Profit: ಫುಡ್ ಟ್ರಕ್ ಬ್ಯುಸಿನೆಸ್​ ಆರಂಭಿಸಿ 1.5 ಕೋಟಿ ರೂಪಾಯಿ ಗಳಿಸಿದ ದಂಪತಿ!

ಫುಡ್​ ಟ್ರಕ್​

ಫುಡ್​ ಟ್ರಕ್​

ಜ್ಯೋತಿ ಅವರು ಬಾಲ್ಯದಲ್ಲಿ ದೊಡ್ಡ ದೊಡ್ಡ ಟ್ರಕ್ ಗಳು ರಸ್ತೆಯ ಮೇಲೆ ಓಡಾಡುವುದನ್ನು ನೋಡಿ ಮಂತ್ರಮುಗ್ಧರಾಗಿದ್ದರಂತೆ. ನಂತರ ಅವರು ಹದಿಹರೆಯದವರಾದಾಗ, ಆ ಟ್ರಕ್ ನಲ್ಲಿ ಒಂದು ದೋಸೆ ಅಂಗಡಿಯನ್ನು ತೆರೆಯಲು ಯೋಚಿಸಿದರಂತೆ. ಈಗ ಅದೇ ಇಷ್ಟು ಲಾಭಕ್ಕೆ ಕಾರಣವಾಗಿದೆ.

  • Share this:

ಕೆಲವರಿಗೆ ಈ ಕಾರ್ಪೊರೇಟ್ ಕಂಪನಿ (Company) ಕೆಲಸ, ಕೈ ತುಂಬಾ ಸಂಬಳ ಮತ್ತು ಎಸಿ ಚೇಂಬರ್ ನಲ್ಲಿ ಕುಳಿತು ಕೆಲಸ (Work) ಮಾಡುವುದು ಇಷ್ಟವಾಗುವುದಿಲ್ಲ ನೋಡಿ. ನಾಲ್ಕು ಜನರ ಮಧ್ಯೆ ಇದ್ದುಕೊಂಡು ತಮಗೆ ಇಷ್ಟವಾದ ಕೆಲಸ (Work) ಮಾಡಿ ಹಣ ಸಂಪಾದನೆ ಮಾಡಬೇಕೆಂಬ ಹಂಬಲ ಕೆಲವರದ್ದಾಗಿರುತ್ತದೆ ಅಂತ ಹೇಳಬಹುದು. ದೆಹಲಿ ಮೂಲದ ಜ್ಯೋತಿ ಗಣಪತಿ (Jyothi Ganapathi) ಅವರು ಇದಕ್ಕೆ ದೊಡ್ಡ ಉದಾಹರಣೆ (Example) ಅಂತ ಹೇಳಿದರೆ ತಪ್ಪಾಗುವುದಿಲ್ಲ ನೋಡಿ.


ಹೌದು ಜ್ಯೋತಿ ಅವರು ಬಾಲ್ಯದಲ್ಲಿ ದೊಡ್ಡ ದೊಡ್ಡ ಟ್ರಕ್ ಗಳು ರಸ್ತೆಯ ಮೇಲೆ ಓಡಾಡುವುದನ್ನು ನೋಡಿ ಮಂತ್ರಮುಗ್ಧರಾಗಿದ್ದರಂತೆ. ನಂತರ ಅವರು ಹದಿಹರೆಯದವರಾದಾಗ, ಆ ಟ್ರಕ್ ನಲ್ಲಿ ಒಂದು ದೋಸೆ ಅಂಗಡಿಯನ್ನು ತೆರೆಯಲು ಹಾತೊರೆಯುತ್ತಿದ್ದರಂತೆ. ಆದರೆ ಹೆಚ್ಚಿನ ಯುವಕರಂತೆ ಅವರು ಸಹ ಮೊದಲಿಗೆ ಕಾರ್ಪೊರೇಟ್ ವೃತ್ತಿಜೀವನವನ್ನು ಶುರು ಮಾಡಲು ಒತ್ತಾಯಿಸಲ್ಪಟ್ಟರಂತೆ.


ತಮ್ಮ ಜೀವನದ ಕನಸಿಗಾಗಿ ಕೆಲಸ ಬಿಟ್ಟ ದಂಪತಿಗಳು


ಯುನೈಟೆಡ್ ಸ್ಟೇಟ್ಸ್ ನ ನಾಕ್ಸ್ ಕಾಲೇಜಿನಿಂದ ಪದವಿ ಪಡೆದ ನಂತರ ಮತ್ತು ಹ್ಯುಮನ್​ ರಿಸೋರ್ಸ್​​​ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ, ಅವರು ತಮ್ಮ ತಂದೆಯ ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಕಂಪನಿಗೆ ಕೆಲಸಕ್ಕೆ ಸೇರಿದರು. ನಂತರ, ಅವರು ಸಿಲಿಕಾನ್ ವ್ಯಾಲಿ ಮತ್ತು ಭಾರತದಲ್ಲಿ ಸ್ಟಾರ್ಟ್ಅಪ್ ಗಳಲ್ಲಿ ಒಂದು ದಶಕದ ಅನುಭವವನ್ನು ಹೊಂದಿರುವ ಸತ್ಯ ಕೋನಿಕಿ ಅವರನ್ನು ವಿವಾಹವಾದರು.


ಇದನ್ನೂ ಓದಿ: LIC Policy: ಈ ಎಲ್​ಐಸಿ ಪಾಲಿಸಿಯಲ್ಲಿ ನಿಮಗೆ ಸಿಗುತ್ತೆ 76 ಲಕ್ಷ!


ಈ ದಂಪತಿಗಳಿಗೆ ಅಡುಗೆಯಲ್ಲಿ ಎಲ್ಲಿಲ್ಲದ ಆಸಕ್ತಿ ಮತ್ತು ದಕ್ಷಿಣ ಭಾರತದ ಆಹಾರದ ಮೇಲೆಯಂತೂ ತುಂಬಾನೇ ಪ್ರೀತಿ ಅಂತ ಹೇಳಬಹುದು. ಆದ್ದರಿಂದ, ಒಂದು ದಿನ, ಅವರು ತಮ್ಮ ಜೀವನದ ನಿಜವಾದ ಕನಸನ್ನು ಬದುಕಲು ತಮ್ಮ ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬೈ ಹೇಳಿದರು.


2012 ರಲ್ಲಿ ಶುರುವಾಯ್ತಂತೆ ಈ ದೋಸಾ ಇಂಕ್..


2012 ರಲ್ಲಿ, ಇವರಿಬ್ಬರು ಗಂಡ-ಹೆಂಡತಿ ಸೇರಿಕೊಂಡು ದಕ್ಷಿಣ ಭಾರತದ ರೆಸ್ಟೋರೆಂಟ್ ದೋಸಾ ಇಂಕ್ ಅನ್ನು ಪ್ರಾರಂಭಿಸಿದರು, ಇದು ಟ್ರಕ್ ನಲ್ಲಿ ಆಹಾರವನ್ನು ಪೂರೈಸುವ ಒಂದು ವ್ಯವಹಾರವಾಗಿತ್ತು.


ಇದು ಯಾವುದೇ ಭಾರತೀಯ ಆಹಾರ ಟ್ರಕ್ ನಂತೆ ಅಲ್ಲ. ದಂಪತಿಗಳು ಟ್ರಕ್ ಮೂಲಕ ಗೇಟೆಡ್ ಸಮುದಾಯಗಳು, ವಸತಿ ಕಟ್ಟಡಗಳು ಮತ್ತು ಕಚೇರಿ ಸಂಕೀರ್ಣಗಳ ಹತ್ತಿರಕ್ಕೆ ಡ್ರೈವ್ ಮಾಡಿಕೊಂಡು ಹೋಗಿ ವಾಹನವನ್ನು ನಿಲ್ಲಿಸಿರುವ ಪ್ರದೇಶದಲ್ಲಿ ಹೋಮ್ ಡೆಲಿವರಿಯನ್ನು ಸಹ ನೀಡುತ್ತಾರೆ.




ಗ್ರಾಹಕರು ಬರಲಿ ಅಂತ ಕಾಯೋದಿಲ್ಲ, ಸ್ವತಃ ಟ್ರಕ್ ಗ್ರಾಹಕರ ಬಳಿಗೆ ಹೋಗುತ್ತದೆ..


"ಗ್ರಾಹಕರು ನಿಮ್ಮ ಬಳಿಗೆ ಬರುವವರೆಗೆ ಕಾಯುವ ಬದಲು, ನಿಮ್ಮ ಆಹಾರವನ್ನು ಅವರ ಬಳಿಗೆ ತೆಗೆದುಕೊಂಡು ಹೋಗಿ" ಎಂದು 43 ವರ್ಷ ವಯಸ್ಸಿನ ಜ್ಯೋತಿ ಅವರು ‘ದಿ ಬೆಟರ್ ಇಂಡಿಯಾ’ ಗೆ ಹೇಳುತ್ತಾರೆ.


"ಈ ಅಲಿಖಿತ ನಿಯಮವು ನಮ್ಮ ಆಹಾರ ಟ್ರಕ್ ದೋಸಾ ಇಂಕ್ ನ ವಿಶೇಷತೆಯಾಗಿದೆ. ಇದು ದೆಹಲಿ, ಗುರುಗ್ರಾಮ್ ಮತ್ತು ನೋಯ್ಡಾದಾದ್ಯಂತ ಸುಮಾರು 50,000 ಗ್ರಾಹಕರಿಗೆ ಅಧಿಕೃತ ದಕ್ಷಿಣ ಭಾರತದ ಪಾಕಪದ್ಧತಿಯನ್ನು ಪೂರೈಸುತ್ತದೆ" ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ದೇಶದಲ್ಲಿ ಆಹಾರ ವಿತರಣಾ ಅಪ್ಲಿಕೇಶನ್ ಗಳು ಶುರುವಾಗುವುದಕ್ಕೂ ಮುಂಚಿತವಾಗಿಯೇ ಈ ದಂಪತಿಗಳು ಫುಡ್ ಟ್ರಕ್ ವ್ಯವಹಾರವನ್ನು ಪ್ರಾರಂಭಿಸಿದರು.


"ಆಹಾರ ಉದ್ಯಮವನ್ನು ಪ್ರಾರಂಭಿಸುವುದು ನಮ್ಮ ಜೀವನದ ಬಹುಕಾಲದ ಕನಸಾಗಿತ್ತು. ನಾವು ರೆಸ್ಟೋರೆಂಟ್ ಪ್ರಾರಂಭಿಸಲು ಯೋಚಿಸಿದ್ದೇವೆ, ಆದರೆ ಹೂಡಿಕೆಗಳು ಮತ್ತು ಸರಿಯಾದ ಆಸ್ತಿಯನ್ನು ಆಯ್ಕೆ ಮಾಡುವುದು ಮುಂತಾದ ಹಲವಾರು ಮಿತಿಗಳಿವೆ" ಎಂದು ಸತ್ಯ ಅವರು ಹೇಳುತ್ತಾರೆ. "ಈ ರೀತಿಯ ಆಹಾರದ ಟ್ರಕ್ ಗಳು ವಿದೇಶದಲ್ಲಿ ಸಾಮಾನ್ಯವಾಗಿವೆ, ಆದರೆ ಭಾರತದಲ್ಲಿ ಇದು ಹೊಸದು. ಇಲ್ಲಿ, ಆಹಾರ ಟ್ರಕ್ ಗಳು ಒಂದು ಸ್ಥಳದಲ್ಲಿ ನಿಲ್ಲಿಸಲ್ಪಟ್ಟಿರುತ್ತವೆ ಮತ್ತು ಕಚೇರಿಗೆ ಹೋಗುವವರಂತಹ ನಿರ್ದಿಷ್ಟ ಜನಸಮೂಹಗಳ ಅಗತ್ಯತೆಯನ್ನು ಪೂರೈಸುತ್ತವೆ. ನಾವು ಅದಕ್ಕಿಂತ ಹೆಚ್ಚಿನದನ್ನು ಬಯಸಿದ್ದೇವೆ" ಎಂದು ಸತ್ಯ ಅವರು ಹೇಳುತ್ತಾರೆ.


ಫುಡ್ ಟ್ರಕ್ ವ್ಯವಹಾರ ಶುರು ಮಾಡಲು ಎಷ್ಟು ಹೂಡಿಕೆ ಮಾಡಿದ್ದಾರೆ ಗೊತ್ತೇ?


ಇದಕ್ಕೆ ಬೇಕಾದ ಎಲ್ಲಾ ಪರವಾನಗಿಗಳನ್ನು ಪಡೆದ ನಂತರ ಮತ್ತು ರಾಜ್ಯದ ಮೋಟಾರು ವಾಹನ ನಿಯಮಗಳನ್ನು ತಿಳಿದುಕೊಂಡ ನಂತರ, ಅವರು ಟ್ರಕ್ ಮತ್ತು ಅಗತ್ಯ ಅಡುಗೆ ಉಪಕರಣಗಳನ್ನು ಖರೀದಿಸಲು 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರು. ಟ್ರಕ್ ಸಹ ಪರಿಸರ ಸ್ನೇಹಿಯಾಗಿದೆ. ತಮ್ಮ ಆಹಾರ ಟ್ರಕ್ ನೊಂದಿಗೆ ಈ ದಂಪತಿಗಳು ರುಚಿಕರವಾದ ಮನೆಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳಾದ ರವೆ ದೋಸೆ, ಟೊಮೆಟೊ ಈರುಳ್ಳಿ ಉತ್ತಪ್ಪಮ್, ಮೆಧು ವಡಾ, ಫಿಲ್ಟರ್ ಕಾಪಿ ಮತ್ತು ಬೆಂಡಕಾಯ ವೆಪುಡು ಮತ್ತು ಮಲಬಾರ್ ಪರೋಟಾ ಅನ್ನು ಬಡಿಸುತ್ತಾರೆ.


1.5 ಕೋಟಿ ರೂಪಾಯಿ ಆದಾಯವನ್ನು ಗಳಿಸಲು ಸಹಾಯ ಮಾಡಿದೆ ಈ ಫುಡ್ ಟ್ರಕ್


2019 ರಲ್ಲಿ, ಅವರು ಮುರುಕ್ಕು, ಮೈಸೂರು ಪಾಕ್, ತೆಂಗಿನಕಾಯಿ ಬರ್ಫಿ ಮುಂತಾದ ತಿಂಡಿಗಳನ್ನು ಪರಿಚಯಿಸಿದರು, ಇದು ಕೋವಿಡ್ -19 ಲಾಕ್ಡೌನ್ ಸಮಯದಲ್ಲಿಯೂ ಆದಾಯವನ್ನು ಗಳಿಸಿತು. ತಿಂಡಿಗಳನ್ನು ಟ್ರಕ್ ನಲ್ಲಿ ಮಾರಾಟ ಮಾಡಲಾಗುತ್ತದೆ. ಇವರು ತುಂಬಾನೇ ಪರಿಸರ ಸ್ನೇಹಿ. ಏಕೆಂದರೆ ಆಹಾರವನ್ನು ಬಿಸಾಡಬಹುದಾದ ಎಲೆ ತಟ್ಟೆಗಳಲ್ಲಿ ಬಡಿಸಲಾಗುತ್ತದೆ, ಸಾಂಬಾರ್ ಮತ್ತು ಚಟ್ನಿಯನ್ನು ಕಾಗದದ ಕಪ್ ಗಳಲ್ಲಿ ಬಡಿಸಲಾಗುತ್ತದೆ ಮತ್ತು ಮರದ ಚಮಚಗಳನ್ನು ಬಳಸಲಾಗುತ್ತದೆ.


ಪ್ಯಾಕೇಜಿಂಗ್ ಅನ್ನು ಸಹ ಕಾಗದದ ಪೊಟ್ಟಣಗಳಲ್ಲಿ ಮಾಡಲಾಗುತ್ತದೆ. ಈ ದಂಪತಿಗಳಿಗೆ 1.5 ಕೋಟಿ ರೂಪಾಯಿ ಆದಾಯವನ್ನು ಗಳಿಸಲು ಸಹಾಯ ಮಾಡಿದೆ ಈ ಫುಡ್ ಟ್ರಕ್ ಅಂತ ಹೇಳಬಹುದು.

First published: