• Home
  • »
  • News
  • »
  • business
  • »
  • Gratuity Fund: ಬ್ಯಾಂಕ್‌ ಉದ್ಯೋಗಿಗಳ ಕುರಿತು ಹೈಕೋರ್ಟ್ ಮಹತ್ವದ ಆದೇಶ

Gratuity Fund: ಬ್ಯಾಂಕ್‌ ಉದ್ಯೋಗಿಗಳ ಕುರಿತು ಹೈಕೋರ್ಟ್ ಮಹತ್ವದ ಆದೇಶ

ಕರ್ನಾಟಕ ಹೈಕೋರ್ಟ್​

ಕರ್ನಾಟಕ ಹೈಕೋರ್ಟ್​

ಪ್ರಾಧಿಕಾರದ ಆದೇಶವನ್ನು ರದ್ದುಗೊಳಿಸಿರುವ ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಕೆನರಾ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯನ್ನು ಪೀಠವು ವಜಾಗೊಳಿಸಿದೆ.

  • Trending Desk
  • Last Updated :
  • New Delhi, India
  • Share this:

ಸಿಬ್ಬಂದಿಗೆ ಪಾವತಿಸಬೇಕಾದ ಗ್ರಾಚ್ಯುಟಿ (ಸಿಬ್ಬಂದಿ ಕಲ್ಯಾಣ ನಿಧಿ) ಮೊತ್ತವನ್ನು ಸಿಬ್ಬಂದಿಯ ಬಾಕಿ ಇರುವ ಸಾಲದ (Lone) ಮೊತ್ತದೊಂದಿಗೆ ಬ್ಯಾಂಕ್ ಸರಿಹೊಂದಿಸಲು ಸಾಧ್ಯವಿಲ್ಲವೆಂದು ಕರ್ನಾಟಕ ಹೈಕೋರ್ಟ್ (Karanataka High Court)  ತಿಳಿಸಿದೆ. ಬ್ಯಾಂಕ್ ನೌಕರನ (Bank Employee) ಸಾಲಕ್ಕೆ ಗ್ರಾಚ್ಯುಟಿ ಮೊತ್ತವನ್ನು ಸರಿಹೊಂದಿಸಲು ಅನುಮತಿ ನೀಡುವ ನಿಯಂತ್ರಣ ಪ್ರಾಧಿಕಾರದ ಆದೇಶವನ್ನು ರದ್ದುಗೊಳಿಸಿರುವ ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು (Order) ಪ್ರಶ್ನಿಸಿ ಕೆನರಾ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯನ್ನು ಪೀಠವು ವಜಾಗೊಳಿಸಿದೆ.


ಗ್ರಾಚ್ಯುಟಿ ಮೊತ್ತವನ್ನು ಸಾಲಕ್ಕೆ ಸರಿಹೊಂದಿಸುವಂತಿಲ್ಲ


ಗೃಹ ಸಾಲವನ್ನು ಸಾಲದ ಒಪ್ಪಂದದಿಂದ ನಿಯಂತ್ರಿಸಲಾಗುತ್ತದೆ ಎಂದು ತಿಳಿಸಿರುವ ಹೈಕೋರ್ಟ್, ಒಪ್ಪಂದದ ಪ್ರಕಾರ ಕಾರ್ಯನಿರ್ವಹಿಸಲು ಹಾಗೂ ಸಾಲಗಾರನ ವಿರುದ್ದವಾಗಿ ಒಪ್ಪಂದದ ಅಡಿಯಲ್ಲಿ ಎಲ್ಲಾ ಹಕ್ಕುಗಳನ್ನು ಚಲಾಯಿಸು ಅಧಿಕಾರ ಬ್ಯಾಂಕ್‌ಗೆ ಇದೆ. 1972 ರ ಗ್ರಾಚ್ಯುಟಿಯ (ಸಿಬ್ಬಂದಿ ಕಲ್ಯಾಣ ನಿಧಿ) ಪಾವತಿ ಕಾಯ್ದೆಯ ಸೆಕ್ಷನ್ 7 ರ ಅಡಿಯಲ್ಲಿ ಸಂರಕ್ಷಿಸಲಾದ ಗ್ರಾಚ್ಯುಟಿ ಮೊತ್ತದಿಂದ ಆ ಮೊತ್ತವನ್ನು ಸರಿಹೊಂದಿಸಲಾಗುವುದಿಲ್ಲ ಎಂದು ಆದೇಶ ಹೊರಡಿಸಿದೆ.


ಪ್ರಕರಣದ ಹಿನ್ನಲೆ ಏನು?


ಪ್ರತಿವಾದಿಯ ಪತಿಯಾಗಿರುವ ಶ್ರೀಮಂತ ಡಿ ಎಂಬುವವರು 1975ರಲ್ಲಿ ಅರ್ಜಿದಾರರ-ಬ್ಯಾಂಕ್‌ನ ಸೇವೆಗೆ ಪ್ಯೂನ್ ಆಗಿ ಸೇರಿಕೊಂಡರು ಮತ್ತು ನಂತರ 1998 ರಲ್ಲಿ ಕ್ಲರ್ಕ್ ಆಗಿ ಬಡ್ತಿ ಪಡೆದರು. ಶ್ರೀಮಂತ ತಮ್ಮ ಸೇವೆಯ ಅವಧಿಯಲ್ಲಿ, ಕಾಲಕಾಲಕ್ಕೆ ಮರುಪಾವತಿ ಮಾಡುತ್ತಿದ್ದ ಗೃಹ ಸಾಲವನ್ನು ಪಡೆದಿದ್ದರು.


2005 ರಲ್ಲಿ, ಅವರ ಕಡೆಯಿಂದ ತೀವ್ರ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಯಿತು. 2006 ರಲ್ಲಿ ಶಿಸ್ತು ಪ್ರಾಧಿಕಾರದಿಂದ ಕಡ್ಡಾಯ ನಿವೃತ್ತಿಯ ಶಿಕ್ಷೆಯನ್ನು ವಿಧಿಸಲಾಯಿತು.


ಗ್ರಾಚ್ಯುಟಿ (ಸಿಬ್ಬಂದಿ ಕಲ್ಯಾಣ ನಿಧಿ) ಮೊತ್ತ ಬಿಡುಗಡೆಗಾಗಿ ಶ್ರೀಮಂತ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದ್ದು, ಆದ್ದರಿಂದ, ಅವರು ಮೊತ್ತ ಪಾವತಿಸುವ ನಿರ್ದೇಶನಕ್ಕಾಗಿ ನಿಯಂತ್ರಣ ಪ್ರಾಧಿಕಾರವನ್ನು ಸಂಪರ್ಕಿಸಿದ್ದರು. ಗೃಹ ಸಾಲದ ಬಾಕಿ ಮೊತ್ತವನ್ನು ಸಿಬ್ಬಂದಿ ಇನ್ನೂ ಪಾವತಿಸಬೇಕಾಗಿರುವುದರಿಂದ ಸಿಬ್ಬಂದಿ ಕಲ್ಯಾಣ ನಿಧಿಯಿಂದ ಅದನ್ನು ಸರಿಹೊಂದಿಸಲಾಗುತ್ತದೆ ಎಂದು ಬ್ಯಾಂಕ್ ವಾದಿಸಿತ್ತು.


ಗ್ರಾಚ್ಯುಟಿ ಮೊತ್ತದಿಂದಲೇ ಈ ಹಣವನ್ನು ಸರಿಮಾಡಲಾಗುತ್ತದೆ ನಂತರ ಯಾವುದೇ ಬಾಕಿ ಉಳಿದಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. ನಿಯಂತ್ರಣ ಪ್ರಾಧಿಕಾರ ಕೂಡ ಬ್ಯಾಂಕ್ ಹೇಳಿರುವುದನ್ನೇ ಒಪ್ಪಿಕೊಂಡಿದೆ. ಮೇಲ್ಮನವಿಯನ್ನು ಆಧರಿಸಿ ಗ್ರಾಚ್ಯುಟಿ ಮೊತ್ತದೊಂದಿಗೆ ಬಡ್ಡಿಯನ್ನು ನೀಡಲು ಬ್ಯಾಂಕ್‌ಗೆ ಸೂಚಿಸಲಾಗಿದೆ.


ಇದನ್ನೂ ಓದಿ: ಸೈನಿಕ ಕಲ್ಯಾಣ ಇಲಾಖೆಯಲ್ಲಿ ಎಸ್​ಡಿಎ ಹುದ್ದೆ ನೇಮಕಾತಿ


ನ್ಯಾಯಪೀಠದ ತೀರ್ಪು


ಗ್ರಾಚ್ಯುಟಿ ಪಾವತಿ ಕಾಯ್ದೆಯಡಿಯಲ್ಲಿ ಮತ್ತು ಸಂಹಿತೆಯ ಅಡಿಯಲ್ಲಿ ಗ್ರಾಚ್ಯುಟಿ ಪಾವತಿಗೆ ವಿಶೇಷ ಮಾನ್ಯತೆ ಇದೆ ಎಂಬುದನ್ನು ಪೀಠವು ಉಲ್ಲೇಖಿಸಿದೆ. ಗ್ರಾಚ್ಯುಟಿಗೆ ವಿಶೇಷ ರಕ್ಷಣೆ ಮತ್ತು ವಿಶೇಷ ಮಹತ್ವವನ್ನು ನೀಡಲಾಗಿದೆ ಏಕೆಂದರೆ ಗ್ರಾಚ್ಯುಟಿ ಮೊತ್ತವನ್ನು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯು ಸಾಲವನ್ನು ಇತ್ಯರ್ಥಗೊಳಿಸಲು ಆದೇಶದಂತೆ ಬಳಸಲಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.


ಪ್ರಸ್ತುತ ಪ್ರಕರಣದಲ್ಲಿ, ಅರ್ಜಿದಾರರು ಬ್ಯಾಂಕ್ ಗೃಹ ಸಾಲ ಮತ್ತು ಇತರ ಮೊತ್ತ ರೂ.1,29,691 ಕ್ಕೆ ರೂ.9,85,420.24 ಮೊತ್ತವನ್ನು ಹೊಂದಿಸಲು ಕೋರಿದೆ ಎಂಬುದನ್ನು ಪೀಠವು ಗಮನಿಸಿದೆ. ಗೃಹ ಸಾಲದ ವಿಷಯದಲ್ಲಿ ಇದು ಸಂಪೂರ್ಣವಾಗಿ ಬೇರೆಯೇ ವಲಯಕ್ಕೆ ಬರಲಿದ್ದು ಬ್ಯಾಂಕ್ ಹಾಗೂ ಸಾಲ ಪಡೆಯುವವರ ನಡುವಿನ ವಾಣಿಜ್ಯ ವ್ಯವಹಾರಗಳಿಗೆ ಒಳಪಟ್ಟು ಸಂಬಂಧಿತ ಲೋನ್ ನಿಯಮಾವಳಿಗಳಿಗೆ ಒಳಪಡುತ್ತದೆ ಎಂದು ಪೀಠ ತಿಳಿಸಿದೆ.


ಇದನ್ನೂ ಓದಿ: 75 ಪ್ರಾಜೆಕ್ಟ್​ ಅಸಿಸ್ಟೆಂಟ್​ ಹುದ್ದೆಗೆ ನಾಳೆಯೇ ವಾಕ್​ ಇನ್​ ಇಂಟರ್​ವ್ಯೂ


ಸಾಲಗಾರ, ಸಂಸ್ಥೆಯ ಉದ್ಯೋಗಿಯಾಗಿರಲಿ ಅಥವಾ ಆಗದೇ ಇರಲಿ ಲೋನ್‌ನ ನಿಯಮಾವಳಿಗಳು ಲೋನ್‌ಗೆ ಸಂಬಂಧಪಟ್ಟ ವಿಷಯಗಳನ್ನು ನಿರ್ದೇಶಿಸುತ್ತವೆ ಹಾಗೂ ಗ್ರಾಚ್ಯುಟಿ ಮೊತ್ತದೊಂದಿಗೆ ಲೋನ್ ಮೊತ್ತವು ಯಾವುದೇ ಸಂಬಂಧ ಹೊಂದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಆಪಾದಿತ ಅಧಿಕಾರದ ಮೇಲೆ ಬ್ಯಾಂಕ್ ಏಕಪಕ್ಷೀಯವಾಗಿ ಲೋನ್‌ನ ಬಾಕಿ ಮೊತ್ತವನ್ನು ತನ್ನದೇ ಸ್ವಂತ ವಿವೇಚನೆಯಿಂದ ನಿರ್ಧರಿಸಿದೆ ಮತ್ತು ಪಾವತಿಸಬೇಕಾದ ಗ್ರಾಚ್ಯುಟಿ ಮರುಪಡೆಯಲಾಗಿದೆ ಎಂದು ಹೇಳಿದೆ.


ಬ್ಯಾಂಕ್ ಸಾಲದ ಮೇಲೆ ಯಾವುದೇ ಬಡ್ಡಿಯನ್ನು ಸಾಲಗಾರ ಪಾವತಿಸಬೇಕಾಗಿಲ್ಲ ಎಂದು ಹೈಕೋರ್ಟ್ ತಿಳಿಸಿದ್ದು ಗ್ರಾಚ್ಯುಟಿ ಮೊತ್ತವನ್ನು ಬಿಡುಗಡೆ ಮಾಡಲು ಅಥವಾ ಪಡೆಯಲು ಸಿಬ್ಬಂದಿಯು 90 ದಿನಗಳ ಅವಧಿಯೊಳಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಪೀಠವು ಹೇಳಿದೆ.

First published: