Kotak Mahindra Bank: 537 ಕೋಟಿ ರೂಪಾಯಿಗೆ ಸೊನಾಟಾ ಫಿನಾನ್ಸ್‌ ಖರೀದಿಸಿದ ಕೋಟಕ್ ಮಹೀಂದ್ರಾ ಬ್ಯಾಂಕ್!

2017 ರಲ್ಲಿ ಬಿಎಸ್‌ಎಸ್ ಮೈಕ್ರೊಫಿನಾನ್ಸ್ ಅನ್ನು ಯಶಸ್ವಿಯಾಗಿ ಸ್ವಾಧೀನ ಪಡಿಸಿಕೊಂಡ ನಂತರ ಆರ್ಥಿಕ ವಲಯದಲ್ಲೂ ಗಟ್ಟಿಯಾಗಿ ತಳವೂರಲು ಸಾಧ್ಯವಾಗಿದೆ ಹಾಗೂ 1.3 ಮಿಲಿಯನ್ ಸಾಲಗಾರರಿಗೆ ಸೇವೆಯನ್ನೊದಗಿಸುತ್ತಿದೆ ಎಂದು ತಿಳಿಸಿದ್ದಾರೆ.

2017 ರಲ್ಲಿ ಬಿಎಸ್‌ಎಸ್ ಮೈಕ್ರೊಫಿನಾನ್ಸ್ ಅನ್ನು ಯಶಸ್ವಿಯಾಗಿ ಸ್ವಾಧೀನ ಪಡಿಸಿಕೊಂಡ ನಂತರ ಆರ್ಥಿಕ ವಲಯದಲ್ಲೂ ಗಟ್ಟಿಯಾಗಿ ತಳವೂರಲು ಸಾಧ್ಯವಾಗಿದೆ ಹಾಗೂ 1.3 ಮಿಲಿಯನ್ ಸಾಲಗಾರರಿಗೆ ಸೇವೆಯನ್ನೊದಗಿಸುತ್ತಿದೆ ಎಂದು ತಿಳಿಸಿದ್ದಾರೆ.

2017 ರಲ್ಲಿ ಬಿಎಸ್‌ಎಸ್ ಮೈಕ್ರೊಫಿನಾನ್ಸ್ ಅನ್ನು ಯಶಸ್ವಿಯಾಗಿ ಸ್ವಾಧೀನ ಪಡಿಸಿಕೊಂಡ ನಂತರ ಆರ್ಥಿಕ ವಲಯದಲ್ಲೂ ಗಟ್ಟಿಯಾಗಿ ತಳವೂರಲು ಸಾಧ್ಯವಾಗಿದೆ ಹಾಗೂ 1.3 ಮಿಲಿಯನ್ ಸಾಲಗಾರರಿಗೆ ಸೇವೆಯನ್ನೊದಗಿಸುತ್ತಿದೆ ಎಂದು ತಿಳಿಸಿದ್ದಾರೆ.

  • News18 Kannada
  • 5-MIN READ
  • Last Updated :
  • New Delhi, India
  • Share this:

ಫಿನಾನ್ಸ್ ಕಂಪನಿಯಾದ (Finance Company) ಸೊನಾಟಾ ಫಿನಾನ್ಸ್‌ನ (SFPL) (Sonata Finance) 100% ಈಕ್ವಿಟಿ ಷೇರನ್ನು 537 ಕೋಟಿ ರೂ.ಗೆ ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಸ್ವಾಧೀನಪಡಿಸಿಕೊಳ್ಳಲಿದೆ. ಈ ಸ್ವಾಧೀನಪಡಿಸುವಿಕೆಯು ಖಾಸಗಿ ಬ್ಯಾಂಕ್‌ಗೆ (Private Bank) ಭರ್ಜರಿ ಲಾಭವನ್ನುಂಟು ಮಾಡಿದ್ದು 10 ರಾಜ್ಯಗಳಾದ್ಯಂತ 502 ಬ್ರ್ಯಾಂಚ್‌ಗಳನ್ನು ಸ್ಥಾಪಿಸಲು ಇದರೊಂದಿಗೆ ಹಾಗೂ 9 ಲಕ್ಷ  ಮಹಿಳಾ ಗ್ರಾಹಕರು ಬ್ಯಾಂಕ್‌ಗೆ ಸೇರ್ಪಡೆಗೊಳ್ಳುವ ಅವಕಾಶವನ್ನೊದಗಿಸಲಿದೆ ಎಂದು ವರದಿಯಾಗಿದೆ. ಸ್ವಾಧೀನದ ನಂತರ, ನಿಯಂತ್ರಕ ಮತ್ತು ಇತರ ಅನುಮೋದನೆಗಳನ್ನು ಪಡೆದ ನಂತರ SFPL ಬ್ಯಾಂಕಿನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರುತ್ತದೆ. ಈ ಸ್ವಾಧೀನಪಡಿಸುವಿಕೆಯು ನಮ್ಮ ವಿಸ್ತಾರ ದೃಷ್ಟಿ ಹಾಗೂ ತಂತ್ರಗಳೊಂದಿಗೆ ಹೊಂದಿಕೆಯಾಗುತ್ತಿದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಅಧ್ಯಕ್ಷರಾದ ಮನೀಶ್ ಕೊಠಾರಿ ಹೇಳಿದ್ದಾರೆ.


2017 ರಲ್ಲಿ ಬಿಎಸ್‌ಎಸ್ ಮೈಕ್ರೊಫಿನಾನ್ಸ್ ಅನ್ನು ಯಶಸ್ವಿಯಾಗಿ ಸ್ವಾಧೀನ ಪಡಿಸಿಕೊಂಡ ನಂತರ ಆರ್ಥಿಕ ವಲಯದಲ್ಲೂ ಗಟ್ಟಿಯಾಗಿ ತಳವೂರಲು ಸಾಧ್ಯವಾಗಿದೆ ಹಾಗೂ 1.3 ಮಿಲಿಯನ್ ಸಾಲಗಾರರಿಗೆ ಸೇವೆಯನ್ನೊದಗಿಸುತ್ತಿದೆ ಎಂದು ತಿಳಿಸಿದ್ದಾರೆ.


ಸಾಂದರ್ಭಿಕ ಚಿತ್ರ


ಈ ಸ್ವಾಧೀನಪಡಿಸುವಿಕೆಯು ಇನ್ನಷ್ಟು ಮಾರುಕಟ್ಟೆ ಒಳಹೊರಗನ್ನು ತಿಳಿಸುವ ವೇದಿಕೆಯಾಗಿ ಪರಿಣಾಮಕಾರಿಯಾಗಲಿದ್ದು ಗ್ರಾಹಕರಿಗೆ ಸುಗಮ ಮತ್ತು ಸ್ಥಿರವಾದ ರೀತಿಯಲ್ಲಿ ಸೇವೆ ಸಲ್ಲಿಸುವುದನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ ಹಾಗೂ ಅವರ ಅಗತ್ಯಗಳಿಗೂ ಮಹತ್ವ ನೀಡಿ ಇನ್ನಷ್ಟು ಉತ್ತಮವಾಗಿ ಸೇವೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದು ಮನೀಶ್ ಎಂದಿದ್ದಾರೆ.


537 ಕೋಟಿ ರೂಪಾಯಿಯ ಸ್ವಾಧೀನಪಡಿಸುವಿಕೆ


ಸ್ವಾಧೀನವು ಸರಿಸುಮಾರು 537 ಕೋಟಿ ರೂಪಾಯಿಗಳ ಒಟ್ಟಾರೆ ನಗದು ಪರಿಗಣನೆಯಾಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ವಹಿವಾಟು ನಿಯಂತ್ರಕ ಅನುಮೋದನೆಗಳನ್ನು ಪಡೆದ ನಂತರ ಸೊನಾಟಾ ಮೈಕ್ರೊ ಫಿನಾನ್ಸ್ ಬ್ಯಾಂಕ್‌ನಡಿಯಲ್ಲಿ ಕಾರ್ಯನಿರ್ವಹಿಸಲಿದೆ.


ಸೊನಾಟಾ ಸ್ವತ್ತು ಎಷ್ಟಿದೆ?


2,882 ಉದ್ಯೋಗಿಗಳನ್ನು ಹೊಂದಿರುವ SFPL 9 ಲಕ್ಷಕ್ಕೂ ಅಧಿಕ ಗ್ರಾಹಕರಿಗೆ ಸೇವೆಯನ್ನೊದಗಿಸುತ್ತಿದ್ದು  1,903 ಕೋಟಿ  ರೂ. ಸ್ವತ್ತು ಹೊಂದಿದೆ. ಭಾರತದ ಉತ್ತರ ರಾಜ್ಯಗಳಲ್ಲಿರುವ ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದಕ್ಕೆ ಸ್ವಾಧೀನಪಡಿಸುವಿಕೆಯ ಲಾಭವನ್ನು ಬಳಸಲು ಕೋಟಕ್ ಮಹೀಂದ್ರಾ ಯೋಜಿಸಿದೆ.


ದುರ್ಬಲ ಹಿಂದುಳಿದ ಕುಟುಂಬಗಳಿಗೆ ಆಧಾರ


ಆರ್ಥಿಕವಾಗಿ ದುರ್ಬಲ ಮತ್ತು ಹಿಂದುಳಿದ ಕುಟುಂಬಗಳಿಗೆ ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ರೀತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಕೋಟಕ್ ಬ್ಯಾಂಕ್ ಅನ್ನು ಆರ್ಥಿಕ ಸೇರ್ಪಡೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದಲ್ಲದೆ, ಇದು 500 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವುದರಿಂದ ಮತ್ತು 900,000 ಗ್ರಾಹಕರ ನೆಲೆಗೆ ಸೇವೆ ಸಲ್ಲಿಸುತ್ತಿರುವುದರಿಂದ ಇದು ಬ್ಯಾಂಕ್‌ಗಳ ಕಿರುಬಂಡವಾಳ ಜಾಲಕ್ಕೆ ಪೂರಕವಾಗಿದೆ ಎಂದು ನಿರೀಕ್ಷಿಸಲಾಗಿದೆ.


ಇದನ್ನೂ ಓದಿ: ನನ್ನ ಹೆಂಡತಿ 17 ರೂಪಾಯಿಯಲ್ಲಿ ಮನೆ ಮ್ಯಾನೇಜ್ ಮಾಡ್ತಾರೆ-ಇದ್ರಿಂದ್ಲೇ ನಾನಿನ್ನೂ ಕೆಲಸದಲ್ಲಿ ಇದ್ದೀನಿ- ಕೋಟಕ್ ಮಹೀಂದ್ರಾ AMC ನಿಲೇಶ್ ಶಾ


ಬ್ಯಾಂಕ್‌ನ ಸ್ವಂತ ವಿತರಣಾ ಹೆಜ್ಜೆಗುರುತು ಮತ್ತು ತಂತ್ರಜ್ಞಾನದ ಜೊತೆಗೆ ದಕ್ಷತೆಯ ಆರ್ಥಿಕತೆಯನ್ನೊದಗಿಸುವ ಈ ಒಪ್ಪಂದವು ಪ್ರಾರಂಭದಿಂದಲೂ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಸೊನಾಟಾದ ಗ್ರಾಹಕರ ನೆಲೆಗೆ ಬ್ಯಾಂಕಿಂಗ್ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ಒದಗಿಸುತ್ತದೆ.


ಮಹಿಳೆಯರಿಗೆ ಹೆಚ್ಚಿನ ನೆರವು


ಸೊನಾಟಾ ಫಿನಾನ್ಸ್ ತನ್ನ ನೋಂದಾಯಿತ ಕಚೇರಿಯನ್ನು ಲಕ್ನೋದಲ್ಲಿ ಹೊಂದಿದ್ದು ಜನವರಿ 2006 ರಲ್ಲಿ ಅನೂಪ್ ಕುಮಾರ್ ಸಿಂಗ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡು ಅದನ್ನು ನಾನ್ ಬ್ಯಾಂಕಿಂಗ್ ಫಿನಾನ್ಶಿಯಲ್ ಕಂಪನಿಯಾಗಿ 2013 ರಲ್ಲಿ ಮಾರ್ಪಡಿಸಿಕೊಂಡರು. ಸಮಾಜದ ದುರ್ಬಲ ವರ್ಗದವರಿಗೆ ವಿಶೇಷವಾಗಿ ಮಹಿಳೆಯರಿಗೆ ಸಂಸ್ಥೆಯು ಮೈಕ್ರೋ ಫೈನಾನ್ಸ್ ಸಾಲಗಳನ್ನು ಒದಗಿಸುತ್ತಿದೆ.




ಕಡಿಮೆ ಗ್ರಾಹಕರ ವಿಭಾಗಗಳಿಗೆ ಹಣಕಾಸು ಒದಗಿಸುವ ಕಂಪನಿಯ ಉದ್ದೇಶವು ದೊಡ್ಡ ಬ್ಯಾಂಕ್‌ನ ಆಶ್ರಯದಲ್ಲಿ ಇನ್ನಷ್ಟು ಪರಿಣಾಮಕಾರಿ ಹಾಗೂ ಸುಸ್ಥಿರ ರೀತಿಯಲ್ಲಿ ಸೇವೆ ಸಲ್ಲಿಸಲು ಅರ್ಹವನ್ನಾಗಿಸುತ್ತದೆ ಎಂದು ಸೋನಾಟಾದ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುಪ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Published by:Monika N
First published: