ನಿಮ್ಮಲ್ಲಿ 786 ನಂಬರ್ ಇರುವ ನೋಟ್ ಇದ್ದರೆ 3 ಲಕ್ಷ ಲಾಭ; ಇಲ್ಲಿದೆ ವಿವರ

Earn 3 lakh with one currency note- 786 ಸರಣಿ ಸಂಖ್ಯೆ ಇರುವ 1 ರೂ, 2 ರೂ ಹೀಗೇ ಯಾವುದೇ ಕರೆನ್ಸಿ ನೋಟು ನಿಮ್ಮಲ್ಲಿ ಇದ್ದರೆ ಆ ಒಂದು ನೋಟಿಗೆ ನೀವು 3 ಲಕ್ಷ ರೂವರೆಗೆ ಹಣ ಮಾಡಿಕೊಳ್ಳಬಹುದು. ಅದರ ವಿವರ ಇಲ್ಲಿದೆ:

786 ಸರಣಿ ನಂಬರ್ ಇರುವ ಕರೆನ್ಸಿ ನೋಟು

786 ಸರಣಿ ನಂಬರ್ ಇರುವ ಕರೆನ್ಸಿ ನೋಟು

 • News18
 • Last Updated :
 • Share this:
  ಬೆಂಗಳೂರು: ಕಾನೂನುಬದ್ಧವಾಗಿಯೇ ಹಣ ಸಂಪಾದನೆ ಮಾಡಲು ಹಲವು ದಾರಿಗಳಿವೆ. ಹಳೆಯ ಕಾಲದ ನಾಣ್ಯಗಳಿಗೆ ಬೇಡಿಕೆ ಇರುವುದು ನಿಮಗೆ ತಿಳಿದಿರಬಹುದು. ಅದಕ್ಕಿಂತಲೂ ಬಹಳ ಸರಳವಾದ ಹಣ ಗಳಿಕೆಯ ಅವಕಾಶ ಇದೆ. ನಿರ್ದಿಷ್ಟ ಸಂಖ್ಯೆಗಳಿರುವ ಸೀರಿಯಲ್ ನಂಬರ್​ನ ಕರೆನ್ಸಿ ನೋಟುಗಳಿಂದ ಭಾರೀ ಹಣ ಮಾಡಿಕೊಳ್ಳಬಹುದು. ನಿಮ್ಮಲ್ಲಿ ಇರುವ ಕರೆನ್ಸಿ ನೋಟುಗಳನ್ನ ಗಮನಿಸಿ. ಅದರಲ್ಲಿರುವ ಸೀರಿಯಲ್ ನಂಬರ್​ನಲ್ಲಿ 786 ನಂಬರ್ ಇದ್ದರೆ ಆ ನೋಟಿನಿಂದ ನೀವು ಆನ್​ಲೈನ್​ನಲ್ಲಿ (Sell your specific currency note in e-commerce sites) 3 ಲಕ್ಷ ರೂವರೆಗೆ ಗಳಿಸಬಹುದು. ಅಷ್ಟು ಡಿಮ್ಯಾಂಡ್ ಇದೆ ಆ ಸಂಖ್ಯೆಯ ನೋಟುಗಳಿಗೆ.

  786 ನಂಬರ್ ಇರುವ ನೋಟು ಯಾವುದಾದರೂ ಆಗಿರಬಹುದು. 1 ರೂ, 5 ರೂ, 10 ರೂ, ಕೊನೆಗೆ 2 ಸಾವಿರ ರೂ ಮುಖಬೆಲೆಯ ನೋಟಾದರೂ ಆಗಿರಬಹುದು. ಹೀಗಾಗಿ, ಇನ್ಮುಂದೆ ನಿಮ್ಮ ಕೈಗೆ ಯಾವ ನೋಟು ಬಂದರೂ ಅದರಲ್ಲಿರುವ ಸೀರಿಯಲ್ ನಂಬರ್ ಗಮನಿಸಿ. ಅದರಲ್ಲಿ 786 ನಂಬರ್ ಕಾಣಿಸಿದರೆ ಅದನ್ನ ತೆಗೆದಿರಿಸಿಕೊಳ್ಳಿ. ಗಮನಿಸಬೇಕಾದ ಅಂಶ ಎಂದರೆ 786 ಅಂಕಿಗಳು ಒಂದರ ಪಕ್ಕ ಒಂದು ಹಾಗೆಯೇ ಇರಬೇಕು.

  ಇದನ್ನೂ ಓದಿ: ನಿಯಮ ಉಲ್ಲಂಘನೆ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 1 ಕೋಟಿ ರೂ. ದಂಡ ವಿಧಿಸಿದ RBI

  786 ನಂಬರ್​ನಲ್ಲಿ ಏನಿದೆ ವಿಶೇಷತೆ:

  ಇಸ್ಲಾಮ್ ಮತದಲ್ಲಿ 786 ನಂಬರ್ ಅನ್ನು ಬಹಳ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಮುಸ್ಲಿಮರಷ್ಟೇ ಅಲ್ಲ ಇತರ ಕೆಲ ಧರ್ಮಗಳಲ್ಲೂ ಜನರು ಈ ನಂಬರ್ ಅನ್ನು ಪವಿತ್ರವೆಂದು ಭಾವಿಸುತ್ತಾರೆ. ಹೀಗಾಗಿ, ಈ ನಂಬರ್ ಇರುವ ನೋಟನ್ನು ಜನರು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇದರಿಂದ ಅದೃಷ್ಟ ಕೈಗೂಡಿ ಬರುತ್ತದೆ ಎಂಬ ನಂಬಿಕೆ.

  ನಿಮಗೂ ಆ ನಂಬಿಕೆ ಇದ್ದರೆ ಆ ನೋಟನ್ನು ತೆಗೆದಿರಿಸಿಕೊಳ್ಳಬಹುದು. ಇಲ್ಲದಿದ್ದರೆ ಅದನ್ನ ಮಾರುಕಟ್ಟೆಯಲ್ಲಿ ಮಾರಿದರೆ ಭರ್ಜರಿ ಹಣ ಮಾಡಿಕೊಳ್ಳಬಹುದು.

  ಇದನ್ನೂ ಓದಿ: Ola Grocery: 10 ನಿಮಿಷದಲ್ಲೇ ಮನೆಗೆ ಬರುತ್ತೆ ದಿನಸಿ ಸಾಮಾನು; ಬೆಂಗಳೂರು, ಮುಂಬೈನಲ್ಲಿ Ola ಸೇವೆಗೆ ಹೆಚ್ಚಿದ ಡಿಮ್ಯಾಂಡ್

  ಮಾರುವುದು ಹೇಗೆ?

  ಇಂಥ ವಿಶೇಷ ನೋಟುಗಳು ಹಾಗೂ ಹಳೆಯ ನೋಟುಗಳನ್ನ ಮಾರಾಟ ಮಾಡಲು ಕೆಲ ವೆಬ್ ಸೈಟ್ ಗಳಿವೆ. ಅದರಲ್ಲಿ ಇಬೇ ಒಂದು.

  * ಮೊದಲಿಗೆ ನೀವು www.ebay.com ವೆಬ್​ಸೈಟ್​ಗೆ ಭೇಟಿ ಕೊಡಿ.

  * ನಂತರ ಆ ಜಾಲತಾಣದ ಹೋಮ್ ಪೇಜ್​ನಲ್ಲಿ ನೀವು ಸೆಲ್ಲರ್ (ಮಾರಾಟಗಾರ) ಎಂದು ನೊಂದಣಿ ಮಾಡಿಕೊಳ್ಳಿ

  * ಬಳಿಕ ನಿಮ್ಮ ಬಳಿ ಇರುವ ನೋಟ್ ಸ್ಪಷ್ಟವಾಗಿ ಕಾಣುವಂತೆ ಫೋಟೋ ಕ್ಲಿಕ್ ಮಾಡಿ. ಆ ಫೋಟೋವನ್ನು ವೆಬ್ ಸೈಟ್​ನಲ್ಲಿ ಅಪ್​ಲೋಡ್ ಮಾಡಿ.

  * ಈಗ ಇಬೇ ಜಾಲತಾಣದಲ್ಲಿ ನಿಮ್ಮ ನೋಟ್​ನ ಜಾಹೀರಾತು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಆಸಕ್ತರಾದವರು ನಿಮ್ಮನ್ನು ಸಂಪರ್ಕಿಸುತ್ತಾರೆ.

  ಇದನ್ನೂ ಓದಿ: Saving Account: ಉಳಿತಾಯ ಖಾತೆಗಳ ವಿಧಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ

  ಮೇಲೆ ಹೇಳಿದಂತೆ 786 ನಂಬರ್ ನೋಟ್ ಇಷ್ಟೇ ಮೊತ್ತಕ್ಕೆ ಮಾರಾಟ ಆಗುತ್ತದೆ ಎಂದಿಲ್ಲ. ಅದು ಬೇಡಿಕೆ ಮೇಲೆ ಅವಲಂಬಿತವಾಗಿರುತ್ತದೆ. ಇಂಥ 2 ರೂ ಮುಖಬೆಲೆಯ ನೋಟುಗಳಿಗೆ ಹಲವರಿಗೆ 3 ಲಕ್ಷ ರೂವರೆಗೆ ಬೆಲೆ ಸಿಕ್ಕಿರುವುದುಂಟು. ಸಾವಿರಾರು ರೂಪಾಯಿಯಂತೂ ಖಂಡಿತ ಸಿಗುತ್ತದೆ.

  EBay ಅಲ್ಲದೇ ಇನ್ನೂ ಹಲವು ಇ-ಕಾಮರ್ಸ್ ತಾಣಗಳಲ್ಲೂ ನೀವು ನಿಮ್ಮ ನೋಟುಗಳನ್ನ ಮಾರಲು ಪ್ರಯತ್ನಿಸಬಹುದು. ಬಹಳ ವರ್ಷಗಳಿಂದ Ebay ವೆಬ್​ಸೈಟ್ ಇರುವುದರಿಂದ ಹಾಗೂ ಬಹಳ ಮಂದಿಯ ನೆಚ್ಚಿನ ತಾಣವಾದ್ದರಿಂದ ನೀವು ಇದಕ್ಕೆ ಆದ್ಯತೆ ಕೊಡಲು ಅಡ್ಡಿ ಇಲ್ಲ.
  Published by:Vijayasarthy SN
  First published: