ATM problem: ಅಕೌಂಟ್​ನಿಂದ ಹಣ ಕಟ್ ಆದರೂ ಎಟಿಎಂನಿಂದ ಕ್ಯಾಷ್ ಬರಲಿಲ್ಲವಾ? ಹೀಗೆ ಮಾಡಿ

ಎಟಿಎಂನಲ್ಲಿ ಕಾರ್ಡ್ ಹಾಕಿ ವಹಿವಾಟು ನಡೆಸಿದ ಬಳಿಕ ನಿಮ್ಮ ಅಕೌಂಟ್​ನಿಂದ ಹಣ ಕಡಿತವಾದರೂ ಮೆಷೀನ್​ನಿಂದ ಹಣ ಬರದೇ ಹೋದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ..

ಎಟಿಎಂ ವಹಿವಾಟು

ಎಟಿಎಂ ವಹಿವಾಟು

 • News18
 • Last Updated :
 • Share this:
  ಈಗ ಹೆಚ್ಚಿನ ಹಣದ ವಹಿವಾಟು ಆನ್​ಲೈನ್ (Money transaction through online) ಮೂಲಕವೇ ಆಗುತ್ತದೆ. ಇದರ ಮಧ್ಯೆ ಬ್ಯಾಂಕ್ ಮತ್ತು ಎಟಿಎಂ (ATMs) ಮೂಲಕ ಹಣದ ವಹಿವಾಟು ನಡೆಯುವುದು ನಿಂತಿಲ್ಲ. ಕೆಲ ವಹಿವಾಟಿಗೆ ಕ್ಯಾಷ್ ಅನಿವಾರ್ಯವಾದ್ದರಿಂದ ಎಟಿಎಂಗಳಿಗೆ ಡಿಮ್ಯಾಂಡ್ ತಕ್ಕಮಟ್ಟಿಗೆ ಮುಂದುವರಿದೇ ಇದೆ. ಎಟಿಎಂಗಳಲ್ಲಿ ಕ್ಯಾಷ್ ಪಡೆಯುವ ಕೆಲಸ ಬಹಳ ಸುಲಭವಾದರೂ ಕೆಲವೊಮ್ಮೆ ತಾಂತ್ರಿಕ ಕಾರಣಕ್ಕೆ ಸಮಸ್ಯೆಗಳಾಗುವುದು ಉಂಟು. ಆದರೆ, ಇವು ಬಹಳ ಅಪರೂಪಕ್ಕೆ ಆಗುವ ಸಮಸ್ಯೆ. ಇಂಥ ಸಮಸ್ಯೆ ಬಂದರೆ ಏನು ಮಾಡಬೇಕು, ಹೇಗೆ ನಿರ್ವಹಿಸಬೇಕು ಎಂಬುದು ನಿಮಗೆ ಗೊತ್ತಿದ್ದರೆ ನಿಶ್ಚಿಂತೆಯಿಂದ ಎಟಿಎಂ ಸೇವೆ ಪಡೆಯಬಹುದು.

  ಎಟಿಎಂ ಬಳಕೆ ಮಾಡುವಾಗ ಸಾಮಾನ್ಯವಾಗಿ ಈ ಮುಂದಿನ ಸಮಸ್ಯೆಗಳು ತಲೆದೋರಬಹುದು. ತಾಂತ್ರಿಕ ಸಮಸ್ಯೆಯಿಂದ ವಹಿವಾಟು ನಿರಾಕರಣೆ (Transaction Declined) ಆಗಬಹುದು. ಅಥವಾ ಎಟಿಎಂಗಳಲ್ಲಿ ಕ್ಯಾಷ್ ಮುಗಿದಿರಬಹುದು.

  ಅಕೌಂಟ್​ನಿಂದ ಹಣ ಮುರಿದರೂ ಎಟಿಎಂನಿಂದ ಕ್ಯಾಷ್ ಬರದೇ ಹೋದರೆ?

  ಇನ್ನೂ ಅಪರೂಪಕ್ಕೆ ಕಾಣಿಸುವ ಸಮಸ್ಯೆ ಎಂದರೆ, ಎಟಿಎಂನಲ್ಲಿ ನೀವು ಕಾರ್ಡ್ ಇಟ್ಟು ಟ್ರಾನ್ಸಾಕ್ಷನ್ ಮಾಡಿದಾಗ ಅಕೌಂಟ್​ನಿಂದ ನಿಮ್ಮ ಹಣ ಕಟ್ ಆಗುತ್ತದೆ. ಬ್ಯಾಂಕ್​ನಿಂದ ಅದರ ಮೆಸೇಜ್ ಕೂಡ ಬಂದಿರುತ್ತದೆ. ಆದರೆ, ಎಟಿಎಂ ಮೆಷೀನ್​ನಿಂದ ಆ ನಿಗದಿತ ಹಣದ ಕ್ಯಾಷ್ ಬರುವುದಿಲ್ಲ. ಆಗ ಏನು ಮಾಡಬೇಕು?

  ಈ ರೀತಿಯ ಸಮಸ್ಯೆಗೆ ಎರಡು ಕಾರಣ ಇರಬಹುದು. ತಾಂತ್ರಿಕ ಸಮಸ್ಯೆ ಅಥವಾ ವಂಚಕರ ಚಿತಾವಣೆಯಿಂದ ಇಂತಹ ಘಟನೆಗಳು ತಲೆದೋರಬಹುದು.

  ಇದನ್ನೂ ಓದಿ: Post Office: ಹೊಸ ವರ್ಷಕ್ಕೆ IPBP ಗ್ರಾಹಕರಿಗೆ ಶಾಕ್, 10,000 ಮೀರಿದ ಠೇವಣಿ ಶುಲ್ಕ

  ಬ್ಯಾಂಕುಗಳು ತಮ್ಮ ಎಟಿಎಂಗಳನ್ನ ಸಾಮಾನ್ಯವಾಗಿ ನಿಯಮಿತವಾಗಿ ತಪಾಸಿಸುತ್ತವೆ. ತಾಂತ್ರಿಕ ವೈಫಲ್ಯದಿಂದ ನಿಮ್ಮ ಹಣ ಕಟ್ ಆಗಿದ್ದರೆ ಬ್ಯಾಂಕುಗಳು ಕೆಲ ನಿರ್ದಿಷ್ಟ ದಿನಗಳ ಬಳಿಕ ಆ ಹಣವನ್ನು ನಿಮ್ಮ ಅಕೌಂಟ್​ಗೆ ವಾಪಸ್ ಹಾಕುತ್ತವೆ. ಇಂಥ ತಾಂತ್ರಿಕ ಸಮಸ್ಯೆಯಿಂದ ಹಣ ಮುರಿದುಹೋಗಿದ್ದರೆ ಆ ಬಗ್ಗೆ ಬ್ಯಾಂಕ್​ನಿಂದ ನಿಮಗೆ ನೋಟಿಫಿಕೇಶನ್ ಮೆಸೇಜ್ ಬರುತ್ತದೆ. ಅಂಥ ಮೆಸೇಜ್ ಬರದೇ ಇದ್ದರೆ ನೀವು ನಿಮ್ಮ ಟ್ರಾನ್ಸಾಕ್ಷನ್ ಸ್ಟೇಟ್ಮೆಂಟ್ ತೆಗೆದುಕೊಂಡು ಬ್ಯಾಂಕನ್ನ ಸಂಪರ್ಕಿಸಬಹುದು.

  ವಂಚಕರ ಜಾಲ:

  ಇನ್ನು, ಮತ್ತೊಂದು ಪ್ರಮುಖ ಕಾರಣ ಇರುವುದು ವಂಚಕರ ಸ್ಕಿಮಿಂಗ್ ತಂತ್ರ. ಎಟಿಎಂ ಮೆಷೀನ್​ನ ಕಾರ್ಡ್ ರೀಡರ್​ನಲ್ಲಿ ವಂಚಕರು ಸ್ಕಿಮ್ಮರ್ (Skimmer Device) ಸಾಧನವನ್ನು ಅಳವಡಿಸಿದ್ದಿರಬಹುದು. ಈ ಸ್ಕಿಮ್ಮರ್ ಸಾಧನವು ನಿಮ್ಮ ಎಟಿಎಂ ಕಾರ್ಡ್​ನಲ್ಲಿರುವ ಎಲ್ಲಾ ಮಾಹಿತಿಯನ್ನ ಕದಿಯಬಲ್ಲುದು. ನಿಮ್ಮ ಕಾರ್ಡ್ ರೀತಿಯಲ್ಲೇ ಅದೇ ನಂಬರ್ ಎಲ್ಲವೂ ಒಳಗೊಂಡಿರುವ ತದ್ರೂಪಿ ಕಾರ್ಡ್ (Clone Card) ತಯಾರಿಸಿ ಪಿನ್ ನಂಬರ್ ಬಳಸಿ ವಂಚಕರು ಹಣ ಡ್ರಾ ಮಾಡಿಕೊಂಡಿರುವ ಸಾಧ್ಯತೆ ಇರುತ್ತದೆ.

  ಇಂಥ ಸಂದರ್ಭದಲ್ಲಿ ನೀವು ಬ್ಯಾಂಕ್​ನ ಕಸ್ಟಮರ್ ಸರ್ವಿಸ್ ವಿಭಾಗದವರನ್ನ ಸಂಪರ್ಕಿಸಿ ದೂರು ದಾಖಲಿಸಬೇಕು. ನೀವು ದೂರು ಕೊಟ್ಟು ಏಳು ದಿನದಲ್ಲಿ ನಿಮ್ಮ ಹಣ ನಿಮ್ಮ ಅಕೌಂಟ್​ಗೆ ಬಂದು ಬೀಳುತ್ತದೆ. ಒಂದು ವೇಳೆ ವಿಳಂಬವಾದರೆ ದಿನಕ್ಕೆ ನೂರು ರೂಪಾಯಿಯಂತೆ ಬ್ಯಾಂಕ್​ನವರು ನಿಮಗೆ ಲೇಟ್ ಪೇಮೆಂಟ್ ದಂಡವನ್ನ ಪಾವತಿಸಬೇಕಾಗುತ್ತದೆ.

  ಇದನ್ನೂ ಓದಿ: PM Kisan Yojana: ಇನ್ನೂ ಯಾಕೆ ಜಮೆ ಆಗಿಲ್ಲ ರೈತರ ಖಾತೆಗೆ 10ನೇ ಕಂತು? ಅಕೌಂಟಿಗೆ ಹಣ ಯಾವಾಗ ಬರುತ್ತೆ?

  ದೊಡ್ಡ ಮೊತ್ತ ನಿಮ್ಮ ಅಕೌಂಟ್​ನಿಂದ ಮುರಿದುಹೋಗಿದ್ದರೆ ನೀವು ಬ್ಯಾಂಕ್​ನ ಬ್ರ್ಯಾಂಚ್ ಮ್ಯಾನೇಜರ್ ಅವರನ್ನೇ ನೇರವಾಗಿ ಸಂಪರ್ಕಸಿ ದೂರು ಕೊಡಬಹುದು. ಅವರ ಮೂಲಕ ಕ್ರಮವಾದರೆ ಬೇಗ ಕೆಲಸ ಆಗಬಹುದು.

  ಆರ್​ಬಿಐ ಸಂಪರ್ಕಿಸಬಹುದು:

  ನಿಮಗೆ ಮೇಲಿನ ಎರಡು ಮಾರ್ಗಗಳ ಮೂಲಕ ಕೆಲಸ ಆಗಲಿಲ್ಲವೆಂದರೆ ಆರ್​ಬಿಐ ಅಥವಾ ಬೇರೆ ಹಣಕಾಸು ವಿಭಾಗದ ಅಧಿಕಾರಿಗಳನ್ನ ಸಂಪರ್ಕಿಸಿ ಲಿಖಿತವಾಗಿ ದೂರು ಕೊಡಬಹುದು. ಇಂಟರ್ನೆಟ್ ಮೂಲಕವೇ ನೀವು ಸಂಪರ್ಕಿಸಬಹುದು. ಈ ರೀತಿ ಆದಲ್ಲಿ ನೀವು ದೂರು ಕೊಟ್ಟು 30 ದಿನಗಳವರೆಗೆ ಕಾಯಬೇಕಾಗಬಹುದು.
  Published by:Vijayasarthy SN
  First published: