Nykaa Brand ಮೇಲೆ ಹೂಡಿಕೆ ಮಾಡಿ 10 ಪಟ್ಟು ಲಾಭ ಗಳಿಸಿದ Katrina, Alia

ನೈಕಾ ಬ್ರಾಂಡ್‍ನ ಮೇಲೆ ಹೂಡಿಕೆ ಮಾಡಿದ್ದ ಬಾಲಿವುಡ್ ನಟಿಯರಾದ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಕೂಡ ಅತ್ಯಧಿಕ ಲಾಭ ಗಳಿಸಿದ್ದಾರೆ

=ಕತ್ರಿನಾ ಕೈಫ್-ಆಲಿಯಾ ಭಟ್

=ಕತ್ರಿನಾ ಕೈಫ್-ಆಲಿಯಾ ಭಟ್

  • Share this:
    ಹೆಚ್ಚಿನ ಸೆಲೆಬ್ರಿಟಿಗಳು (Celebrities ) ತಾವು ಗಳಿಸಿದ ಆದಾಯವನ್ನು (Income investment) ಸುರಕ್ಷಿತ ಜಾಗದಲ್ಲಿ ಹೂಡಿಕೆ ಮಾಡುತ್ತಾರೆ ಮತ್ತು ಅದರಿಂದ ಲಾಭ ಗಳಿಸುತ್ತಾರೆ. ಈ ವಿಷಯ ಬಾಲಿವುಡ್ ನಟಿಯರಾದ ಕತ್ರೀನಾ ಕೈಫ್ (Katrina Kaif) ಮತ್ತು ಆಲಿಯಾ ಭಟ್‍ಗೂ (Alia Bhat) ಅನ್ವಯಿಸುತ್ತದೆ. ನೈಕಾ ಬ್ರಾಂಡ್‍ನ (Nykaa Brand) ಮೇಲೆ ಹೂಡಿಕೆ ಮಾಡಿದ್ದ ಈ ಇಬ್ಬರು ನಟಿಯರು , ಇತ್ತೀಚೆಗೆ ಅತ್ಯಧಿಕ ಲಾಭ ಗಳಿಸಿದ್ದಾರೆ.

    10 ಪಟ್ಟು ಲಾಭ

    ಇ ಕಾಮರ್ಸ್ ಸ್ಟಾರ್ಟ್ ಅಪ್ ನೈಕಾದ ಐಪಿಒ (ಇನಿಶಿಯಲ್ ಪಬ್ಲಿಕ್ ಆಫರಿಂಗ್) ಇತ್ತೀಚೆಗೆ ಆರಂಭವಾಯಿತು ಮತ್ತು ಅದರ ಮಾಲೀಕರು ಮತ್ತು ಸಿಇಓ ಆಗಿರುವ ಫಲ್ಗುಣಿ ನಾಯರ್ , ಮೊದಲ ಸ್ವಯಂ ನಿರ್ಮಿತ ಭಾರತೀಯ ಮಹಿಳಾ ಬಿಲಿಯನೇರ್ ಎನಿಸಿಕೊಂಡಿದ್ದಾರೆ. ಕೇವಲ ಫಲ್ಗುಣಿ ನಾಯರ್ ಮಾತ್ರವಲ್ಲ, ಅವರ ಜೊತೆ ಜೊತೆಗೆ , ಕೆಲವು ವರ್ಷಗಳ ಹಿಂದೆ ನೈಕಾ ಬ್ರಾಂಡ್‍ನ ಮೇಲೆ ಹೂಡಿಕೆ ಮಾಡಿದ್ದ ಬಾಲಿವುಡ್ ನಟಿಯರಾದ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಕೂಡ ಅತ್ಯಧಿಕ ಲಾಭ ಗಳಿಸಿದ್ದಾರೆ. ವರದಿಗಳ ಪ್ರಕಾರ, ಈ ಇಬ್ಬರು ನಟಿಯರು ಹೂಡಿಕೆ ಮಾಡಿದ್ದರ 10 ಪಟ್ಟು ಹೆಚ್ಚು ಲಾಭವನ್ನು ಗಳಿಸಿದ್ದಾರೆ.

    ಈ ಸೌಂದರ್ಯ ಬ್ರಾಂಡ್, 10 ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ , ಸೌಂದರ್ಯ ವರ್ಧಕಗಳು, ಫ್ಯಾಷನ್ ಮತ್ತು ಸೌಂದರ್ಯ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಸ್ಥಾಪಿಸಿದೆ. ಕಂಪೆನಿಯ ಶೇರುಗಳು, ಅದರ (ಐಪಿಓ) ಬೆಲೆ ರೂ 1, 125 ಕ್ಕಿಂತ ಶೇಕಡಾ 96 ರಷ್ಟು ಏರಿಕೆಯಾಗಿ, ಪ್ರತಿ 2,207 ರೂ. ಗೆ ಮುಕ್ತಾಯವಾಯಿತು.

    ಷೇರು ಏರಿಕೆಯಿಂದ ಲಾಭ

    2018 ರಲ್ಲಿ ನಟಿ ಕತ್ರಿನಾ ಕೈಫ್ ಅವರು , 2.02 ಕೋಟಿ ರೂಗಳನ್ನು ಮತ್ತು ನಟಿ ಆಲಿಯಾ ಭಟ್ ಅವರು 2020 ರಲ್ಲಿ ನೈಕಾ ಎಫ್‍ಎಸ್‍ಎನ್ ಇ – ಕಾಮರ್ಸ್ ವೆಂಚರ್‍ನ ಮೂಲ ಕಂಪೆನಿಯಲ್ಲಿ 4.95 ಕೋಟಿ ಹೂಡಿಕೆ ಮಾಡಿದ್ದರು. ಬುಧವಾರ ಈ ಸೌಂದರ್ಯ ಬ್ರಾಂಡ್‍ನ ಷೇರುಗಳು ಏರಿಕೆ ಆದ ನಂತರ, ಕತ್ರಿನಾ ಕೈಫ್ ಅವರು 22 ಕೋಟಿ ರೂ. ಮತ್ತು ಆಲಿಯಾ ಭಟ್ ಅವರು 54 ಕೋಟಿ ರೂ.ಗಳನ್ನು ಗಳಿಸಿದ್ದಾರೆ.

    ಇದನ್ನು ಓದಿ: ಉಳಿತಾಯ ಬ್ಯಾಂಕ್ ಖಾತೆಗಳಿಗೂ ಚಾಲ್ತಿ ಖಾತೆಗಳಿಗೂ ವ್ಯತ್ಯಾಸವೇನು..?

    ಮತ್ತಷ್ಟು ಸೆಲೆಬ್ರಿಟಿಗಳು ಹೂಡಿಕೆ

    2018 ರಲ್ಲಿ ಸಬ್‍ಸ್ಕ್ರಿಪ್ಶನ್ ಸರ್ವಿಸ್ ಸ್ಟೈಲ್ ಕ್ರಾಕರ್‍ನಲ್ಲಿ ಹೂಡಿಕೆ ಮಾಡಿದ್ದ ಆಲಿಯಾ ಭಟ್, ಇತ್ತೀಚೆಗೆ ಧೂಪ ದೃವ್ಯ ಬ್ರಾಂಡ್ ಫೂಲ್‍ನಲ್ಲೂ ಹೂಡಿಕೆ ಮಾಡಿದ್ದಾರೆ. ಹೂಡಿಕೆ ಮಾಡುವ ವಿಷಯದಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಹಿಂದೆ ಉಳಿದಿಲ್ಲ, ದೀಪಿಕಾ ಫ್ರಂಟ್‍ರೋ , ಇ ಮೊಬಿಲಿಟಿ ಕಂಪೆನಿ ಬ್ಲೂಸ್ಮಾರ್ಟ್, ಬೆಲ್ಲಾ ಟ್ರಿಕ್ಸ್ ಏರೋಸ್ಪೇಸ್ ಮತ್ತು ಸೌಂದರ್ಯ ಬ್ರಾಂಡ್ ಪರ್ಪಲ್ ಸೇರಿದಂತೆ ಹಲವಾರು ಸ್ಟಾರ್ಟ್‍ಅಪ್‍ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಬಾಲಿವುಡ್ ನಟಿಯರು ಮಾತ್ರವಲ್ಲ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಮತ್ತು ಶಿಖರ್ ಧವನ್ ಅವರಂತ ಕ್ರಿಕೆಟಿಗರು ಕೂಡ ಹೆಚ್ಚಿನ ಸ್ಟಾರ್ಟ್ ಅಪ್‍ಗಳಲ್ಲಿ ಹೂಡಿಕೆ ಮಾಡಿದ್ದಾರೆ.

    ಇದನ್ನು ಓದಿ: 50ರ ವಯಸ್ಸಲ್ಲಿ Business ಆರಂಭಿಸಿ ದೇಶ ಶ್ರೀಮಂತೆ ಎನಿಸಿಕೊಂಡ ನೈಕಾ CEO

    ಕತ್ರಿನಾ ಕೈಫ್ ಅವರು ನಟಿಸಿರುವ ಸೂರ್ಯವಂಶಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಯಶಸ್ವಿಯಾಗಿದೆ, ಸದ್ಯದಲ್ಲಿಯೇ ಅವರು ಟೈಗರ್ 3 ಸಿನಿಮಾದ ಚಿತ್ರೀಕರಣದಲ್ಲೂ ತೊಡಗಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಸದ್ಯಕ್ಕೆ ಅವರು ವಿಕ್ಕಿ ಕೌಶಲ್ ಜೊತೆಗಿನ ತಮ್ಮ ಮದುವೆಯ ತಯಾರಿಯಲ್ಲಿ ನಿರತರಾಗಿದ್ದಾರೆ.

    ಅಲಿಯಾ ಭಟ್ ಅವರು ಕೂಡ ರಣ್‍ಬೀರ್ ಕಪೂರ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಅದಲ್ಲದೆ, ಗಂಗೂ ಬಾಯಿ ಕಾತ್ಯಾವಾಡಿ, ಬ್ರಹ್ಮಾಸ್ತ್ರ ಮತ್ತು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಹಾಗೂ ಆರ್‌ಆರ್‌ಆರ್‌ ಸೇರಿದಂತೆ ಹಲವಾರು ಸಿನಿಮಾಗಳು ಆಲಿಯಾ ಭಟ್ ಕೈಯಲ್ಲಿವೆ.
    First published: