ಇವತ್ತು ಆಹಾರೋದ್ಯಮ ಎಂಬುದು ಸುಲಭವಾದ ಕ್ಷೇತ್ರವಲ್ಲ. ಗ್ರಾಹಕ ಪ್ರತಿ ವಸ್ತುವಿನ ಎಕ್ಸ್ಪೈರಿ ಡೇಟ್ (Expiration Date) ನೋಡುತ್ತಾನೆ. ಅದರ ವಿವರ ತಿಳಿಯುತ್ತಾನೆ. ಬೇಡವೆಂದರೆ ಸುಲಭದಲ್ಲಿ ರಿಜೆಕ್ಟ್ ಮಾಡುತ್ತಾನೆ. ಹೀಗೆ ತಿರಸ್ಕರಿಸಲ್ಪಟ್ಟ ಆಹಾರವು (Food) ನಿಧಾನಕ್ಕೆ ಭೂಮಿ ಸೇರಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದಕ್ಕಿರೋ ಪರಿಹಾರವೇನು? ಇದನ್ನು ನಿಭಾಯಿಸುವುದು ಹೇಗೆ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಕೊಲ್ಕತ್ತಾದ ಮಿಲಿಂದ್ ಷಾ ಅವರು ಎಫ್ಎಮ್ಸಿಜಿ ವಲಯದಲ್ಲಿ ನಷ್ಟದ ಸಮಸ್ಯೆ ಪರಿಹರಿಸಲು ಗೌರಾ ಸಂಸ್ಥೆಯನ್ನು (Organisation) ಸ್ಥಾಪಿಸಿದ್ದಾರೆ. ಆ ಮೂಲಕ ಎಕ್ಸ್ಪೈರಿ ಡೇಟ್ ತಲುಪುತ್ತಿರುವ, ಹಾನಿಗೊಳಗಾದ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.
ಇದರಿಂದ ಬಹುತೇಕ ಉತ್ಪನ್ನಗಳು ಭೂಮಿಯೊಳಗೆ ತ್ಯಾಜ್ಯವಾಗಿ ಹೊರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಆ ಮೂಲಕ ಆಹಾರ ಯಾರಿಗೂ ಕಾಯದೇ ಹಸಿದವರನ್ನು ಸೇರುತ್ತಿದೆ. ಒಂದೆಡೆ ಹಸಿವು ಮುಕ್ತ, ಮತ್ತೊಂದೆಡೆ ಪರಿಸರ ಸಂರಕ್ಷಣೆಗೆ ಮಿಲಿಂದ್ ಕಾರಣರಾಗಿದ್ದಾರೆ.
ಆಹಾರ ತ್ಯಾಜ್ಯವಾಗಿ ಭೂಮಿ ಸೇರುತ್ತಿದೆ
29 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಮಿಲಿಂದ್ ಶಾ ಕುಟುಂಬ ಕೊಲ್ಕಾತ್ತಾದಲ್ಲಿ ವಿತರಣೆಯ ವ್ಯಾಪಾರವನ್ನು ನಡೆಸುತ್ತಿದೆ. ಇದರಲ್ಲಿ ಸಾಕಷ್ಟು ಉತ್ಪನ್ನಗಳು ಹಲವಾರು ಕಾರಣಗಳಿಂದ ನಿರಾಕರಣೆಗೆ ಒಳಪಡುತ್ತವೆ.
ಈ ರೀತಿಯಾಗಿ ಪೂರೈಕೆ ಸರಪಳಿಯ ಅಸಮರ್ಪಕ ನಿರ್ವಹಣೆಯಿಂದ ಪ್ರತಿವರ್ಷ 69 ಮಿಲಿಯನ್ ಟನ್ ಆಹಾರ ತ್ಯಾಜ್ಯ ಭೂಮಿ ಸೇರುತ್ತಿದೆ ಎನ್ನುವ ಅಂಶವನ್ನು ಸಂಶೋಧನೆಗಳಿಂದ ತಿಳಿದುಕೊಂಡರು ಮಿಲಿಂದ್.
ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಜನರಿಗೆ ಮತ್ತೆ ಶಾಕ್: ಪೆಟ್ರೋಲ್ ಬೆಲೆ ಮತ್ತೆ ₹10 ಹೆಚ್ಚಿಸಿದ ಪಾಕ್!
ಇನ್ನೊಂದೆಡೆ ಆಹಾರವಿಲ್ಲದೆ ಹಸಿವಿನಿಂದ ಇರುವವರು ಸಮಸ್ಯೆ ಬಗ್ಗೆ ಮಿಲಿಂದ್ ಅವರಿಗೆ ಅರಿವಿತ್ತು. ಇದಕ್ಕೆ ಪರಿಹಾರ ಹುಡುಕಲು ಕುಟುಂಬದ ಸದಸ್ಯರೊಟ್ಟಿಗೆ ಚರ್ಚಿಸಿದ್ದರು. ಈ ನಿಟ್ಟಿನಲ್ಲಿ ವಿತರಣಾ ಉದ್ಯಮದಲ್ಲಿ ತಮ್ಮ ತಂದೆ ಮತ್ತು ಸಹೋದರನೊಟ್ಟಿಗೆ ತಾವು ಸೇರ್ಪಡೆಯಾದರು.
ಶೇಕಡಾ 10 ರಷ್ಟ ಉತ್ಪನ್ನ ವ್ಯರ್ಥ
ವಿತರಿಕರಿಂದ ವ್ಯಾಪಾರಿಗಳಿಗೆ ಆಹಾರ ಉತ್ಪನ್ನವನ್ನು ತಲುಪಿಸುವಾಗ ಸಂಗ್ರಹಿಸುವ ಆಹಾರ ಉತ್ಪನ್ನದ ಶೆಲ್ಫ್ ಲೈಫ್ ಶೇಕಡಾ 50 ರಷ್ಟಿರಬೇಕು. ಅಂದ್ರೆ 'ಉತ್ಪನ್ನವನ್ನು ರಿಟೇಲರ್ ನಮ್ಮಿಂದ ತೆಗೆದುಕೊಳ್ಳುವಾಗ 2 ವರ್ಷ ಶೆಲ್ಫ್ ಜೀವಿತಾವಧಿಯೂ 2 ವರ್ಷವಿದ್ದರೆ, ಕಡೆ ಪಕ್ಷ 1 ವರ್ಷವಾದರೂ ಅದರ ಶೆಲ್ಫ್ ಇರುವಾಗ ತೆಗೆದುಕೊಳ್ಳಬೇಕು.
ಇಲ್ಲವಾದಲ್ಲಿ ಇದನ್ನು ನಿರಾಕರಿಸಲಾಗುತ್ತದೆ. ಈ ರೀತಿ ಶೇಕಡಾ 10 ರಷ್ಟ ಉತ್ಪನ್ನಗಳು ನಿರಾಕರಿಸಲ್ಪಡುತ್ತವೆ. ಈ ರೀತಿ ಆಹಾರ ಉತ್ಪನ್ನಗಳು ತ್ಯಾಜ್ಯವಾಗಿ ಪರಿವರ್ತನೆ ಹೊಂದುತ್ತವೆ' ಎನ್ನುತ್ತಾರೆ ಮಿಲಿಂದ್.
ಮಕ್ಕಳ ಆಹಾರ ಉತ್ಪನ್ನಕ್ಕೆ ಬೇಡಿಕೆ
ಈ ನಿಟ್ಟಿನಲ್ಲಿ ಮಕ್ಕಳ ಆಹಾರ ಉತ್ಪನ್ನಗಳು ಹೆಚ್ಚು ರಿಜೆಕ್ಟ್ ಆಗುತ್ತವೆ. 400 ಗ್ರಾಂಗೆ 800 ರೂ ಇರುವ ಈ ಉತ್ಪನ್ನ ವ್ಯರ್ಥವಾಗಿ ಭೂಮಿಗೆ ಸೇರುತ್ತಿದೆ. ಜೊತೆಗೆ ಇನ್ನೊಂದೆಡೆ ಮಕ್ಕಳು ಹಸಿವಿನಿಂದ ನರಳುತ್ತಿದ್ದಾರೆ. ಈ ಘಟನೆ ಮಿಲಿಂದ್ ಅವರಿಗೆ ಗೌರಾ ಆರಂಭಿಸಲು ಹಾದಿ ಮಾಡಿಕೊಟ್ಟಿತು.
ಗೌರಾದ ಕಾಳಜಿ
ಹೀಗೆ ತಿರಸ್ಕರಿಸಲ್ಪಟ್ಟ 2500 ಯುನಿಟ್ಗಳ ವಿವಿಧ ಎಫ್ಎಂಸಿಜಿ ಉತ್ಪನ್ನಗಳನ್ನು 30 ಕ್ಕೂ ಹೆಚ್ಚಿನ ಜನರು ಗೌರಾ ವೇದಿಕೆ ಮೂಲಕ ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: Cadbury Bournvita ಬಗ್ಗೆ ತಪ್ಪು ಮಾಹಿತಿ ರವಾನೆ- ಇನ್ಫ್ಲೂಯೆನ್ಸರ್ ರೇವಂತ್ಗೆ ಲೀಗಲ್ ನೋಟೀಸ್
ಹೀಗೆ ವ್ಯಾಪಾರಿಗಳಿಂದ ತಿರಸ್ಕರಿಸಲ್ಪಟ್ಟ ಉತ್ಪನ್ನಳು ಗೌರಾ ಅವರ ಗೋದಾಮಿನಲ್ಲಿ ಸಂಗ್ರಹವಾಗಿರುತ್ತದೆ. ಆ ನಂತರ 30 ರಿಂದ 50 ಪರ್ಸೆಂಟ್ವರೆಗೆ ರಿಯಾಯಿತಿಯನ್ನು ಉತ್ಪನ್ನಗಳ ಮೇಲೆ ನೀಡಲಾಗುತ್ತದೆ.
ಸ್ವಲ್ಪ ಡಿಫೆಕ್ಟ್ ಆದ, ಕಡಿಮೆ ಅವಧಿಯಲ್ಲಿ ಮುಕ್ತಾಯದ ದಿನಾಂಕ ಹೊಂದಿರುವ ಪ್ರಾಡಕ್ಟ್ಗಳು ಆನ್ಲೈನ್ನಲ್ಲಿ ಲಭ್ಯವಿದೆ. ಉಚಿತ ಶಿಪ್ಪಿಂಗ್, ಸುಲಭದಲ್ಲಿ ರಿಟರ್ನ್ ಅಲ್ಲದೇ ಕ್ಯಾಶ್ ಆನ್ ಡೆಲಿವರಿ ಸೌಲಭ್ಯವೂ ಇದೆ.
ವಿದೇಶದಲ್ಲಿ ಇದೆ ಈ ಪದ್ಧತಿ
ಈ ರೀತಿ ತಿರಸ್ಕರಿಸಲ್ಪಟ್ಟ ಉತ್ತನ್ನಗಳನ್ನು ವಿದೇಶದಲ್ಲಿ ಏನು ಮಾಡುತ್ತಾರೆ ಎನ್ನುವುದು ಮಿಲಿಂದ್ ಅವರಿಗೆ ಕುತೂಹಲ ಹುಟ್ಟಿಸಿತು. ಅಮೆರಿಕಾದಲ್ಲಿ ಎಫ್ಎಂಸಿಜಿ ಮಾತ್ರವಲ್ಲ ರೆಸ್ಟೊರೆಂಟ್ ಮತ್ತು ಬೇಕರಿಗಳಲ್ಲಿ ಉಳಿದ ಉತ್ಪನ್ನವನ್ನು ಸಹ ರಿಯಾಯಿತಿ ದರದಲ್ಲಿ ಆನ್ಲೈನ್ನಲ್ಲಿ ಮಾರಾಟಕ್ಕಿಡುತ್ತಾರೆ ಎನ್ನುವುದು ಅರಿವಿಗೆ ಬಂದಿತು. ಇದರ ಪ್ರೇರಣೆಯಿಂದಲೇ ಗೌರಾವನ್ನು ಸ್ಥಾಪಿಸಲಾಯಿತು.
ಆನ್ಲೈನ್ ಮಾರಾಟ
ಹಿಂದೂಸ್ತಾನ್ ಯೂನಿಲಿವರ್, ಹಲ್ದಿರಾಮ್ ಮುಂತಾದ ಉತ್ಪನ್ನವು ಫ್ಲಿಪ್ಕಾರ್ಟ್, ಅಮೆಜಾನ್, ಸ್ವಿಗ್ಗಿ, ಇನ್ಸ್ಟಾ ಮಾರ್ಟ್ನಂತಹ ಈ ಕಾಮರ್ಸ್ನಲ್ಲಿ ಲಭ್ಯವಿದೆ.
ಅಷ್ಟಕ್ಕೂ ಗೌರಾ ಪ್ರಾರಂಭಿಸಿದಾಗ ಆರಂಭದಲ್ಲಿ ಜನರನ್ನು ಒಪ್ಪಿಸುವುದು ಕಷ್ಟವಾಗಿತ್ತು. ಕಡಿಮೆ ಅವಧಿಯ ಉತ್ಪನ್ನಗಳು ಎಂದು ಜನರು ರಾಜಿ ಮಾಡಿಕೊಳ್ಳಲು ಮುಂದಾಗಲಿಲ್ಲಎನ್ನುತ್ತಾರೆ ಮಿಲಿಂದ್.
ದೀಪಾವಳಿ ನಂತರ ಉಳಿದುಕೊಂಡಿದ್ದ ಸೋಹನ್ ಪಾಪಡಿಯೂ ಕಡಿಮೆ ಶೆಲ್ಫ್ ಲೈಫ್ ಹೊಂದಿತ್ತು. ಆದರೆ ಇದಕ್ಕೆ 55 ರಷ್ಟು ರಿಯಾಯಿತಿ ಘೋಷಿಸಿದ ಕೂಡಲೇ ಬೇಗನೇ ಮಾರಾಟವಾದ ಉದಾಹರಣೆಯನ್ನು ವಿವರಿಸುತ್ತಾರೆ ಮಿಲಿಂದ್.
ಇತರೆ ಉತ್ಪನ್ನ
ಅಲ್ಲದೇ ಜ್ಯೂಸ್, ಕಾರ್ನ್ಫ್ಲೇಕ್ ಬ್ರ್ಯಾಂಡ್, ವಾಷಿಂಗ್ ಪೌಡರ್, ಗ್ರೂಮಿಂಗ್ ಉತ್ಪನ್ನಗಳು , ಸೌಂದರ್ಯವರ್ಧಕದಂತಹ ಅನೇಕ ವಸ್ತುಗಳು ಗೌರಾದಲ್ಲಿ ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ