Good News: ಸರ್ಕಾರವೇ ನಿಮ್ಮ ಮದುವೆ ಮಾಡುತ್ತೆ! ಬೇಗನೆ ಅರ್ಜಿ ಸಲ್ಲಿಸಿ, ಹೇಗೆ ಸಲ್ಲಿಸೋದು ವಿವರ ಇಲ್ಲಿದೆ

ವರನಿಗೆ ಅಂಗಿ, ಧೋತಿ ಹಾಗೂ 5000 ರೂಪಾಯಿ ನಗದು ನೀಡಲಾಗುವುದು. ವಧುವಿಗೆ ಮಂಗಲಸೂತ್ರಕ್ಕಾಗಿ ಸೀರೆ, 1,000 ರೂಪಾಯಿ ನಗದು ಮತ್ತು 8 ಗ್ರಾಂ ಚಿನ್ನ ನೀಡಲಾಗುತ್ತದೆ. ಹೀಗೆ ನೀಡುವ ಒಟ್ಟು ನೆರವು ಸುಮಾರು 55,000 ರೂ.ಆಗಿರುತ್ತದೆ.

ಮದುವೆ ಎಂಬ ಅನುಬಂಧ

ಮದುವೆ ಎಂಬ ಅನುಬಂಧ

  • Share this:
ಮದುವೆ ಮಾಡೋದು ಈ ಕಾಲದಲ್ಲಿ ಅಷ್ಟು ಸುಲಭದಲ್ಲಿಲ್ಲ.  ವಧುವಿಗೆ ವರ, ವರನಿಗೆ ವಧು ಸಿಕ್ಕರೂ ಬೇರೆ ತಯಾರಿ ಮಾಡಬೇಕಲ್ಲ! ಅದು ಅಷ್ಟು ಸುಲಭದ ಮಾತಾ? ಅಡುಗೆ, ಛತ್ರ, ಬಂಗಾರ (Gold) ಅದೂ ಇದು ಅಂತ ಎಷ್ಟೆಲ್ಲ ಖರ್ಚು. ಮದುವೆಗಾಗಿ ಸಾಲ (Marriage Loan)  ಮಾಡುವವರ ಸಂಖ್ಯೆಯೇ ಹೆಚ್ಚು. ಇಂತಹ ದುಂದುವೆಚ್ಚ ಅಥವಾ ಸಾಲ  ಮಾಡಿಕೊಂಡು ಮದುವೆ ಮಾಡುವ ಕಷ್ಟವನ್ನು ತಪ್ಪಿಸಲೆಂದೇ ಕರ್ನಾಟಕ ಸರ್ಕಾರ (Karnataka Government) ಯೋಜನೆಯೊಂದನ್ನು ಜಾರಿಗೊಳಿಸಿದೆ.  ಏಪ್ರಿಲ್ 28, ಮೇ 11 ಮತ್ತು 25ರಂದು ಈ ಯೋಜನೆಯಡಿ ಮದುವೆ ಮಾಡಲಾಗುವುದು.  ಕರ್ನಾಟಕ ಸಪ್ತಪದಿ ವಿವಾಹ ಯೋಜನೆ (Karnataka Saptapadi Vivah Yojana). ಹಾಗಿದ್ದರೆ ಈ ಯೋಜನೆಯಡಿ ಹೇಗೆ ಮದುವೆಯಾಗುವುದು? ಪ್ರೇಮಿಗಳೂ ಮದುವೆಯಾಗಬಹುದೇ? ಇಲ್ಲಿದೆ ವಿವರ!

ಕೋವಿಡ್​ನಿಂದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಯೋಜನೆಯನ್ನು ಸರ್ಕಾರ ಮತ್ತೆ ಆರಂಭಿಸಿದೆ ಇದೀಗ ಮತ್ತೆ ಜಾರಿಗೊಳಿಸಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗಾಗಿ ಮಾಡಿದ್ದ ಯೋಜನೆ ಇದಾಗಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಸರ್ಕಾರ ಉಚಿತ “ಸಪ್ತಪದಿ ಸಾಮೂಹಿಕ ವಿವಾಹ” ಯೋಜನೆಯನ್ನು ಪ್ರಾರಂಭಿಸಿತ್ತು.

ಉಡುಗೊರೆಯನ್ನೂ ಸರ್ಕಾರವೇ ನೀಡುತ್ತೆ
ವಧು ಮತ್ತು ವರನಿಗೆ ಉಡುಗೆ, ಬಂಗಾರದ ಉಡುಗೊರೆ ನೀಡುವ ಜೊತೆಗೆ, ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ದೇವಾಲಯ ಆಡಳಿತ ಮಂಡಳಿಗಳೇ ಮಾಡುವುದು ಈ ಯೋಜನೆಯ ವಿಶೇಷವಾಗಿದೆ.

ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ
ಈ ಹಿನ್ನೆಲೆಯಲ್ಲಿ ಏಪ್ರಿಲ್‌ ಮತ್ತು ಮೇ, 2022 ರ ಆಯ್ದ ಏ ದರ್ಜೆಯ ದೇವಸ್ಥಾನಗಳಲ್ಲಿ, ಕೋವಿಡ್‌ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ – ಸಪ್ತಪದಿ ನಡೆಸಲು ಆದೇಶಿಸಲಾಗಿದೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ಮೇರೆಗೆ ಇಲಾಖೆಯಿಂದ ಆದೇಶ ಪ್ರಕಟಿಸಲಾಗಿದೆ.

ಇದನ್ನು ಪ್ರತಿ ತಿಂಗಳು ಎರಡು ಬಾರಿ
ಸಪ್ತಪದಿ ವಿವಾಹ ಯೋಜನೆ ಅಥವಾ ಸಾಮೂಹಿಕ ವಿವಾಹ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ಪ್ರಾರಂಭಿಸಿದೆ. ಮದುವೆಯ ಜನಸಂದಣಿಯನ್ನು ಕಡಿಮೆ ಮಾಡುವುದು ಮುಖ್ಯ ಆಲೋಚನೆ.  ಮತ್ತು ಇದನ್ನು ಪ್ರತಿ ತಿಂಗಳು ಎರಡು ಬಾರಿ ನಡೆಸಲಾಗುತ್ತದೆ. ಯೋಜನೆಗೆ ಸಂಬಂಧಿಸಿದ ಇತರ ವಿವರಗಳ ಕುರಿತು ಇನ್ನಷ್ಟು ತಿಳಿಯಲು ಮುಂದೆ ಓದಿ.

ಯಾವಾಗ ಆರಂಭವಾದ ಯೋಜನೆ ಇದು?
ಕರ್ನಾಟಕ ಸರ್ಕಾರವು ಮೊದಲು ಸಪ್ತಪದಿ ಮದುವೆ ಯೋಜನೆಯನ್ನು 10 ಜನವರಿ 2020 ರಂದು ಪ್ರಾರಂಭಿಸಿತು. ಆಗ CM ಆಗಿದ್ದ ಬಿ.ಎಸ್.ಯಡಿಯೂರಪ್ಪ ಆರಂಭಿಸಿರುವ ಈ ಸಾಮೂಹಿಕ ವಿವಾಹ ಯೋಜನೆಯ ಸಂಪೂರ್ಣ ವಿವರಗಳನ್ನು ನೀವು ತಿಳಿದುಕೊಳ್ಳಲೇಬೇಕು.

55 ಸಾವಿರ ಸಹಾಯಧನ!
ಈ ಸಾಮೂಹಿಕ ವಿವಾಹ ಯೋಜನೆಯಡಿ ರಾಜ್ಯ ಸರ್ಕಾರ ನವ ದಂಪತಿಗಳಿಗೆ 55 ಸಾವಿರ ರೂ. ಸಹಾಯಧನ ನೀಡುತ್ತದೆ. ಇದಕ್ಕಾಗಿ ಅಭ್ಯರ್ಥಿಗಳು ಕರ್ನಾಟಕ ಸಪ್ತಪದಿ ವಿವಾಹ ಯೋಜನೆ 2022 ರಂದು ದೇವಸ್ಥಾನಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮದುವೆಯಾಗಲಿರುವ ಎಲ್ಲಾ ಹೊಸ ಜೋಡಿಗಳು ಸಪ್ತಪದಿ ವಿವಾಹ ಯೋಜನೆಯ ಫಲಾನುಭವ ಪಡೆಯಬಹುದು. 90-100 ದೇವಸ್ಥಾನಗಳಲ್ಲಿ ಸುಮಾರು 1,000 ಮದುವೆಗಳನ್ನು ನಡೆಸಲು ಸರ್ಕಾರ ಯೋಜಿಸುವ ಸಾಧ್ಯತೆಯಿದೆ.

ವಿತ್ತೀಯ ನೆರವು ನೀಡುವ ಮೂಲಕ ದುರ್ಬಲ ವರ್ಗಗಳನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರವು ಯೋಜನೆಯನ್ನು ಪ್ರಾರಂಭಿಸಿದೆ.

ಯೋಜನೆಯಡಿ ವಿವಾಹಿತ ದಂಪತಿ ಸರ್ಕಾರದಿಂದ 55,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಪಡೆಯುತ್ತಾರೆ.

ವರನಿಗೆ ಅಂಗಿ, ಧೋತಿ ಹಾಗೂ 5000 ರೂಪಾಯಿ ನಗದು ನೀಡಲಾಗುವುದು.

ವಧುವಿಗೆ ಮಂಗಲಸೂತ್ರಕ್ಕಾಗಿ ಸೀರೆ, 1,000 ರೂಪಾಯಿ ನಗದು ಮತ್ತು 8 ಗ್ರಾಂ ಚಿನ್ನ ನೀಡಲಾಗುತ್ತದೆ. ಹೀಗೆ ನೀಡುವ ಒಟ್ಟು ನೆರವು ಸುಮಾರು 55,000 ರೂ.ಆಗಿರುತ್ತದೆ.

ಕರ್ನಾಟಕ ಸಪ್ತಪದಿ ವಿವಾಹ ಯೋಜನೆಗೆ ಅರ್ಹತೆಯ ಮಾನದಂಡಗಳು

ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ಮತ್ತು ಕಾನೂನುಬದ್ಧ ನಿವಾಸಿಗಳಾಗಿರಬೇಕು.

ಆಯ್ದ ದೇವಸ್ಥಾನಗಳಲ್ಲಿ ಮಾತ್ರ ಮದುವೆ ನಡೆಯಲಿದೆ.

ವಧು ಮತ್ತು ವರನ ಪೋಷಕರು ಇಬ್ಬರೂ ಸಮಾರಂಭದಲ್ಲಿ ಹಾಜರಿದ್ದರೆ ಮಾತ್ರ ಮದುವೆ ನಡೆಯುತ್ತದೆ.

ಪ್ರೇಮ ವಿವಾಹ ಮಾಡಿಕೊಳ್ಳುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.

ವಧುವಿನ ವಯಸ್ಸು 18 ವರ್ಷ ಅಥವಾ ಮೇಲ್ಪಟ್ಟಿರಬೇಕು.

ಸಪ್ತಪದಿ ವಿವಾಹ ಯೋಜನೆ 2022 ನೋಂದಣಿ ಹೇಗೆ?
ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದ    ಸಿಎಂ ಆಗಿದ್ದಾಗ ಮೊದಲು ಸಪ್ತಪದಿ ವಿವಾಹ ಯೋಜನೆಯನ್ನು 10 ಜನವರಿ 2020 ರಂದು ಪ್ರಾರಂಭಿಸಿದ್ದರು. ಈ ಯೋಜನೆಯಡಿ ಮದುವೆಯಾಗಬಯಸುವವರು ಕರ್ನಾಟಕ ಸಪ್ತಪದಿ ವಿವಾಹ ಯೋಜನೆ 2022 ಕ್ಕೆ ದೇವಸ್ಥಾನಗಳಲ್ಲಿ ನೋಂದಾಯಿಸಿಕೊಳ್ಳಬೇಕು.

ಎಲ್ಲಾ ಜೋಡಿಗಳು ಮದುವೆಯ ನಿಗದಿತ ದಿನಾಂಕಕ್ಕಿಂತ 30 ದಿನಗಳ ಮೊದಲು ದೇವಸ್ಥಾನದಲ್ಲಿ ನೋಂದಾಯಿಸಿಕೊಳ್ಳಬೇಕು. ಎಲ್ಲಾ ಅರ್ಹ ದಂಪತಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.  ಆ ಯ್ಕೆಯಾದ ಜೋಡಿ ಮಾತ್ರ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಬಹುದು.

ಅಪ್ಲಿಕೇಶನ್ ಪ್ರಕ್ರಿಯೆ ಹಂತ ಹಂತವಾಗಿ ಹೀಗಿದೆ
ಯೋಜನೆಗೆ ನೋಂದಾಯಿಸಲು ಬಯಸುವ ಎಲ್ಲಾ ಆಸಕ್ತ ಅರ್ಜಿದಾರರು, ನೀಡಲಾದ ಸುಲಭ ಹಂತಗಳನ್ನು ಅನುಸರಿಸಬೇಕು.

ಈ ಯೋಜನೆಗೆ ಅರ್ಜಿಗಳನ್ನು ಆಫ್‌ಲೈನ್ ಮೂಲಕ ಸ್ವೀಕರಿಸಲಾಗುತ್ತದೆ. ತಮ್ಮನ್ನು ನಾಮನಿರ್ದೇಶನ ಮಾಡಲು ಬಯಸುವ ಅರ್ಜಿದಾರರು ಮೊದಲು ದೇವಾಲಯಗಳ ಪಟ್ಟಿಯನ್ನು ಪರಿಶೀಲಿಸಬೇಕು.

ಇದನ್ನೂ ಓದಿ: Free Laptop Scheme: ವಿದ್ಯಾರ್ಥಿಗಳೇ, ನಿಮಗೂ ಫ್ರೀ ಲ್ಯಾಪ್​ಟಾಪ್ ಸಿಗುತ್ತಾ? ಚೆಕ್ ಮಾಡಿ

ದೇವಾಲಯಗಳ ಪಟ್ಟಿಯಲ್ಲಿನ ನಿಮ್ಮ ಹತ್ತಿರದ ದೇವಸ್ಥಾನಕ್ಕೆ ಹೋಗಬೇಕು. ದೇವಸ್ಥಾನದ ಪ್ರಾಧಿಕಾರದಿಂದ ನೋಂದಣಿ ಫಾರ್ಮ್ ಅನ್ನು ಪಡೆಯಬೇಕು.

ಇದರ ನಂತರ ಅರ್ಜಿದಾರರು ವಧು ಮತ್ತು ವರನ ಮಾಹಿತಿಯನ್ನು ನಮೂದಿಸುವ ಮೂಲಕ ಮದುವೆಯ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.

ನಿಮ್ಮ ನೋಂದಣಿ ಫಾರ್ಮ್ ಅನ್ನು ಪರಿಶೀಲಿಸಿದ ನಂತರ ಫಾರ್ಮ್ ಅನ್ನು ದೇವಸ್ಥಾನದ ಕಚೇರಿಗೆ ಸಲ್ಲಿಸಿ. ಈ ರೀತಿಯಲ್ಲಿ ನಿಮ್ಮ ಆಫ್‌ಲೈನ್ ನೋಂದಣಿ ಪೂರ್ಣಗೊಳ್ಳುತ್ತದೆ.

ಸ್ವಲ್ಪ ಸಮಯದ ನಂತರ ಆಯ್ಕೆಯಾದ ಅರ್ಜಿದಾರರ ಪಟ್ಟಿಯನ್ನು ನಿಗದಿತ ದಿನಾಂಕದಂದು ಬಿಡುಗಡೆ ಮಾಡಲಾಗುತ್ತದೆ.

ಸಪ್ತಪದಿ ವಿವಾಹ ಯೋಜನೆಯ ಅಗತ್ಯ ದಾಖಲೆಗಳು
ಸರ್ಕಾರದ ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಬಯಸುವ ರಾಜ್ಯದ ಜನರು ಅಂದರೆ ಈ ಸರ್ಕಾರಿ ಯೋಜನೆಯಡಿಯಲ್ಲಿ ಮದುವೆಯಾಗಲು ಬಯಸುವವರು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು.

ಇದನ್ನೂ ಓದಿ: Damaged Note Exchange: ನೋಟು ಹರಿದಿದೆಯೇ? ಕೊಳಕಾಗಿದೆಯೇ? ಹೀಗೆ ಎಕ್ಸ್​ಚೇಂಜ್ ಮಾಡಿ

ಗುರುತಿನ ಆಧಾರ

ವಿಳಾಸ ಪುರಾವೆ

ನಿವಾಸ ಪ್ರಮಾಣಪತ್ರ

ವಯಸ್ಸಿನ ಪುರಾವೆ

ಜಾತಿ ಪ್ರಮಾಣ ಪತ್ರ

ಅವರ ಪೋಷಕರ ಒಪ್ಪಿಗೆ ಪತ್ರ
Published by:guruganesh bhat
First published: