GST Hike: ಸಣ್ಣಪುಟ್ಟ ಅಂಗಡಿಗಳ ಸರಕು ಸಾಮಾಗ್ರಿ ಮೇಲೆ ಜಿಎಸ್‍ಟಿ ಹೇರಲ್ಲ, ಕೇರಳ ಸರ್ಕಾರ ಘೋಷಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೇರಳ ಸರ್ಕಾರ ಸಣ್ಣ ಅಂಗಡಿಗಳ ಸರಕು ಸಾಮಾಗ್ರಿಗಳ ಮೇಲೆ ಜಿಎಸ್‍ಟಿ ಹೇರುವುದಿಲ್ಲ ಎಂದು ಘೋಷಿಸಿದೆ . ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‍ಟಿ ಹೆಚ್ಚಳವಾದ ಹಿನ್ನೆಲೆ ಕೇರಳದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅದಕ್ಕೆ ಸಣ್ಣಪುಟ್ಟ ಅಂಗಡಿಗಳಲ್ಲಿ ಮಾರಾಟ ಮಾಡುವ ದಿನಬಳಕೆಯ ಮತ್ತು ಸರಕು ವಸ್ತುಗಳಿಗೆ ಜಿಎಸ್‍ಟಿ ಹೇರುವುದಿಲ್ಲ ಎಂದು ಹೇಳಿದೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Kerala, India
  • Share this:

    ಬೆಲೆ ಏರಿಕೆ ಸಂಕಷ್ಟದಿಂದ ಸಿಲುಕಿದ್ದ ಜನರಿಗೆ ಜಿಎಸ್‍ಟಿ (GST) ನೀತಿ ಬದಲಾವಣೆಯಿಂದ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಆಗಿದ್ದು, ಜನ ಸಾಮಾನ್ಯ ತತ್ತರಿಸಿ ಹೋಗಿದ್ದಾನೆ. ಅಕ್ಕಿ, ಗೋಧಿ, ಹಾಲು, ಮೊಸರು, ಮಜ್ಜಿಗೆ, ಮೀನು, ಮಾಂಸ, ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾಗಿದೆ. ತರಕಾರಿ ಮತ್ತಿತರ ದಿನಬಳಕೆಯ ವಸ್ತುಗಳ ಬೆಲೆಯೂ (Price Hike) ಗಗನಕ್ಕೇರಿದೆ. ಅದಕ್ಕೆ ಕೇರಳ (Kerala) ಸರ್ಕಾರ ಸಣ್ಣ ಅಂಗಡಿಗಳ (Small stores) ಸರಕು ಸಾಮಾಗ್ರಿಗಳ ಮೇಲೆ ಜಿಎಸ್‍ಟಿ ಹೇರುವುದಿಲ್ಲ ಎಂದು ಘೋಷಿಸಿದೆ . ಹಾಲಿನ ಉತ್ಪನ್ನಗಳ (Milk Products) ಮೇಲಿನ ಜಿಎಸ್‍ಟಿ ಹೆಚ್ಚಳವಾದ ಹಿನ್ನೆಲೆ ಕೇರಳದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅದಕ್ಕೆ ಸಣ್ಣಪುಟ್ಟ ಅಂಗಡಿಗಳಲ್ಲಿ ಮಾರಾಟ ಮಾಡುವ ದಿನಬಳಕೆಯ ಮತ್ತು ಸರಕು ವಸ್ತುಗಳಿಗೆ ಜಿಎಸ್‍ಟಿ ಹೇರುವುದಿಲ್ಲ ಎಂದು ಹೇಳಿದೆ.


    ಸಣ್ಣ ಅಂಗಡಿಗಳ ಮಾಲೀಕರಿಗೆ ಗುಡ್ ನ್ಯೂಸ್
    ಜಿಎಸ್‍ಟಿ ಹೆಚ್ಚಳದಿಂದ ದೇಶದ ಜನರೇ ಬೇಸತ್ತಿದ್ದಾರೆ. ಅಲ್ಲದೇ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‍ಟಿ ಹೆಚ್ಚಳದಿಂದ ಜನ ಕಂಗಾಲಾಗಿದೆ. ಅದಕ್ಕೆ ಕೇರಳ ಸರ್ಕಾರ ಮಹತ್ವದ ಘೋಷಣೆಯನ್ನು ಹೊರಡಿಸಿದೆ. ಸಣ್ಣಪುಟ್ಟ ಅಂಗಡಿಗಳಲ್ಲಿ ಮಾರಾಟ ಮಾಡುವ ದಿನಬಳಕೆಯ ಮತ್ತು ಸರಕು ವಸ್ತುಗಳಿಗೆ ರಾಜ್ಯದಲ್ಲಿ ಯಾವುದೇ ರೀತಿಯ ಜಿಎಸ್‍ಟಿ ವಿಧಿಸುವುದಿಲ್ಲ ಎಂದು ತಿಳಿಸಿದೆ.


    ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ ಅವರು ಹೇಳಿದ್ದೇನು?
    'ಸಣ್ಣ ಅಂಗಡಿಗಳಲ್ಲಿ 1-2 ಕೆಜಿ ಪ್ಯಾಕ್‍ಗಳಲ್ಲಿ ಚಿಲ್ಲರೆಯಾಗಿ ಮಾರಾಟ ಮಾಡುವ ದಿನಬಳಕೆಯ ವಸ್ತು, ದಿನಸಿ, ಇತರ ಸರಕು ಸಾಮಾಗ್ರಿಗಳಿಗೆ ನಾವು ಜಿಎಸ್‍ಟಿ ಹೇರುವ ಉದ್ದೇಶ ಇಟ್ಟುಕೊಂಡಿಲ್ಲ. ಹೇರುವುದೂ ಇಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಜತೆ ಜಟಾಪಟಿಯಾಗಿ, ಸಮಸ್ಯೆ ಆಗಬಹುದು. ಆದರೂ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಲ್ಲ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ ಅವರು ಹೇಳಿದ್ದಾರೆ.


    ಕೇಂದ್ರಕ್ಕೆ ಪತ್ರ ಬರೆದ ಕೇರಳ ಸರ್ಕಾರ
    ಕೇರಳ ಸರ್ಕಾರ ಸಣ್ಣ ಅಂಗಡಿಗಳ ಸರಕು ಸಾಮಾಗ್ರಿಗಳ ಮೇಲೆ ಜಿಎಸ್‍ಟಿ ಹೇರುವುದಿಲ್ಲ ಎಂಬ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಸಣ್ಣ ಅಂಗಡಿಗಳ ಮಾಲೀಕರಿಗೆ, ಮಾರಾಟಗಾರರು ಮತ್ತು ಜನರಿಗೆ ಅನುಕೂಲವಾಗಲು ಈ ನಿರ್ಧಾರ. ಮತ್ತು ಇದರಿಂದ ಹೆಚ್ಚಿನ ತೆರಿಗೆ ಹೊರೆ ಬೀಳುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ ಅವರು ತಿಳಿಸಿದ್ದಾರೆ.


    ಇದನ್ನೂ ಓದಿ: GST Rate Hike: ಊಟದ ತಟ್ಟೆಯಲ್ಲಿನ ಆಹಾರ ಕಿತ್ತುಕೊಳ್ತಿರೋದು ಬಡವರ ಹತ್ಯೆಗೆ ಸಮ: ಸಿದ್ದರಾಮಯ್ಯ ಆಕ್ರೋಶ


    ಗಮನ ಸೆಳೆದ ಕೇರಳ ಸರ್ಕಾರ ನಿರ್ಧಾರ
    ದೇಶದಲ್ಲಿ ಈಗಾಗಲೇ ಜಿಎಸ್‍ಟಿ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ನಡುವೆಯೇ ಸಣ್ಣ ಅಂಗಡಿಗಳ ಸರಕು ಸಾಮಾಗ್ರಿಗಳ ಮೇಲೆ ಜಿಎಸ್‍ಟಿ ಹೇರುವುದಿಲ್ಲ ಎಂಬ ಕೇರಳ ಸರ್ಕಾರದ ನಿರ್ಧಾರ ಎಲ್ಲರ ಗಮನ ಸೆಳೆದಿದೆ. ಜನ ಸಾಮಾನ್ಯರಿಗಾಗಿ ಕೇಂದ್ರದ ನಿರ್ಧಾರ ಬದಲಿಸು ಹೊರಟಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿವೆ.


    ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥನೆ ಏನು?
    ಸಿರಿಧಾನ್ಯಗಳು, ಅಕ್ಕಿ, ಹಿಟ್ಟು ಮತ್ತು ಮೊಸರು ಮುಂತಾದ ಆಹಾರ ಪದಾರ್ಥಗಳ ಮೇಲೆ 5% ಜಿಎಸ್‍ಟಿ ವಿಧಿಸುವುದನ್ನು ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ. ಇದು ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಲಾದ ಜಿಎಸ್‍ಟಿ ಕೌನ್ಸಿಲ್‍ನ ಸರ್ವಾನುಮತದ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.


    ಇದನ್ನೂ ಓದಿ: Yeshwanthpur: ಆಹಾರ ಧಾನ್ಯಗಳ ಮೇಲೆ ಶೇ.5 GST; ಯಶವಂತಪುರ ಎಪಿಎಂಸಿ ಯಾರ್ಡ್ ಬಂದ್


    ಜಿಎಸ್‍ಟಿ ಹೆಚ್ಚಳದಿಂದ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯದಲ್ಲೂ ಸರ್ಕಾರ ವಿರುದ್ಧ ತೀವ್ತ ವಿರೋಧಗಳು ಕೇಳಿ ಬಂದಿದ್ವು. ಬಡವರ ಹೊಟ್ಟೆಗೆ ಒದೆಯುವುದೇ ಅಚ್ಚೇ ದಿನ್ ಎಂದು ತಿಳಿದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಊಟದ ತಟ್ಟೆಯಲ್ಲಿನ ಅಕ್ಕಿ, ಗೋಧಿ, ಹಾಲು, ಮೊಸರು, ಮಜ್ಜಿಗೆ, ಮೀನು, ಮಾಂಸ, ಮಂಡಕ್ಕಿ ಎಲ್ಲವನ್ನೂ ಕಿತ್ತುಕೊಳ್ಳಲು ಹೊರಟಿರುವುದು ಬಡವರ ಹತ್ಯೆಗೆ ಸಮನಾದ ಪಾಪ ಕರ್ಮ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ರು.

    Published by:Savitha Savitha
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು