• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Karnataka Budget 2023: ಬಜೆಟ್​ನಲ್ಲಿ ಅನ್ನದಾತರಿಗೆ ಬಂಪರ್ ನ್ಯೂಸ್, ಶೂನ್ಯ ಬಡ್ಡಿದರಲ್ಲಿ 5 ಲಕ್ಷದವರೆಗೆ ಸಿಗುತ್ತೆ ಸಾಲ!

Karnataka Budget 2023: ಬಜೆಟ್​ನಲ್ಲಿ ಅನ್ನದಾತರಿಗೆ ಬಂಪರ್ ನ್ಯೂಸ್, ಶೂನ್ಯ ಬಡ್ಡಿದರಲ್ಲಿ 5 ಲಕ್ಷದವರೆಗೆ ಸಿಗುತ್ತೆ ಸಾಲ!

ಬಜೆಟ್​

ಬಜೆಟ್​

ಈ ಬಜೆಟ್​​ನಲ್ಲಿ ಬಸವರಾಜ ಬೊಮ್ಮಾಯಿ ರೈತರಿಗೆ ಬಂಪರ್​ ಗಿಫ್ಟ್​ ನೀಡಿದ್ದಾರೆ. ಅನ್ನದಾತರಿಗೆ ಶೂನ್ಯ ಬಡ್ಡಿದರದಲ್ಲಿ  5 ಲಕ್ಷದವರೆಗೂ ಸಾಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 

  • Share this:

Karnataka Budget 2023-24: ಕರ್ನಾಟಕದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (Basavaraj Bommai) ಅಧಿಕಾರ ಸ್ವೀಕರಿಸಿದ ಮೇಲೆ ಎರಡನೇ ಬಾರಿಗೆ 'ರಾಜ್ಯ ಬಜೆಟ್ 2023-24' (Karnataka Budget) ಮಂಡಿಸುತ್ತಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದ ಜನತೆಯು ಸರ್ಕಾರದ ಭರಪೂರ ಕೊಡುಗೆ/ಘೋಷಣೆಗಳನ್ನು ನೀಡಿದ್ದಾರೆ. ಈ ಬಜೆಟ್​​ನಲ್ಲಿ ಬಸವರಾಜ ಬೊಮ್ಮಾಯಿ ರೈತರಿಗೆ ಬಂಪರ್​ ಗಿಫ್ಟ್​ (Bumper Gift For Farmers) ನೀಡಿದ್ದಾರೆ. ಅನ್ನದಾತರಿಗೆ ಶೂನ್ಯ ಬಡ್ಡಿದರದಲ್ಲಿ  5 ಲಕ್ಷದವರೆಗೂ ಸಾಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಕೃಷಿಕರಿಗೆ ಕೊಡುತ್ತಿದ್ದ ಬಡ್ಡಿ ರಹಿತ ಸಾಲ‌ 3 ರಿಂದ 5 ಲಕ್ಷಕ್ಕೆ ಏರಿಕೆ ಮಾಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೊಷಿಸಿದ್ದಾರೆ. 


ಭೂ ಸಿರಿ ಎಂಬ ಹೊಸ ಯೋಜನೆ ಘೋಷಣೆ!


ಕಿಸಾನ್ ಕ್ರೆಡಿಟ್ ಕಾರ್ಟ್ ಹೊಂದಿರುವ ರೈತರಿಗೆ ಹೊಸ ಯೋಜನೆ ಘೋಷಣೆ ಮಾಡಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ. ಭೂ ಸಿರಿ ಎಂಬ ಹೊಸ ಯೋಜನೆ ಘೋಷಣೆಯಾಗಿದೆ. 23-24ನೇ ಸಾಲಿನಿಂದ ಹೆಚ್ಚುವರಿ 10 ಸಾವಿರ ರೂ ಅನುದಾನ ನೀಡುವುದಾಗಿ ಹೇಳಿದ್ದಾರೆ.ರಾಜ್ಯ ಸರ್ಕಾರದಿಂದ 2500ರೂಪಾಯಿ, ನಾಬಾರ್ಡ್ ನಿಂದ 7500 ರೂಪಾಯಿ ಸೇರಿಸಿ ಒಟ್ಟು ಅನುದಾನ ಸಿಗಲಿದೆ. ಈ ಯೋಜನೆಯಿಂದ ರಾಜ್ಯದ 50 ಲಕ್ಷ ರೈತರಿಗೆ ಅನುಕೂಲ ಸಿಗಲಿದೆ.


ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ  ಹರ್ ಖೇತ್ ಕೊ ಪಾನಿ (PMKSY-HKKP) ಅಡಿ ಬರ ಪೀಡಿತ ಜಿಲ್ಲೆಗಳಾದ ಯಾದಗಿರಿ ಮತ್ತು ಕಲಬುರಗಿಯಲ್ಲಿ ಅಂತರ್ಜಲವನ್ನು ವೃದ್ಧಿಗೊಳಿಸಲು 443 ಕೋಟಿ ರೂ. ಮೊತ್ತದಲ್ಲಿ 138 ಮೇಲೆ ಸಣ್ಣ ನೀರಾವರಿ (Surface Minor Irrigation) ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.


ನೇಕಾರ್​ ಸಮ್ಮಾನ್​ ಯೋಜನೆಯ ಸಹಾಯ ಧನ ಹೆಚ್ಚಳ!


ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ರಾಗಿ, ಕುಚಲಕ್ಕಿ ಖರೀದಿಗೆ ಕೇಂದ್ರ ಸ್ಥಾಪನೆ ಮಾಡಲಾಗುವುದು. ತೊಗರಿ, ಅಡಕೆಗೆ ರೋಗ ಬಂದಾಗ ಸರ್ಕಾರದ ಸಹಾಯ ನೀಡಲಾಗಿದೆ. ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಣೆ ಮಾಡಲಾಗಿದೆ. ಆರೋಗ್ಯ ಕೇಂದ್ರಗಳ ಉನ್ನತೀಕರಣ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು ನೇಕಾರ ಸಮ್ಮಾನ್ ಯೋಜನೆಯಡಿ ನೀಡಲಾಗುತ್ತಿದ್ದ ಸಹಾಯ ಧನ ಏರಿಕೆ. 3 ಸಾವಿರದಿಂದ 5 ಸಾವಿರಕ್ಕೆ ಏರಿಕೆ ಮಾಡಲಾಗಿದೆ.


ಇದನ್ನೂ ಓದಿ: ಶೀಘ್ರದಲ್ಲೇ ಪ್ರತಿ ಬೀದಿ ನಾಯಿಗೂ ಸಿಗಲಿದೆ ಸೂರು, ಬಜೆಟ್​ನಲ್ಲಿ ಇದಕ್ಕೆಂದೇ ಹೊಸ ಯೋಜನೆ ಘೋಷಣೆ!


ವಿದ್ಯುತ್ ಮಗ್ಗ ನೇಕಾರರು ಮತ್ತು ಮಗ್ಗ ಕಾರ್ಮಿಕರಿಗೂ ಸಹ ನೇಕಾರ್ ಸಮ್ಮಾನ್ ಯೋಜನೆ ವಿಸ್ತರಣೆ. ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲ ಸಿಗಲಿದೆ.


25 ಸಾವಿರ ಕೋಟಿ ಸಾಲ ನೀಡುವ ಭರವಸೆ!


ಬೀದರ್​, ಕಲಬುರಗಿ, ಯಾದರಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ನೆಟೆ ರೋಗದಿಂದ ಹಾನಿಯಾಗಿರುವ ತೊಗರಿ ಬೆಳೆಗೆ ಪ್ರತಿ ಹೆಕ್ಟರ್​​ಗೆ 10 ಸಾವಿರದಂತೆ 223 ಕೋಟಿ ರೂಪಾಯಿ ಪರಿಹಾರವನ್ನು ರೈತರಿಗೆ ವಿತರಿಸಕಯ ಕ್ರಮ ಕೈಗೊಳ್ಳಲಾಗಿದೆ. ಈ ರೀತಿಯ ಮತ್ತಷ್ಟು ರೈತರು ಏನಾದರೂ ಬೆಳೆ ಬೆಳೆಬೇಕೆಂದುಕೊಂಡಿದ್ದರೆ ಅವರ ಬಳಿ ಉಳುಮೆ ಮಾಡಲು ದುಡ್ಡಿಲ್ಲದಿದ್ದರೆ ಸರ್ಕಾರ ಯೋಜನೆಯಲ್ಲಿ ಶೂನ್ಯ ಬಡ್ಡಿಗೆ ಸಾಲ ಪಡೆದು ಬೆಳೆ ಬೆಳಯಬಹುದು.


ಇನ್ನೂ ಪಿಎಂ ಕಿಸಾನ್​ ಯೋಜನೆಯಡಿ ಕೇಂದ್ರ 10, 930 ಕೋಟಿ ರೂಪಾಯಿ ಹಾಗೂ ರಾಜ್ಯ ಸರ್ಕಾರದಿಂದ 4,822 ಕೋಟಿ ರೂಪಾಯಿ ಸೇರಿ ಒಟ್ಟಾರೆ 15,752 ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ನೇರ ಜಮೆ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್​ನಲ್ಲಿ ಹೇಳಿದರು.

Published by:ವಾಸುದೇವ್ ಎಂ
First published: