Jio Recharge App ಡೌನ್​ಲೌಡ್​ ಮಾಡಿ, ಮನೆಯಲ್ಲೇ ಕೂತು ಸಿಂಪಲ್ಲಾಗಿ ಜೇಬು ತುಂಬಿಸಿಕೊಳ್ಳಿ!

ಮಗೆ ಇನ್ವೆಸ್ಟ್ (Invest)​  ಮಾಡದೇ ಏನಾದರು ಬ್ಯುಸಿನೆಸ್​ ಮಾಡ್ಬೇಕು ಅಂದುಕೊಂಡಿದ್ದೀರಾ? ಅದು ಮನೆಯಲ್ಲೇ ಕೂತು ರೀ (Work From Home).  ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೋನಾ (Corona) ಬಂದಾಗಿನಿಂದಲೂ ಯಾವ ಬ್ಯುಸಿನೆಸ್ (Business) ​ಗಳು ಕೂಡ ಹೆಚ್ಚಾಗಿ ಲಾಭ (Profit) ಕಂಡಿಲ್ಲ. ಸೋತು ಸುಣ್ಣವಾಗಿ ಅದೆಷ್ಟೋ ಬ್ಯುಸಿನೆಸ್​ ಮಾಡುತ್ತಿದ್ದವರು ಮನೆ ಸೇರಿಕೊಂಡಿದ್ದಾರೆ. ಕೆಲವರು ಹೊಸ ಹೊಸ ವ್ಯಾಪಾರ ತೆರೆದು ಕೈ ಸುಟ್ಟುಕೊಂಡಿದ್ದಾರೆ. ಯಾವ ರೀತಿಯ ಬ್ಯುಸಿನೆಸ್​ ಮಾಡಿದರೆ ಒಳಿತು ಎಂಬುದನ್ನು ತಿಳಿಯದೇ ಹಲವರು ಅಖಾಡಕ್ಕೆ ಇಳಿಯುತ್ತಿದ್ದಾರೆ. ಇದರಿಂದ ಸಕ್ಸಸ್​ ರೇಟ್ (Success Rate) ​ಗಿಂತ ಫೇಲ್ಯೂರ್​ ರೇಟ್ (Failure Rate)​ ಹೆಚ್ಚಿದೆ. ಒಂದು ಉದ್ಯೋಮ ಆರಂಭ ಮಾಡುವ ಮುನ್ನ ಸಾವಿರ ಕಡೆಯಿಂದಲೂ ಯೋಚಿಸಿರಬೇಕು. ಎಷ್ಟು ಹೂಡಿಕೆ ಮಾಡುತ್ತಿದ್ದೇವೆ, ಈ ಹಣದಿಂದ ಎಷ್ಟು ಲಾಭ ಗಳಿಸಬಹುದು ಎಂಬುಂದರ ಬಗ್ಗೆ ಅರಿವಿರಬೇಕು. ನಿಮಗೆ ಇನ್ವೆಸ್ಟ್ (Invest)​  ಮಾಡದೇ ಏನಾದರು ಬ್ಯುಸಿನೆಸ್​ ಮಾಡ್ಬೇಕು ಅಂದುಕೊಂಡಿದ್ದೀರಾ? ಅದು ಮನೆಯಲ್ಲೇ ಕೂತು ರೀ (Work From Home).  ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಜಿಯೋ ರೀಚಾರ್ಜ್​ ಆ್ಯಪ್​ ಇದ್ಯಾ?

ಇದು ಆ್ಯಂಡ್ರಾಯ್ಡ್​​, ಆ್ಯಪಲ್ ಯುಗ. ಕೈಯಲ್ಲಿ ಫೋನ್​ ಇಲ್ಲ ಅಂದರೆ ಮರ್ಯಾದೆನೇ ಕೊಡುವುದಿಲ್ಲ ಅನ್ನುವ ಮಟ್ಟಕ್ಕೆ ನಮ್ಮ ಜನ ಬಂದುಬಿಟ್ಟಿದ್ದಾರೆ.  ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ರೀಚಾರ್ಜ್​ ಹೆಚ್ಚಾಗ್ತಿದೆ. ಭಾರತದಲ್ಲಿ ಮೂರು ಪ್ರಮುಖ ಟೆಲಿಕಾಂ ಕಂಪನಿಗಳು ಆನ್‌ಲೈನ್‌ನಲ್ಲಿ ರೀಚಾರ್ಜ್ (Recharge) ಮಾಡಲು ಬಳಕೆದಾರರಿಗೆ ಅನುಮತಿ ನೀಡಿವೆ. ರಿಲಯನ್ಸ್ ಜಿಯೋ ತನ್ನ JioPOS Lite ಅಪ್ಲಿಕೇಶನ್ ಮೂಲಕ ಹಣ ಗಳಿಸಲು ತನ್ನ ಬಳಕೆದಾರರಿಗೆ ಅವಕಾಶ ನೀಡಿದೆ. ಈ ಆ್ಯಪ್​ ಒಂದು ಇದ್ದರೆ ಸಾಕು ಮನೆಯಲ್ಲೇ ಕುಳಿತು ನೀವು ಹಣ ಗಳಿಸಬಹುದು.

JioPOS Lite ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತೆ?

ಹೆಚ್ಚು ರೀಚಾರ್ಜ್ ಮಾಡಿದಷ್ಟು ಹೆಚ್ಚು ಹಣ ಗಳಿಸ್ಬಹುದು. JioPOS Lite ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಹೇಗೆ ಹಣ ಗಳಿಸಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ಮೊದಲಿಗೆ ಗೂಗಲ್​ ಪ್ಲೇ ಸ್ಟೋರ್​ನಲ್ಲಿ  JioPOS Lite ಅಪ್ಲಿಕೇಷನ್​ ಡೌನ್​ಲೌಡ್ ಮಾಡಬೇಕು. ಗ್ರಾಹಕರು ಜಿಯೋ ಪಾಲುದಾರರಾಗಲು ಮತ್ತು ಪ್ರಿಪೇಯ್ಡ್ ರೀಚಾರ್ಜ್‌ಗಳನ್ನು ಮಾಡಲು ಅನುಮತಿ ಪಡೆಯಬೇಕು. ಗ್ರಾಹಕರಿಗೆ ಇದರಿಂದ ಕಮಿಷನ್  ಸಿಗುತ್ತದೆ.  ನೀವು MyJio ಅಪ್ಲಿಕೇಶನ್ ಅಥವಾ ಜಿಯೋ ವೆಬ್‌ಸೈಟ್ ಮೂಲಕ ಇತರ ಜಿಯೋ ಸಂಖ್ಯೆಗಳನ್ನು ರೀಚಾರ್ಜ್ ಮಾಡಬಹುದು.

ಇದನ್ನೂ ಓದಿ:ಇಷ್ಟು ದಿನ ಒಂದು ರೂಲ್ಸ್, ಜುಲೈ 1ರಿಂದ ಇನ್ನೊಂದು ರೂಲ್ಸ್​! ಡೆಬಿಟ್​-ಕ್ರೆಡಿಟ್​ ಕಾರ್ಡ್​ ಬಳಸುವವರೇ ಇತ್ತ ನೋಡಿ

ರೀಚಾರ್ಜ್ ಮಾಡಿ ಕಮಿಷನ್ ತಗೋಳಿ!

JioPOS Lite ಅಪ್ಲಿಕೇಶನ್ ರೀಚಾರ್ಜಿಂಗ್ ಪಾಲುದಾರರಿಗೆ 4.16 ಪ್ರತಿಶತ ಕಮಿಷನ್ ನೀಡುತ್ತಿದೆ. ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ನೀವು ಬೇರೆಯವರ ಜಿಯೋ ನಂಬರಿಗೆ ನಿಮ್ಮ ಆ್ಯಪ್​ ಮೂಲಕ ರೀಚಾರ್ಜ್ ಮಾಡಬಹುದು.  JioPOS Lite ಅಪ್ಲಿಕೇಶನ್‌ನಲ್ಲಿ ಜಿಯೋ ಪಾಲುದಾರರಾಗಿ ಹೆಸರು ನೋಂದಾಯಿಸಲು ಮೊದಲು ನಿಮ್ಮ ಬಳಿ ಜಿಯೋ ನಂಬರ್​ ಇರುವುದು ಕಡ್ಡಾಯ.

ನೋಂದಣಿ ಪ್ರಕ್ರಿಯೆ ಹೇಗೆ?

- ಮೊದಲು ನಿಮ್ಮ Android ಸ್ಮಾರ್ಟ್‌ಫೋನ್‌ನಲ್ಲಿ JioPOS Lite ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

- ನಂತರ ಅಪ್ಲಿಕೇಶನ್ ನಲ್ಲಿ ನಿಮ್ಮ ಹೆಸರು, ಸ್ಥಳ ನಮೂದಿಸಿ ಎಲ್ಲವನ್ನು ಅನುಮತಿಸಿ ಮೇಲೆ ಕ್ಲಿಕ್ ಮಾಡಿ.

- ನಂತರ ಸೈನ್​ ಅಪ್​ ಕ್ಲಿಕ್ ಮಾಡಿ

ಇದನ್ನೂ ಓದಿ: ಮೀನು ಸಾಕಾಣಿಕೆಗೆ ಸರ್ಕಾರನೇ ದುಡ್ಡು ಕೊಡುತ್ತೆ! ಅರ್ಜಿ ಸಲ್ಲಿಸೋದು ಹೇಗೆ ಅಂತ ಹುಡುಕ್ತಿದ್ದೀರಾ? ಹೀಗ್​ ಮಾಡಿ

- ನಿಮ್ಮ ಇಮೇಲ್ ಮತ್ತು ಜಿಯೋ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು

- ಜನರೇಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ, ಒಟಿಪಿ ನಮೂದಿಸಬೇಕು

- ನಂತರ ನಿಮ್ಮ ಬ್ಯಾಂಕ್​ ವಿವರಗಳನ್ನು ಫಿಲ್​ ಮಾಡಿ

- ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು  ಲೋಡ್ ಮನಿಗೆ ಒಪ್ಪಿಗೆ ನೀಡಬೇಕು

-ಇದರ ನಂತರ ನೀವು ಬೇರೆಯವರ ನಂಬರ್ ರಿಚಾರ್ಜ್ ಮಾಡಲು ಸಾಧ್ಯ.

- ಆಗ ನಿಮ್ಮ ಖಾತೆಯಲ್ಲಿರುವ ಹಣ ಕಟ್ ಆಗಿ, ಕಮಿಷನ್ ನಿಮ್ಮ ಖಾತೆಗೆ ಬರುತ್ತದೆ.
Published by:Vasudeva M
First published: