• Home
 • »
 • News
 • »
 • business
 • »
 • ನನ್ನ ಹೆಂಡತಿ 17 ರೂಪಾಯಿಯಲ್ಲಿ ಮನೆ ಮ್ಯಾನೇಜ್ ಮಾಡ್ತಾರೆ-ಇದ್ರಿಂದ್ಲೇ ನಾನಿನ್ನೂ ಕೆಲಸದಲ್ಲಿ ಇದ್ದೀನಿ- ಕೋಟಕ್ ಮಹೀಂದ್ರಾ AMC ನಿಲೇಶ್ ಶಾ

ನನ್ನ ಹೆಂಡತಿ 17 ರೂಪಾಯಿಯಲ್ಲಿ ಮನೆ ಮ್ಯಾನೇಜ್ ಮಾಡ್ತಾರೆ-ಇದ್ರಿಂದ್ಲೇ ನಾನಿನ್ನೂ ಕೆಲಸದಲ್ಲಿ ಇದ್ದೀನಿ- ಕೋಟಕ್ ಮಹೀಂದ್ರಾ AMC ನಿಲೇಶ್ ಶಾ

ನಿಲೇಶ್ ಶಾ

ನಿಲೇಶ್ ಶಾ

ತಾವು ಕೋಟಕ್ ಮ್ಯೂಚುವಲ್ ಫಂಡ್‌ನಲ್ಲಿ ಉದ್ಯೋಗ ಮಾಡಿಕೊಂಡಿರುವುದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನ್ನ ಪತ್ನಿಯೇ ಕಾರಣ ಎಂಬುದನ್ನು ಸಣ್ಣ ಉದಾಹರಣೆಯ ರೂಪದಲ್ಲಿ ಶಾ ವಿವರಿಸಿದ್ದಾರೆ.

 • Trending Desk
 • 3-MIN READ
 • Last Updated :
 • New Delhi, India
 • Share this:

ಮ್ಯೂಚುವಲ್ ಫಂಡ್(Mutual Fund) ಉದ್ಯಮವು ಮುಂದಿನ ಐದು ವರ್ಷಗಳಲ್ಲಿ ರೂ 100 ಟ್ರಿಲಿಯನ್ ಗುರಿಯನ್ನು ಸಾಧಿಸಬಹುದು ಎಂಬುದಾಗಿ ಭಾರತದ(India) ಉನ್ನತ ಮ್ಯೂಚುವಲ್ ಫಂಡ್ ಸಂಸ್ಥೆಗಳ ನಾಯಕರು ಭವಿಷ್ಯ ನುಡಿದಿದ್ದಾರೆ.


ತ್ಯಾಗ ಹಾಗೂ ಕುಟುಂಬದ ಬೆಂಬಲ


ಶೃಂಗಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು, ಸಿಇಒಗಳು ತಮ್ಮ ತಮ್ಮ ವೃತ್ತಿ ಹಾಗೂ ಜೀವನದ ಅನುಭವಗಳನ್ನು ತಿಳಿಸಿದ್ದು, ಮ್ಯೂಚುವಲ್ ಫಂಡ್‌ಗಳ ಉನ್ನತಿಗೆ ತಾವುಗಳ ಮಾಡಿರುವ ತ್ಯಾಗ ಹಾಗೂ ಕುಟುಂಬದ ಬೆಂಬಲವನ್ನು ಸ್ಮರಿಸಿಕೊಂಡಿದ್ದಾರೆ.


ನಾನು ಉದ್ಯೋಗದಲ್ಲಿರಲು ಪತ್ನಿಯೇ ಕಾರಣ; ನೀಲೇಶ್ ಶಾ


ಮನಿ ಕಂಟ್ರೋಲ್ ಮ್ಯೂಚುವಲ್ ಫಂಡ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಸಂಸ್ಥೆಗಳ ನಾಯಕರು ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ. ಇದೇ ಸಮಯದಲ್ಲಿ ಕೋಟಕ್ ಮಹೀಂದ್ರಾ AMC, MD ಯಾಗಿರುವ ನೀಲೇಶ್ ಶಾ ಮ್ಯೂಚುವಲ್ ಫಂಡ್ ಉದ್ಯಮದ ಯಶಸ್ಸು ಮನೆಯೊಡತಿಯ ಮೇಲೆ ಅವಲಂಬಿತವಾಗಿದ್ದು ಆಕೆ ಮನೆಯ ಖರ್ಚುವೆಚ್ಚಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆಯೇ ಭವಿಷ್ಯ ನಿರ್ಧರಿತವಾಗುತ್ತದೆ ಎಂದು ತಿಳಿಸಿದ್ದಾರೆ.


ಅತ್ಯಲ್ಪ ಗಳಿಕೆಯಲ್ಲಿಯೇ ಮನೆ ನಿರ್ವಹಣೆ


ತಾವು ಕೋಟಕ್ ಮ್ಯೂಚುವಲ್ ಫಂಡ್‌ನಲ್ಲಿ ಉದ್ಯೋಗ ಮಾಡಿಕೊಂಡಿರುವುದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನ್ನ ಪತ್ನಿಯೇ ಕಾರಣ ಎಂಬುದನ್ನು ಸಣ್ಣ ಉದಾಹರಣೆಯ ರೂಪದಲ್ಲಿ ಶಾ ವಿವರಿಸಿದ್ದಾರೆ. ಅತ್ಯಲ್ಪ ಗಳಿಕೆಯಲ್ಲಿಯೇ ಮನೆ ನಿರ್ವಹಣೆಯನ್ನು ಪತ್ನಿಯು ನಡೆಸಿಕೊಂಡು ಬಂದಿರುವುದಕ್ಕೆ ಇಂದು ಉದ್ಯೋಗದಲ್ಲಿರುವೆ ಎಂದು ಮನತುಂಬಿ ಸ್ಮರಿಸಿಕೊಂಡಿದ್ದಾರೆ.


ಇದನ್ನೂ ಓದಿ: Farming Tips: ಅಬ್ಬಾ, ಈ ರೈತರದ್ದು ಏನ್ ತಲೆ ಅಂತೀರಾ? ಬಾವಲಿಯಿಂದ ದ್ರಾಕ್ಷಿ ಕಾಪಾಡೋಕೆ ಏನ್​ ಮಾಡಿದ್ದಾರೆ ನೋಡಿ!


ಮನೆಯೊಡತಿಯ ಪಾತ್ರ ಹಿರಿದಾದುದು


ನನಗೆ 100 ರೂ ಸಂಬಳ ಬರುತ್ತದೆ. ಅದರಲ್ಲಿ ರೂ 43 ಸರಕಾರ ನೇರವಾಗಿ ತೆಗೆದುಕೊಳ್ಳುತ್ತದೆ.  ಹಾಗಾಗಿ ನನ್ನ ಕೈಯಲ್ಲಿ ಉಳಿಯುವುದು ಬರೇ ರೂ 57. ಇದರಲ್ಲಿ ನನ್ನ ಭವಿಷ್ಯದ ಉಳಿಕೆಗೆ ನಾನು ರೂ 10 ಅನ್ನು NPS ಯಲ್ಲಿ ಹಾಗೂ ರೂ 10 ಅನ್ನು ಪ್ರಾವಿಡೆಂಡ್ ಫಂಡ್‌ನಲ್ಲಿ ವಿನಿಯೋಗಿಸುತ್ತೇನೆ. ರೂ. 37 ನನ್ನ ಕೈಯಲ್ಲುಳಿಯುತ್ತದೆ. ಇನ್ನು ಇದರಲ್ಲಿ ರೂ 17 ಅನ್ನು ಮಾತ್ರವೇ ನನ್ನ ಪತ್ನಿ ಪಾರುಲ್ ಶಾ ಳಿಗೆ ನೀಡುತ್ತೇನೆ. ನನ್ನ ಪತ್ನಿ ರೂ 17 ರಲ್ಲಿ ಮನೆಖರ್ಚುವೆಚ್ಚಗಳನ್ನು ನಿಭಾಯಿಸುವವರೆಗೆ ನಾನು ಕೋಟಕ್ ಮ್ಯೂಚುವಲ್ ಫಂಡ್‌ನಲ್ಲಿ ಕೆಲಸ ಮಾಡಬಹುದು ಎಂದು ಶಾ ಶೃಂಗ ಸಭೆಯಲ್ಲಿ ನುಡಿದಿದ್ದಾರೆ. ಮನೆಯ ಖರ್ಚುವೆಚ್ಚ ನಿರ್ವಹಣೆಯಲ್ಲಿ ಮನೆಯೊಡತಿಯ ಪಾತ್ರ ಎಷ್ಟು ಹಿರಿದಾದುದು ಎಂಬುದನ್ನು ಶಾ ಇಲ್ಲಿ ಮನೋಜ್ಞವಾಗಿ ವಿವರಿಸಿದ್ದಾರೆ.


ಮ್ಯೂಚುವಲ್ ಫಂಡ್‌ನ ಪ್ರಗತಿ


ಪಾರುಲ್ ಶಾ ರಂತಹ ಗೃಹಿಣಿಯರನ್ನು ಹೊಂದಿರುವವರೆಗೆ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಪ್ರತಿಭೆಗೆ ಅವಕಾಶವಿರುತ್ತದೆ ಹಾಗೂ ಮ್ಯೂಚುವಲ್ ಫಂಡ್ ಪ್ರಗತಿಯನ್ನು ಸಾಧಿಸುತ್ತದೆ. ಇದನ್ನು ಕಳೆದುಕೊಳ್ಳುವ ದಿನ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ ಎಂದು ಶಾ ಮನಬಿಚ್ಚಿ ಮಾತನಾಡಿದ್ದಾರೆ.


ಮಾತೃತ್ವ ಹಾಗೂ ವೃತ್ತಿಯ ಹಗ್ಗಜಗ್ಗಾಟ


ಪ್ಯಾನಲ್‌ನ ಭಾಗವಾಗಿದ್ದ ಎಡೆಲ್‌ವೀಸ್ CEO ರಾಧಿಕಾ ಗುಪ್ತಾ ತಮ್ಮ ಕಂದನಿಗೆ ಜನ್ಮನೀಡಿ ಬರೇ ಆರು ತಿಂಗಳಲ್ಲಿ ಉದ್ಯೋಗಕ್ಕೆ ಮರಳಿದ ಉದಾಹರಣೆಯನ್ನು ನೀಡಿದ್ದಾರೆ. ಇದೇ ವರ್ಷ ಜೂನ್‌ನಲ್ಲಿ ರಾಧಿಕಾ ತಮ್ಮ ಮಗನಿಗೆ ಜನ್ಮನೀಡಿದ 6 ತಿಂಗಳುಗಳಲ್ಲಿ ಉದ್ಯೋಗಕ್ಕೆ ಮರಳಿ ಸೇರ್ಪಡೆಗೊಂಡಿದ್ದಾರೆ. ಮಾತೃತ್ವ ಹಾಗೂ ವೃತ್ತಿಜೀವನದ ನಡುವಿನ ಹಗ್ಗಜಗ್ಗಾಟದ ತಮ್ಮ ಅನುಭವವನ್ನು ರಾಧಿಕಾ ಬಿಚ್ಚಿಟ್ಟಿದ್ದಾರೆ.


ಇದನ್ನೂ ಓದಿ: 0% GST: ಖರೀದಿದಾರರಿಗೆ ಶುಭ ಸುದ್ದಿ, ಆ ವಸ್ತುಗಳ ಮೇಲೆ ಶೂನ್ಯ GST!


ವೃತ್ತಿರಂಗದ ಮೇಲಿರುವ ಪ್ರೀತಿ


ನಾನು ಇನ್ನೂ ಕೂಡ ಹೆರಿಗೆ ರಜೆಯಲ್ಲಿರುವೆ ಏಕೆಂದರೆ ಸರಕಾರದ ನಿಯಮಗಳ ಪ್ರಕಾರ ಹೆರಿಗೆ ರಜೆ ಆರು ತಿಂಗಳು ಹಾಗೂ ನನ್ನ ಮಗನಿಗೆ ಈಗ ಐದು ತಿಂಗಳು. ಆರು ವಾರಗಳ ನಂತರ ನಾನು ಉದ್ಯೋಗಕ್ಕೆ ಸೇರಿದೆ ಏಕೆಂದರೆ ಈ ಕ್ಷೇತ್ರವನ್ನು ನಾನು ಪ್ರೀತಿಸುತ್ತೇನೆ ಹಾಗೂ ಅದಕ್ಕೆ ತಕ್ಕ ಗೌರವವನ್ನು ಇದು ನನಗೆ ನೀಡಿದೆ ಎಂದು ತಿಳಿಸಿದ್ದಾರೆ.

Published by:Latha CG
First published: