ದಿನಕ್ಕೆ 20 ರೂಪಾಯಿ ಉಳಿಸಿ ಕೋಟ್ಯಧಿಪತಿಯಾಗಲು ನೀವು ಮಾಡಬೇಕಿರೋದು ಇಷ್ಟೇ…!

SIP ಮೂಲಕ ಮ್ಯೂಚುವಲ್ ಫಂಡ್‌ (Mutual Fund) ಗಳಲ್ಲಿ ಹೂಡಿಕೆ ಮಾಡುವ ಮೂಲಕ ಮಿಲಿಯನೇರ್ ಆಗುವ ನಿಮ್ಮ ಕನಸನ್ನು ನನಸಾಗಿಸಬಹುದು. ಇದಕ್ಕಾಗಿ ನೀವು ದಿನಕ್ಕೆ ಕೇವಲ 20 ರೂ ಉಳಿಸಿದರೆ, ನಿವೃತ್ತಿಯ ವೇಳೆಗೆ ನೀವು ಸುಲಭವಾಗಿ ಮಿಲಿಯನೇರ್ ಆಗಬಹುದು.

ಹಣ

ಹಣ

  • Share this:
ಪ್ರತಿಯೊಬ್ಬರೂ ಹಣವನ್ನು (Money) ಉಳಿಸಲು ಮತ್ತು ತಮ್ಮ ಬ್ಯಾಂಕ್ ಖಾತೆಯಲ್ಲಿ (Bank Account) ಕೋಟಿ ಕೋಟಿ ಹಣ ಹೊಂದಲು ಬಯಸುತ್ತಾರೆ. ಆದಾಗ್ಯೂ, ಹೆಚ್ಚಿನ ಉಳಿತಾಯವಿಲ್ಲದ ಕಾರಣ ಸೀಮಿತ ಆದಾಯ (Limited Income) ಮತ್ತು ವೆಚ್ಚಗಳ ಕಾರಣದಿಂದಾಗಿ ಮಧ್ಯಮ ವರ್ಗದ ಜನರಿಗೆ ಇದು ಸುಲಭವಲ್ಲ. ಇಂದು ನಾವು ನಿಮಗೆ ಕೋಟ್ಯಧಿಪತಿ ಯೋಜನೆಯನ್ನು ಹೇಳುತ್ತೇವೆ. SIP ಮೂಲಕ ಮ್ಯೂಚುವಲ್ ಫಂಡ್‌ (Mutual Fund) ಗಳಲ್ಲಿ ಹೂಡಿಕೆ ಮಾಡುವ ಮೂಲಕ ಮಿಲಿಯನೇರ್ ಆಗುವ ನಿಮ್ಮ ಕನಸನ್ನು ನನಸಾಗಿಸಬಹುದು. ಇದಕ್ಕಾಗಿ ನೀವು ದಿನಕ್ಕೆ ಕೇವಲ 20 ರೂ ಉಳಿಸಿದರೆ, ನಿವೃತ್ತಿಯ ವೇಳೆಗೆ ನೀವು ಸುಲಭವಾಗಿ ಮಿಲಿಯನೇರ್ ಆಗಬಹುದು.

ಇದರಲ್ಲಿ ಪ್ರತಿದಿನ 20 ರೂಪಾಯಿ ಹೂಡಿಕೆ ಮಾಡುವ ಮೂಲಕ 10 ಕೋಟಿ ರೂಪಾಯಿ ಸಂಗ್ರಹಿಸಬಹುದು. ನಿಮಗೆ ಸರಿಯಾದ ಹೂಡಿಕೆ ಯೋಜನೆ ಅಗತ್ಯವಿರುತ್ತದೆ. ಪ್ರತಿ ದಿನ ಕೇವಲ 20 ರೂಪಾಯಿಗಳನ್ನು ಉಳಿಸುವ ಮೂಲಕ ನೀವು ಕೋಟ್ಯಧಿಪತಿ ಆಗುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.

25 ವರ್ಷಕ್ಕೆ ಉತ್ತಮ ಆದಾಯ

ಮ್ಯೂಚುವಲ್ ಫಂಡ್‌ಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ವ್ಯವಸ್ಥಿತ ಹೂಡಿಕೆ ಯೋಜನೆ (SIP  Systematic Investment Plan ) ಮೂಲಕ ನೀವು ಪ್ರತಿ ತಿಂಗಳು ಕನಿಷ್ಠ 500 ರೂ.ಗಳನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಇದರಲ್ಲಿ ನೀವು ಸುಲಭವಾಗಿ ಕೋಟ್ಯಾಧಿಪತಿಯಾಗುವ ಅವಕಾಶವನ್ನು ಪಡೆಯುತ್ತೀರಿ. ಮ್ಯೂಚುವಲ್ ಫಂಡ್‌ಗಳು 25 ವರ್ಷಗಳಲ್ಲಿ ಜನರಿಗೆ ಉತ್ತಮವಾದ ಆದಾಯವನ್ನು ನೀಡಿವೆ.

ಇದನ್ನೂ ಓದಿ:  ಕೇವಲ 4000  ರೂ.ಗಳಲ್ಲಿ ರೈಲ್ವೇಯೊಂದಿಗೆ ವ್ಯವಹಾರ ಆರಂಭಿಸಿ, ಪ್ರತಿ ತಿಂಗಳು 80,000 ರೂ.ವರೆಗೆ ಗಳಿಸಿ

ನೀವು 20 ವರ್ಷದಿಂದ ಪ್ರತಿದಿನ 20 ರೂ ಉಳಿಸಿದರೆ, ಈ ಮೊತ್ತವು ತಿಂಗಳಿಗೆ 600 ರೂ ಆಗುತ್ತದೆ. ನೀವು ಈ ಹೂಡಿಕೆಯನ್ನು 40 ವರ್ಷಗಳವರೆಗೆ ಮುಂದುವರಿಸಬೇಕು. ಅಂದರೆ, 480 ತಿಂಗಳವರೆಗೆ, ನೀವು ಪ್ರತಿ ತಿಂಗಳು 600 ರೂ. ಉಳಿಸಬೇಕು.

40 ವರ್ಷಗಳ ನಂತರ 1.88 ಕೋಟಿ

ಈ ಹೂಡಿಕೆಯ ಮೇಲೆ ನಿಮಗೆ ವಾರ್ಷಿಕ ಶೇ.15ರಷ್ಟು ಆದಾಯ ಬರುತ್ತದೆ . 40 ವರ್ಷಗಳ ನಂತರ ನಿಮಗೆ ಒಟ್ಟು 1.88 ಕೋಟಿ ರೂ. ಈ 40 ವರ್ಷಗಳಲ್ಲಿ ನೀವು ಕೇವಲ 2,88,000 ರೂ. ನೀವು ತಿಂಗಳಿಗೆ 600 ರೂಪಾಯಿಗಳ SIP ನಲ್ಲಿ 20 ಪ್ರತಿಶತದಷ್ಟು ಲಾಭವನ್ನು ಪಡೆದರೆ, 40 ವರ್ಷಗಳ ನಂತರ, ಒಟ್ಟು 10.21 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗುತ್ತದೆ.

ಇದಲ್ಲದೇ 20ನೇ ವಯಸ್ಸಿನಲ್ಲಿ ಪ್ರತಿದಿನ 30 ರೂಪಾಯಿ ಉಳಿಸಿದರೆ ತಿಂಗಳಿಗೆ 900 ರೂಪಾಯಿ ಆಗುತ್ತದೆ. ನೀವು SIP ಮೂಲಕ ಯಾವುದೇ ವೈವಿಧ್ಯಮಯ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ, ಈ ಹೂಡಿಕೆಯ ಮೇಲೆ 40 ವರ್ಷಗಳ ನಂತರ, ನೀವು ವಾರ್ಷಿಕವಾಗಿ 12% ಆದಾಯದ ದರದಲ್ಲಿ 1.07 ಕೋಟಿ ರೂಪಾಯಿಗಳನ್ನು ಪಡೆಯುತ್ತೀರಿ. ಇದಕ್ಕೆ ನೀವು 4,32,000 ರೂ.ಗಳ ಹೂಡಿಕೆ ಮಾಡಬೇಕಾಗುತ್ತದೆ.

ಮ್ಯೂಚುವಲ್ ಫಂಡ್ಗಳು ಎಂದರೇನು?

ಸ್ಟಾಕ್‌ಗಳು ಹಾಗೂ ಬಾಂಡ್‌ಗಳ (Stock And Bonds) ಸಂಯೋಜನೆಯನ್ನು ಮ್ಯೂಚುವಲ್ ಫಂಡ್‌ (Mutual fund)ಗಳೆಂದು ಕರೆಯಲಾಗಿದ್ದು ಇದನ್ನು ಪರಿಣಿತ ಅಥವಾ ವೃತ್ತಿಪರ ಫಂಡ್ ನಿರ್ವಾಹಕರು ನಿರ್ವಹಿಸುತ್ತಾರೆ.

ಇದನ್ನೂ ಓದಿ:  ಕೇವಲ 417ನ ರೂ. ಜಮೆ ಮಾಡಿ ಲಕ್ಷಾಧೀಶರಾಗುವ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಕ್ವಿಟಿ ಮ್ಯೂಚುವಲ್ ಫಂಡ್ಗಳು (Equity Mutual Funds): ಇವು ಕಂಪನಿಯ ಷೇರುಗಳನ್ನು ಒಳಗೊಂಡಿರುತ್ತವೆ.

ಸಾಲ (ಡೆಬ್ತ್) ಮ್ಯೂಚುಯಲ್ ಫಂಡ್ಗಳು(Debt Mutual Funds): ಇವುಗಳು ಸರ್ಕಾರಿ ಬಾಂಡ್‌ಗಳು ಮತ್ತು ಭದ್ರತೆಗಳನ್ನು ಒಳಗೊಂಡಿರುತ್ತವೆ.

ಮ್ಯೂಚುವಲ್ ಫಂಡ್‌ಗಳು ಬೇರೆ ಬೇರೆ ಕಂಪನಿಗಳ ವೈವಿಧ್ಯಮಯ ಷೇರುಗಳ ಸಂಗ್ರಹವಾಗಿದೆ. ಮ್ಯೂಚುವಲ್ ಫಂಡ್‌ಗಳು ಹಣ ಮಾರುಕಟ್ಟೆ ಪರಿಕರಗಳು ಅಂದರೆ ಖಜಾನೆ ಬಿಲ್‌ಗಳು, ಭಾಗವಹಿಸುವಿಕೆ ಟಿಪ್ಪಣಿಗಳಲ್ಲಿ ಹೂಡಿಕೆ ಮಾಡುತ್ತವೆ. ಈ ನಿಧಿಗಳನ್ನು (ಫಂಡ್‌ಗಳನ್ನು) ಆಭರಣ, ರಿಯಲ್ ಎಸ್ಟೇಟ್ ಹಾಗೂ ಸರಕುಗಳಲ್ಲಿ ಕೂಡ ಹೂಡಿಕೆ ಮಾಡಲಾಗುತ್ತದೆ. ನಿಮ್ಮ ಹಣವನ್ನು ವಿವಿಧ ರೀತಿಯ ಸ್ವತ್ತು ವರ್ಗಗಳಲ್ಲಿ ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್‌ಗಳು ನಿಮ್ಮನ್ನು ಅನುಮತಿಸುತ್ತವೆ
Published by:Mahmadrafik K
First published: