ನೀವು Personal Loan ತೆಗೆದುಕೊಳ್ಳಬೇಕು ಅಂತ ಪ್ಲ್ಯಾನ್ ಮಾಡ್ತಾ ಇದ್ದೀರಾ? ಹಾಗಿದ್ರೆ ಈ ಬ್ಯಾಂಕುಗಳ ಇಂಟರೆಸ್ಟ್ ರೇಟ್ ಎಷ್ಟಿದೆ ನೋಡಿ

ನಿವೇನಾದರೂ ಈಗ ಬ್ಯಾಂಕುಗಳಿಂದ ವೈಯುಕ್ತಿಕ ಸಾಲವನ್ನು ತೆಗೆದುಕೊಳ್ಳಲು ಆಲೋಚಿಸುತ್ತಿದ್ದರೆ, ಮೊದಲು ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಈ ಐದು ಬ್ಯಾಂಕ್ ಗಳ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರಗಳ ಹೋಲಿಕೆ ಮಾಡಿ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) (RBI) ತನ್ನ ಪ್ರಮುಖ ರೆಪೋ ದರವನ್ನು ಹೆಚ್ಚಿಸಿದ ನಂತರ ಅನೇಕ ಬ್ಯಾಂಕುಗಳು ಸಹ ತಮ್ಮ ಬಡ್ಡಿದರಗಳನ್ನು (Interest Rate) ಹೆಚ್ಚಿಸುತ್ತಿವೆ ಎಂಬ ಸುದ್ದಿ ನಮಗೆ ಈಗಾಗಲೇ ತಿಳಿದಿದೆ. ಕಳೆದ ವಾರಗಳಲ್ಲಿ ಹಲವಾರು ಸಾಲದಾತರು (Loan) ಈಗಾಗಲೇ ತಮ್ಮ ಬಡ್ಡಿದರಗಳನ್ನು ಪರಿಷ್ಕರಿಸಿರುವುದರಿಂದ ಸಾಲಗಳು ಸಹ ದುಬಾರಿಯಾಗುತ್ತಿವೆ ಎಂದು ಹೇಳಬಹುದು. ನಿವೇನಾದರೂ ಈಗ ಬ್ಯಾಂಕುಗಳಿಂದ ವೈಯುಕ್ತಿಕ ಸಾಲವನ್ನು (Personal Loan) ತೆಗೆದುಕೊಳ್ಳಲು ಆಲೋಚಿಸುತ್ತಿದ್ದರೆ, ಮೊದಲು ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಈ ಐದು ಬ್ಯಾಂಕ್ ಗಳ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರಗಳ ಹೋಲಿಕೆ ಮಾಡಿ ನೋಡಿ.

ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಸ್ತುತ ವಾರ್ಷಿಕ 8.80 ರಿಂದ 15.35 ಪ್ರತಿಶತದಷ್ಟು ಬಡ್ಡಿದರದಲ್ಲಿ ವೈಯಕ್ತಿಕ ಸಾಲಗಳನ್ನು ನೀಡುತ್ತಿದೆ. 5 ಲಕ್ಷ ರೂಪಾಯಿ ಸಾಲವನ್ನು ನೀವು ತೆಗೆದುಕೊಂಡರೆ ಮಾಸಿಕ ಕಂತು ಐದು ವರ್ಷಗಳ ಅವಧಿಗೆ 10,331 ರಿಂದ 11,987 ರೂಪಾಯಿ ಆಗುತ್ತದೆ. ಇದಲ್ಲದೆ, ಸಂಸ್ಕರಣಾ ಶುಲ್ಕವನ್ನು (ಒಟ್ಟು ಸಾಲದ ಮೊತ್ತದ ಶೇಕಡಾವಾರು) ಸಹ ವಿಧಿಸಲಾಗುತ್ತದೆ. ಪಿಎನ್‌ಬಿ ಶೇಕಡಾ 1 ರವರೆಗೆ ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತದೆ.

ಇದನ್ನೂ ಓದಿ: Stock Market: ಹೂಡಿಕೆದಾರರ ಮೇಲೆ ಹಣದ ಮಳೆಯೇ ಸುರಿಸಿದ ಕಂಪನಿ; ಒಂದು ವರ್ಷದಲ್ಲಿ ಶೇ.640ರಷ್ಟು ಲಾಭ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಇನ್ನೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಶೇಕಡಾ 9.80 ರಿಂದ 13.80 ರಷ್ಟು ಬಡ್ಡಿದರದಲ್ಲಿ ವೈಯಕ್ತಿಕ ಸಾಲಗಳನ್ನು ನೀಡುತ್ತಿದೆ. ಇದರ ಪ್ರಕಾರ 5 ಲಕ್ಷ ರೂಪಾಯಿಯ ಸಾಲದ ಮೇಲೆ, ಇಎಂಐ ಐದು ವರ್ಷಗಳವರೆಗೆ 10,574 ದಿಂದ 11,582 ರೂಪಾಯಿಯಾಗುತ್ತದೆ. ಎಸ್‌ಬಿಐ ಶೇಕಡಾ 1.5 ರಷ್ಟು ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತದೆ.

ಬ್ಯಾಂಕ್ ಆಫ್ ಬರೋಡಾ
ಬ್ಯಾಂಕ್ ಆಫ್ ಬರೋಡಾ ವೈಯಕ್ತಿಕ ಸಾಲದ ಮೇಲೆ ವಾರ್ಷಿಕ 9.20 ರಿಂದ 16.55 ಪ್ರತಿಶತದಷ್ಟು ಬಡ್ಡಿದರವನ್ನು ಹೊಂದಿದೆ. 5 ಲಕ್ಷ ರೂಪಾಯಿಯ ವೈಯಕ್ತಿಕ ಸಾಲವನ್ನು ತೆಗೆದುಕೊಂಡರೆ, ನಿಮಗೆ ನೀಡಲಾಗುವ ಬಡ್ಡಿದರವನ್ನು ಅವಲಂಬಿಸಿ, ನಿಮ್ಮ ಇಎಂಐ ತಿಂಗಳಿಗೆ ಸುಮಾರು 10,428 ದಿಂದ 12,306 ರೂಪಾಯಿಯಾಗುತ್ತದೆ. ಇದಲ್ಲದೆ, ಒಟ್ಟು ಸಾಲದ ಶೇಕಡಾ 2 ರಷ್ಟು ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ
ಬ್ಯಾಂಕ್ ಆಫ್ ಮಹಾರಾಷ್ಟ್ರವು ವೈಯಕ್ತಿಕ ಸಾಲಗಳ ಮೇಲೆ ಶೇಕಡಾ 9.35 ರಿಂದ ಶೇಕಡಾ 13.70 ರವರೆಗೆ ಬಡ್ಡಿದರಗಳನ್ನು ನೀಡುತ್ತದೆ. 5 ಲಕ್ಷ ರೂಪಾಯಿ ವೈಯಕ್ತಿಕ ಸಾಲದ ಮೇಲೆ, ಇಎಂಐ ಐದು ವರ್ಷಗಳವರೆಗೆ ಸುಮಾರು 10,464 ದಿಂದ 11,557 ರೂಪಾಯಿಯಾಗುತ್ತದೆ. ಬ್ಯಾಂಕ್ ಆಫ್ ಮಹಾರಾಷ್ಟ್ರವು ಸಾಲದ ಮೇಲೆ ಶೇಕಡಾ 1 ರಷ್ಟು ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಈ ಎಲ್ಲಾ ಐದು ಬ್ಯಾಂಕುಗಳಲ್ಲಿ ಅತ್ಯಧಿಕ ಬಡ್ಡಿಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿಧಿಸುತ್ತದೆ. ಇದು ವೈಯಕ್ತಿಕ ಸಾಲಗಳ ಮೇಲೆ ವಾರ್ಷಿಕ 9.8 ರಿಂದ 13.9 ಪ್ರತಿಶತದಷ್ಟು ಬಡ್ಡಿಯನ್ನು ವಿಧಿಸುತ್ತದೆ. 5 ಲಕ್ಷ ರೂಪಾಯಿ ವೈಯುಕ್ತಿಕ ಸಾಲದ ಮೇಲೆ 10,574 ದಿಂದ 11,608 ರೂಪಾಯಿಗಳ ಇಎಂಐ ಅನ್ನು ಐದು ವರ್ಷಗಳವರೆಗೆ ಪಾವತಿಸಬೇಕಾಗುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಹ ಸಾಲದ ಮೇಲೆ ಶೇಕಡಾ 1 ರಷ್ಟು ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತದೆ.

ಇದನ್ನೂ ಓದಿ: Multibagger Stock: ಒಂದು ಕಾಲದಲ್ಲಿ 1 ರೂಪಾಯಿ ಇದ್ದ ಶೇರಿನ ಬೆಲೆ ಈಗ ಲಕ್ಷ ; ಶೇರುದಾರರಿಗೆ 21 ಕೋಟಿ ಲಾಭ

ಆದರೆ ಇಲ್ಲಿ ಗಮನಿಸಬೇಕಾದಂತಹ ಒಂದು ವಿಷಯವೆಂದರೆ ಲಿಂಗ, ವಯಸ್ಸು ಮತ್ತು ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿ, ನೀಡಲಾಗುವ ಬಡ್ಡಿದರವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವಾರು ಸಾಲದಾತರು ಇತ್ತೀಚೆಗೆ ಠೇವಣಿಗಳು ಮತ್ತು ಸಾಲಗಳೆರಡಕ್ಕೂ ತಮ್ಮ ಬಡ್ಡಿದರಗಳನ್ನು ಹೆಚ್ಚಿಸಿದ್ದಾರೆ.
Published by:Ashwini Prabhu
First published: