• Home
  • »
  • News
  • »
  • business
  • »
  • ಜರ್ಮನಿಯಲ್ಲೂ ಇಲ್ವಂತೆ ಈ ಸೇವೆ! Paytm ಕ್ರಾಂತಿಯಿಂದ ಹಲವು ಬದಲಾವಣೆ

ಜರ್ಮನಿಯಲ್ಲೂ ಇಲ್ವಂತೆ ಈ ಸೇವೆ! Paytm ಕ್ರಾಂತಿಯಿಂದ ಹಲವು ಬದಲಾವಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪೇಟಿಎಂ ಲಕ್ಷಾಂತರ ಭಾರತೀಯರಿಗೆ ಗೋ-ಟು ಪೇಮೆಂಟ್ ಆಯ್ಕೆಯಾಗಿ ಮಾರ್ಪಟ್ಟಿದೆ, "ಪೇಟಿಎಂ ಕರೋ" ಎಂಬ ಸ್ಲೋಗನ್​ನೊಂದಿಗೆ ಇದು ತುಂಬಾನೇ ಜನಪ್ರಿಯವಾಗಿದೆ.

  • Share this:

ಈಗಂತೂ ನಮ್ಮ ಭಾರತದಲ್ಲಿ ಎಲ್ಲೆ ನೋಡಿದರೂ ಈ ಡಿಜಿಟಲ್ ಪೇಮೆಂಟ್ ನದ್ದೆ ಹವಾ ಅಂತ ಹೇಳಬಹುದು. ಕ್ಯೂಆರ್ ಕೋಡ್ ಕ್ರಾಂತಿಗೆ ನಾಂದಿ ಹಾಡಿದ ಡಿಜಿಟಲ್ ಪಾವತಿ (Digital Payment) ದೈತ್ಯ ಪೇಟಿಎಂ, ಭಾರತೀಯ ಬಳಕೆದಾರರಲ್ಲಿ ಮಾತ್ರವಲ್ಲದೇ ತಮ್ಮ ತಾಯ್ನಾಡಿಗೆ ಭೇಟಿ ನೀಡುವ ಅನಿವಾಸಿ ಭಾರತೀಯರಿಗೂ ಬಳಸಲು ತುಂಬಾನೇ ಸುಲಭವಾಗಿರುತ್ತದೆ ಅಂತ ಹೇಳಬಹುದು. ಈಗ ಬಹುತೇಕರು ತಮ್ಮ ಜೇಬಿನಲ್ಲಿ ಹಣ (Money) ಇಟ್ಟುಕೊಂಡು ಓಡಾಡುತ್ತಿಲ್ಲ, ಬದಲಿಗೆ ಅವರ ಮೊಬೈಲ್ ಫೋನ್ ನಲ್ಲಿ ಪೇಟಿಎಂ ಅಪ್ಲಿಕೇಶನ್ (Paytm App) ಅನ್ನು ಡೌನ್ಲೋಡ್ ಮಾಡಿಕೊಂಡು ಅದರಿಂದ ಹಣವನ್ನು ಪಾವತಿಸುವ ರೂಢಿಯನ್ನು ಬೆಳೆಸಿಕೊಂಡಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಎಲ್ಲಲ್ಲೂ ಪೇಟಿಎಂನದ್ದೆ ಹವಾ
ಎತ್ತಿನ ಗಾಡಿಯಲ್ಲಿ ಬೆಲ್ಲವನ್ನು ಮಾರಾಟ ಮಾಡುವವರಿಂದ ಹಿಡಿದು ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುವವರವರೆಗೆ, ಪೇಟಿಎಂ ಅನ್ನು ದೇಶಾದ್ಯಂತ ಸಣ್ಣ ವ್ಯಾಪಾರಿಗಳು ಬಳಸುತ್ತಿದ್ದಾರೆ.


ಇದು ದೈನಂದಿನ ಚಿಕ್ಕಪುಟ್ಟ ಮತ್ತು ದೊಡ್ಡ ಹಣದ ವಹಿವಾಟುಗಳನ್ನು ತುಂಬಾನೇ ಸುಲಭಗೊಳಿಸಿದೆ. ಮೊಬೈಲ್ ಮತ್ತು ಕ್ಯೂಆರ್ ಪಾವತಿಗಳ ಪ್ರವರ್ತಕರು ಭಾರತೀಯರನ್ನು ಹೇಗೆ ಸಬಲೀಕರಣಗೊಳಿಸಿದ್ದಾರೆ ಎಂಬುದನ್ನು ಎತ್ತಿ ತೋರಿಸಲು ಅನೇಕ ಬಳಕೆದಾರರು ತಮ್ಮ ಟ್ವಿಟ್ಟರ್ ಖಾತೆಯ ಪುಟಗಳಲ್ಲಿ ಅನೇಕ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ನೋಡಿ.


ಜರ್ಮನಿಯಲ್ಲೂ ಇಲ್ವಂತೆ ಇಂಥಾ ಸೇವೆ
ದೆಹಲಿಯ ರಸ್ತೆ ಬದಿಯ ಮಾರಾಟಗಾರರಲ್ಲಿ ತರಕಾರಿಗಳಿಗೆ ಪಾವತಿಸಲು ಪೇಟಿಎಂ ಅನ್ನು ಬಳಸಿದ ಅನುಭವವನ್ನು ಹಂಚಿಕೊಳ್ಳಲು ಬಳಕೆದಾರರೊಬ್ಬರು “11 ವರ್ಷಗಳಿಂದ ಜರ್ಮನಿಯಲ್ಲಿ ವಾಸಿಸುತ್ತಿದ್ದೇನೆ. ನಾನು ಈ ಪಾವತಿ ವಿಧಾನದ ಅನುಕೂಲತೆಯಿಂದ ತುಂಬಾನೇ ಪ್ರಭಾವಿತನಾಗಿದ್ದೇನೆ. ಜರ್ಮನಿಯಲ್ಲಿಯೂ ಸಹ ಇಂತಹ ಸುಲಭ ಪಾವತಿಯನ್ನು ಇನ್ನೂ ಅನುಭವಿಸಿಲ್ಲ” ಎಂದು ರಾಘವ್ ಒಬೆರಾಯ್ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರು ಉಲ್ಲೇಖಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ರಾಘವ್ ಒಬೆರಾಯ್ ಅವರು "ಕೇವಲ 1 ಕೆಜಿ ಗೋಬಿ ಖರೀದಿಸಿ ಪೇಟಿಎಂ ಮೂಲಕ ಹಣವನ್ನು ಪಾವತಿಸಿದ್ದೇನೆ” ಎಂದು ಹೇಳಿದರು.


ಪೇಟಿಎಂ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ ನೆಟ್ಟಿಗರು?
ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಈ ಟ್ವೀಟ್ ಗೆ ಪ್ರತಿಕ್ರಿಯಿಸಿ "ಖಂಡಿತವಾಗಿಯೂ! ಅನೇಕ ಅಭಿವೃದ್ಧಿಗಳಲ್ಲಿ ಪೇಟಿಎಂ ಕರೋ ಸಹ ಒಂದು” ಎಂದು ಹೇಳಿದ್ದಾರೆ.


ಐಟಿ ಉದ್ಯಮ ಸಂಸ್ಥೆ ನಾಸ್ಕಾಂನ ಅಧ್ಯಕ್ಷ ದೇಬ್ಜಾನಿ ಘೋಷ್ ಕೂಡ ಪೇಟಿಎಂ ಜೊತೆಗಿನ ಟ್ವಿಟರ್ ಬಳಕೆದಾರರ ಅನುಭವಕ್ಕೆ ಪ್ರತಿಕ್ರಿಯಿಸಿದ್ದಾರೆ. ದೇಶದಲ್ಲಿ ಡಿಜಿಟಲ್ ಪಾವತಿ ವಿಧಾನಗಳ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ನಗದುರಹಿತ ಆರ್ಥಿಕತೆಗೆ ಸರ್ಕಾರದ ಒತ್ತಡವನ್ನು ಎತ್ತಿ ತೋರಿಸುವ "ಡಿಜಿಟಲ್ ಇಂಡಿಯಾಕ್ಕೆ ಸ್ವಾಗತ" ಎಂದು ಘೋಷ್ ಬರೆದಿದ್ದಾರೆ. ಪೇಟಿಎಂ ಲಕ್ಷಾಂತರ ಭಾರತೀಯರಿಗೆ ಗೋ-ಟು ಪೇಮೆಂಟ್ ಆಯ್ಕೆಯಾಗಿ ಮಾರ್ಪಟ್ಟಿದೆ, "ಪೇಟಿಎಂ ಕರೋ" ಎಂಬ ಸ್ಲೋಗನ್​ನೊಂದಿಗೆ ಇದು ತುಂಬಾನೇ ಜನಪ್ರಿಯವಾಗಿದೆ.


ವೈರಲ್ ಆಗಿತ್ತು ವಿಡಿಯೋ
ಜೈಪುರದ ಎತ್ತಿನ ಗಾಡಿಯಲ್ಲಿ ಬೆಲ್ಲ ಮಾರಾಟಗಾರನು ಗ್ರಾಹಕರಿಗೆ ಪಾವತಿಸಲು ಮೂರು ಪೇಟಿಎಂ ಕ್ಯೂಆರ್ ಕೋಡ್​ಗಳನ್ನು ಇರಿಸಿಕೊಂಡಿರುವ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಅದಕ್ಕೆ "ದೇಶ್ ಬದಲ್ ರಹಾ ಹೈ" ಎಂದು ಸೂಕ್ತವಾಗಿ ಶೀರ್ಷಿಕೆ ನೀಡಿದ್ದಾರೆ.


ಈ ಪ್ಲಾಟ್‌ಫಾರ್ಮ್ ಮೂಲಕ ಪಾವತಿಗಳನ್ನು ಸ್ವೀಕರಿಸುವ ಅನುಕೂಲತೆಯು ಪೇಟಿಎಂ ಅನ್ನು ಸಣ್ಣ ಮಾರಾಟಗಾರರಲ್ಲಿಯೂ ಸಹ ನೆಚ್ಚಿನದನ್ನಾಗಿ ಮಾಡಿದೆ. ಇನ್ನೊಬ್ಬ ಟ್ವಿಟ್ಟರ್ ಬಳಕೆದಾರ ರಿತು ಚುಗ್, ತನ್ನ ಸ್ಥಳೀಯ ಹಣ್ಣಿನ ಮಾರಾಟಗಾರ ಪೇಟಿಎಂ ನೀಡುವ ಯುಪಿಐ ಅನುಭವದಿಂದ ವಿಶೇಷವಾಗಿ ಸಂತೋಷಗೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: Hero Splendor Plus Bike: ಬಂಪರ್​ ಆಫರ್​, ಜಸ್ಟ್​ 20 ಸಾವಿರಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್!


ಮಾರಾಟಗಾರನು ಇನ್ನು ಮುಂದೆ ಸಣ್ಣ ಪಾವತಿಗಳಿಗಾಗಿ ಜನರನ್ನು ಬೆನ್ನಟ್ಟಬೇಕಾಗಿಲ್ಲ ಎಂದು ಅವರು ಗಮನಿಸಿದ್ದಾರೆ. "ಈ ಆವಿಷ್ಕಾರವು ಎಲ್ಲಾ ತುಂಬಾನೇ ಯಶಸ್ಸು ಕಂಡಿದೆ" ಎಂದು ಅವರು ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರನ್ನು ಟ್ಯಾಗ್ ಮಾಡಿದ್ದಾರೆ.


ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಭಾರತವು ಗಮನಾರ್ಹ ದಾಪುಗಾಲು ಹಾಕಿದೆ ಮತ್ತು ಈ ಯಶಸ್ಸಿಗೆ ಕೊಡುಗೆ ನೀಡುವ ಪ್ರಮುಖ ಅಂಶಗಳಲ್ಲಿ ಪೇಟಿಎಂನಂತಹ ಮೊಬೈಲ್ ಪಾವತಿ ಪ್ಲಾಟ್‌ಫಾರ್ಮ್ ಗಳ ಬೆಳವಣಿಗೆಯೂ ಸಹ ಒಂದು ಎಂದು ಹೇಳಬಹುದು.


ಪೇಟಿಎಂ ಅನ್ನು ಬಳಸಿದ್ರಂತೆ ಜರ್ಮನ್ ವಿದೇಶಾಂಗ ಸಚಿವ..
ಕಾಕತಾಳೀಯವೆಂಬಂತೆ, ಇತ್ತೀಚೆಗೆ ಭಾರತಕ್ಕೆ ಎರಡು ದಿನಗಳ ಅಧಿಕೃತ ಭೇಟಿ ನೀಡಿದ್ದ ಜರ್ಮನ್ ವಿದೇಶಾಂಗ ಸಚಿವ ಅನ್ನಾಲೆನಾ ಬೇರ್ಬಾಕ್ ಅವರು ದೆಹಲಿಯ ಚಾಂದನಿ ಚೌಕ್ ನಲ್ಲಿ ಶಾಪಿಂಗ್ ಮಾಡುವಾಗ ಪೇಟಿಎಂ ಅನ್ನು ಬಳಸಿದರು.


ಇದನ್ನೂ ಓದಿ: Gold And Silver Price: ಚಿನ್ನದ ಮೇಲೆ ಹೂಡಿಕೆ ಮಾಡಬೇಕಾ? ಇಂದಿನ ಬಂಗಾರದ ದರ ಇಲ್ಲಿದೆ


ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ನ ಸಹ-ಸಂಸ್ಥಾಪಕ ಮತ್ತು ಸಹ-ಅಧ್ಯಕ್ಷರಾಗಿರುವ ಅಮೆರಿಕನ್ ಲೋಕೋಪಕಾರಿ ಮೆಲಿಂಡಾ ಫ್ರೆಂಚ್ ಗೇಟ್ಸ್ ಅವರು ಸಹ ಈ ವಾರದ ಆರಂಭದಲ್ಲಿ ದೆಹಲಿಯ ಕಿರಾಣಿ ಅಂಗಡಿಯಲ್ಲಿ ನೀರಿನ ಬಾಟಲಿಗೆ ಪಾವತಿಸಲು ಪೇಟಿಎಂ ಅನ್ನು ಬಳಸಿದರು.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು