಅಪ್ಲಿಕೇಶನ್‌ಗೂ ಧನಸಹಾಯ ಮಾಡಿದ್ದಾರೆ.


2011ರಲ್ಲಿ ‌ಪದ್ಮಭೂಷಣ ಪ್ರಶಸ್ತಿ


ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿಯಾಗಿರುವ ಇವರು ತಮ್ಮ ಪತ್ನಿಯ ಹೆಸರಿನಲ್ಲಿ ಸುಧಾ ಗೋಪಾಲಕೃಷ್ಣನ್ ಬ್ರೈನ್ ರಿಸರ್ಚ್ ಸೆಂಟರ್‌ ಅನ್ನು ಸಹ ಸ್ಥಾಪಿಸಿದ್ದಾರೆ.ಹೀಗೆ ಕಂಪನಿಗಳನ್ನು ಸ್ಥಾಪಿಸಿ ಸಾವಿರಾರು ಮಂದಿಗೆ ಉದ್ಯೋಗ ಮತ್ತು ಉದ್ಯಮಗಳನ್ನು ಸ್ಥಾಪಿಸುವಲ್ಲಿ ನೆರವಾದ ಇವರಿಗೆ 2011ರಲ್ಲಿ ರಾಷ್ಟ್ರದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣವನ್ನು ನೀಡಿ ಗೌರವಿಸಲಾಗಿದೆ.


ಉದ್ಯಮದ ಜೊತೆ ಜೊತೆಯೇ ಸಾಮಾಜಿಕ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಂಡ ಇವರು ಪ್ರತೀಕ್ಷಾ ಟ್ರಸ್ಟ್ ಮೂಲಕ ಪರೋಪಕಾರದಂತಹ ಕೆಲಸಗಳನ್ನು ಮಾಡುತ್ತಿದ್ದಾರೆ.


ಆಸ್ತಿ ಮೌಲ್ಯ ಎಷ್ಟಿದೆ?


ಈ ವರ್ಷದ ಇತ್ತಿಚಿನ ಫೋರ್ಬ್ಸ್ ವರದಿಗಳ ಪ್ರಕಾರ 3.1 ಮಿಲಿಯನ್‌ ಡಾಲರ್‌ ಮೌಲ್ಯದ ಭಾರತೀಯ ಹಣದಲ್ಲಿ 2,53,70 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಭಾರತೀಯ ಶ್ರೀಮಂತರಲ್ಲಿ ಒಬ್ಬರಾಗಿರುವ ಇವರು ಇತ್ತೀಚಿನ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ 905 ನೇ ಸ್ಥಾನ ಅಲಂಕರಿಸಿದ್ದಾರೆ.


ಜನನ ಮತ್ತು ಶಿಕ್ಷಣ


ಗೋಪಾಲಕೃಷ್ಣನ್ ಅವರು 1955 ರಲ್ಲಿ ಕೇರಳದ ತಿರುವನಂತಪುರದಲ್ಲಿ ಜನಿಸಿದರು. ಅವರು ಸರ್ಕಾರಿ ಮಾದರಿ ಬಾಲಕರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಯಿಂದ ಭೌತಶಾಸ್ತ್ರ (1977) ಮತ್ತು ಕಂಪ್ಯೂಟರ್ ಸೈನ್ಸ್ (1979) ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದರು.

top videos


    ಶಿಕ್ಷಣ ಪೂರೈಸಿದ ಇವರು ಮೊದಲಿಗೆ 1979 ರಲ್ಲಿ ಮುಂಬೈನ ಪಟ್ನಿ ಕಂಪ್ಯೂಟರ್ ಸಿಸ್ಟಮ್ಸ್‌ನೊಂದಿಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ನಂತರ 1981ರಲ್ಲಿ ಇನ್ಫೋಸಿಸ್ ಅನ್ನು ಸಹ-ಸಂಸ್ಥಾಪಕರಾಗಿ ಕಂಪನಿಯನ್ನು ಕಟ್ಟಿ ಬೆಳೆಸಿದರು.

    First published: