New Rules in September: ಹೊಸ ತಿಂಗಳು (New Month) ಬಂದಾಗ, ಹೊಸ ನಿಯಮಗಳು ಸಹ ಜಾರಿಗೆ ಬರುತ್ತವೆ. ಹಣ (Money) ದ ವಿಷಯಗಳು ವಿಶೇಷವಾಗಿ ಪ್ರಚಲಿತವಾಗಿದೆ. ಈ ನಿಯಮಗಳು ನಿಯಮಿತವಾಗಿ ಹಣಕಾಸಿನ ವಹಿವಾಟು ನಡೆಸುವವರ ಮೇಲೆ ಪರಿಣಾಮ ಬೀರುತ್ತವೆ. ಇನ್ನೇನು 5 ದಿನಗಳಲ್ಲಿ ಸೆಪ್ಟೆಂಬರ್ (September) ಬರುತ್ತಿದೆ. ಸೆಪ್ಟೆಂಬರ್ನಲ್ಲಿ ಜಾರಿಗೆ ಬರಲಿರುವ ಹೊಸ ನಿಯಮಗಳ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಸಿಲಾಗಿದೆ ನೋಡಿ. ಇವುಗಳಲ್ಲಿ ಕೆಲವು ಜನರಿಗೆ ಒಳ್ಳೆಯದಾದರೆ, ಇನ್ನು ಕೆಲವು ಗ್ರಾಹಕರ ಜೇಬಿಕೆ ಕತ್ತರಿ ಹಾಕುತ್ತವೆ. ವಿಮಾ ಪಾಲಿಸಿದಾರರಿಗೆ (Insurance) ಶುಭ ಸುದ್ದಿ ಸಿಗಲಿದೆ. ಜೊತೆಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG Gas Cylinder) , ಪ್ರಧಾನ ಮಂತ್ರಿ ಕಿಸಾನ್ ಯೋಜನೆ (Pradhan Mantri Kisan Yojana) ಸೇರಿ ಸಾಕಷ್ಟು ನಿಯಮಗಳು ಸೆಪ್ಟೆಂಬರ್ನಲ್ಲಿ ಬದಲಾವಣೆಯಾಗಲಿದೆ.
1) IRDAI
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಹೊಸ ನಿಯಮವನ್ನು ಜಾರಿಗೆ ತರಲಿದೆ. ವಿಮಾ ಏಜೆಂಟ್ಗಳಿಗೆ ಮೊದಲ ವರ್ಷದ ಕಮಿಷನ್ ಮತ್ತು ಪ್ರೋತ್ಸಾಹವನ್ನು ಶೇಕಡಾ 20 ಕ್ಕೆ ಸೀಮಿತಗೊಳಿಸಲಾಗುವುದು. ಈ ನಿರ್ಧಾರವು ದೀರ್ಘಾವಧಿಯಲ್ಲಿ ಪಾಲಿಸಿದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು IRDIA ನಂಬುತ್ತದೆ. ಈ ಹೊಸ ನಿಯಮಗಳು ಸೆಪ್ಟೆಂಬರ್ನಲ್ಲಿಯೇ ಜಾರಿಗೆ ಬರುವ ಸಾಧ್ಯತೆ ಇದೆ.
ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸುತ್ತವೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಸುವ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಾಗುವುದು. ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆಯಾಗಬಹುದು, ಹೆಚ್ಚಾಗಬಹುದು ಅಥವಾ ಸ್ಥಿರವಾಗಿರಬಹುದು. ಮತ್ತು ಸೆಪ್ಟೆಂಬರ್ 1 ರಂದು ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗುತ್ತದೋ ಅಥವಾ ಕಡಿಮೆಯಾಗುತ್ತದೋ ಎಂದು ಕಾದು ನೋಡಬೇಕು.
3) ಪಿಎಂ ಕಿಸಾನ್
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಐಕೆವೈಸಿ ಪೂರ್ಣಗೊಳಿಸಲು ಆಗಸ್ಟ್ 31 ರವರೆಗೆ ಅವಕಾಶವಿದೆ. 12ನೇ ಕಂತು ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇರುವುದರಿಂದ ರೈತರು ಇಕೆವೈಸಿ ಪೂರ್ಣಗೊಳಿಸಬೇಕು. ಸೆಪ್ಟೆಂಬರ್ 1 ರಿಂದ KYC ಅನ್ನು ಪೂರ್ಣಗೊಳಿಸಲು ಯಾವುದೇ ಅವಕಾಶವಿರುವುದಿಲ್ಲ ಎಂದ ಹೇಳಲಾಗುತ್ತಿದೆ. ಈ ಗಡುವು ಅನ್ನು ಸರ್ಕಾರ ವಿಸ್ತರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ! ಒಂದೇ ಕಾರ್ಡ್ನಲ್ಲಿ ಎಲ್ಲಾ ಯೋಜನೆಗಳ ಡೀಟೆಲ್ಸ್ ಲಭ್ಯ
4) ಕಾರ್ಡ್ ನಿಯಮಗಳು
ಬ್ಯಾಂಕ್ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ನಿಯಮಗಳನ್ನು ಪ್ರಕಟಿಸಿದೆ . ಈ ನಿಯಮಗಳು ಮೂಲತಃ ಜುಲೈ 1 ರಿಂದ ಜಾರಿಗೆ ಬರಬೇಕಿತ್ತು. ಬ್ಯಾಂಕ್ಗಳು ಹೆಚ್ಚಿನ ಕಾಲಾವಕಾಶ ಕೋರಿದ್ದರಿಂದ ಆರ್ಬಿಐ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಿದೆ. ಹೊಸ ನಿಯಮಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿ ಬಗ್ಗೆ ಬಿಗ್ ಅಪ್ಡೇಟ್! ಸೆಪ್ಟೆಂಬರ್ 1 ರಿಂದ ಹೊಸ ನಿಯಮ ಜಾರಿ
5) ಆಡಿ ಕಾರುಗಳು
ಜರ್ಮನಿಯ ಐಷಾರಾಮಿ ಕಾರು ತಯಾರಕ ಆಡಿ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸುತ್ತಿದೆ. ಆಡಿ ಕಾರುಗಳ ಬೆಲೆ ಶೇ.2.4ರಷ್ಟು ಹೆಚ್ಚಾಗಲಿದೆ. ಹೊಸ ದರಗಳು ಸೆಪ್ಟೆಂಬರ್ 20 ರಿಂದ ಜಾರಿಗೆ ಬರಲಿವೆ. Audi A4, A6, A8 L, Q5, Q7, Q8, S5 Sportback, RS 5 Sportback, RS Q8 ಮಾದರಿಗಳು ಭಾರತದಲ್ಲಿ ಲಭ್ಯವಿವೆ. ಈ ಬೆಲೆಗಳು ಹೆಚ್ಚಾಗುತ್ತವೆ.
6) ಎಲೆಕ್ಟ್ರಿಕ್ ವಾಹನಗಳು
ಸರ್ಕಾರದ ಹೊಸ ನಿಯಮಗಳ ಪ್ರಕಾರ, ಪ್ರತಿ ಇ-ವಾಹನದಲ್ಲಿ ಬಳಸುವ ಬಿಡಿಭಾಗಗಳ ಮೂಲದ ಸಂಪೂರ್ಣ ಮಾಹಿತಿಯನ್ನು ಕಂಪನಿಗಳು ಒದಗಿಸಬೇಕಾಗುತ್ತದೆ. CNBC TV18 ವರದಿಯ ಪ್ರಕಾರ, ಎಂಟರ್ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ಅನ್ನು ಈಗ FAME-2 ಗೆ ಲಿಂಕ್ ಮಾಡಬೇಕಾಗುತ್ತದೆ. ಇದು ಇ-ವಾಹನಗಳನ್ನು ಸುರಕ್ಷಿತವಾಗಿಸುವುದಲ್ಲದೆ ಸ್ಥಳೀಯ ಬಿಡಿಭಾಗಗಳ ತಯಾರಕರನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದರಿಂದ ವಾಹನಗಳಲ್ಲಿ ಉತ್ತಮ ಗುಣಮಟ್ಟದ ಬಿಡಿಭಾಗಗಳ ಬಳಕೆ ಮತ್ತು ಕಾರುಗಳಿಗೆ ಬೆಂಕಿ ಹಚ್ಚುವ ಘಟನೆಗಳು ಕಡಿಮೆಯಾಗುತ್ತವೆ ಎಂದು ಸರ್ಕಾರ ನಂಬಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ