2022ರಲ್ಲಿ ನೀವು ತಿಳಿದುಕೊಳ್ಳಬೇಕಾದ 10 ಸುಧಾರಿತ ಕ್ರಿಪ್ಟೊ ಪರಿಭಾಷೆಗಳು

ಹಲವು ಸುಧಾರಿತ ಕ್ರಿಪ್ಟೊ ಪರಿಭಾಷೆಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇದು ಕೇವಲ ನಿಮ್ಮ ಜ್ಞಾನವನ್ನು ಹೆಚ್ಚುಸುವುದಲ್ಲದೇ, ಮುಂದುವರೆದು ನೀವು ಉತ್ತಮವಾದ ಹೂಡಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕ್ರಿಪ್ಟೊ ಪ್ರಪಂಚವು ನಿರಂತರ ವಿಕಾಸ ಮತ್ತು ಹೊಸ ಪರಿಭಾಷೆಗಳನ್ನು ಸೇರಿಸಿಕೊಳ್ಳುತ್ತಾ ಅತೀ ವೇಗದಲ್ಲಿ ಚಲಿಸುತ್ತಿದೆ. ನೀವು ಮೂಲ ವಿಷಯಗಳನ್ನು ತಿಳಿದುಕೊಳ್ಳುತ್ತಿರುವಾಲೇ, ಅದಕ್ಕಿಂತಲೂ ಮುಂದುವರೆದು, ಹಲವು ಸುಧಾರಿತ ಕ್ರಿಪ್ಟೊ ಪರಿಭಾಷೆಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇದು ಕೇವಲ ನಿಮ್ಮ ಜ್ಞಾನವನ್ನು ಹೆಚ್ಚುಸುವುದಲ್ಲದೇ, ಮುಂದುವರೆದು ನೀವು ಉತ್ತಮವಾದ ಹೂಡಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

  ಅದನ್ನು ಗಮನದಲ್ಲಿಟ್ಟುಕೊಂಡು, 2022ರಲ್ಲಿ ನೀವು ತಿಳಿದುಕೊಳ್ಳಬೇಕಾದ 10 ಸುಧಾರಿತ ಕ್ರಿಪ್ಟೊ ಸ್ವತ್ತುಗಳು ಇಲ್ಲಿವೆ.

  1 –ಸ್ಕಾಲ್ಪಿಂಗ್ (Scalping) 

  ಇದರ ಅತ್ಯಂತ ಮೂಲದಲ್ಲಿ ಸ್ಟಾಕ್ ಮಾರ್ಕೆಟ್ ಹೂಡಿಕೆದಾರರಿಗೆ ಡೇ ಟ್ರೇಡಿಂಗ್ ಇರುವಂತೆಯೇ ಕ್ರಿಪ್ಟೊಗೆ ಸ್ಕಾಲ್ಪಿಂಗ್ ಇದೆ. ನಿಮ್ಮ ಕ್ರಿಪ್ಟೊ ಹೂಡಿಕೆ ಮೇಲಿನ ದೊಡ್ಡ ಲಾಭಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುವುದಕ್ಕಿಂತ, ಪ್ರತಿದಿನ ಸಣ್ಣ ಮತ್ತು ಸ್ಥಿರ ಆದಾಯವನ್ನು ಕ್ರೋಢೀಕರಿಸುವುದು ಉತ್ತಮ ಎಂಬುದು ಸ್ಕಾಲ್ಪಿಂಗ್‌ನ ಮೂಲ ಪರಿಕಲ್ಪನೆಯಾಗಿದೆ. ಡೇ ಟ್ರೇಡರ್‌ಗಳು ಉಪಯೋಗಿಸುವ ಮೂಲಭೂತ ತಂತ್ರಗಳಿಗಿಂತ, ಕ್ರಿಪ್ಟೊ ಸ್ಕಾಲ್ಪರ್‌ಗಳು ಹೆಸರಿಗೆ ತಕ್ಕಂತೆ ಪ್ರಾಥಮಿಕವಾಗಿ ಕಾಯಿನ್‌ನ ತಾಂತ್ರಿಕ ವಿಶ್ಲೇಷಣೆ ಹಾಗೂ ಕಂಪನಿಯ ಮೇಲೆ ತಮ್ಮ ಗಮನವನ್ನು ಕೊಡುತ್ತಾರೆ. ಒಂದು ವೇಳೇ ನೀವು ಒಬ್ಬ ಕ್ರಿಪ್ಟೊ ಸ್ಕಾಲ್ಪರ್ ಆಗಿ ಲಾಭವನ್ನು ಪಡೆಯಲು ಬಯಸುತ್ತಿದ್ದರೆ, ಆಳಕ್ಕೆ ಇಳಿಯಲು ಮತ್ತು ಕ್ಯಾಂಡಲ್‌ಸ್ಟಿಕ್ ಚಾರ್ಟ್ ಮಾದರಿಯ ಬಗ್ಗೆ ತಿಳಿದುಕೊಳ್ಳಲು, ಚಾರ್ಟ್‌ಗಳನ್ನು ಓದುವುದನ್ನು ಮತ್ತು ಬೆಂಬಲ ಹಾಗೂ ಎದುರಿಸುವ ಹಂತಗಳನ್ನು ತಿಳಿದುಕೊಳ್ಳಲು ಸಿದ್ಧರಾಗಿರಿ. 

  2 – ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ (High-Frequency Trading) 

  ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಅಥವಾ HFT ಎಂದೇ ಕರೆಸಿಕೊಳ್ಳುವ ಇದು, ಒಂದು ರೀತಿಯ ಟ್ರೇಡಿಂಗ್‌ನ ಪ್ರಕಾರವಾಗಿದ್ದು, ಇದು ಕೆಲವೇ ಸೆಕೆಂಡ್‌ಗಳಲ್ಲಿ ದೊಡ್ಡ ಆರ್ಡರ್‌ಗಳನ್ನು ವ್ಯವಹರಿಸಲು ಸುಧಾರಿತ ಕಂಪ್ಯೂಟರ್‌ ವ್ಯವಸ್ಥೆಯ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ. ಮಾರುಕಟ್ಟೆ ಸ್ಥಿತಿಗತಿಯನ್ನು ಆಧರಿಸಿ, ಈ ಸಿಸ್ಟಂಗಳು ಹಲವು ಮಾರುಕಟ್ಟೆಗಳನ್ನು ಪರಿಶೀಲಿಸಲು ಮತ್ತು ಆರ್ಡರ್‌ಗಳನ್ನು ಕಾರ್ಯಗತಗೊಳಿಸಲು, ಸಂಕೀರ್ಣ ಅಲ್ಗಾರಿದಮ್‌ಗಳನ್ನು ಒಳಗೊಂಡ ಪ್ರೋಗ್ರಾಂಗಳನ್ನು ಬಳಸಿಕೊಳ್ಳುತ್ತದೆ. ಇವು ಈ ರೀತಿಯ ಟ್ರೇಡಿಂಗ್‌ನ್ನು ಬಳಸುವಾಗಿನ ಸಾಧಕ-ಬಾಧಕಗಳಿರುತ್ತವೆ. ಒಮ್ಮೆ ನೀವು ಈ ವಿಷಯದ ಆಳಕ್ಕೆ ಇಳಿದಾಗ, ನೀವು ಇನ್ನೂ ಹೆಚ್ಚಿನದನ್ನು ತಿಳಿದುಕೊಳ್ಳಬಹುದು.

  3 - Nonce 

  Nonceನ ಸಂಕ್ಷಿಪ್ತರೂಪ “number only used once” ಆಗಿದೆ. ಕ್ರಿಪ್ಟೊಗ್ರಫಿಕ್‌ ಕಾರ್ಯವಿಧಾನದಲ್ಲಿ ಬಳಸುವ ನಿಗದಿತ ಏಕಬಳಕೆಯ ಸಂಖ್ಯೆಯೇ Nonce ಆಗಿದೆ. ಇನ್ನೂ ಆಳಕ್ಕೆ ಹೋದಂತೆ, ‘header hash’ ಮತ್ತು ‘golden nonce’ ಎಂಬ ಶಬ್ದಾವಳಿಗಳು ನಿಮ್ಮ ಗಮನಕ್ಕೆ ಬರುತ್ತವೆ. ಬ್ಲಾಕ್ ಅನ್ನು ಆಯ್ಕೆಮಾಡುವಾಗ ಮತ್ತು ಅದನ್ನು ಬ್ಲಾಕ್‌ಚೈನ್‌ಗೆ ಸೇರಿಸುವಾಗ ಈ ಪದಗಳನ್ನು ಬಳಸುತ್ತೇವೆ. ನೀವು ಕ್ರಿಪ್ಟೊ ಮೈನರ್ ಆಗಲು ಬಯಸಿದ್ದರೆ, ವಾಸ್ತವವಾಗಿ, Nonce ಅನ್ನು ತಿಳಿದುಕೊಳ್ಳುವುದು ಮತ್ತು ಅದರ ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳುವುದ ಮೂಲ ಅವಶ್ಯವಾಗಿದೆ.

  4 – ಹಾರ್ಡ್ ಫೋರ್ಕ್ ಮತ್ತು ಸಾಫ್ಟ್ ಫೋರ್ಕ್ (Hard Fork and Soft Fork) 

  ಪ್ರೋಗ್ರಾಮಿಂಗ್‌ ಪರಿಭಾಷೆಯಲ್ಲಿ, fork ಪದವು ಓಪನ್-ಸೋರ್ಸ್ ಕೋಡ್‌ ಮಾರ್ಪಾಡುಗೊಳಿಸುವಿಕೆ ಎಂದು ಉಲ್ಲೇಖಿಸುತ್ತದೆ. ಕ್ರಿಪ್ಟೊ ಪ್ರಪಂಚದಲ್ಲಿ hard fork ಎಂಬ ಪದವನ್ನು blockchain ವ್ಯವಸ್ಥೆಯಲ್ಲಿನ ಮೂಲಭೂತ ಬದಲಾವಣೆ ಎಂದು ವ್ಯಾಖ್ಯಾನಿಸಬಹುದು. ಗೊಂದಲ ಮತ್ತು ದೋಷಗಳನ್ನು ತಪ್ಪಿಸಲು, ಹಳೆಯ ಆವೃತ್ತಿಗಳನ್ನು ಅಮಾನ್ಯ ಎಂದು ಸಹ ಈ ಬದಲಾವಣೆಯು ತೋರಿಸುತ್ತದೆ. ಹಾಗೆಯೇ, ಇನ್ನೊಂದೆಡೆಗೆ soft fork ಎಂಬ ಪದವನ್ನು ಬ್ಲಾಕ್‌ಚೈನ್‌ಗೆ ಮಾಡಲಾದ ಬದಲಾವಣೆಗಳು ಎಂಬುದನ್ನು ಸೂಚಿಸಲು ಬಳಸಲಾಗುತ್ತದೆ, ಹಾಗೆಯೇ ಈ ಬದಲಾವಣೆಯು ಹಳೆಯ ಆವೃತ್ತಿಗಳೊಂದಿಗೆ ಹೊಂದಾಣಿಕೆಯಾಗುವಂತೆ ಉಳಿದದೆ. ಇವು ಬಹುತೇಕವಾಗಿ, ಬ್ಲಾಕ್‌ಚೈನ್‌ನಲ್ಲಿ ಸಣ್ಣ ಫಂಕ್ಷನ್ ಅನ್ನು ಅಥವಾ ಅಲಂಕಾರಿಕ ಬದಲಾವಣೆಗಳನ್ನು ಸೇರಿಸುವುದಕ್ಕೆ ಸಂಬಂಧಿಸಿದ್ದಾಗಿದೆ. 

  5 – DEX 

  DEX ನ ಸಂಕ್ಷಿಪ್ತರೂಪ “Decentralised Exchanges” ಆಗಿದ್ದು, ಇದು ಸ್ಮಾರ್ಟ್ ಕಾಂಟ್ರ್ಯಾಕ್ಟ್‌ಗಳು ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನದ ಸಹಾಯ ಪಡೆದು, ಕಾಯಿನ್‌ಗಳನ್ನು ಮತ್ತು ಟೋಕನ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ. ಕ್ರಿಪ್ಟೊ ಸ್ವತ್ತಿನ ಮಾಲೀಕರಾಗಿ ನಿಮ್ಮ ಬಂಡವಾಳದ ಸ್ವಾಧೀನತೆಯನ್ನು ನಿರ್ವಹಿಸಲು ಇದು ನಿಮಗೆ ಅವಕಾಶ ನೀಡುತ್ತದೆ ಮತ್ತು ನಿಮ್ಮ ಹೂಡಿಕೆಯ ಗುರಿಯನ್ನು ನೀವು ತಲುಪಲು ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ, ಖಾಸಗಿ ಕೀಗಳನ್ನು ಒದಗಿಸುತ್ತದೆ. ಕೇಂದ್ರೀಕೃತ ಮಧ್ಯವರ್ತಿಗಳಿಗಿಂತ DEX ಗಳು ಹ್ಯಾಕಿಂಗ್‌ಗೆ ತುತ್ತಾಗುವ ಸಂಭವನೀಯತೆ ಕಡಿಮೆ ಎಂದು ಪರಿಗಣಿಸಲಾಗಿದೆ.

  6 – ಆವರೇಜ್ ಟ್ರೂ ರೇಂಜ್ (Average True Range)

  ಅನಿಶ್ಚಿತತೆಯನ್ನು ಅಳೆಯಲು ಮತ್ತು ಲಾಭಗಳನ್ನು ಗರಿಷ್ಠಗೊಳಿಸಲು ಸೂಕ್ತ ಮಾರುಕಟ್ಟೆಗಳನ್ನು ಕಂಡುಕೊಳ್ಳಲು ಸಹಕರಿಸುವ ಮೂಲಕ ಕ್ರಿಪ್ಟೊ ಮಾಲೀಕರು ಎದುರಿಸುತ್ತಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದು ಎನಿಸಿರುವುದನ್ನು ಪರಿಹರಿಸುವ ಪ್ರಯತ್ನವನ್ನು ಆವರೇಜ್ ಟ್ರೂ ರೇಂಜ್ (ATR) ಮಾಡುತ್ತದೆ. ಖರೀದಿ ಅಥವಾ ಮಾರಾಟದ ಸಿಗ್ನಲ್‌ಗಳನ್ನು ATR ಬಿಂಬಿಸುವುದಿಲ್ಲ ಮತ್ತು ಇದು ಫೋರೆಕ್ಸ್ ಹಾಗೂ ಸ್ಟಾಕ್ ಟ್ರೇಡಿಂಗ್‌ನಲ್ಲಿ ಬಳಸಿದ ವಿಧಾನದಲ್ಲಿಯೇ ಕ್ರಿಪ್ಟೊ ಟ್ರೇಡಿಂಗ್‌ಗಾಗಿ ಅನಿಶ್ಚಿತತೆಯನ್ನು ಅದು ಅಳೆಯುತ್ತದೆ. ಮೂಲಭೂತವಾಗಿ, ಒಂದು ಸ್ವತ್ತು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಚಲಿಸಬಹುದು (ಏರಿಳಿತ) ಎಂಬುದರ ಕುರಿತು ಮಾಹಿತಿಯನ್ನು ATR ಒದಗಿಸುತ್ತದೆ. ಯಾವ ಕ್ರಿಪ್ಟೊ ಸ್ವತ್ತಿನ ಬಗ್ಗೆ ಪ್ರಶ್ನೆ ಇದೆಯೋ ಅದನ್ನು ಆಧರಿಸಿ, ಓಪನ್ ಪೊಸಿಷನ್‌ಗಳನ್ನು ನಿರ್ವಹಿಸಲು ಹಾಗೆಯೇ ಸ್ಟಾಪ್-ಲಾಸ್ ಅನ್ನು ಪ್ರಾರಂಭಿಸಲು ಈ ಮಾಹಿತಿಯನ್ನು ಬಳಸಬಹುದು.

  7 – ಸ್ಕೇಲಬಿಲಿಟಿ ಟ್ರೈಲೆಮಾ (Scalability Trilemma)

  ಸ್ಕೇಲಬಿಲಿಟಿ ಟ್ರೈಲೆಮಾ ಎಂಬುದನ್ನು Ethereum ನ ಸೃಷ್ಟಿಕರ್ತ ವೈಟಾಲಿಕ್ ಬ್ಯುಟೆರಿನ್ ಚಾಲ್ತಿಗೆ ತಂದಿದ್ದಾರೆ ಮತ್ತು ನಿಶ್ಚಿತ ಬ್ಲಾಕ್‌ಚೈನ್ ವೈಶಿಷ್ಟ್ಯಗಳನ್ನು ಗರಿಷ್ಠಗೊಳಿಸುವಾಗ ಡೆವಲಪರ್‌ಗಳು ಮಾಡಬೇಕಿರುವ ಟ್ರೇಡ್‌ಆಫ್‌ (ವ್ಯಾಪಾರ-ವಿನಿಮಯ) ಅನ್ನು ಇದು ಸೂಚಿಸುತ್ತದೆ. ಟ್ರೈಲೆಮಾ ಎಂಬುದು ಮೂರು ಪ್ರಮುಖ ಬ್ಲಾಕ್‌ಚೈನ್ ಗುಣಲಕ್ಷಣಗಳ ಒಂದು ತ್ರಿಕೋನವನ್ನು ಸೂಚಿಸುತ್ತದೆ – ಸ್ಕೇಲಬಿಲಿಟಿ, ಡೀಸೆಂಟ್ರಲೈಸೇಷನ್ (ವಿಕೇಂದ್ರೀಕರಣ) ಹಾಗೂ ಸೆಕ್ಯುರಿಟಿ (ಭದ್ರತೆ) ಮತ್ತು ಕ್ರಿಪ್ಟೊ ಸ್ವತ್ತುಗಳು ಹೆಚ್ಚು ಹೆಚ್ಚು ಸಂಕೀರ್ಣ ಬದಲಾವಣೆಗಳಿಗೆ ಒಳಗಾಗುವುದರಿಂದ ಪ್ರತಿಯೊಂದು ಅಂಶವು ಸಹ ಕಾರ್ಯನಿರ್ವಹಿಸುವಂತೆ ಮಾಡಲು ಅಗತ್ಯವಿರುವ ಟ್ರೇಡ್‌ಆಫ್‌ಗಳು. 

  8 – FUD 

  FUD ಎಂಬುದು ‘ಫಿಯರ್ (ಭಯ), ಅನ್‌ಸರ್ಟೈನಿಟಿ (ಅನಿಶ್ಚಿತತೆ) ಮತ್ತು ಡೌಟ್ (ಸಂದೇಹ)’ ಎಂಬುದರ ಸಂಕ್ಷಿಪ್ತ ರೂಪವಾಗಿದ್ದು, ಹೂಡಿಕೆದಾರರು ಮತ್ತು ಟ್ರೇಡರ್‌ಗಳನ್ನು ನಲುಗುವಂತೆ ಮಾಡುವ ಭಾವನೆಗಳ ಆಳದಲ್ಲಿ ಇವುಗಳ ಮಿಳಿತವಾಗಿವೆ ಎಂದು ಪರಿಗಣಿಸಲಾಗಿದೆ. ತ್ವರಿತವಾಗಿ ಹಣ ಗಳಿಸಲು, ಅಂತಹ ವ್ಯಕ್ತಿಗಳ ಸ್ವಭಾವವನ್ನು ಕುಶಲತೆಯಿಂದ ಬಳಸುವುದಕ್ಕೆ ಮತ್ತು ಅವರ ಪೂರ್ವಗ್ರಹಗಳ ಪ್ರಯೋಜನಗಳನ್ನು ಪಡೆದುಕೊಳ್ಳುವುದಕ್ಕೆ ಕೆಲವು ವ್ಯಕ್ತಿ/ಪಾರ್ಟಿಗಳು ಹೆಸರಾಗಿವೆ. ದುಷ್ಟಬುದ್ಧಿಯ ವ್ಯಕ್ತಿಗಳು ತ್ವರಿತವಾಗಿ ಹಣ ಮಾಡಿಕೊಳ್ಳಲು, ನೈಜ ಹೂಡಿಕೆದಾರರ FUD ಪ್ರತಿಕ್ರಿಯೆಗಳನ್ನು ಕುಶಲತೆಯಿಂದ ಬಳಸಿಕೊಂಡು ನಿರ್ದಿಷ್ಟ ಕ್ರಿಪ್ಟೊಕರೆನ್ಸಿಗಳನ್ನು ಅಥವಾ ಇಡೀ ಕ್ರಿಪ್ಟೊ ಮಾರುಕಟ್ಟೆಯನ್ನು ತಳಮಟ್ಟಕ್ಕೆ ಇಳಿಸಿದಾಗ ಕ್ರಿಪ್ಟೊ ಬಳಕೆದಾರರಿಗೆ ಸಾಮಾನ್ಯವಾಗಿ FUD ಕುರಿತು ಹೇಳಲಾಗುತ್ತದೆ. 

  9 – ಮೆಮ್‌ಪೂಲ್ (Mempool) 

  ಇದೊಂದು ಬ್ಲಾಕ್‌ಚೈನ್ ವಹಿವಾಟುಗಳ ಗುಂಪು ಆಗಿದ್ದು, ಅದರಲ್ಲಿನ ಪ್ರತಿಯೊಂದೂ ಸಹ ಮೆಮ್‌ಪೂಲ್ (Mempool) ಎಂದು ಕರೆಯಲಾಗುವ ಬ್ಲಾಕ್‌ವೊಂದಕ್ಕೆ ಸೇರಿಸುವುದನ್ನು ಕಾಯುತ್ತಿರುತ್ತದೆ. ಈ ಪದವು ಮೂಲಭೂತವಾಗಿ ಮೆಮೊರಿ ಪೂಲ್ (Memory Pool) ಎಂಬುದರ ಚಿಕ್ಕದಾದ ಸ್ವರೂಪದ್ದಾಗಿದೆ ಮತ್ತು ಅದನ್ನು ಯಶಸ್ವಿಯಾಗಿ ಬ್ಲಾಕ್‌ಚೈನ್‌ವೊಂದಕ್ಕೆ ಸೇರಿಸುವ ಮೊದಲು ನೋಡ್‌ಗಳ ಮೌಲ್ಯಮಾಪನ ಮತ್ತು ಪರಿಶೀಲನೆ ಪ್ರಕ್ರಿಯೆಯನ್ನು ಇದು ಸೂಚಿಸುತ್ತದೆ.

  10 – ಟೋಕೆನಾಮಿಕ್ಸ್ (Tokenomics) 

  ಆರ್ಥಿಕತೆಯನ್ನು ದಾಟಿದ ನಂತರ, ಈಗ ಅಲ್ಲಿಗೆ ಟೋಕೆನಾಮಿಕ್ಸ್ ಬಂದಿದೆ, ‘ಟೋಕನ್’ ಮತ್ತು ‘ಎಕನಾಮಿಕ್ಸ್’ ಎಂಬ ಪದಗಳ ಸಮ್ಮಿಶ್ರಣವಾಗಿದ್ದು, ಅದು ಡಿಜಿಟಲ್ ಸ್ವತ್ತುಗಳ, ವಿಶೇಷವಾಗಿ ಕ್ರಿಪ್ಟೊಕರೆನ್ಸಿಗಳು ಮತ್ತು ಅವುಗಳ ಮೌಲ್ಯದ ಬಗೆಗಿನ ಅಧ್ಯಯನವನ್ನು ಸೂಚಿಸುತ್ತದೆ. ಈ ವಿಶಾಲವ್ಯಾಪ್ತಿಯ ಕ್ಷೇತ್ರವು ಟೋಕನ್‌ಗಳ ಸೃಷ್ಟಿಕರ್ತರು, ಹಂಚಿಕೆ ಮತ್ತು ವಿತರಣೆ ವಿಧಾನಗಳು, ಮಾರುಕಟ್ಟೆ ಬಂಡವಾಳೀಕರಣ, ವ್ಯಾಪಾರ ಮಾದರಿಗಳು, ಕಾನೂನು ಸ್ಥಿತಿ, ಮತ್ತು ಕ್ರಿಪ್ಟೊವನ್ನು ಹೆಚ್ಚು ಹೆಚ್ಚು ಒಪ್ಪಿಕೊಳ್ಳುವಿಕೆಯನ್ನು ಪಡೆದುಕೊಂಡಿರುವುದರಿಂದ ವಿವಿಧ ಟೋಕನ್‌ಗಳು ವಿಶಾಲ ಆರ್ಥಿಕ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ವಿವಿಧ ವಿಧಾನಗಳನ್ನು ಕುರಿತ ಅಧ್ಯಯನವನ್ನು ಒಳಗೊಂಡಿದೆ.

  ಒಂದು ವೇಳೆ ನೀವು ಈಗಾಗಲೇ ಕ್ರಿಪ್ಟೊ ಟೋಕನ್‌ಗಳು ಹಾಗೂ ಸ್ವತ್ತುಗಳನ್ನು ಬಳಸದೇ ಇದ್ದರೆ ಈ ಎಲ್ಲಾ ಪದಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಮೂಲ ಅಂಶಗಳನ್ನು ಕಲಿಯುವ ಮೂಲಕ ಈ ಹೊಸ ಹೂಡಿಕೆ ವರ್ಗದಲ್ಲಿ ನೀವು ಪಾಲ್ಗೊಳ್ಳುವುದು ಉತ್ತಮ ಹಾಗೂ ಪ್ರಾರಂಭಿಸಲು ZebPay ಅಂತಹ ವಿಶ್ವಾಸಾರ್ಹ ಹಾಗೂ ಸುರಕ್ಷಿತ ಕ್ರಿಪ್ಟೊ ಸ್ವತ್ತುಗಳ ಎಕ್ಸ್‌ಚೇಂಜ್ ಅನ್ನು ಆಯ್ಕೆ ಮಾಡಿ. ತನ್ನ ಕ್ರಿಪ್ಟೊ ಸ್ವತ್ತುಗಳ ವ್ಯಾಪಕವಾದ ಪಟ್ಟಿ, ಕ್ರಿಪ್ಟೊ ಕ್ಷೇತ್ರದಲ್ಲಿನ ಸುದೀರ್ಘ ಇತಿಹಾಸ ಹಾಗೂ ಸದೃಢ ಭದ್ರತಾ ಕಾರ್ಯವಿಧಾನಗಳಿಂದಾಗಿ ನಾವು ZebPay ಅನ್ನು ಶಿಫಾರಸು ಮಾಡುತ್ತೇವೆ. ನಿಮ್ಮ ಖಾತೆಯನ್ನು ಇಲ್ಲಿ ತೆರೆಯಿರಿ. 
  Published by:Soumya KN
  First published: