Kisan Drones: ಕರ್ನಾಟಕದ ಕೃಷಿಕರೂ ಡ್ರೋನ್ ಬಳಸಿ! ಬೆಲೆ, ಖರೀದಿ, ಸರ್ಕಾರಿ ಸೌಲಭ್ಯ ಹೇಗೆ ತಿಳಿದುಕೊಳ್ಳಿ

ಡ್ರೋನ್‌ಗಳು ಕೇವಲ 15 ನಿಮಿಷಗಳಲ್ಲಿ ಸುಮಾರು 1 ಎಕರೆ ಭೂಮಿಯಲ್ಲಿ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಸಾಕಷ್ಟು ಸಮಯ ಮತ್ತು ಶ್ರಮವನ್ನು ಉಳಿಸುತ್ತವೆ.

ಡ್ರೋನ್ ಬಳಸಿ ಲಾಭ ಗಳಿಸಿ

ಡ್ರೋನ್ ಬಳಸಿ ಲಾಭ ಗಳಿಸಿ

  • Share this:
ಈ ಎಲ್ಲಿ ಹೋದರೂ ಡ್ರೋನ್​ಗಳದ್ದೇ ಮಾತು.  ವಿಡಿಯೋ ಶೂಟಿಂಗ್, ಸಮೀಕ್ಷೆ-ಸರ್ವೆ ಹೀಗೆ ಒಂದಿಲ್ಲೊಂದು ಕೆಲಸ ಕಾರ್ಯಗಳಲ್ಲಿ ಡ್ರೋನ್​ಗಳ (Drone Usage) ಬಳಕೆ ಸರ್ವೇ ಸಾಮಾನ್ಯವಾಗಿದೆ. ವಿದೇಶಗಳಲ್ಲಿ ಕೃಷಿಯಲ್ಲೂ ಡ್ರೋನ್ ಬಳಕೆ ರೂಢಿಯಲ್ಲಿದೆ. ಕರ್ನಾಟಕದ ಮಲೆನಾಡಿನ ಅಡಿಕೆ ತೆಂಗು, ಬಯಲು ಸೀಮೆಯ ಭತ್ತ, ಗೋಧಿ, ಜೋಳ, ತರಕಾರಿ ಬೆಳೆಗಾರರು ಸೇರಿದಂತೆ ಎಲ್ಲ ರೀತಿಯ ರೈತರಿಗೆ ಡ್ರೋನ್​ಗಳು ನೆರವಾಗಲಿವೆ. ಕರ್ನಾಟಕದ ಕೃಷಿಕರು ಡ್ರೋನ್ ಬಳಕೆ (Karnataka Farmers) ಮಾಡಬಹುದೇ? ಸರ್ಕಾರ ಈಕುರಿತು ಏನನ್ನುತ್ತೆ? ಡ್ರೋನ್ ಖರೀದಿ ಮತ್ತು ತರಬೇತಿಗೆ ಏನಾದರೂ ಸಹಾಯಧನ ನೀಡುತ್ತದೆಯಾ? ಕೃಷಿಯಲ್ಲಿ ಹೇಗೆಲ್ಲ ಡ್ರೋನ್ ಬಳಕೆ (Kisan Drones) ಮಾಡಬಹುದು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ! 

ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ಭೂಮಿಯಲ್ಲಿ ಕೀಟನಾಶಕಗಳನ್ನು ಸಿಂಪಡಿಸಲು 100 ಕಿಸಾನ್ ಡ್ರೋನ್‌ಗಳಿಗೆ ಚಾಲನೆ ನೀಡಿದ್ದಾರೆ. ಈ ಯೋಜನೆಗೆ ಕೇಂದ್ರ ಸರ್ಕಾರ ಡ್ರೋನ್ ಕಿಸಾನ್ ಯಾತ್ರೆ ಎಂದು ಹೆಸರಿಸಿದೆ. ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ಕೃಷಿ ಕ್ಷೇತ್ರಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸಲು ಡ್ರೋನ್‌ಗಳ ಬಳಕೆಗಾಗಿ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (Kisan Drone SOP) ಬಿಡುಗಡೆ ಮಾಡಿದೆ.

ಏನೆಲ್ಲ ಪ್ರಯೋಜನಗಳಿವೆ?
ದೇಶದಲ್ಲಿ ಕೃಷಿ ಕ್ಷೇತ್ರವನ್ನು ಉತ್ತೇಜಿಸಲು ಈ ಕಿಸಾನ್ ಡ್ರೋನ್‌ಗಳನ್ನು ಬಳಸಲಾಗುವುದು. ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ ಕಿಸಾನ್ ಡ್ರೋನ್‌ಗಳ ಬಳಕೆಯನ್ನು ಸರ್ಕಾರವೇ ಉತ್ತೇಜಿಸುತ್ತದೆ.

ಬಜೆಟ್​ನಲ್ಲೂ ಉಲ್ಲೇಖ
ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸುವ ಗುರಿಯನ್ನು ಕಿಸಾನ್ ಡ್ರೋನ್ ಯೋಜನೆಯು ಹೊಂದಿದೆ.  ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯನ್ನು ದೇಶಾದ್ಯಂತ ಉತ್ತೇಜಿಸಲಾಗುವುದು.

ಕಿಸಾನ್ ಡ್ರೋನ್​ಗಳನ್ನು ಮೊದಲ ಹಂತದಲ್ಲಿ ಗಂಗಾ ನದಿಯ ಉದ್ದಕ್ಕೂ 5 ಕಿಲೋಮೀಟರ್ ಅಗಲದ ಕಾರಿಡಾರ್‌ಗಳಲ್ಲಿ ರೈತರ ಜಮೀನುಗಳ ಮೇಲೆ ಕೇಂದ್ರೀಕರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ 2022 ಭಾಷಣದಲ್ಲಿ ಹೇಳಿದ್ದಾರೆ.

ಹೊಸ ಕ್ರಾಂತಿಗೆ ನಾಂದಿ
ಕಿಸಾನ್ ಡ್ರೋನ್ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿಯಾಗಲಿದ್ದು, ಹೆಚ್ಚಿನ ಸಾಮರ್ಥ್ಯದ ಡ್ರೋನ್‌ಗಳನ್ನು ತರಕಾರಿಗಳು, ಹಣ್ಣುಗಳು, ಮೀನುಗಳನ್ನು ನೇರವಾಗಿ ಜಮೀನುಗಳಿಂದ ಮಾರುಕಟ್ಟೆಗೆ ಸಾಗಿಸಲು ಬಳಸಬಹುದಾಗಿದೆ.

ಈ ವಸ್ತುಗಳನ್ನು ಕನಿಷ್ಠ ಹಾನಿಯೊಂದಿಗೆ ನೇರವಾಗಿ ಮಾರುಕಟ್ಟೆಗೆ ಸರಬರಾಜು ಮಾಡಬಹುದು, ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ, ಇದರಿಂದಾಗಿ ರೈತರು ಮತ್ತು ಮೀನುಗಾರರಿಗೆ ಹೆಚ್ಚಿನ ಲಾಭ ದೊರೆಯಲಿದೆ.

ಕೃಷಿಯಲ್ಲಿ ಡ್ರೋನ್‌ಗಳನ್ನು ಯಾವುದಕ್ಕೆ ಬಳಸಬಹುದು?
ಕೃಷಿಯಲ್ಲಿ ಕಿಸಾನ್ ಡ್ರೋನ್ ಅನ್ನು ಕೀಟನಾಶಕ ಸಿಂಪಡಿಸುವ ಯಂತ್ರವಾಗಿ ಬಳಸಬಹುದಾಗಿದೆ. ಫ್ಲೈಯಿಂಗ್ ಸ್ಪ್ರೇಯರ್ ಎಂಬ ಡ್ರೋನ್‌ಗಳು ಕೀಟನಾಶಕಗಳು ಮತ್ತು ದ್ರವ ಗೊಬ್ಬರಗಳಿಂದ ತುಂಬಿದ 5-10 ಕೆಜಿ ಸಾಮರ್ಥ್ಯದ ಟ್ಯಾಂಕ್‌ಗಳನ್ನು ಹೊಂದಿವೆ. ಇದಲ್ಲದೆ, ಡ್ರೋನ್‌ಗಳು ಕೇವಲ 15 ನಿಮಿಷಗಳಲ್ಲಿ ಸುಮಾರು 1 ಎಕರೆ ಭೂಮಿಯಲ್ಲಿ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಸಾಕಷ್ಟು ಸಮಯ ಮತ್ತು ಶ್ರಮವನ್ನು ಉಳಿಸುತ್ತವೆ.

ಭಾರತದಲ್ಲಿ ಕೃಷಿ ಡ್ರೋನ್ ಬೆಲೆ ಎಷ್ಟಿದೆ?
ಕೃಷಿ ಡ್ರೋನ್ ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಇಂಟರ್ನೆಟ್ ಆಧಾರಿತ ಸ್ಮಾರ್ಟ್ ತಂತ್ರಜ್ಞಾನವನ್ನು ಬಳಸುತ್ತದೆ. ಸಿಂಪರಣೆ ಮತ್ತು ಬೆಳೆ ಆರೋಗ್ಯ ಮೇಲ್ವಿಚಾರಣೆಯಂತಹ ನಿಖರವಾದ ಕೃಷಿ ಚಟುವಟಿಕೆಗಳನ್ನು ನಿರ್ವಹಿಸುತ್ತದ. ಇವುಗಳ ಬೆಲೆ 5 ಲಕ್ಷದಿಂದ 10 ಲಕ್ಷದವರೆಗೆ ಇರುತ್ತದೆ.

ಡ್ರೋನ್ ಸೇವೆಗಳು ಈಗಷ್ಟೇ ಶುರುವಾದ ಕಾರಣ ಸದ್ಯ ದುಬಾರಿಯಾಗಿದೆ. ಅಗಾಧ ಪ್ರಮಾಣದ ಬಳಕೆ ಆರಂಭವಾದರೆ ಹಂತಹಂತವಾಗಿ ಬೆಲೆ ಅಗ್ಗವಾಗಲಿದೆ.

ಕೆಲವು ಪಾಲಿಸಲೇಬೇಕಾದ ನಿಯಮಗಳಿವೆ!

ಡ್ರೋನ್ ಆಪರೇಟರ್‌ನಿಂದ ಹಾರಾಟದ ಮೊದಲು ಕೀಟನಾಶಕ ಸಿಂಪಡಿಸುವ ಪ್ರದೇಶವನ್ನು ಗುರುತಿಸಬೇಕು.

ಅನುಮೋದಿತ ಕೀಟನಾಶಕಗಳನ್ನು ಮಾತ್ರ ಬಳಸಬೇಕು.

ನಿರ್ವಾಹಕರು ಡ್ರೋನ್ ನಿರ್ಮಲೀಕರಣ ಮತ್ತು ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರಬೇಕು.

ಇದನ್ನೂ ಓದಿ: PM Kusum Scheme: ಕೃಷಿಕರೇ, ಸರ್ಕಾರಕ್ಕೇ ವಿದ್ಯುತ್ ಮಾರಾಟ ಮಾಡಿ! ಉಚಿತವಾಗಿ ನೀರು ಹಾಯಿಸಿ

ಡ್ರೋನ್ ಕಾರ್ಯಾಚರಣೆಯೊಂದಿಗೆ ಸಂಪರ್ಕ ಹೊಂದಿಲ್ಲದ ಪ್ರಾಣಿಗಳು ಅಥವಾ ವ್ಯಕ್ತಿಗಳು ನಿರ್ದಿಷ್ಟ ಅವಧಿಗೆ ಕಾರ್ಯಾಚರಣೆಯ ಆವರಣವನ್ನು ಪ್ರವೇಶಿಸಲು ಅನುಮತಿಸಬಾರದು.

ಡ್ರೋನ್ ಪೈಲಟ್‌ಗಳು ಕೀಟನಾಶಕಗಳ ಕ್ಲಿನಿಕಲ್ ಪರಿಣಾಮಗಳನ್ನು ಒಳಗೊಂಡಂತೆ ಕೀಟನಾಶಕಗಳ ವಿಶೇಷ ತರಬೇತಿಯನ್ನು ಪಡೆದುಕೊಂಡಿರಬೇಕು.

ಕೃಷಿಯಲ್ಲಿ ಡ್ರೋನ್‌ ಬಳಕೆ ಉತ್ತೇಜನಕ್ಕೆ ಸರ್ಕಾರದಿಂದ ಪ್ರೋತ್ಸಾಹ
ಇತ್ತೀಚಿನ ಸರ್ಕಾರದ ಪ್ರೋತ್ಸಾಹವು ಹಲವು ಸಂಸ್ಥೆಗಳಿಗೆ ವಿವಿಧ ಯೋಜನೆಯಡಿ ಉಚಿತವಾಗಿ ಕಿಸಾನ್ ಡ್ರೊನ್ ಹೊಂದಲು ಅನುವು ಮಾಡಿಕೊಡುತ್ತಿದೆ. ರೈತರ ಉತ್ಪಾದಕರ ಸಂಸ್ಥೆಗಳು ಡ್ರೋನ್ ಖರೀದಿಸಿ ಒಟ್ಟು ಹಣದ 75 ಪ್ರತಿಶತ ಹಣವನ್ನು ಸಬ್ಸಿಡಿ ಅಡಿ ವಾಪಾಸ್ ಪಡೆಯಬಹುದು.

ಪ್ರದರ್ಶನಕ್ಕೂ ಹಣ ನೀಡುತ್ತದೆ ಸರ್ಕಾರ!
ಡ್ರೋನ್‌ಗಳನ್ನು ಖರೀದಿಸಲು ಇಷ್ಟಪಡದ ಆದರೆ ಬಾಡಿಗೆಗೆ ಪಡೆಯಲು ಬಯಸುವ ಏಜೆನ್ಸಿಗಳಿಗೆ ಸರ್ಕಾರವು ಪ್ರತಿ ಎಕರೆಗೆ 6,000 ರೂ.ಗಳನ್ನು ಆಕಸ್ಮಿಕ ನಿಧಿಯಾಗಿ ಒದಗಿಸುತ್ತದೆ.

ಕೃಷಿಕರಿಗೆ ಕಲಿಸಲು ಕೃಷಿ ಏಜೆನ್ಸಿಗಳಿಗೆ ಡ್ರೋನ್​ಗಳನ್ನು ಬಳಸಲು ಆಕಸ್ಮಿಕ ವೆಚ್ಚವಾಗಿ ಪ್ರತಿ ಎಕರೆಗೆ 3,000 ರೂ. ಮೀಸಲಿಡಲಾಗಿದೆ. ಡ್ರೋನ್ ತಂತ್ರಜ್ಞಾನಗಳ ಪ್ರಚಾರಕ್ಕಾಗಿ ಈ ಅನುದಾನವು ಮಾರ್ಚ್ 31, 2023 ರವರೆಗೆ ಲಭ್ಯವಿರುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Beekeeping Business: ಕರ್ನಾಟಕದಲ್ಲಿ ಜೇನು ಕೃಷಿ ಉದ್ಯಮ ಮಾಡೋದು ಹೇಗೆ? ಏನು? ಎತ್ತ?

ಡ್ರೋನ್ ಬಾಡಿಗೆ ಕೇಂದ್ರಗಳು ಡ್ರೋನ್‌ಗಳ ಮೂಲಕ ಕೃಷಿ ಸೇವೆಗಳನ್ನು ಒದಗಿಸಲು ವಿಶೇಷ ಹಣವನ್ನು ಸಹ ಪಡೆಯುತ್ತವೆ. ಇದು ಡ್ರೋನ್‌ನ ಮೂಲ ವೆಚ್ಚದ 40% ಮತ್ತು ಅದರ ಲಗತ್ತುಗಳು ಅಥವಾ ರೂ 4 ಲಕ್ಷ, ಈ ಎರಡರಲ್ಲಿ ಯಾವುದು ಕಡಿಮೆಯೋ ಅದಕ್ಕೆ ಲಾಗೂ ಆಗುತ್ತದೆ.
Published by:guruganesh bhat
First published: