RBI Repo ದರ ಏರಿಕೆ ನಿಮ್ಮ ಮನೆ-ವಾಹನ ಸಾಲಗಳ EMI ಅನ್ನು ಎಷ್ಟು ದುಬಾರಿ ಮಾಡಿದೆ ನೋಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಮೇ ತಿಂಗಳಿನಲ್ಲಿ 7.15% ಗಳಷ್ಟು ಬಡ್ಡಿದರವನ್ನು ಪಾವತಿಸುತ್ತಿದ್ದಿರಿ. ಅದಕ್ಕೂ ಮುಂಚೆ ಬಡ್ಡಿದರ 6.75% ರಷ್ಟಿತ್ತು. ಇದೀಗ 25 ಬೆಸಿಸ್ ಪಾಯಿಂಟ್ ರಿಸರ್ವ್ ಬ್ಯಾಂಕ್ ಏರಿಸಿರುವುದರಿಂದ ಈಗ ನೀವು ತೆಗೆದುಕೊಂಡ ಸಾಲಕ್ಕೆ 9.25% ರಷ್ಟು ಬಡ್ಡಿದರವನ್ನು ಪಾವತಿಸಬೇಕಾಗಿರುತ್ತದೆ.

  • Trending Desk
  • 4-MIN READ
  • Last Updated :
  • Share this:

    ಈ ಹಿಂದೆ ಆರ್ಥಿಕ ತಜ್ಞರು ವಿತ್ತಿಯ ನೀತಿ ಸಮಿತಿಯನ್ನು ಉದ್ದೇಶಿಸಿ ಭಾರತೀಯ ಕೇಂದ್ರ ಬ್ಯಾಂಕ್ (RBI) ತನ್ನ ರೆಪೊ ದರವನ್ನು (Repo Rate) ಏರಿಸುವ ನಿರೀಕ್ಷೆ ಹೊರಹಾಕಿದ್ದರು. ಅದರಂತೆ ಈಗ ರಿಸರ್ವ್ ಬ್ಯಾಂಕ್ 25 ಬೆಸಿಸ್ ಪಾಯಿಂಟ್ ಗಳಷ್ಟು ರೆಪೊ ದರವನ್ನು ಹೆಚ್ಚಿಸಿದೆ. ರಿಸರ್ವ್ ಬ್ಯಾಂಕ್ ಏರಿಸಿರುವ ಈ ರೆಪೊ ದರ ಖಂಡಿತವಾಗಿಯೂ ನಿಮ್ಮ ಮನೆಸಾಲ (Home Loan) ಅಥವಾ ವಾಹನ ಸಾಲದ (Vehicle Loan) ಮೇಲೆ ಪ್ರಭಾವ ಬೀರಲಿದೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾದರೆ ಇದು ಯಾವ ರೀತಿ ಪ್ರಭಾವ ಬೀರಬಹುದು, ನಿಮ್ಮ ಇಎಂಐ ಎಷ್ಟಾಗಬಹುದು ಎಂಬುದರ ಒಂದು ಸರಳ ಲೆಕ್ಕಾಚಾರವನ್ನು ಈ ಲೇಖನದ ಮೂಲಕ ತಿಳಿಯಿರಿ.


    ಪ್ರಸ್ತುತ ಬೆಸಿಸ್ ಪಾಯಿಂಟ್ ಗಳ ಹೆಚ್ಚಳ ಕಳೆದ ಬಾರಿ ಇದ್ದ ಬಡ್ಡಿದರವನ್ನು ಹೋಲಿಸಿದರೆ ಈ ಬಾರಿ ಸಾಕಷ್ಟು ಏರಿಕೆಯಾಗಿರುವುದನ್ನು ಗಮನಿಸಬಹುದು. ಇದು ನೀವು ಕಟ್ಟುವ ಇಎಂಐ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದನ್ನು ಸರಳವಾಗಿ ಉದಾಹರಣೆಯ ಮೂಲಕ ತಿಳಿಯಬೇಕೆಂದರೆ ಈ ಕೆಳಗಿನಂತಿರುತ್ತದೆ.


    ಮನೆ ಸಾಲ ಹಾಗೂ ಇಎಂಐ ಲೆಕ್ಕಾಚಾರ


    ನೀವು ಕಳೆದ ವರ್ಷ 50 ಲಕ್ಷ ರೂಪಾಯಿಗಳನ್ನು ಮನೆಸಾಲವನ್ನಾಗಿ 20 ವರ್ಷಗಳ ಅವಧಿಗೆ ಪಡೆದಿರುವಿರಿ ಎಂದು ತಿಳಿಯಿರಿ. ಈ ಮೊತ್ತಕ್ಕೆ ನೀವು ಕಳೆದ ಮೇ ತಿಂಗಳಿನಲ್ಲಿ 7.15% ಗಳಷ್ಟು ಬಡ್ಡಿದರವನ್ನು ಪಾವತಿಸುತ್ತಿದ್ದಿರಿ. ಅದಕ್ಕೂ ಮುಂಚೆ ಬಡ್ಡಿದರ 6.75% ರಷ್ಟಿತ್ತು. ಇದೀಗ 25 ಬೆಸಿಸ್ ಪಾಯಿಂಟ್ ರಿಸರ್ವ್ ಬ್ಯಾಂಕ್ ಏರಿಸಿರುವುದರಿಂದ ಈಗ ನೀವು ತೆಗೆದುಕೊಂಡ ಸಾಲಕ್ಕೆ 9.25% ರಷ್ಟು ಬಡ್ಡಿದರವನ್ನು ಪಾವತಿಸಬೇಕಾಗಿರುತ್ತದೆ.




    ಇನ್ನು ಈ ಮೊತ್ತಕ್ಕೆ ಕಟ್ಟುವ ಇಎಂಐ ಲೆಕ್ಕಾಚಾರವನ್ನು ಮಾಡಿದಾಗ ಅದು ರೀತಿ ಇರುತ್ತದೆ. ಬಡ್ಡಿದರ 6.75% ರಷ್ಟಿದ್ದಾಗ ನೀವು ಮಾಸಿಕ ಕಂತಾಗಿ ರೂ. 38,018 ಹಾಗೂ ಕಳೆದ ವರ್ಷ ರೂ. 39,216 ಅನ್ನು ಪಾವತಿಸುತ್ತಿದ್ದಿರಿ. ಇದೀಗ ಈ ವರ್ಷದಿಂದ ಅದೇ ಮೊತ್ತಕ್ಕೆ ನೀವು ಮಾಸಿಕ ಕಂತನ್ನು 45,793 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.


    ವಾಹನ ಸಾಲ ಹಾಗೂ ಇಎಂಐ ಲೆಕ್ಕಾಚಾರ


    ಇನ್ನು, ವಾಹನ ಸಾಲದ ಬಗ್ಗೆ ಒಂದು ನೋಟ ಬೀರೋಣ. ನೀವು ಐದು ಲಕ್ಷ ರೂಪಾಯಿಯನ್ನು ಮೂರು ವರ್ಷಗಳ ಅವಧಿಗೆ ವಾಹನ ಸಾಲವನ್ನಾಗಿ ಪಡೆದಿದ್ದಿರಿ ಎಂದು ಅಂದುಕೊಳ್ಳಿ. ಕಳೆದ ಬಾರಿ ಅಂದರೆ ಮೇ 2022 ರಲ್ಲಿ 40 ಬೆಸಿಸ್ ಪಾಯಿಂಟ್ ಹೆಚ್ಚಳದೊಂದಿಗೆ 9% ಬಡ್ಡಿದರವನ್ನು ಪಾವತಿಸುತ್ತಿದ್ದಿರಿ. ಅಂದರೆ ನೀವು ಈ ಮೊತ್ತಕ್ಕಾಗಿ ಮಾಸಿಕ ಕಂತು 15,900 ರೂಪಾಯಿಗಳನ್ನು ಪಾವತಿಸುತ್ತಿದ್ದಿರಿ.


    ಇದೀಗ ಮತ್ತೆ 25 ರೆಪೊದರ ಹೆಚ್ಚಳವಾಗಿದ್ದು ಈ ಬಾರಿ ನೀವು 11.1% ರಷ್ಟು ಬಡ್ಡಿದರವನ್ನು ಪಾವತಿಸಬೇಕಾಗಿರುತ್ತದೆ. ಅಂದರೆ ಐದು ಲಕ್ಷ ಸಾಲಕ್ಕೆ ಮೂರು ವರ್ಷಗಳ ಅವಧಿಯಲ್ಲಿ ನೀವು ಮಾಸಿಕ ಕಂತು 16,393 ರೂಪಾಯಿಗಳನ್ನು ಪಾವತಿಸಬೇಕಾಗಿರುತ್ತದೆ.


    ಇದನ್ನೂ ಓದಿ: Senior Citizen: ಹಿರಿಯ ನಾಗರಿಕರಿಗೆ ಅತ್ಯುತ್ತಮ ಬಡ್ಡಿದರ ನೀಡುವ ಟಾಪ್ ಬ್ಯಾಂಕ್​ಗಳಿವು!


    ಈ ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದಾಗ ಈ ಬಾರಿ ನೀವು ಇಎಂಐ ನಲ್ಲಿ ಹೆಚ್ಚಿನ ಮೊತ್ತವನ್ನು ಕಟ್ಟಬೇಕಾದ ಅನಿವಾರ್ಯ ಪರಿಸ್ಥಿತಿ ಇರುವುದನ್ನು ಕಾಣಬಹುದು. ಹಾಗಾಗಿ ನೀವು ಬಜೆಟ್ ಅನ್ನು ಹೊಂದಿಸಬೇಕಾದ ಸಂದರ್ಭದಲ್ಲಿ ಸಾಕಷ್ಟು ಮುಂದಾಲೋಚನೆ ಮಾಡಿ ಸಾಲಕ್ಕೆ ಹೋಗುವುದು ಉತ್ತಮ ನಿರ್ಧಾರವಾಗಬಹುದು.


    ಹೇಗೆ ನಿಭಾಯಿಸಬಹುದು?


    ಕೆಲವೊಮ್ಮೆ ಅವಧಿಯನ್ನು ವಿಸ್ತರಿಸಿಕೊಂಡು ಇಎಂಐ ಮೊತ್ತವನ್ನು ಕಡಿಮೆ ಮಾಡಿಕೊಳ್ಳಲು ಜನ ಬಯಸುತ್ತಿರುತ್ತಾರೆ. ಏಕೆಂದರೆ ಮಾಸಿಕವಾಗಿ ವೆಚ್ಚವಾಗುವ (ಇಎಂಐ ಮೂಲಕ) ಮೊತ್ತ ಹತೋಟಿಯಲ್ಲಿದ್ದರೆ ಇತರೆ ಮನೆ ವೆಚ್ಚಗಳನ್ನು ಸರಿದೂಗಿಸಬಹುದೆಂಬ ಲೆಕ್ಕಾಚಾರ ಅವರದ್ದಾಗಿರುತ್ತದೆ.




    ಆದರೆ ಈಗ ದುರದೃಷ್ಟಕರ ಸಂಗತಿ ಎಂದರೆ ಇದೀಗ ಮನೆ ನಿರ್ಮಾಣ ಅಥವಾ ವಾಹನ ಖರೀದಿಗೆಂದು ಸಾಲ ನೀಡುತ್ತಿರುವ ಅನೇಕ ಮಂಚೂಣಿ ಬ್ಯಾಂಕುಗಳು ಸಾಲದ ಅವಧಿಯ ವಿಷಯದಲ್ಲಿ ಹೆಚ್ಚಿನ ಫ್ಲೆಕ್ಸಿಬಿಲಿಟಿ ನೀಡುತ್ತಿಲ್ಲ. ಅಂದರೆ ಅವರು ಯಾವುದೇ ರೀತಿಯ ಅವಧಿ ಹೆಚ್ಚಳ ಅಥವಾ ಕಡಿತ ಮಾಡುತ್ತಿಲ್ಲ. ಇದು ನಿಜಕ್ಕೂ ಕಷ್ಟಕರ ಪರಿಸ್ಥಿತಿಯಾಗಿದ್ದು ನಿಮ್ಮ ಬ್ಯಾಂಕಿನೊಂದಿಗೆ ನೀವೇ ಕುಳಿತುಕೊಂಡು ಯಾವುದಾದರೊಂದು ಒಪ್ಪಿತ ನಿರ್ಧಾರಕ್ಕೆ ಬರಬೇಕಾಗುತ್ತದೆ.


    ತದನಂತರ, ನೀವು ಇಎಂಐ ಕಟ್ಟುತ್ತಿದ್ದಲ್ಲಿ ನಿಮ್ಮ ಮಾಸಿಕ ಬಜೆಟ್ ಅನ್ನು ಸಾಕಷ್ಟು ಪ್ರಜ್ಞಾಪೂರ್ವಕವಾಗಿ ಹೊಂದಿಸಿಕೊಳ್ಳುವುದು ಉತ್ತಮ. ಅನವಶ್ಯಕವಾದಂತಹ ವಸ್ತುಗಳ ಖರೀದಿ ಮಾಡದಿರುವುದು, ಮುಂದೂಡಲು ಅವಕಾಶವಿರುವಂತಹ ಪ್ರವಾಸಗಳನ್ನು ಮುಂದೂಡುವುದು, ವಿಶೇಷವಾಗಿ ನಿಮ್ಮ ಬಳಿ ಇರುವ ಮೊಬೈಲ್ ಫೋನ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ಪರಿಕರಗಳು ಈಗಲೂ ಕಾರ್ಯನಿರ್ವಹಿಸುತ್ತಿದ್ದರೆ ಹೆಚ್ಚುವರಿಯಾಗಿ ಮಾತೆ ಅವುಗಳನ್ನು ಖರೀದಿಸುವ ನಿರ್ಧಾರ ಮುಂದೂಡುವುದು ಮುಂತಾದ ಕೆಲ ಕ್ರಮಗಳನ್ನು ಪಾಲಿಸುವ ಮೂಲಕ ನಿಮ್ಮ ಬಜೆಟ್ ಅನ್ನು ಸಮರ್ಪಕವಾಗಿ ಹೊಂದಿಸಿಕೊಳ್ಳಬಹುದಾಗಿದೆ.

    Published by:Kavya V
    First published: