Karnataka Weather Report: ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ: ತಗ್ಗಿದ ಚಳಿ

ಇಂದು ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ ಇರಲಿದ್ದು, ಎಂದಿನಂತೆ ಚಳಿ (Winter) ಇರಲಿದೆ. ರಾಜ್ಯದಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಇಂದು ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ ಇರಲಿದ್ದು, ಎಂದಿನಂತೆ ಚಳಿ (Winter) ಇರಲಿದೆ. ರಾಜ್ಯದಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಸದ್ಯ ಕರ್ನಾಟಕದಲ್ಲಿ ಮಳೆಯ (Karnataka Rainfall) ಪ್ರಮಾಣ ಕಡಿಮೆಯಾಗಿದೆ. ಆದರೆ ಬೇರೆ ರಾಜ್ಯಗಳಲ್ಲಿ ಇನ್ನೂ ಸಹ ವರುಣನ ಅಬ್ಬರ ನಿಂತಿಲ್ಲ. ಜನವರಿ 21ರಿಂದ 23ರವರೆಗೆ ದೆಹಲಿ, ಉತ್ತರ ಪ್ರದೇಶ, ಉತ್ತರ ರಾಜಸ್ಥಾನ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

ಇನ್ನುಳಿದಂತೆ ಉತ್ತರ ಕರ್ನಾಟಕದ (North Karnataka) ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಸಣ್ಣ ಸುಳಿಗಾಳಿ (Cold Wave) ಹಿರಿಯ ಜನರನ್ನು ಮನೆಯಲ್ಲಿ ಕೂರುವಂತೆ ಮಾಡಿದೆ. ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ  (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 29-15, ಮೈಸೂರು 31-16, ಚಾಮರಾಜನಗರ 31-17, ರಾಮನಗರ 30-16, ಮಂಡ್ಯ 31-16, ಬೆಂಗಳೂರು ಗ್ರಾಮಾಂತರ 29-15, ಚಿಕ್ಕಬಳ್ಳಾಪುರ 29-15, ಕೋಲಾರ 29-14, ಹಾಸನ 30-15, ಚಿಕ್ಕಮಗಳೂರು 30-15, ದಾವಣಗೆರೆ 32-16, ಶಿವಮೊಗ್ಗ 33-16, ಕೊಡಗು 31-15, ತುಮಕೂರು 30-15

ಇದನ್ನೂ ಓದಿ:  Yadagiri: ಹಣ ನೀಡದೇ ಸ್ನೇಹಿತನಿಂದ ಮೋಸ; ಗೆಳೆಯನ ಮೋಸದಾಟಕ್ಕೆ ಪ್ರಾಣಬಿಟ್ಟ ಗೆಳೆಯ!

ಉಡುಪಿ 33-22, ಮಂಗಳೂರು 32-22, ಉತ್ತರ ಕನ್ನಡ 34-17, ಧಾರವಾಡ 32-17, ಹಾವೇರಿ 33-16, ಹುಬ್ಬಳ್ಳಿ 32-17, ಬೆಳಗಾವಿ 32-16, ಗದಗ 32-17, ಕೊಪ್ಪಳ 32-17, ವಿಜಯಪುರ 32-17, ಬಾಗಲಕೋಟ 33-17, ಕಲಬುರಗಿ 32-16, ಬೀದರ್ 30-15, ಯಾದಗಿರಿ 32-17, ರಾಯಚೂರ 32-17, ಬಳ್ಳಾರಿ 32-17

ಈ ರಾಜ್ಯಗಳಲ್ಲಿ ದಟ್ಟವಾದ ಮಂಜು

ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಶೀತ ದಿನದ ಪರಿಸ್ಥಿತಿಗಳನ್ನು ಮುನ್ಸೂಚಿಸಲಾಗಿದೆ. ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ನಿರೀಕ್ಷಿಸಲಾಗಿದೆ. ಪಂಜಾಬ್, ಹರಿಯಾಣ, ದೆಹಲಿ, ಬಿಹಾರ ಮತ್ತು ಸಿಕ್ಕಿಂನ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ಇರುವ ಸಾಧ್ಯತೆಯಿದೆ.

ಅಕಾಲಿಕ ಮಳೆಗೆ ಬೆಳೆ ಹಾನಿ

ಇತ್ತ ಮೈಸೂರು ಭಾಗದಲ್ಲಿ ಶುಷ್ಕ ಹಮಾಮಾನದ ಜೊತೆ ಚಳಿ ಸಹ ಇರಲಿದೆ. ಬೆಳಗ್ಗೆ ಬೀಳುವ ಮಂಜು ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಕಡಲೆ, ಜೋಳ ಹಳದಿ ರೋಗಕ್ಕೆ ತುತ್ತಾಗುವ ಆತಂಕ ಎದುರಾಗಿದೆ. ಮತ್ತೊಂದೆಡೆ ಕೊರೋನಾ, ಓಮೈಕ್ರಾನ್ (Corona Virus And Omicron Variant) ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಸಣ್ಣ ನೆಗಡಿಗೂ ಜನರು ಹೆದರುವಂತಾಗಿದೆ.

ಉತ್ತರ ಕರ್ನಾಟಕದ (North Karnataka) ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟುವ ಮೂಲಕ ಬೇಸಿಗೆ (Summer) ಆರಂಭದ ಸುಳಿವು ನೀಡುತ್ತಿದೆ. ಈ ಬಾರಿ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ವಾತಾವರಣದಲ್ಲಿ ವೈಪರೀತ್ಯ ಉಂಟಾಗಿದೆ.

ಇದನ್ನೂ ಓದಿ:  Organ Donation: ಸಾವಿನಲ್ಲೂ ಸಾರ್ಥಕತೆ ಮೆರೆದ ಮಳವಳ್ಳಿಯ ನಾಗಮ್ಮ: 5 ಜನರ ಬಾಳಿಗೆ ಸಿಕ್ತು ಬೆಳಕು!

ರಾಜ್ಯದಲ್ಲಿ ಕಳೆದ ವರ್ಷ ಸುರಿದ ಅಕಾಲಿಕ ಮಳೆ(Unseasonal Rain) ಎಲ್ಲ ಕಡೆ ನಿಂತಿದ್ದು, ಸದ್ಯ ರಾಜ್ಯದಲ್ಲಿ ಚಳಿಯ(Winter) ಪ್ರಮಾಣವೂ ದಿನೇ ದಿನೇ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿದೆ. ಇದರಿಂದ ಈ ವರ್ಷ ಬೇಸಿಗೆ ಬೇಗನೇ ಆರಂಭವಾಗುವ ಸೂಚನೆಗಳು ಕಾಣುತ್ತಿದೆ. ಮುಂಗಾರು(Monsoon) ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದವು. ಈಗ ಜಲಾಶಯಗಳ ಪ್ರಮಾಣ ಕಡಿಮೆಯಾಗುತ್ತಿದೆ.
Published by:Mahmadrafik K
First published: