• ಹೋಂ
 • »
 • ನ್ಯೂಸ್
 • »
 • ಬ್ಯುಸಿನೆಸ್
 • »
 • Kresha Gupta: 24ನೇ ವಯಸ್ಸಿನಲ್ಲಿ 100 ಕೋಟಿ ಮೌಲ್ಯದ ಫಂಡ್‌ ಕಂಪನಿ ಸ್ಥಾಪಿಸಿದ ಕ್ರೇಶಾ ಗುಪ್ತಾ; ಯಶಸ್ಸಿನ ಗುಟ್ಟೇನು?

Kresha Gupta: 24ನೇ ವಯಸ್ಸಿನಲ್ಲಿ 100 ಕೋಟಿ ಮೌಲ್ಯದ ಫಂಡ್‌ ಕಂಪನಿ ಸ್ಥಾಪಿಸಿದ ಕ್ರೇಶಾ ಗುಪ್ತಾ; ಯಶಸ್ಸಿನ ಗುಟ್ಟೇನು?

ಕ್ರೇಶಾ ಗುಪ್ತಾ

ಕ್ರೇಶಾ ಗುಪ್ತಾ

ಭಾರತೀಯ ಮಹಿಳೆಯರು ಈಗ ಯಶಸ್ವಿ ಉದ್ಯಮಿಗಳ ಸಾಲಿನಲ್ಲಿ ನಿಂತಿರುವುದು ಹೆಮ್ಮೆಯ ವಿಚಾರ. ಇಂತಹವರ ಸಾಲಿನಲ್ಲಿ ನಿಂತಿರುವ ಮಹಿಳೆಯರಲ್ಲಿ ಕ್ರೇಶಾ ಗುಪ್ತಾ ಪ್ರಮುಖರು. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಇವರು ಫಂಡ್‌ ಮ್ಯಾನೇಜರ್‌ ಆಗಿ ಮಾರುಕಟ್ಟೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ.

 • Share this:

ಭಾರತೀಯ ಮಹಿಳೆಯರು (Indian Women)ಈಗ ಯಶಸ್ವಿ ಉದ್ಯಮಿಗಳ ಸಾಲಿನಲ್ಲಿ ನಿಂತಿರುವುದು ಹೆಮ್ಮೆಯ ವಿಚಾರ. ಸಣ್ಣ ಸಣ್ಣ ವಯಸ್ಸಿನಲ್ಲಿಯೇ ಮಹಿಳೆಯರು ಸಾಧಕರ ಪಟ್ಟಿಯಲ್ಲಿದ್ದಾರೆ. ಇಂತಹವರ ಸಾಲಿನಲ್ಲಿ ನಿಂತಿರುವ ಮಹಿಳೆಯರಲ್ಲಿ ಕ್ರೇಶಾ ಗುಪ್ತಾ ಪ್ರಮುಖರು. ಚಾರ್ಟರ್ಡ್ ಅಕೌಂಟೆಂಟ್ (Chartered Accountants) ಆಗಿರುವ ಇವರು ಫಂಡ್‌ ಮ್ಯಾನೇಜರ್‌ (Fund Manager) ಆಗಿ ಮಾರುಕಟ್ಟೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಭಾರತದ ಅತ್ಯಂತ ಕಿರಿಯ ಫಂಡ್ ಮ್ಯಾನೇಜರ್‌ಗಳಲ್ಲಿ ಒಬ್ಬರಾದ ಕ್ರೇಶಾ ಗುಪ್ತಾ (Kresha Gupta) ಯಾರು? ಏನಿವರ ಸಾಧನೆ ನೋಡೋಣ.


ಫಂಡ್‌ ಮ್ಯಾನೇಜರ್‌ ಕ್ರೇಶಾ ಗುಪ್ತಾ


24 ವರ್ಷದ ಕ್ರೇಶಾ ಗುಪ್ತಾ ಅಹಮದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಸ್ಟಾರ್ಟ್‌ಅಪ್‌ಗಳ ಮೇಲೆ ಕೇಂದ್ರೀಕರಿಸಿದ ಇವರು ಚಾಣಕ್ಯ ಆಪರ್ಚುನಿಟೀಸ್ ಫಂಡ್ 1 ಕಂಪನಿಯನ್ನು ಸಹ ತೆರೆದಿದ್ದಾರೆ. ಈ ಕಂಪನಿಯು ಈಗಾಗ್ಲೇ ಸೆಬಿಯಲ್ಲಿ ನೋಂದಾಯಿಸಲ್ಪಟ್ಟಿದೆ. ಸ್ಟಾರ್ಟ್‌ಅಪ್‌ಗಳಿಗೆ ಧನಸಹಾಯ ಮಾಡುವ ಸಲುವಾಗಿ ಅವುಗಳನ್ನೇ ಕೇಂದ್ರಿಕರಿಸಿ 100 ಕೋಟಿ ರೂಪಾಯಿ ಮೌಲ್ಯದ ಫಂಡ್‌ ಕಂಪನಿಯನ್ನು ಹುಟ್ಟುಹಾಕಿದರು.


ಈ ಫಂಡ್‌ ನೀಡುವ ಕಂಪನಿಗಳನ್ನು ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಯಾಗಿ ಪರಿಗಣಿಸಲಾಗುತ್ತದೆ. ಹಣವನ್ನು ಸಾಲ ನೀಡುವುದು ಮತ್ತು ಎರವಲು ಪಡೆಯುವುದು. ಹೊಸದಾಗಿ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸುವವರಿಗೆ ಧನ ಸಹಾಯ ಮಾಡುವುದು ಹೀಗೆ ಬೇರೆ ಬೇರೆ ಹಣಕಾಸು ಯೋಜನೆಗಳಿಗೆ ಸಂಬಂಧಿಸಿದಂತೆ ಚಾಣಕ್ಯ ಆಪರ್ಚುನಿಟೀಸ್ ಫಂಡ್ 1. ಕಂಪನಿ ಕಾರ್ಯ ನಿರ್ವಹಿಸುತ್ತದೆ.


ಇದನ್ನೂ ಓದಿ: ಮದುವೆ ಸೀಸನ್​ಗೆ ಹೇಳಿ ಮಾಡಿದ ಬ್ಯುಸಿನೆಸ್​ ಇದು! ಕಡಿಮೆ ಹೂಡಿಕೆ, ಲಾಭ ಹೆಚ್ಚು!


ಕ್ರೇಶಾ ಗುಪ್ತಾ ಶಿಕ್ಷಣ ಮತ್ತು ವೃತ್ತಿ ಜೀವನ


ಓದಿನಲ್ಲಿ ಯಾವಾಗಲೂ ಮುಂದಿದ್ದ ಕ್ರೇಶಾ ಗುಪ್ತಾ ಅಹಮದಾಬಾದ್ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಪದವಿ ಪಡೆದರು. ನಂತರ ಇವರು ದೂರಶಿಕ್ಷಣದ ಮೂಲಕ ಸಿಂಬಯೋಸಿಸ್ ಸೆಂಟರ್‌ನಿಂದ ಬ್ಯಾಂಕಿಂಗ್ ಮತ್ತು ಹಣಕಾಸು ಬೆಂಬಲ ಸೇವೆಗಳಿಗಾಗಿ ಡಿಪ್ಲೊಮಾ ಕೂಡ ಅಧ್ಯಯನ ಮಾಡಿದರು.


ಕ್ರೇಶಾ ಗುಪ್ತಾ


ವಿದ್ಯಾಭ್ಯಾಸ ಮುಗಿಸಿದ ಇವರು ನಂತರ ವೊಡಾಫೋನ್ ಐಡಿಯಾ ಲಿಮಿಟೆಡ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಜೊತೆಗೆ ಕ್ರೇಶಾ ಗುಪ್ತಾ ಅವರು ಹಣಕಾಸು, ಖಾತೆಗಳು, MIS, ತೆರಿಗೆ ಸಲಹಾ ಇತ್ಯಾದಿಗಳಲ್ಲಿ ಪಾತ್ರಗಳೊಂದಿಗೆ ಕಾರ್ಪೊರೇಟ್ ಮತ್ತು ಸಲಹಾ ಕ್ಷೇತ್ರಗಳಲ್ಲೂ ಸಹ ಕೆಲಸ ಮಾಡಿದರು.


100 ಕೋಟಿ ನಿಧಿ ಕಂಪನಿ


ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದ ಬಳಿಕೆ ಇವರಿಗೆ ತಮ್ಮದೆ ಆದ ಏನನ್ನಾದರೂ ಆರಂಭಿಸುವ ಹಂಬಲದಲ್ಲಿ ತಮ್ಮ ಕಂಪನಿ ಸ್ಥಾಪಿಸಿದರು. 24 ನೇ ವಯಸ್ಸಿನಲ್ಲಿ ಅಗಾಧವಾದ ನಿವ್ವಳ ಮೌಲ್ಯದೊಂದಿಗೆ ರೂ 100 ಕೋಟಿ ನಿಧಿಯನ್ನು ಪ್ರಾರಂಭಿಸಿದ ಕ್ರೇಶ ಗುಪ್ತಾ ಇಂದು ಯಶಸ್ಸಿನ ಅಲೆಯಲ್ಲಿದ್ದಾರೆ.


ಈ ನಿಧಿಯು ಲಾಭದಾಯಕ ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತದೆ. ಕ್ರೇಶಾ ಅವರ ಫಂಡ್‌ ಕಂಪನಿಯು ಸರಿಸುಮಾರು 25ಕ್ಕಿಂತ ಹೆಚ್ಚಿನ ಕಂಪನಿಗಳಲ್ಲಿ ಹೂಡಿಕೆ ಮಾಡಲು ಯೋಜಿಸಿದೆ. ಇದು ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳಿಂದ ಹಣವನ್ನು ಕೂಡ ಸಂಗ್ರಹ ಮಾಡುತ್ತದೆ.
5 ವರ್ಷಗಳಿಂದ ಈಕ್ವಿಟಿ ಮಾರುಕಟ್ಟೆಗಳಲ್ಲಿ ಪರಿಣಿತಿ ಹೊಂದಿರುವ ಹೂಡಿಕೆ ಅವಕಾಶಗಳನ್ನು ಗುರುತಿಸುವಲ್ಲಿ ಮತ್ತು ಅಪಾಯಗಳನ್ನು ತಗ್ಗಿಸುವಲ್ಲಿ ತಜ್ಞರೆನಿಸಿಕೊಂಡಿದ್ದಾರೆ. ಪ್ರತಿ ಟ್ರೆಂಡ್‌ಲೈನ್‍ಗೆ, ಮಾರ್ಚ್ 31, 2023 ರಂತೆ ಕ್ರೇಶಾ ಗುಪ್ತಾ 3 ಷೇರುಗಳನ್ನು ಹೊಂದಿದ್ದು, ಅದರ ನಿವ್ವಳ ಮೌಲ್ಯ ರೂ 6.9 ಕೋಟಿ ಆಗಿದೆ.


ಕ್ರೇಶಾ ಗುಪ್ತಾ ಯಶಸ್ಸಿನ ಗುಟ್ಟೇನು?

top videos


  ಕ್ರೇಶಾ ಗುಪ್ತಾ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ 100 ಕೋಟಿ ನಿಧಿಯನ್ನು ಪ್ರಾರಂಭಿಸುವುದು ನನಗೆ ಹೊಸ ಅನುಭವ ಎಂದು ಬರೆದುಕೊಂಡಿದ್ದಾರೆ. ಯಶಸ್ಸಿನ ಗುಟ್ಟಿನ ಬಗ್ಗೆ ಮಾತನಾಡಿದ ಇವರು ವರ್ಷಗಳ ಅನುಭವ ಮಾತ್ರ ಯಾವಾಗಲೂ ಯಶಸ್ಸನ್ನು ತಂದುಕೊಡುವುದಿಲ್ಲ, ಬದಲಿಗೆ ಇತರರಿಂದ ಕಲಿಯುವ ಇಚ್ಛೆ, ಹೊಸ ಆಲೋಚನೆಗಳಿಗೆ ಸಿದ್ಧರಾಗಿರುವುದು, ಕಲಿಯಲು ಅವಕಾಶಗಳನ್ನು ಹುಡುಕುವುದು, ಪ್ರಶ್ನಿಸಲು ಹಿಂಜರಿಯದಿರುವುದು ಸಹ ಒಬ್ಬರ ಯಶಸ್ಸಿಗೆ ಕಾರಣ ಎಂದು ಹೇಳುತ್ತಾರೆ.

  First published: