Gac Fruit: ಅಪರೂಪದ ಗ್ಯಾಕ್ ಹಣ್ಣನ್ನು ಬೆಳೆಸಿ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ ಕೇರಳದ ಕೃಷಿಕ

ಜೋಜೊ ಪುನ್ನಕಲ್ ಅವರಿಗೆ ಗ್ಯಾಕ್ ಹಣ್ಣಿನ ಕುರಿತು ನಿಖರ ಮಾಹಿತಿ ಅವರಲ್ಲಿಲ್ಲದಿದ್ದರೂ ಕಾರ್ಯಕ್ರಮದಲ್ಲಿ ಹಣ್ಣನ್ನು ಪರಿಚಯಿಸಿದ ವ್ಯಕ್ತಿಯಿಂದ ಅವರು ಬೀಜಗಳನ್ನು ಸಂಗ್ರಹಿಸಿದರು. ಅದುವೇ ಜೋಜೊ ಅವರ ಜೀವನವನ್ನೇ ಬದಲಾಯಿಸಿತು ಅಂತೆಯೇ ಕೃಷಿಯಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಅವರನ್ನು ಪ್ರೇರೇಪಿಸಿತು. ಕೇರಳದ ಅಂಗಮಾಲಿ ಬಳಿಯ ಅಮಲಾಪುರಂನಲ್ಲಿರುವ ಅವರ ಕೈತೋಟದಲ್ಲಿ ಗ್ಯಾಕ್ ಹೆಸರಿನ ವಿದೇಶಿ ಹಾಗೂ ಪೌಷ್ಟಿಕಾಂಶವುಳ್ಳ ಈ ಹಣ್ಣು ಹೆಸರುವಾಸಿಯಾಗಿದೆ.

ಜೋಜೊ ಪುನ್ನಕಲ್  ಅವರು ಬೆಳೆಸಿದ ಗ್ಯಾಕ್ ಹಣ್ಣು

ಜೋಜೊ ಪುನ್ನಕಲ್ ಅವರು ಬೆಳೆಸಿದ ಗ್ಯಾಕ್ ಹಣ್ಣು

  • Share this:
2018 ರಲ್ಲಿ ಕೇರಳದ ವಯಕ್ಕೋಮ್‌ನಲ್ಲಿ ಜೋಜೊ ಪುನ್ನಕಲ್ (Jojo Punnackal ), ಸಮಾಜ ಕಲ್ಯಾಣ ಸಂಸ್ಥೆಯೊಂದಕ್ಕೆ ಕಾರ್ಯಕ್ರಮವನ್ನು ನಡೆಸುತ್ತಿದ್ದಾಗ ಕಲ್ಲಂಗಡಿ ಗಾತ್ರದ ಕೆಂಬಣ್ಣದಿಂದ ಕೂಡಿದ ಕಿತ್ತಳೆ ಬಣ್ಣದ ಹೊರಭಾಗದಲ್ಲಿ ಮುಳ್ಳಿನಿಂದ ಆವೃತವಾಗಿದ್ದ ಹಣ್ಣು (Fruit) ಅವರ ಗಮನ ಸೆಳೆಯಿತು. ಈ ಹಣ್ಣಿನ ಕುರಿತು ನಿಖರ ಮಾಹಿತಿ ಅವರಲ್ಲಿಲ್ಲದಿದ್ದರೂ ಕಾರ್ಯಕ್ರಮದಲ್ಲಿ ಹಣ್ಣನ್ನು ಪರಿಚಯಿಸಿದ ವ್ಯಕ್ತಿಯಿಂದ ಅವರು ಬೀಜಗಳನ್ನು (Seeds) ಸಂಗ್ರಹಿಸಿದರು. ಅದುವೇ ಜೋಜೊ ಅವರ ಜೀವನವನ್ನೇ ಬದಲಾಯಿಸಿತು ಅಂತೆಯೇ ಕೃಷಿಯಲ್ಲಿ ಹೆಚ್ಚಿನ ಹೂಡಿಕೆ (Invest) ಮಾಡಲು ಅವರನ್ನು ಪ್ರೇರೇಪಿಸಿತು. ಕೇರಳದ (Kerala) ಅಂಗಮಾಲಿ ಬಳಿಯ ಅಮಲಾಪುರಂನಲ್ಲಿರುವ ಅವರ ಕೈತೋಟದಲ್ಲಿ ಗ್ಯಾಕ್ (Gac) ಹೆಸರಿನ ವಿದೇಶಿ ಹಾಗೂ ಪೌಷ್ಟಿಕಾಂಶವುಳ್ಳ ಈ ಹಣ್ಣು ಹೆಸರುವಾಸಿಯಾಗಿದೆ.

ವೈಜ್ಞಾನಿಕವಾಗಿ ಮೊಮೊರ್ಡಿಕಾ ಕೊಚಿನೆನ್ಸಿಸ್ ಎಂದು ಕರೆಯಲ್ಪಡುವ ಈ ಹಣ್ಣಿನ ಮೂಲ ನೆಲೆ ವಿಯೆಟ್ನಾಂ. ಆಗ್ನೇಯ ಏಷ್ಯಾದ ಬೆಚ್ಚಗಿನ ಹವಾಮಾನ ಪ್ರದೇಶಗಳಲ್ಲಿ ಹಣ್ಣು ಚೆನ್ನಾಗಿ ಬೆಳೆಯುತ್ತದೆ.

ಗ್ಯಾಕ್ ಹಣ್ಣು ಜೋಜೊನ ಅಮೂಲ್ಯ ಆಸ್ತಿಯಾದದ್ದು ಹೇಗೆ?
ಜೋಜೊ ಹೇಳುವಂತೆ ಅವರದ್ದು ಕೃಷಿ ಪ್ರಧಾನ ಕುಟುಂಬವಾಗಿದ್ದರೂ ಗ್ಯಾಕ್ ಹಣ್ಣು ಹಾಗೂ ಅದರ ಕೃಷಿಯ ಬಗ್ಗೆ ಒಲವು ತೋರಿಸುವವರೆಗೆ ಹಣ್ಣಿನ ಬಗ್ಗೆ ಉತ್ಸುಕನಾಗಿರಲಿಲ್ಲ. ನಮ್ಮ ಕೃಷಿ ಭೂಮಿಯಲ್ಲಿ ರಬ್ಬರ್, ತೆಂಗು, ಅಡಿಕೆ ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತೇವೆ, ಆದರೆ ಗ್ಯಾಕ್ ಹಣ್ಣಿನ ಕೃಷಿ ನನ್ನ ಅಮೂಲ್ಯ ಆಸ್ತಿಯಾಗಿದೆ ಎಂಬುದು ಅವರ ಮಾತಾಗಿದೆ.ಇಂದು, ಅವರು ತಮ್ಮ ಮನೆಯ ತಾರಸಿ, ಮನೆಯ ಮುಂಭಾಗದ ಅಂಗಳ ಮತ್ತು ಅವರ ಮನೆಯ ಸುತ್ತಲಿನ 60 ಸೆಂಟ್ಸ್ ಜಮೀನಿನಲ್ಲಿ 30 ಕ್ಕೂ ಹೆಚ್ಚು ಗ್ಯಾಕ್ ಹಣ್ಣಿನ ಗಿಡಗಳನ್ನು ಬೆಳೆಸುತ್ತಿದ್ದು, ವಿದೇಶಿ ಸಸ್ಯದ ಬೀಜಗಳನ್ನು ಮಾರಾಟ ಮಾಡುತ್ತಾರೆ ಮತ್ತು ವರ್ಷಕ್ಕೆ ಸುಮಾರು 2 ಲಕ್ಷ ರೂ ಆದಾಯ ಗಳಿಸುತ್ತಿದ್ದಾರೆ.

ಸ್ವರ್ಗದ ಹಣ್ಣಿನ ಕೃಷಿ ಹೇಗೆ?
2018 ರಲ್ಲಿ ಜೋಜೊ, ಗ್ಯಾಕ್ ಹಣ್ಣಿನ ಬೀಜಗಳನ್ನು ಮೊದಲು ನೆಟ್ಟಾಗ, ಅದರ ರುಚಿ ಹಾಗೂ ಪೌಷ್ಟಿಕಾಂಶಗಳ ಮಾಹಿತಿ ಅವರಿಗಿರಲಿಲ್ಲ ಎಂದು ಸ್ವತಃ ಜೊಜೊ ಹೇಳಿದ್ದಾರೆ. ಆಗಸ್ಟ್‌ನಲ್ಲಿ 2018 ರ ಪ್ರವಾಹದ ನಂತರವೇ ನನ್ನ ಮನೆಯಲ್ಲಿ ಇರಿಸಲಾಗಿದ್ದ ಬೀಜಗಳು ಒಂದು ಅಥವಾ ಎರಡು ದಿನಗಳವರೆಗೆ ನೀರಿನ ಅಡಿಯಲ್ಲಿಯೇ ಇದ್ದವು, ಈ ಸಮಯದಲ್ಲಿ ಅವರ ಕೃಷಿ ಭೂಮಿ ಕೂಡ ಹಾನಿಯಾಗಿತ್ತು.

ವಿಪತ್ತಿನ ನಂತರ ಬೀಜಗಳು ಅವರ ಕಣ್ಣಿಗೆ ಬಿದ್ದವು. ಕೆಲವು ದಿನಗಳವರೆಗೆ ಸಸ್ಯಗಳು ನೀರಿನಲ್ಲಿಯೇ ಇದ್ದುದರಿಂದ ಅವುಗಳನ್ನು ನೇರವಾಗಿ ನೆಟ್ಟರು. ಸಸ್ಯ ಹೇಗೆ ಹೊರಹೊಮ್ಮಬಹುದು ಎಂಬ ಕುತೂಹಲ ಜೊಜೊ ಅವರಿಗಿತ್ತು ಎಂಬುದಾಗಿ ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ. ಕೆಲವು ದಿನಗಳ ನಂತರ ಈ ಹಣ್ಣು ಪ್ಯಾಶನ್ ಹಣ್ಣಿನಂತೆ ಬೆಳೆಯುತ್ತದೆ ಎಂಬುದನ್ನು ಜೊಜೊ ಕಂಡುಕೊಂಡರು. ಮೂರರಿಂದ ನಾಲ್ಕು ತಿಂಗಳುಗಳಲ್ಲಿ ಸಸ್ಯವು ಹೂಬಿಡಲು ಆರಂಭಿಸಿತು ಈ ಸಮಯದಲ್ಲಿ ಜೊಜೊ ಗ್ಯಾಕ್ ಹಣ್ಣಿನ ಕುರಿತು ಅಧ್ಯಯನ ನಡೆಸಲಾರಂಭಿಸಿದರು.

ಇದನ್ನೂ ಓದಿ:  Starbucks: ಕಾಫಿ ದೈತ್ಯ ಸ್ಟಾರ್‌ಬಕ್ಸ್‌ನ ನೂತನ ಸಿಇಒ ಆಗಿ ಭಾರತೀಯನ ಆಯ್ಕೆ! ನಿಜಕ್ಕೂ ಇದು ನಾವು ಹೆಮ್ಮೆ ಪಡುವ ವಿಚಾರ

ವಿಯೆಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್, ಮ್ಯಾನ್ಮಾರ್, ಲಾವೋಸ್, ದಕ್ಷಿಣ ಚೀನಾ ಮತ್ತು ಈಶಾನ್ಯ ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಇದನ್ನು ವ್ಯಾಪಕವಾಗಿ ಬೆಳೆಸಲಾಗುತ್ತದೆ ಎಂಬುದನ್ನು ಜೊಜೊ ಕಂಡುಕೊಂಡರು. ಹಣ್ಣಿನ ಪೌಷ್ಟಿಕ ಗುಣಮಟ್ಟ ಹಾಗೂ ವಿದೇಶಗಳಲ್ಲಿ ಹಣ್ಣಿಗಿರುವ ಮಾರುಕಟ್ಟೆಯನ್ನು ಅರಿತು ಜೊಜೊ ನಿಜಕ್ಕೂ ಅಚ್ಚರಿಪಟ್ಟರು.

ಗ್ಯಾಕ್ ಹಣ್ಣು ಪೌಷ್ಟಿಕಾಂಶತೆಗೆ ಹೆಸರುವಾಸಿ
ಚೈನೀಸ್ ಕಹಿ ಸೌತೆಕಾಯಿ ಅಥವಾ ಸ್ಪೈನಿ ಸೋರೆಕಾಯಿ ಎಂದೂ ಕರೆಯಲ್ಪಡುವ ಈ ಹಣ್ಣುಗಳನ್ನು ಅವುಗಳ ಪೌಷ್ಟಿಕಾಂಶದ ಪ್ರಯೋಜನಗಳಿಂದಾಗಿ 'ಸ್ವರ್ಗದ ಹಣ್ಣುಗಳು' ಎಂದು ಪರಿಗಣಿಸಲಾಗುತ್ತದೆ. ಹಣ್ಣುಗಳು ಮಾತ್ರವಲ್ಲದೆ, ಈ ಸಸ್ಯದ ಬೀಜಗಳು ಮತ್ತು ಎಲೆಗಳು ಸಹ ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ.ಚರ್ಮ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ, ಹೃದಯದ ಆರೋಗ್ಯ, ಉತ್ತಮ ಚರ್ಮ ಮತ್ತು ಮುಂತಾದವುಗಳನ್ನು ಹೆಚ್ಚಿಸಲು ಹಣ್ಣನ್ನು ವ್ಯಾಪಕವಾಗಿ ಸೇವಿಸಲಾಗುತ್ತದೆ. ವಾಸ್ತವವಾಗಿ, ಹೆಚ್ಚಿನ ಆರೋಗ್ಯ ಪ್ರಯೋಜನಗಳು ಮತ್ತು ಗುಣಗಳಿಂದಾಗಿ ಈ ಹಣ್ಣುಗಳನ್ನು - ಸ್ವರ್ಗದ ಹಣ್ಣು, ಎಂದು ಕರೆಯುತ್ತಾರೆ ಎಂಬುದು ಜೊಜೊ ಮಾತಾಗಿದೆ.

ಗ್ಯಾಕ್ ಹಣ್ಣಿನಲ್ಲಿರುವ ಜಿಯಾಕ್ಸಾಂಥಿನ್ ಅಂಶವು ಕಣ್ಣಿನ ಅಂಗಾಂಶಗಳನ್ನು ಯುವಿ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಕಣ್ಣಿನ ಅಂಗಾಂಶಗಳ ಆ್ಯಕ್ಸಿಡೀಕರಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತೋರಿಸುತ್ತದೆ.

ಗ್ಯಾಕ್ ಹಣ್ಣಿನ ಸಾಮರ್ಥ್ಯವೇನು? ಎಷ್ಟು ಲಾಭ ಗಳಿಸಬಹುದು?
ಹಣ್ಣಿನ ವಿಶೇಷತೆ ಹಾಗೂ ಸಾಮರ್ಥ್ಯವನ್ನರಿತಕೊಂಡ ಜೊಜೊ, ಕೃಷಿಯನ್ನು ಇನ್ನಷ್ಟು ವಿಸ್ತರಿಸುವ ಆತ್ವವಿಶ್ವಾಸವನ್ನು ಪಡೆದುಕೊಂಡರು. ಹಣ್ಣುಗಳನ್ನು ಮಾರಾಟ ಮಾಡುವ ಬದಲಿಗೆ ಬೀಜಗಳನ್ನು ಜೊಜೊ ಸಂರಕ್ಷಿಸಿದರು ಹಾಗೂ ಕೃಷಿಯನ್ನು ವಿಸ್ತರಿಸಿದರು. 2021 ರಲ್ಲಿ ರಬ್ಬರ್ ಮರವಿದ್ದ 60 ಸೆಂಟ್ಸ್ ಕೃಷಿಭೂಮಿಯಲ್ಲಿ ಜೊಜೊ ಗ್ಯಾಕ್ ಹಣ್ಣಿನ ಕೃಷಿ ಮಾಡಿದರು. ಪ್ರಸ್ತುತ ಇವರ ಬಳಿ 30 ಸಸ್ಯಗಳಿದ್ದು ಪ್ರತಿ ಸಸ್ಯವು ಪ್ರತಿ ಋತುವಿಗೆ 40-50 ಹಣ್ಣುಗಳನ್ನು ನೀಡುತ್ತದೆ ಎಂಬುದು ಜೊಜೊ ಮಾತಾಗಿದೆ.ಮಾರುಕಟ್ಟೆಯಲ್ಲಿ 1 ಕೆಜಿ ಗ್ಯಾಕ್ ಹಣ್ಣಿನ ಬೆಲೆ ರೂ 900 ರಿಂದ ರೂ 1,200 ರವರೆಗೆ ಇದೆ, ಅದಾಗ್ಯೂ ಹಣ್ಣುಗಳನ್ನು ವಾಣಿಜ್ಯಿಕವಾಗಿ ಮಾರಾಟ ಮಾಡಲು ಇವರು ಬಯಸಲಿಲ್ಲ. ಕೃಷಿ ವಿಸ್ತರಣೆಗಾಗಿ ಬೀಜಗಳ ಸಂರಕ್ಷಣೆ ಮತ್ತು ಬೀಜಗಳ ಮಾರಾಟದ ಕಡೆಗೆ ಜೊಜೊ ಹೆಚ್ಚು ಗಮನ ನೀಡಿದರು. ಜೊಜೊ ಗ್ಯಾಕ್ ಹಣ್ಣಿನ ಬೀಜಗಳ ಪ್ಯಾಕೆಟ್ ಅನ್ನು ರೂ 300 ಕ್ಕೆ ಮಾರುತ್ತಿದ್ದಾರೆ. ಒಂದು ಪ್ಯಾಕೆಟ್‌ನಲ್ಲಿ ಆರು ಬೀಜಗಳಿದ್ದು ಇದರಲ್ಲಿ ಗಂಡು ಹೆಣ್ಣು ಬೀಜ ಪ್ರಕಾರಗಳಿರುತ್ತವೆ. ಇವುಗಳು ಅರಳಿದಾಗ ಮಾತ್ರವೇ ಪ್ರಕಾರವನ್ನು ತಿಳಿಯಲಾಗುತ್ತದೆ ಎಂಬುದು ಜೊಜೊ ಮಾತಾಗಿದೆ.

ಇದನ್ನೂ ಓದಿ:  Business: ಕಾರ್ಪೊರೇಟ್ ಉದ್ಯೋಗಕ್ಕಿಂತ ಈ ಉದ್ಯಮವೇ ಬೆಸ್ಟ್; MBA ಪದವಿ ಪಡೆದು ಆಹಾರೋದ್ಯಮದಲ್ಲಿ ಯಶಸ್ಸು ಕಂಡವರಿವರು

ಜೊಜೊ ಬೀಜಗಳನ್ನು ಮಾರಿ ತಿಂಗಳಿಗೆ ಸುಮಾರು ರೂ 15,000 ಆದಾಯ ಗಳಿಸುತ್ತಿದ್ದು ವರ್ಷಕ್ಕೆ ಸರಾಸರಿ ರೂ 2 ಲಕ್ಷ ಆದಾಯ ಇವರ ಕೈ ಸೇರುತ್ತಿದೆ. ಇವರಿಂದ ಗ್ಯಾಕ್ ಹಣ್ಣಿನ ಬೀಜ ಖರೀದಿಸಿದ ಹಲವಾರು ಗ್ರಾಹಕರಲ್ಲಿ ಕಣ್ಣೂರಿನ ರಮೇಶನ್ ಕೂಡ ಒಬ್ಬರಾಗಿದ್ದು, ಬೀಜ ಖರೀದಿಸಿದ ಮೂರು ತಿಂಗಳೊಳಗೆ ಹೂಬಿಟ್ಟಿದ್ದು ಇದುವರೆಗೆ ಸುಮಾರು 200 ಹಣ್ಣುಗಳನ್ನು ನೀಡಿವೆ ಎಂದು ಹೇಳಿದ್ದಾರೆ.

ಗ್ಯಾಕ್ ಹಣ್ಣಿನ ಕೃಷಿಗೆ ಭೂಮಿ ಹಾಗೂ ವಾತಾವರಣ ಹೇಗಿರಬೇಕು?
ಜೊಜೊ ಹೇಳುವಂತೆ ಈ ಹಣ್ಣಿಗೆ ಉತ್ತಮ ಸೂರ್ಯನ ಬೆಳಕು ಹಾಗೂ ಶುಷ್ಕ ವಾತಾವರಣದ ಅಗತ್ಯವಿದ್ದು ನೀರಾವರಿ ಚೆನ್ನಾಗಿರುವಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಇನ್ನು ಹಣ್ಣುಗಳ ಕೃಷಿ ಮಾಡುವಾಗ ಪರಾಗ ಸ್ಪರ್ಶಕ್ಕಾಗಿ ಗಂಡು ಹಾಗೂ ಹೆಣ್ಣು ಸಸ್ಯಗಳೆರಡನ್ನೂ ಬೆಳೆಸುವುದು ಅಗತ್ಯ ಎಂದು ಜೊಜೊ ಅಭಿಪ್ರಾಯವಾಗಿದೆ.

ಪರಾಗಸ್ಪರ್ಶವು ಸ್ವಾಭಾವಿಕವಾಗಿ ಸಂಭವಿಸಬಹುದಾದರೂ, ಹೂವುಗಳನ್ನು ಹಸ್ತಚಾಲಿತವಾಗಿ ಪರಾಗಸ್ಪರ್ಶ ಮಾಡುವುದು ಉತ್ತಮ, ಏಕೆಂದರೆ ಇದರಿಂದ 90% ದಷ್ಟು ಯಶಸ್ವಿ ಫಲಿತಾಂಶಗಳು ದೊರೆಯುವುದು ಖಂಡಿತ ಎಂಬುದು ಜೊಜೊ ಮಾತಾಗಿದೆ.ನೈಸರ್ಗಿಕ ಪರಾಗಸ್ಪರ್ಶವು ಕೇವಲ 40% ದಷ್ಟು ಮಾತ್ರ ಯಶಸ್ಸನ್ನು ನೀಡುತ್ತದೆ. ಐದು ಹೆಣ್ಣು ಸಸ್ಯಗಳಿಗೆ ಒಂದು ಗಂಡು ಸಸ್ಯವು ಪರಿಪೂರ್ಣ ಅನುಪಾತವಾಗಿದೆ ಎಂದು ಹೇಳುವ ಜೊಜೊ, ಸಸ್ಯಗಳಿಗೆ ಹಸುವಿನ ಸೆಗಣಿ ಪುಡಿಯಂತಹ ಸಾವಯವ ಗೊಬ್ಬರಗಳನ್ನು ಮಾತ್ರ ಬಳಸುತ್ತಾರೆ ಎಂದು ತಿಳಿಸಿದ್ದಾರೆ.

ಗ್ಯಾಕ್ ಹಣ್ಣಿನ ರುಚಿ ಹೇಗಿದೆ?
ಹಣ್ಣು ಸಿಹಿ ರುಚಿಯನ್ನು ಹೊಂದಿಲ್ಲ ಅಂತೆಯೇ ನಿರ್ದಿಷ್ಟ ರುಚಿಯನ್ನು ಒಳಗೊಂಡಿಲ್ಲ. ಸಕ್ಕರೆ ಇಲ್ಲವೇ ಜೇನುತುಪ್ಪವನ್ನು ಬಳಸಿ ಹಣ್ಣನ್ನು ಸೇವಿಸಬಹುದು. ಇನ್ನು ಜೋಜೊ ಹೇಳುವಂತೆ ಹಣ್ಣು ಮಾಗಿದ ನಂತರ ಜ್ಯೂಸ್ ಮಾಡಬಹುದಾಗಿದ್ದು ಇತರ ಹಣ್ಣನ್ನೂ ಸೇರಿಸಬಹುದು.

ಈ ಹಣ್ಣನ್ನು ಮುಖ್ಯವಾಗಿ ಔಷಧೀಯ ಪ್ರಯೋಜನಗಳಿಗಾಗಿ ಬಳಸಲಾಗುತ್ತದೆ, ಹಾಗಾಗಿ ಇದನ್ನು ಆಹಾರ ಮತ್ತು ಪಾನೀಯ ರೂಪಗಳಲ್ಲಿ ಸೇರಿಸಿ ಸೇವಿಸಬಹುದು. ಕಾಯಿಯಿಂದ ಬೇರೆ ಬೇರೆ ಖಾದ್ಯಗಳನ್ನು ಮಾಡಬಹುದಾಗಿದ್ದು ಸ್ವಲ್ಪ ಕಹಿ ರುಚಿಯನ್ನು ಹೊಂದಿರುತ್ತದೆ ಎಂಬುದು ಜೋಜೊ ಮಾತಾಗಿದೆ.

ಇದನ್ನೂ ಓದಿ: Dream Job: ಜನರೊಂದಿಗೆ ಒಡನಾಟ ಮಾಡೋದೇ ಇವರ ಕೆಲಸ ಅಂತೆ! ಅದರಲ್ಲೇ ನಡೆಯತ್ತೆ ಸಂಪಾದನೆ

ಭಾರತದಲ್ಲಿರುವವರಿಗೆ ಈ ಹಣ್ಣಿನ ಶಕ್ತಿಯ ಬಗ್ಗೆ ತಿಳಿದಿಲ್ಲ ಎಂದು ಹೇಳುವ ಜೋಜೊ, ಬೇಸಾಯ ಮಾಡಲು ಆಸಕ್ತಿ ಇರುವವರಿಗೆ ಮಾತ್ರ ಜೋಜೊ ಬೀಜಗಳನ್ನು ಮಾರಾಟ ಮಾಡುತ್ತಾರೆ. ಇಲ್ಲಿಯವರೆಗೆ ಜೋಜೊ, 3,000 ಕ್ಕೂ ಹೆಚ್ಚು ಜನರಿಗೆ ಬೀಜಗಳನ್ನು ವಿತರಿಸಿದ್ದು ಅವರಲ್ಲಿ ಸುಮಾರು 300 ಜನರು ಈಗಾಗಲೇ ಹಣ್ಣುಗಳ ಕೊಯ್ಲು ಪ್ರಾರಂಭಿಸಿದ್ದಾರೆ.
Published by:Ashwini Prabhu
First published: