Wild Mango: ಕಾಡಲ್ಲಿ ಸಿಗೋ ಮಾವನ್ನೂ ಈಗ ಕೃಷಿ ಮಾಡ್ತಿದ್ದಾರೆ, ಹೊಸ ಪ್ರಯತ್ನವಿದು

ಮಾವು ಹಣ್ಣು ಮಾರುಕಟ್ಟೆಯಲ್ಲಿ ಮಲ್ಲಿಕಾ, ಮಲಗೋಬಾ, ರಸಪೂರಿ, ಅಲ್ಫೋನ್ಸೊ, ತೋತಾಪುರಿ ಅಂತಾ ವಿಧವಿಧವಾದ ಮಾವಿನ ಹಣ್ಣಿನ ರುಚಿಗಳು ಸಿಗುತ್ತವೆ. ಆದರೆ ಕಾಡು ಮಾವಿನ ಹಣ್ಣಿನ ರುಚಿ ಎಷ್ಟು ಜನಕ್ಕೆ ಗೊತ್ತಿದೆ ಹೇಳಿ. ಈ ಕಾಡು ಮಾವನ್ನು ಪರಿಚಯಿಸುವ ಮತ್ತು ಅದನ್ನು ಸಹ ಕೃಷಿ ಮಾಡಲು ನೆರವಾಗುವ ಕೆಲಸವನ್ನು ಮಂಗಳೂರಿನಲ್ಲಿ, ಸ್ಥಳೀಯ ಗುಂಪೊಂದು ಮಾಡುತ್ತಿದೆ.

ಕಾಡು ಮಾವುಗಳು

ಕಾಡು ಮಾವುಗಳು

  • Share this:

ಮಾವಿನ ಹಣ್ಣು (mango) ಮಾರುಕಟ್ಟೆಯಲ್ಲಿ ಮಲ್ಲಿಕಾ, ಮಲಗೋಬಾ, ರಸಪೂರಿ, ಅಲ್ಫೋನ್ಸೊ, ತೋತಾಪುರಿ ಅಂತಾ ವಿಧವಿಧವಾದ ಮಾವಿನ ಹಣ್ಣಿನ ರುಚಿಗಳು ಸಿಗುತ್ತವೆ. ಆದರೆ ಕಾಡು ಮಾವಿನ ಹಣ್ಣಿನ (Wild Mango) ರುಚಿ ಎಷ್ಟು ಜನಕ್ಕೆ ಗೊತ್ತಿದೆ ಹೇಳಿ. ಸ್ಥಳೀಯವಾಗಿ ಹಲವಾರು ಕಾಡು ಮಾವುಗಳು ಇವೆ, ಹಾಗೆಯೇ ಇವುಗಳ ರುಚಿ (Taste) ಕೂಡ ಅದ್ಭುತವಾಗಿರುತ್ತದೆ. ಊರುಗಳ ಕಡೆ ಈ ಹಣ್ಣುಗಳನ್ನೇ ಹೆಚ್ಚಾಗಿ ಸೇವಿಸಲಾಗುತ್ತದೆ. ಆದರೆ ಇವುಗಳನ್ನು ಪಟ್ಟಣದ ಮಾರುಕಟ್ಟೆಗೆ (Market) ತರುವ ಪ್ರಯತ್ನ ಅಷ್ಟಾಗಿ ನಡೆಯುತ್ತಿಲ್ಲ. ಹೀಗಾಗಿ ಈ ಕಾಡು ಮಾವನ್ನು ಪರಿಚಯಿಸುವ ಮತ್ತು ಅದನ್ನು ಸಹ ಕೃಷಿ ಮಾಡಲು ನೆರವಾಗುವ ಕೆಲಸವನ್ನು ಮಂಗಳೂರಿನಲ್ಲಿ (Mangaluru), ಸ್ಥಳೀಯ ಗುಂಪೊಂದು ಮಾಡುತ್ತಿದೆ.


ಕಾಡು ಮಾವಿನ ಕೃಷಿ
ಈ ಗುಂಪು ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೆಯೇ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಸಿಗುವ ಸ್ಥಳೀಯ ಕಾಡು ಮಾವಿನ ತಳಿಗಳನ್ನು ಗುರುತಿಸಿ ಕಸಿಗೆ ನೀಡುತ್ತಿದೆ. ಕಾಡು ಮಾವಿನ ಕೃಷಿ ಮಾಡಲು ಕಾರಣವಾದ ಮತ್ತೊಂದು ಅಂಶವೆಂದರೆ ಅದರ ಆನುವಂಶಿಕ ಗುಣಲಕ್ಷಣವಾದ ಸಂತಾನೋತ್ಪತ್ತಿ ಸಾಮರ್ಥ್ಯ ಎಂದು ತಂಡವು ಹೇಳಿದೆ. ಮಂಗಳೂರಿನಲ್ಲಿ, ʼಮಾವು ಮಿತ್ರರುʼ ಎಂದು ಹೇಳಲಾಗುವ ಸುಮಾರು 20 ಜನರ ಸ್ಥಳೀಯ ಗುಂಪು ಸ್ಥಳೀಯವಾಗಿ ಸಿಗುವ ಮಾವಿನ ತಳಿಗಳನ್ನು ಕಸಿ ಮಾಡಲು ಪ್ರಾರಂಭಿಸಿದ್ದಾರೆ. ಕಡಿಮೆ ಸಮಯದಲ್ಲಿ ತ್ವರಿತವಾಗಿ ಇಳುವರಿ ಪಡೆಯಲು ಕಸಿ ಮಾಡುತ್ತಿದ್ದಾರೆ. ಹೀಗೆ ಕೃಷಿ ಮಾಡಿದ ಮಾವನ್ನು ʼನಾಡು ಮಾವುʼ ಎಂದು ಕರೆಯಲಾಗಿದೆ. ನಾಡು ಮಾವು ಎಂದು ಕರೆಯಲಾಗುವ ಕಾಡು ಮಾವು ಸಣ್ಣ ಕೃಷಿ ಪ್ರದೇಶಗಳಲ್ಲಿ, ಮೇಲಾವರಣ, ನಗರ ವಾಸಸ್ಥಳಗಳಲ್ಲಿ ಬೆಳೆಯಲು ಸೂಕ್ತವಾಗಿದೆ.


ನಾಟಿ ಮಾಡಿದ 15 ತಳಿಗಳ ಕಾಡು ಮಾವುಗಳು 
ಈ ಮಾವು ಮಿತ್ರರ ಗುಂಪು ಸುಪ್ರಸಿದ್ಧ ತಳಿಗಳು ಸೇರಿದಂತೆ ಸ್ಥಳೀಯವಾಗಿ ಲಭ್ಯವಿರುವ ಮಾವಿನ ಗಿಡಗಳನ್ನು ಸಂಗ್ರಹಿಸಿ ಕೃಷಿ ಮಾಡಲು ನರ್ಸರಿಗೆ ನೀಡಲಾಗುವುದು. ನಾಲ್ಕೈದು ತಿಂಗಳ ನಂತರ ನರ್ಸರಿಯವರು ಕಸಿ ಮಾಡಿದ ಗಿಡಗಳನ್ನು ಕೊಡುತ್ತಾರೆ. ಜಿಲ್ಲೆಗಳಲ್ಲಿ ಈ ಗಿಡಗಳನ್ನು ಮಾವು ಮಿತ್ರರು ಇತರರಿಗೆ ಕೃಷಿ ಮಾಡಲು ವಿತರಿಸುತ್ತಾರೆ. ಮಾವು ಮಿತ್ರರ ಸದಸ್ಯರಾದ ಸರ್ವೇಶ್‌ ರಾವ್‌ ಅವರ ನರ್ಸರಿಯಲ್ಲಿ ನಾಟಿ ಮಾಡಿದ 15 ತಳಿಗಳನ್ನು ಈಗಾಗಲೇ ಕೆಲವೆಡೆ ವಿತರಿಸಿದ್ದಾರೆ.­

ಇದನ್ನೂ ಓದಿ: ರೈತನ ಅದೃಷ್ಟ ಬದಲಿಸಿದ ಕೃಷಿ, ಈಗ ಲಕ್ಷಗಟ್ಟಲೆ ಸಂಪಾದನೆ, ತೋಟದ ಮನೆಗೆ ಡಿಸಿ ಎಂಟ್ರಿ!

ಕರ್ನಾಟಕದ ಕಾಡು ಮಾವಿನ ಹಣ್ಣುಗಳು ಸಾಮಾನ್ಯವಾಗಿ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ, ಅವು ಹೆಚ್ಚಾಗಿ ಅನಪೇಕ್ಷಿತ ಭೂಮಿಯಲ್ಲಿ ಬೆಳೆಯುತ್ತವೆ. ಆದಾಗ್ಯೂ, ಮಾವು ಮಿತ್ರ ತಂಡವು ಇವುಗಳಲ್ಲಿಯೇ ವಾಣಿಜ್ಯಿಕವಾಗಿ ಬೆಳೆಯುವ ಹಲವಾರು ಪ್ರಭೇದಗಳನ್ನು ಗುರುತಿಸಿದೆ.ಕಾಡು ಮಾವಿನ ಉದಾಹರಣೆ ನೋಡುವುದಾದರೆ, ಉಡುಪಿ ಹಳ್ಳಿಯೊಂದರಲ್ಲಿ ಸಿಗುವ ಬಾಯಿಮನೆ ಕಾಸಿ ತಳಿಯು ಮಾವಿನ ಹಣ್ಣು ಸುಮಾರು 700 ಗ್ರಾಂನಿಂದ ಒಂದು ಕೆಜಿ ಬರುತ್ತದೆ.


ರೈತ ಜಿ ಶ್ರೀಕೃಷ್ಣರವರು ಹೇಳುವುದು ಹೀಗೆ
“ಅಲ್ಫೋನ್ಸೊ, ತೋತಾಪುರಿ ಮತ್ತು ಮಲ್ಲಿಕಾ ಎಲ್ಲೆಡೆ ಲಭ್ಯವಿದ್ದರೂ, ನಾವು ದೇಶೀಯ ಮಾವಿನ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಸ್ಥಳೀಯವಾಗಿ ಸಿಗುವ ಮಾವು ಸಾಂಪ್ರದಾಯಿಕವಾಗಿ ವಿಭಿನ್ನ ಸುವಾಸನೆ ಮತ್ತು ಗುಣಲಕ್ಷಣಗಳನ್ನು ಹೊಂದಿರುತ್ತವೆ. ಬೇರೆ ಹಣ್ಣುಗಳು ಮಳೆಗಾಲದಲ್ಲಿ ಭಾರಿ ಮಳೆಯಿಂದಾಗಿ ನಾಶವಾಗುತ್ತವೆ, ಆದರೆ ಈ ಕಾಡು ಮಾವುಗಳು ವರ್ಷದ ಆರಂಭದಲ್ಲಿ ಅಂದರೆ ಮಾರ್ಚ್‌ ಅಥವಾ ಏಪ್ರಿಲ್‌ ವೇಳೆಗೆ ಫಲ ನೀಡುತ್ತವೆ. ಹೀಗಾಗಿ ಮಳೆಯಿಂದ ಈ ಹಣ್ಣುಗಳು ನಾಶವಾಗುವುದಿಲ್ಲ" ಎಂದು ಇದು ದಕ್ಷಿಣ ಕನ್ನಡ ಜಿಲ್ಲೆಯ ವೀರಕಂಭ ಗ್ರಾಮದ ರೈತ ಜಿ ಶ್ರೀಕೃಷ್ಣ ಮಾತಾಗಿದೆ.


ಬೈಂಗನ್‌ಪಲ್ಲಿಯಂತಹ ತಳಿಗಳು ನಮ್ಮ ಜಾಗದಲ್ಲಿ ಹೊಂದಿಕೊಳ್ಳುವುದಿಲ್ಲ, ಅವು ಇಲ್ಲಿ ಬೇಗ ಕೀಟಗಳಿಂದ ದಾಳಿಗೆ ಒಳಗಾಗುತ್ತವೆ. ಆದರೆ ಅದರ ಬದಲಿಗೆ ಇಲ್ಲಿ ಸಿಗುವ ಬೊಳ್ವಾರ್‌ ಕಾಸಿ ತಳಿ ಇದಕ್ಕೆ ಪರ್ಯಾಯವಾಗಿದೆ. ಇದು ಹೆಚ್ಚು ರೋಗ ನಿರೋಧಕವಾಗಿದೆ ಮತ್ತು ತ್ವರಿತವಾಗಿ ಬೆಳೆಯುತ್ತದೆ. ಸಿಪ್ಪೆ ಸಿಹಿಯಾಗಿರುತ್ತದೆ" ಎಂದು ರೈತ ಕೃಷ್ಣ ಹೇಳುತ್ತಾರೆ.


ಉತ್ತಮ ಪೌಷ್ಠಿಕಾಂಶದ ಮೌಲ್ಯ ಹೊಂದಿರುವ ಮಾವುಗಳು
ಇಂತಹ ಲಕ್ಷಣಗಳನ್ನು ಹೊಂದಿರುವ ಮಾವುಗಳು ಹೊಸ ತಳಿಗಳನ್ನು ಬೆಳೆಸುವಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್‌ಸಂಶೋಧನೆ (IIHR), ಪ್ರಮುಖವಾಗಿದೆ. ಪ್ರತಿ ಮಾವಿನ ತಳಿಯ ಅನುಕೂಲಕರ ಗುಣಲಕ್ಷಣಗಳನ್ನು ರಾಸಾಯನಿಕ ಮೂಲಕ ಗುರುತಿಸಲಾಗುತ್ತದೆ. "ಕರ್ನಾಟಕವು ಸುಮಾರು 700 ದೇಶೀಯ ಮಾವಿನ ತಳಿಗಳನ್ನು ಹೊಂದಿದೆ. ಈ ಸ್ಥಳೀಯ ಪ್ರಭೇದಗಳನ್ನು ಸಂರಕ್ಷಿಸುವುದು ಬಹಳ ಮುಖ್ಯ ಏಕೆಂದರೆ ಅನೇಕವು ರೋಗ ನಿರೋಧಕವಾಗಿರುತ್ತವೆ ಮತ್ತು ಉತ್ತಮ ಪೌಷ್ಠಿಕಾಂಶದ ಮೌಲ್ಯ ಹೊಂದಿವೆ” ಎಂದು ಐಐಎಚ್‌ಆರ್‌ನ ನಿವೃತ್ತ ನಿರ್ದೇಶಕ ಎಂ ಆರ್ ದಿನೇಶ್ ಹೇಳಿದರು.


ಇದನ್ನೂ ಓದಿ:  Wild Fruit: ಅಪರೂಪದ ಕಾಡು ಹಣ್ಣನ್ನು ಬೆಳೆದು ಲಕ್ಷಾಧಿಪತಿಯಾದ ರೈತ! ಕೃಷಿ ಮಾಡ್ತಿನಿ ಅನ್ನುವವರು ಒಮ್ಮೆ ಇವ್ರನ್ನು ನೋಡಿ

ಸಂಸ್ಥೆಯು 1970 ರ ದಶಕದ ಆರಂಭದಿಂದಲೂ ಕಾಡು ಮಾವಿನ ತಳಿಗಳನ್ನು ದಾಖಲಿಸುತ್ತಿದೆ. "2021 ರ ಹೊತ್ತಿಗೆ, ನಾವು 550 ಕ್ಕೂ ಹೆಚ್ಚು ಪ್ರಭೇದಗಳನ್ನು ಗುರುತಿಸಿ ಸಂರಕ್ಷಿಸಿದ್ದೇವೆ. ಈ ಪೈಕಿ 280 ಅಪ್ಪೆಮಿಡಿ ತಳಿಗಳನ್ನು ಉತ್ತರ ಕನ್ನಡ ಮತ್ತು ಶಿವಮೊಗ್ಗದಲ್ಲಿ ಗುರುತಿಸಿದ್ದೇವೆ ಎಂದಿದ್ದಾರೆ. ಈ ವರ್ಷ, ವಿವಿಧ ಜಿಲ್ಲೆಗಳಲ್ಲಿ ರೈತರು ಬೆಳೆದ ಸುಮಾರು 20 ತಳಿಗಳನ್ನು ಗುಂಪು ಗುರುತಿಸಿದೆ. “ನಮ್ಮಉದ್ದೇಶ ಸಂರಕ್ಷಣೆ ಮತ್ತು ವಿತರಣೆಯಾಗಿದೆ. ನಾವು ನಮ್ಮ ಕಲ್ಪನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದೇವೆ ಮತ್ತು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದೇವೆ ಎಂದಿದ್ದಾರೆ.

Published by:Ashwini Prabhu
First published: