ಮೊದಲ ಮೊಬಿಲಿಟಿ ಕೇಂದ್ರ ಆರಂಭಿಸಿದ Jio-bp

ಈ ಮೊಬಿಲಿಟಿ ಕೇಂದ್ರ ಬಹು ಇಂಧನ ಆಯ್ಕೆ, ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್, ಉಪಹಾರಗಳು ಕೇಂದ್ರ ಸೇರಿದಂತೆ ಗ್ರಾಹಕರಿಗೆ ಹಲವಾರು ಸೇವೆಗಳನ್ನು ಇದು ಒದಗಿಸಲಿದೆ

Jio-bp first Mobility Station

Jio-bp first Mobility Station

 • Share this:
  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮತ್ತು bp ಯ ಇಂಧನ ಮತ್ತು ಮೊಬಲಿಟಿ ಸೇರಿ ರಿಲಯನ್ಸ್ BP ಮೊಬಿಲಿಟಿ ಲಿಮಿಟೆಡ್ (RBML) ಜಂಟಿ ಉದ್ಯಮ ಆರಂಭಿಸಿದೆ. ನವಿ ಮುಂಬೈನ ನವ್ಡೆಯಲ್ಲಿ ಇಂದು ಮೊದಲ Jio-bp ಬ್ರಾಂಡ್ ಮೊಬಿಲಿಟಿ ಸ್ಟೇಷನ್ ಅನ್ನು ಪ್ರಾರಂಭ ಮಾಡಲಾಗಿದೆ. ಕಳೆದ ಜುಲೈನಲ್ಲಿ RIL ಮತ್ತು BP ಜಂಟಿಯಾಗಿ RBML ಸ್ಥಾಪಿಸಿದೆ. ಇದರ ಅಡಿ Jio-BP ಬ್ರ್ಯಾಂಡ್ ಇಂಧನ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಜಿಯೋ-ಬಿಪಿ ಗ್ರಾಹಕರಿಗೆ ಬಹು ಇಂಧನ ಆಯ್ಕೆಗಳನ್ನು ನೀಡುವ ವಿಶ್ವ ದರ್ಜೆಯ ಮೊಬಿಲಿಟಿ ಸ್ಟೇಷನ್‌ಗಳ ನೆಟ್‌ವರ್ಕ್ ಅನ್ನು ನೀಡುತ್ತಿದೆ. ಸದ್ಯ ಅಸ್ತಿತ್ವದಲ್ಲಿರುವ 1400 ಇಂಧನ ಪಂಪ್‌ಗಳ ನೆಟ್‌ವರ್ಕ್ ಅನ್ನು Jio-bp ಎಂದು ಮರುಬ್ರಾಂಡ್ ಮಾಡಲಾಗುವುದು, ಮುಂಬರುವ ತಿಂಗಳುಗಳಲ್ಲಿ ಹೊಸ ಶ್ರೇಣಿಯ ಗ್ರಾಹಕ ಮೌಲ್ಯದ ಪ್ರಸ್ತಾಪಗಳನ್ನು ಪ್ರಸ್ತುತ ಪಡಿಸಲಿದೆ.

  ಸಂಯೋಜಿತ ಇಂಧನಗಳು (additivised fuel), ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್, ಉಪಹಾರಗಳು ಮತ್ತು ವಿಶ್ರಾಂತಿ ಕೇಂದ್ರ ಸೇರಿದಂತೆ ಗ್ರಾಹಕರಿಗೆ ಹಲವಾರು ಸೇವೆಗಳನ್ನು ಇದು ಒದಗಿಸಲಿದೆ. ಭವಿಷ್ಯದಲ್ಲಿ ಇಂಗಾಲದ ಪರಿಣಾಮಗಳನ್ನು ಕಡಿಮೆ ಮಾಡಲು ಯೋಜಿಸಲಾಗಿದೆ

  ಮೊಬಿಲಿಟಿ ಕೇಂದ್ರದ ವಿಶೇಷತೆಗಳು

  • ವಿಶ್ವ ದರ್ಜೆಯ ಚಿಲ್ಲರೆ ವ್ಯಾಪಾರದ ಅನುಭವವನ್ನು ಒದಗಿಸುವಾಗ ಬಹು ಇಂಧನ ಆಯ್ಕೆಗಳು
  • ಭಾರತದಲ್ಲಿ ಮೊದಲ ಬಾರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೆಟ್‌ವರ್ಕ್‌ನಾದ್ಯಂತ ಸಂಯೋಜಿತ ಇಂಧನ
  • ದೇಶಾದ್ಯಂತ EV ಚಾರ್ಜಿಂಗ್ ಮೂಲಸೌಕರ್ಯ
  • ಅಂತರಾಷ್ಟ್ರೀಯ ಆನ್-ದಿ-ಮೂವ್ ಬ್ರ್ಯಾಂಡ್, ವೈಲ್ಡ್ ಬೀನ್ ಕೆಫೆ
  • ಕ್ಯಾಸ್ಟ್ರೋಲ್ ಎಕ್ಸ್‌ಪ್ರೆಸ್ ಆಯಿಲ್ ಚೇಂಜ್‌ನಲ್ಲಿ ದ್ವಿ ಚಕ್ರ ವಾಹನಗಳಿಗೆ ಉಚಿತ, ತ್ವರಿತ ಮತ್ತು ವಿಶ್ವಾಸಾರ್ಹ ತೈಲ ಬದಲಾವಣೆ ಸೇವೆ

  ಯಾವುದೇ ಹೆಚ್ಚುವರಿ ಹಣವಿಲ್ಲ
  ಸಾಮಾನ್ಯ ಇಂಧನಗಳ ಬದಲಿಗೆ, ದೇಶಾದ್ಯಂತ ಜಿಯೋ-ಬಿಪಿ ಮೊಬಿಲಿಟಿ ಸ್ಟೇಷನ್‌ಗಳು ಹೆಚ್ಚು ವೆಚ್ಚವಿಲ್ಲದ ಸಂಯೋಜಿತ ಇಂಧನವನ್ನು ನೀಡಲಿದೆ. ಈ ಇಂಧನಗಳು ಅಂತರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಿದ 'ACTIVE' ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ, ಇದು ಇಂಜಿನ್​ಗಳನ್ನು ಸ್ವಚ್ಛವಾಗಿಡಲು ನಿರ್ಣಾಯಕ ಎಂಜಿನ್ ಭಾಗಗಳ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸುತ್ತದೆ.  ಇವಿ ಚಾರ್ಚಿಂಗ್​ ಸ್ಟೇಷನ್​
  Jio-bp ಎಲೆಕ್ಟ್ರಾನಿಕ್​ ಚಾರ್ಜಿಂಗ್​ ಸ್ಟೇಷನ್​ ಮತ್ತು ಬ್ಯಾಟರಿ ಬದಲಾವಣೆ ಕೇಂದ್ರವನ್ನು ಈ ಮೊಬಿಲಿಟಿ ಕೇಂದ್ರದಲ್ಲಿ ಸ್ಥಾಪಿಸಲಿದೆ.  ವಿಶ್ರಾಂತಿ ಕೇಂದ್ರ
  ಈ ಮೊಬಿಲಿಟಿ ಕೇಂದ್ರದಲ್ಲಿ ವೈಲ್ಡ್ ಬೀನ್ ಕೆಫೆ ಸೇವೆ ಕೂಡ ಲಭ್ಯವಿದೆ. ಇದರಿಂದಾಗಿ ಕೇಂದ್ರಕ್ಕೆ ಬರುವ ಗ್ರಾಹಕರು ವಿಶ್ರಾಂತಿ ಪಡೆಯಬಹುದಾಗಿದೆ. ಜೊತೆಗೆ ಇಲ್ಲಿ ರುಚಿಕರ ತಿನಿಸುಗಳನ್ನು ಸವಿಯಬಹುದಾಗಿದೆ. ರಿಲಯನ್ಸ್​ ರಿಟೇಲ್​ ಇದರ ಪಾಲುದಾರಿಕೆ ಹೊಂದಿದ್ದು, ಈ ಶಾಪ್​ 24x7 ಗ್ರಾಹಕರ ಸೇವೆಗೆ ಲಭ್ಯವಿದೆ.  ಇಂಧನ ಬದಲಾವಣೆಗೂ ಅವಕಾಶ
  Jio-bp ಕ್ಯಾಸ್ಟ್ರಲ್ ಸಹಭಾಗಿತ್ವವನ್ನು ಹೊಂದಿದ್ದು, ಮೊಬಿಲಿಟಿ ಕೇಂದ್ರದಲ್ಲಿ ವೃತ್ತಿಪರವಾಗಿ ತರಬೇತಿ ಪಡೆದ ತಜ್ಞರ ಮೂಲಕ ಉಚಿತ ವಾಹನ ಆರೋಗ್ಯ ತಪಾಸಣೆ ಮತ್ತು ಉಚಿತ ತೈಲ ಬದಲಾವಣೆ ಸೇವೆಗಳನ್ನು ಒದಗಿಸುತ್ತಾರೆ. ಜೊತೆಗೆ ಎಕ್ಸ್‌ಪ್ರೆಸ್ ಆಯಿಲ್ ಚೇಂಜ್ ಔಟ್‌ಲೆಟ್‌ನಲ್ಲಿ ಕ್ಯಾಸ್ಟ್ರೋಲ್ ಲೂಬ್ರಿಕಂಟ್ ಖರೀದಿಸುವ ಪ್ರತಿಯೊಬ್ಬ ದ್ವಿ ಚಕ್ರ ವಾಹನ ಗ್ರಾಹಕರು ಯಾವುದೇ ವೆಚ್ಚವಿಲ್ಲದೆ ತೈಲ ಬದಲಾವಣೆ ಸೇವೆಯನ್ನು ಪಡೆಯ ಬಹುದಾಗಿದೆ.

  ಈ ಕೆಂದ್ರದಲ್ಲಿ ಉತ್ತಮ ಬೆಲೆ, ತ್ವರಿತ ರಿಯಾಯಿತಿಗಳು, ಹ್ಯಾಪಿ ಅವರ್ ಸ್ಕೀಮ್‌ಗಳು ಸೇರಿದಂತೆ ಹಲವು ಸೇವೆಗಳು ನೆಟ್‌ವರ್ಕ್‌ನಾದ್ಯಂತ ಮತ್ತು ಏಕರೂಪದ ಡಿಜಿಟಲ್ ಪಾವತಿಯ ಅನುಷ್ಠಾನದಂತಹ ಹೊಸ ಮೌಲ್ಯಗಳು ಕೂಡ ಹೊಂದಿರಲಿದೆ.
  Published by:Seema R
  First published: