PPF ಖಾತೆದಾರರು ಮೆಚ್ಯೂರಿಟಿ ಮೊದಲು ಮರಣಹೊಂದಿದ್ರೆ, ಹಣವನ್ನು ಕ್ಲೈಮ್ ಮಾಡೋದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾವುದೇ ಖಾತೆದಾರರು ಪ್ರತಿ ಹಣಕಾಸು ವರ್ಷದಲ್ಲಿ ರೂ 500 ರಿಂದ ರೂ 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಆದಾಯ ತೆರಿಗೆ ಸೆಕ್ಷನ್ 80C ಅಡಿಯಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ನೀವು ಕ್ಲೈಮ್ ಮಾಡಬಹುದು

  • Share this:

ದೇಶದ ಪ್ರತಿಯೊಂದು ಇಲಾಖೆಗೂ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದು ಸಾರ್ವಜನಿಕ ಭವಿಷ್ಯ ನಿಧಿ (Public Provident Fund)  . ಇದರಲ್ಲಿ ಹೂಡಿಕೆ (Invest) ಮಾಡುವುದರಿಂದ ಉದ್ಯೋಗವಿಲ್ಲದಿದ್ದರೂ ಪಿಪಿಎಫ್ ಖಾತೆಯ (PPF Account)  ಲಾಭ ಪಡೆಯಬಹುದು. ಈ ಯೋಜನೆಯಲ್ಲಿ ಒಬ್ಬರು ಒಟ್ಟು 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಇದರಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಹೆಚ್ಚಿನ ಬಡ್ಡಿದರದ ಜೊತೆಗೆ ತೆರಿಗೆ ಉಳಿತಾಯದ ಲಾಭವನ್ನು (Profit) ನೀಡುತ್ತದೆ. ಯಾವುದೇ ಖಾತೆದಾರರು ಪ್ರತಿ ಹಣಕಾಸು ವರ್ಷದಲ್ಲಿ ರೂ 500 ರಿಂದ ರೂ 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಆದಾಯ ತೆರಿಗೆ ಸೆಕ್ಷನ್ 80C ಅಡಿಯಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ನೀವು ಕ್ಲೈಮ್ ಮಾಡಬಹುದು


ಹೂಡಿಕೆದಾರ ಮೃತಟ್ಟರೆ ಹಣ ಕ್ಲೈಮ್​ ಮಾಡೋದು ಹೇಗೆ?


PPF ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ, ಸರ್ಕಾರವು ಸಂಯುಕ್ತ ಆಧಾರದ ಮೇಲೆ 7.10 ಶೇಕಡಾ ಬಡ್ಡಿದರವನ್ನು ಪಾವತಿಸುತ್ತಿದೆ. 3 ವರ್ಷಗಳ ನಂತರ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ ನೀವು ಸಾಲವನ್ನು ತೆಗೆದುಕೊಳ್ಳಬಹುದು. ಒಂದು ವೇಳೆ. ಒಂದು ವೇಳೆ PPF ಖಾತೆದಾರರು ಮೆಚ್ಯೂರಿಟಿಯ ಮೊದಲು ಮರಣಹೊಂದಿದರೆ, ನಾಮಿನಿಯು ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಕ್ಲೈಮ್ ಮಾಡಬಹುದು.


ಈ ಎಲ್ಲಾ ದಾಖಲೆಗಳು ಬೇಕೇ ಬೇಕು!


ಕ್ಲೈಮ್ ಮೊತ್ತವು ರೂ 5 ಲಕ್ಷಕ್ಕಿಂತ ಕಡಿಮೆಯಿದ್ದರೆ, ನಾಮಿನಿಯು ಮರಣದ ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಮರಣ ಪ್ರಮಾಣಪತ್ರವನ್ನು ಮಾತ್ರ ಸಲ್ಲಿಸಬೇಕಾಗುತ್ತದೆ. ಮತ್ತೊಂದೆಡೆ, 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ, ಮರಣ ಪ್ರಮಾಣಪತ್ರ, ನ್ಯಾಯಾಲಯದಿಂದ ಉತ್ತರಾಧಿಕಾರ ಪ್ರಮಾಣಪತ್ರ ಮುಂತಾದ ಕೆಲವು ಕಾನೂನು ಪುರಾವೆಗಳು ಸಹ ಅಗತ್ಯವಾಗಬಹುದು.


ಪಿಪಿಎಫ್​ ಬೆಸ್ಟ್​ ಸ್ಕೀಮ್​!


ದೀರ್ಘಾವಧಿ ಸಮಯದವರೆಗೆ ಹಣ ಉಳಿತಾಯ (Savings Money) ಮಾಡಲು ಹಾಗೂ ಹೆಚ್ಚಿನ ಆದಾಯ ಗಳಿಸಲು ಈ ಸ್ಕೀಮ್ ಸೂಕ್ತವಾಗಿದೆ. ಯಾವುದೇ ಅಂಚೆ ಕಚೇರಿಯಲ್ಲಿ (Post Office) ಈ ಯೋಜನೆಗೆ ನೀವು ಖಾತೆ ತೆರೆಯಬಹುದಾಗಿದೆ.


ಇತರೆ ಯೋಜನೆಗಳಂತೆ ಈ ಹೂಡಿಕೆ ಬಳಸಿಕೊಂಡು ವೇಗವಾಗಿ ಶ್ರೀಮಂತರಾಗದೇ ಇದ್ದರೂ ಹೂಡಿಕೆ ಮಾಡಿದ ಮೊತ್ತಕ್ಕೆ ಭದ್ರತೆ ಸುರಕ್ಷತೆ ಇದ್ದೇ ಇರುತ್ತದೆ. ಪ್ರತಿಯೊಬ್ಬ ಹೂಡಿಕೆದಾರನು ಕೂಡ ತಮ್ಮ ತಮ್ಮ ಹಣಕ್ಕೆ ಸುರಕ್ಷತೆ ಹಾಗೂ ಖಾತ್ರಿ ಬಯಸುತ್ತಾರೆ. ಹಾಗಾಗಿಯೇ ಪಿಪಿಎಫ್ ವಿಶ್ವಾಸಾರ್ಹ ಯೋಜನೆಯಾಗಿ ಹೆಸರುವಾಸಿಯಾಗಿದೆ. ಅಂತೆಯೇ ಸರಕಾರದ ಖಾತ್ರಿಯನ್ನು ಈ ಯೋಜನೆಯಲ್ಲಿ ಪಡೆದುಕೊಳ್ಳಬಹುದಾಗಿದೆ.




top videos
    First published: