2 Lakh Free Benefits- ಎಸ್​​ಬಿಐ ಗ್ರಾಹಕರು 2 ಲಕ್ಷ ಉಚಿತ ಸೌಲಭ್ಯ ಪಡೆಯಲು ಹೀಗೆ ಮಾಡಿ

SBI special benefits- 2018, ಆಗಸ್ಟ್ 28ಕ್ಕೆ ಮುನ್ನ ಎಸ್​ಬಿಐನಲ್ಲಿ ಖಾತೆ ತೆರೆದಿದ್ದರೆ 1 ಲಕ್ಷದವರೆಗೆ ಉಚಿತ ಇನ್ಸೂರೆನ್ಸ್ ಸಿಗುತ್ತದೆ. ನಂತರದ ದಿನದಲ್ಲಿ ಜನ್ ಧನ್ ಖಾತೆ ತೆರೆದರೆ 2 ಲಕ್ಷದವರೆಗೆ ಸೌಲಭ್ಯ ಇರುತ್ತದೆ.

ಎಸ್​ಬಿಐ

ಎಸ್​ಬಿಐ

  • News18
  • Last Updated :
  • Share this:
    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI- State Bank of India) ತನ್ನ ಗ್ರಾಹಕರಿಗೆ ಆಗಾಗ್ಗೆ ಹೊಸ ಹೊಸ ಸ್ಕೀಮ್​ಗಳ ಮೂಲಕ ಅಚ್ಚರಿಪಡಿಸುತ್ತಲೇ ಇರುತ್ತದೆ. ಈ ವರ್ಷ ಎಸ್​​ಬಿಐ ಹೊಸ ಸೇವೆ ಆರಂಭಿಸಿದ್ದು, ಅದು 2 ಲಕ್ಷ ರೂ ವರೆಗೆ ಉಚಿತ ಇನ್ಷೂರೆನ್ಸ್ ಸೌಲಭ್ಯವನ್ನು (Accident Insurance) ತನ್ನ ಗ್ರಾಹಕರಿಗೆ ಒದಗಿಸಿದೆ. ಈ ಉಚಿತ ಜೀವ ವಿಮೆ ಯೋಜನೆಯ ವಿಶೇಷತೆ ಎಂದರೆ, ಗ್ರಾಹಕರು ಭಾರತದಿಂದ ಹೊರಗೆ ಅಪಘಾತದಲ್ಲಿ ಮೃತಪಟ್ಟರೂ ಅವರ ವಾರಸುದಾರರು (ನಾಮಿನಿ) ಇನ್ಷೂರೆನ್ಸ್ ಹಣ ಕ್ಲೇಮ್ ಮಾಡಿಕೊಳ್ಳಲು ಅವಕಾಶ ಇದೆ.

    ಬಹಳ ಪ್ರಯೋಜನಕಾರಿ ಎನಿಸುವ ಈ ಇನ್ಷೂರೆನ್ಸ್ ಸೌಲಭ್ಯ ಪಡೆಯಲು ನೀವು ಎಸ್​ಬಿಐ ಬ್ಯಾಂಕ್​ನಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನಾ (PMJDY) ಖಾತೆಯನ್ನ ಹೊಂದಿರಬೇಕು. ಎಸ್​ಬಿಐ ಖಾತೆ ಹೊಂದಿದ್ದೂ ಜನ ಧನ್ ಯೋಜನೆಯ (Jan Dhan Scheme) ಖಾತೆ ಇಲ್ಲದಿದ್ದರೆ ಅದೇ ಖಾತೆಯನ್ನ ಜನ್ ಧನ್ ಖಾತೆಯಾಗಿ ಪರಿವರ್ತಿಸಿಕೊಳ್ಳಬಹುದು. ಎಸ್​ಬಿಐ RuPay ಜನ್ ಧನ್ ಕಾರ್ಡ್ ಅನ್ನು ಪಡೆಯುವವರಿಗೆ ಈ ಸ್ಕೀಮ್ ಲಭ್ಯ ಇರಲಿದೆ.

    2018, ಆಗಸ್ಟ್ 28ಕ್ಕೆ ಮುನ್ನ ಎಸ್​ಬಿಐ ಖಾತೆಯನ್ನ ತೆರೆದಿದ್ದವರಿಗೆ 1 ಲಕ್ಷ ರೂ ಇನ್ಷೂರೆನ್ಸ್ ಸೌಲಭ್ಯ ಉಚಿತವಾಗಿ ಸಿಗುತ್ತದೆ. ಆದರೆ, 2018, ಆಗಸ್ಟ್ 28ರ ನಂತರ ಎಸ್​ಬಿಐನಲ್ಲಿ ಜನ್ ಧನ್ ಖಾತೆ ತೆರೆದವರಿಗೆ 2 ಲಕ್ಷ ರೂ ವರೆಗೆ ಆಕ್ಸಿಡೆಂಟ್ ಇನ್ಸೂರೆನ್ಸ್ ಸೌಲಭ್ಯ ಇರಲಿದೆ.

    ವಿಮೆ ಕ್ಲೇಮ್ ಮಾಡುವ ವಿಧಾನ ಇದು:

    ಎಸ್​ಬಿಐನಲ್ಲಿ ಜನ್ ಧನ್ ಖಾತೆ ಹೊಂದಿದ ವ್ಯಕ್ತಿಗಳು ಅಪಘಾತದಲ್ಲಿ ಮೃತಪಟ್ಟರೆ ಅವರ ವಾರಸುದಾರರು ಈ ಅಪಘಾತ ವಿಮೆಯ ಹಣ ಪಡೆಯುವ ಮಾರ್ಗ ಸುಲಭ ಇದೆ. ಇನ್ಸೂರೆನ್ಸ್ ಕ್ಲೇಮ್ ಫಾರ್ಮ್ ಪಡೆದು ಅದನ್ನ ಭರ್ತಿ ಮಾಡಬೇಕು. ಅಪಘಾತದಲ್ಲಿ ಮೃತಪಟ್ಟ ಬ್ಯಾಂಕ್ ಖಾತೆದರರ ಡೆತ್ ಸರ್ಟಿಫಿಕೇಟ್​ನ ಒಂದು ಪ್ರತಿಯನ್ನ ಲಗತ್ತಿಸಬೇಕು. ಅಪಘಾತ ಘಟನೆಗೆ ಸಂಬಂಧಿಸಿದ ಎಫ್​ಐಆರ್​ನ ಒಂದು ಪ್ರತಿ, ಶವಪರೀಕ್ಷೆ ವರದಿ, ವಿಧಿವಿಜ್ಞಾನ ಪರೀಕ್ಷೆ ವರದಿ, ಮೃತರ ಆಧಾರ್ ಕಾರ್ಡ್ ಪ್ರತಿ ಈ ದಾಖಲೆಗಳನ್ನ 90 ದಿನದೊಳಗೆ ಸಲ್ಲಿಸಬೇಕು.

    ಜನ್ ಧನ್ ಖಾತೆಯ ಉದ್ದೇಶ:

    ಸರ್ಕಾರದ ಯೋಜನೆಗಳ ಲಾಭವನ್ನು ನೇರವಾಗಿ ಜನರಿಗೆ ತಲುಪಿಸುವುದು ಜನ್ ಧನ್ ಖಾತೆಯ ಮುಖ್ಯ ಉದ್ಧೇಶವಾಗಿದೆ. ಪ್ರತಿಯೊಬ್ಬ ಬಡವರು, ರೈತರು ಎಲ್ಲರೂ ಬ್ಯಾಂಕ್ ಖಾತೆಯನ್ನ ಹೊಂದುವಂತೆ ಮಾಡಿ, ಆ ಬಳಿಕ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಮಧ್ಯವರ್ತಿಗಳ ನೆರವಿಲ್ಲದೇ ನೇರವಾಗಿ ಅಕೌಂಟ್​ಗಳಿಗೆ ಹಣ ವರ್ಗಾವಣೆ ಮಾಡಲು ಜನ್ ಧನ್ ಖಾತೆ ನೆರವಾಗಿದೆ.

    ಇದನ್ನೂ ಓದಿ: Credit Card ಬಳಕೆದಾರರೇ ಅಲರ್ಟ್.. ದೊಡ್ಡ ದೊಡ್ಡ ಬಿಲ್ ಬರುವುದನ್ನು ತಪ್ಪಿಸಲು 5 ಸರಳ ವಿಧಾನ ಇಲ್ಲಿದೆ

    ಯಾವುದೇ ಬ್ಯಾಂಕ್​ನಲ್ಲಿ ಬೇಕಾದರೂ ಜನ್ ಧನ್ ಖಾತೆಯನ್ನ ತೆರೆಯಬಹುದಾಗಿದೆ. ಈ ಖಾತೆ ತೆರೆಯಲು ಯಾವುದೇ ಠೇವಣಿ ಇಡುವ ಅಗತ್ಯ ಇರುವುದಿಲ್ಲ. ಈ ಖಾತೆ ತೆರೆದವರಿಗೆ RuPay ಡೆಬಿಟ್ ಕಾರ್ಡ್ ಸಿಗುತ್ತದೆ. ಈ ರುಪೇ ಕಾರ್ಡ್​ದಾರರಿಗೆ ಲೈಫ್ ಇನ್ಸೂರೆನ್ಸ್ ಮತ್ತಿತರ ಕೆಲ ವಿಶೇಷ ಸವಲತ್ತು, ಸೌಲಭ್ಯಗಳು ಸಿಗುತ್ತವೆ.

    ಜನ್ ಧನ್ ಖಾತೆದಾರರಿಗೆ ಸಿಗುವ ಸೌಲಭ್ಯಗಳೇನೇನು?

    ಎರಡು ಲಕ್ಷ ರೂ ವರೆಗಿನ ಆಕ್ಸಿಡೆಂಟ್ ಇನ್ಷೂರೆನ್ಸ್ ಹಣದ ಜೊತೆಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ (PMSBY), ಅಟಲ್ ಪೆನ್ಷನ್ ಯೋಜನಾ (APY), ಕಿರು ಘಟಕಗಳ ಅಭಿವೃದ್ಧಿ ಬ್ಯಾಂಕ್ (MUDRA) ಯೋಜನೆಗಳ ಹಣವನ್ನು ನಿಗದಿತ ಫಲಾನುಭವಿಗಳು ಜನ್ ಧನ್ ಖಾತೆ ಮೂಲಕ ನೇರವಾಗಿ ಪಡೆಯಬಹುದು.
    Published by:Vijayasarthy SN
    First published: