Swiggy: ಕೇಂದ್ರ ಸರ್ಕಾರ 27.5 ಕೋಟಿ ರೂಪಾಯಿ ಕೊಡಬೇಕಾ ಸ್ವಿಗ್ಗಿಗೆ? ಈ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

ಸ್ವಿಗ್ಗಿಗೆ 7.51 ಕೋಟಿ ರೂಪಾಯಿಗಳ ಸರಕು ಮತ್ತು ಸೇವಾ ತೆರಿಗೆಯನ್ನುಮರುಪಾವತಿಸುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಹಾಗಿದ್ರೆ ಏನಿದು ಪ್ರಕರಣ, ನ್ಯಾಯಪೀಠದ ಆದೇಶದಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ವಿವರ...

ಸ್ವಿಗ್ಗಿ

ಸ್ವಿಗ್ಗಿ

  • Share this:
    ಇ-ಕಾಮರ್ಸ್ (E-Commerce) ಪ್ಲಾಟ್‌ಫಾರ್ಮ್ (Platform) ಸ್ವಿಗ್ಗಿಯನ್ನು (Swiggy) ನಿರ್ವಹಿಸುತ್ತಿರುವ ಬಂಡ್‌ಎಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ ಕಂಪನಿಗೆ (Company) 27.51 ಕೋಟಿ ರೂಪಾಯಿಗಳ ಸರಕು ಮತ್ತು ಸೇವಾ ತೆರಿಗೆಯನ್ನು (GST) ಮರುಪಾವತಿಸುವಂತೆ ಕರ್ನಾಟಕ ಹೈಕೋರ್ಟ್ (High Court) ಕೇಂದ್ರ ಸರ್ಕಾರಕ್ಕೆ (Central Government) ನಿರ್ದೇಶನ ನೀಡಿದೆ. ಸಿಜಿಎಸ್‌ಟಿ (CGST) ಕಾಯ್ದೆಯಡಿ ಸೂಚಿಸಲಾದ ಕಾರ್ಯವಿಧಾನಗಳನ್ನು ಅನುಸರಿಸದೆ ಜಿಎಸ್‌ಟಿ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂಬುದು ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ಇಂತದ್ದೇ ತೀರ್ಪು (Judgment) ನೀಡಿತ್ತು. ಆದರೆ, ಕೇಂದ್ರ ಸರ್ಕಾರ, ಡೈರೆಕ್ಟರೇಟ್ ಜನರಲ್ ಆಫ್ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ ಇಂಟೆಲಿಜೆನ್ಸ್ ಮತ್ತು ಇತರರು ಆ ತೀರ್ಪಿನ ವಿರುದ್ಧ ಹೈಕೋರ್ಟ್‌ ವಿಭಾಗೀಯ ಪೀಠದ ಮೇಲ್ಮನವಿ ಹೋಗಿತ್ತು.

    ಏಕಸದಸ್ಯ ಪೀಠದ ಆದೇಶದ ವಿರುದ್ಧ ಕೇಂದ್ರ ಸರ್ಕಾರ, ಡೈರೆಕ್ಟರೇಟ್ ಜನರಲ್ ಆಫ್ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ ಇಂಟೆಲಿಜೆನ್ಸ್ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ. ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ ಮತ್ತು ಎಂಜಿಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ ಎಂದು ತಿಳಿದುಬಂದಿದೆ..

    ಕೇಂದ್ರ ಸರ್ಕಾರದ ಅರ್ಜಿ ತಿರಸ್ಕರಿಸಿದ ಕೋರ್ಟ್

    ಮರುಪಾವತಿಗಾಗಿ ಸ್ವಿಗ್ಗಿಯ ಅರ್ಜಿಗಳನ್ನು ಪರಿಗಣಿಸುವಂತೆ ನಿರ್ದೇಶಿಸಿ, ಸೆಪ್ಟೆಂಬರ್ 14, 2021 ರಂದು ನೀಡಿದ್ದ ಕರ್ನಾಟಕ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಕೋರಿತ್ತು. "ತೆರಿಗೆ ಸಂಗ್ರಹವು ಕಾನೂನಿನ ಅಧಿಕಾರದಿಂದ ಇರಬೇಕು ಎಂದು ಕಲಂ 265 ಆದೇಶಿಸುತ್ತದೆ.

    ಕಾನೂನಿನ ಯಾವುದೇ ಅಧಿಕಾರವಿಲ್ಲದೆ ತೆರಿಗೆಯನ್ನು ಸಂಗ್ರಹಿಸಿದರೆ, ಅದು ವ್ಯಕ್ತಿಯ ಆಸ್ತಿಯನ್ನು ಕಸಿದುಕೊಳ್ಳುತ್ತದೆ ಮತ್ತು ಭಾರತದ ಸಂವಿಧಾನದ 300A ಪರಿಚ್ಛೇದದ ಅಡಿಯಲ್ಲಿ ಅವರ ಹಕ್ಕನ್ನು ಉಲ್ಲಂಘಿಸುತ್ತದೆ” ಎಂದು ಕರ್ನಾಟಕ ಹೈಕೋರ್ಟ್‌ ಏಕಸದಸ್ಯ ಪೀಠ ಹೇಳಿದೆ.

    ಇದನ್ನೂ ಓದಿ: ಭಾರತದ ಅಡಿಕೆ ಉತ್ಪಾದನೆ ಎಷ್ಟು? UAE, ಸಿಂಗಾಪೂರದಿಂದಲೂ ಭಾರತಕ್ಕೆ ಅಡಿಕೆ ಆಮದು!

    ತನಿಖೆಯಲ್ಲಿ ಬಯಲಾಗಿದ್ದೇನು..?

    “ಪ್ರಸ್ತುತ ಪ್ರಕರಣದಲ್ಲಿ, ತನಿಖೆ ಬಾಕಿ ಇರುವಾಗ ಮೊತ್ತವನ್ನು ಠೇವಣಿ ಮಾಡಲು ಅನುಮತಿಸುವ ಏಕೈಕ ನಿಬಂಧನೆಯು CGST ಕಾಯಿದೆಯ ಸೆಕ್ಷನ್ 74 (5) ಆಗಿದೆ. ಆದರೆ, ಅದನ್ನು ಈ ಪ್ರಕರಣದಲ್ಲಿ ಅನ್ವಯಿಸಲಾಗಿಲ್ಲ.

    ಕಾನೂನು ಉಲ್ಲಂಘಿಸಿದ್ದು ಸಾಬೀತು

    ಆದ್ದರಿಂದ, ಸಂವಿಧಾನದ 265 ಮತ್ತು 300-ಎ ವಿಧಿಗಳನ್ನು ಉಲ್ಲಂಘಿಸಿ ಸ್ವಿಗ್ಗಿಯಿಂದ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಬಾಕಿ ಇರುವ ತನಿಖೆಯ ಫಲಿತಾಂಶಕ್ಕೆ ಒಳಪಟ್ಟು ಮೊತ್ತವನ್ನು ನೀಡಬೇಕು ಎಂಬ ಇಲಾಖೆಯ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ಇಲಾಖೆಯು ಕಂಪನಿಗೆ ಮೊತ್ತವನ್ನು ಮರುಪಾವತಿಸಲು ಜವಾಬ್ದಾರನಾಗಿರುತ್ತದೆ” ಎಂದು ನ್ಯಾಯಾಲಯ ಹೇಳಿದೆ.

    ಥರ್ಡ್‌ ಪಾರ್ಟಿ ಗ್ರೀನ್ ಫಿಂಚ್ ಟೀಮ್ ಮ್ಯಾನೇಜ್‌ಮೆಂಟ್ (P) Ltd ನಿಂದ ಕಂಪನಿಗೆ ಒದಗಿಸಲಾದ ಸೇವೆಗಳಿಗೆ ಸಂಬಂಧಿಸಿದಂತೆ ತನಿಖೆ ಬಾಕಿ ಇದ್ದಾಗಲೂ, Swiggy ಯಿಂದ ಸಂಗ್ರಹಿಸಲಾದ ತೆರಿಗೆ ಮೊತ್ತವನ್ನು ಸರ್ಕಾರಕ್ಕೆ ಠೇವಣಿ ಇರಿಸಲಾಗಿದೆ.

    2017 ರ ಒಪ್ಪಂದವೊಂದರ ಪ್ರಕಾರ ಗ್ರೀನ್ ಫಿಂಚ್‌ನಿಂದ ಸ್ವಿಗ್ಗಿಗೆ ಒದಗಿಸಿದ ಸೇವೆಗಳಿಗೆ ಸಂಬಂಧಿಸಿದಂತೆ ಹೈದರಾಬಾದ್ ವಲಯ ಘಟಕದ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಇಲಾಖೆಯ ಡೈರೆಕ್ಟರ್ ಜನರಲ್ (ಡಿಜಿಸಿಐ) ಅವರು ತನಿಖೆಯನ್ನು ಪ್ರಾರಂಭಿಸಿದರು.

    ಇದನ್ನೂ ಓದಿ: Explained: ಪೆಟ್ರೋಲ್ ಬೆಲೆ ಇಳಿಕೆಯಾಗ್ತಿರೋದು ಖುಷಿ ಪಡುವ ವಿಚಾರನಾ? ಭಾರತದ ಮೇಲೆ ಇದರ ಪರಿಣಾಮ ಏನು ಗೊತ್ತಾ?

    ಗ್ರೀನ್ ಫಿಂಚ್ ಅಸ್ತಿತ್ವದಲ್ಲಿಲ್ಲದ ಸಂಸ್ಥೆಯಾಗಿದೆ ಮತ್ತು ಅದರ ಪ್ರಕಾರ, ಗ್ರೀನ್ ಫಿಂಚ್ ಸಂಗ್ರಹಿಸಿದ ಇನ್‌ವಾಯ್ಸ್‌ಗಳ ವಿರುದ್ಧ ಸ್ವಿಗ್ಗಿ ಪಡೆದ ಇನ್‌ಪುಟ್ ತೆರಿಗೆ ಕ್ರೆಡಿಟ್ ಮತ್ತು ಜಿಎಸ್‌ಟಿ ಘಟಕವು ವಂಚನೆಯಾಗಿದೆ ಎಂಬ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಲಾಯಿತು.

    GST ಅಡಿಯಲ್ಲಿ 15 ಕೋಟಿ ರೂಪಾಯಿಗಳನ್ನು ಸ್ವಿಗ್ಗಿ ಠೇವಣಿ ಮಾಡಿದೆ ಮತ್ತು ಕಂಪನಿಯ ಮೂವರು ನಿರ್ದೇಶಕರನ್ನು ಬಿಡುಗಡೆ ಮಾಡಲು 12.51 ಕೋಟಿ ರೂ. ನೀಡಿದೆ ಎಂದೂ ಈ ತನಿಖೆಯ ಸಂದರ್ಭದಲ್ಲಿ ತಿಳಿದುಬಂದಿದೆ.
    Published by:Annappa Achari
    First published: