Jharkhand Petrol Subsidy: ಜಾರ್ಖಂಡ್ ನಲ್ಲಿ ಪೆಟ್ರೋಲ್ ಬೆಲೆ ₹ 25 ಇಳಿಕೆ; ಈ ಯೋಜನೆ ಲಾಭ ಪಡೆಯೋದು ಹೇಗೆ?

ಈ ಸಬ್ಸಿಡಿ ಯೋಜನೆಯ ವ್ಯಾಪ್ತಿಗೆ ಬರುವ ಜನರು ಮೊದಲು ನೋಂದಾಯಿಸಿಕೊಳ್ಳಬೇಕು. ಜನರ ನೋಂದಣಿಗಾಗಿ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ (Jarkhand CM Hemant Soren) ಹೊಸ ಆ್ಯಪ್ ‘CMSUPPORTS’ ಬಿಡುಗಡೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Jharkhand Petrol Subsidy Scheme: ಜಾರ್ಖಂಡ್ ಸರ್ಕಾರ (Jarkhand Govt) ಜನವರಿ 26 ರಿಂದ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಮೇಲೆ ಸಬ್ಸಿಡಿ (Petrol Subsidy) ನೀಡಲಿದೆ. ಯೋಜನೆ ಆರಂಭಕ್ಕೂ ಮುನ್ನ ಸರ್ಕಾರ ಅಗತ್ಯ ಸಿದ್ಧತೆಯಲ್ಲಿ ತೊಡಗಿದೆ. ಈ ಯೋಜನೆಯ ಲಾಭ ಪಡೆಯಲು ಜನರು ಮೊದಲು ಕೆಲವು ಪ್ರಮುಖ ಕೆಲಸಗಳನ್ನು ಮಾಡಬೇಕು. ಈ ಸಬ್ಸಿಡಿ ಯೋಜನೆಯ ವ್ಯಾಪ್ತಿಗೆ ಬರುವ ಜನರು ಮೊದಲು ನೋಂದಾಯಿಸಿಕೊಳ್ಳಬೇಕು. ಜನರ ನೋಂದಣಿಗಾಗಿ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ (Jarkhand CM Hemant Soren) ಹೊಸ ಆ್ಯಪ್ ‘CMSUPPORTS’ ಬಿಡುಗಡೆ ಮಾಡಿದ್ದಾರೆ.  ಜಾರ್ಖಂಡ್‌ನ ಪಡಿತರ ಚೀಟಿ ಹೊಂದಿರುವವರು ಯೋಜನೆಯ ಲಾಭ ಪಡೆಯಲು ಈ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.

ಅಧಿಕೃತ ವೆಬ್‌ಸೈಟ್ http://jsfss.jharkhand.gov.in ಗೆ ಭೇಟಿ ನೀಡುವ ಮೂಲಕವೂ ನಿಮ್ಮ ಹೆಸರನ್ನು ನೋಂದಣಿ ಮಾಡಬಹುದು. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಥವಾ ಜಾರ್ಖಂಡ್ ರಾಜ್ಯ ಆಹಾರ ಭದ್ರತಾ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿರುವ ಪಡಿತರ ಚೀಟಿದಾರರಿಗೆ ಪೆಟ್ರೋಲ್ ಸಬ್ಸಿಡಿ ಯೋಜನೆಯ ಪ್ರಯೋಜನವು ಲಭ್ಯವಿರುತ್ತದೆ.

ರಾಜ್ಯ ಸರ್ಕಾರದ ಈ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಇದರಿಂದಾಗಿ ಬಡ ಜನತೆಗೆ ದುಬಾರಿ ಪೆಟ್ರೋಲ್‌ನಿಂದ ದೊಡ್ಡ ಪರಿಹಾರ ಸಿಗುವ ನಿರೀಕ್ಷೆ ಇದೆ.

ಇದನ್ನೂ ಓದಿ:  Crude Oil Price Hike: ಮತ್ತೆ ಪಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಧ್ಯತೆ: ಇದು 7 ವರ್ಷಗಳಲ್ಲಿ ಅತ್ಯಧಿಕ!

ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ

ಯೋಜನೆಯಡಿ ಅರ್ಹ ಜನರು ಪೆಟ್ರೋಲ್ ಮೇಲೆ ಲೀಟರ್‌ಗೆ 25 ರೂ ಸಬ್ಸಿಡಿ ಪಡೆಯುತ್ತಾರೆ. ಈ ಸಬ್ಸಿಡಿ ತಿಂಗಳಿಗೆ 10 ಲೀಟರ್ ಪೆಟ್ರೋಲ್ ಗೆ ಮಾತ್ರ ಲಭ್ಯವಿರುತ್ತದೆ. ಜಾರ್ಖಂಡ್‌ನ ದ್ವಿಚಕ್ರ ವಾಹನ ಬಳಕೆದಾರರಿಗೆ ಪ್ರತಿ ತಿಂಗಳು ಪೆಟ್ರೋಲ್ ಮೇಲೆ 250 ರೂ.ವರೆಗೆ ಸಬ್ಸಿಡಿ ದೊರೆಯಲಿದೆ. ಈ ಹಣವನ್ನು ಸರ್ಕಾರವು ಡಿಬಿಟಿ ಮೂಲಕ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ.

ಯಾರಿಗೆಲ್ಲ ಈ ಯೋಜನೆಯ ಲಾಭ ಸಿಗುತ್ತೆ?

ಎಲ್ಲರಿಗೂ ಈ ಯೋಜನೆಯ ಲಾಭ ಸಿಗುವುದಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಥವಾ ಜಾರ್ಖಂಡ್ ರಾಜ್ಯ ಆಹಾರ ಭದ್ರತಾ ಯೋಜನೆಯ ಪಡಿತರ ಚೀಟಿ ಹೊಂದಿರುವವರು ಮಾತ್ರ ಪ್ರಯೋಜನ ಪಡೆಯುತ್ತಾರೆ.

ಪಡಿತರ ಚೀಟಿಯಲ್ಲಿ ಕುಟುಂಬದ ಎಲ್ಲ ಸದಸ್ಯರ ಆಧಾರ್ ಸಂಖ್ಯೆಯನ್ನು ನಮೂದಿಸುವುದು ಸಹ ಅಗತ್ಯವಾಗಿದೆ. ಜಾರ್ಖಂಡ್‌ನಲ್ಲಿ ನೋಂದಣಿಯಾಗಿರುವ ದ್ವಿಚಕ್ರ ವಾಹನಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತದೆ.

ಇದನ್ನೂ ಓದಿ:  Online Fraud: ನಿಮಗೆ ಗೊತ್ತಿಲ್ಲದೇ ಖಾತೆಯಲ್ಲಿ ಹಣ ಡ್ರಾ ಆಯ್ತಾ? ಹೀಗೆ ಮಾಡಿದ್ರೆ 72 ಗಂಟೆಯಲ್ಲಿ ನಿಮ್ಮ ದುಡ್ಡು ಸಿಗುತ್ತೆ!

ಸಬ್ಸಿಡಿ ಹಣ ವಾಹನ ಮಾಲೀಕರ ಖಾತೆಗೆ ಸೇರುತ್ತದೆ. ಇದಕ್ಕಾಗಿ ಮಾನ್ಯವಾದ ಚಾಲನಾ ಪರವಾನಗಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಚುನಾವಣೆ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಧ್ಯತೆ!

ಪಿಟಿಐ ಸುದ್ದಿ ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯ ತೈಲ ಕಂಪನಿಯ ಮೇಲೆ ಯೆಮೆನ್‌ನ ಯಹೂದಿ ಬಂಡುಕೋರರು ದಾಳಿ ನಡೆಸಿದ್ದರಿಂದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದೇ ವೇಳೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಕಚ್ಚಾ ತೈಲದ ಬೆಲೆಯನ್ನು ಹೆಚ್ಚಿಸಲು ಪೂರಕವಾಗುತ್ತಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಈ ರೀತಿ ತ್ವರಿತ ಏರಿಕೆಯಾದರೆ, ದೇಶೀಯ ಮಟ್ಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಬಹುದು ಎಂದು ತಜ್ಞರು ಊಹಿಸಿದ್ದಾರೆ. ಕಚ್ಚಾ ತೈಲ ಬೆಲೆ 90 ಡಾಲರ್‌ಗೆ ತಲುಪಿದರೆ, ದೇಶೀಯ ಇಂಧನ ಬೆಲೆಗಳು ಲೀಟರ್‌ಗೆ 2 ರಿಂದ 3 ರೂ.ಗಳಷ್ಟು ಹೆಚ್ಚಾಗಬಹುದು.

ಬೆಲೆ ಏರಿಕೆಗೆ ವಿಧಾನಸಭಾ ಚುನಾವಣೆ ಅಡ್ಡಿ!

ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ದೇಶದ 5 ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ಘೋಷಣೆ ಆಗಿರುವ ಹಿನ್ನೆಲೆ ತೈಲ ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರ ತಡೆಯಬಹುದಾಗಿದೆ. ಈ ಹಿನ್ನೆಲೆ ಕೆಲ ದಿನಗಳವರೆಗೆ ಜನಸಾಮನ್ಯರು ಬೆಲೆ ಏರಿಕೆಯಿಂದ ತಪ್ಪಿಸಕೊಳ್ಳಬಹುದಾಗಿದೆ. ವಿಧಾನಸಭಾ ಚುನಾವಣೆ ನಂತರ ಬೆಲೆ ಏರಿಕೆ ಮಾಡುವ ಸಾಧ್ಯತೆಗಳೇ ಎಂದು ಹೆಚ್ಚು ಹೇಳಲಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ದಾಟಿದೆ, ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಲೆ ಏರಿಕೆ ನಿಂತಿದೆ. ಕಳೆದ 74 ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಮಂಗಳವಾರ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 100.58 ರೂ ಮತ್ತು ಡೀಸೆಲ್ ಬೆಲೆ 85.01 ರೂ.ಗೆ ಮಾರಾಟವಾಗುತ್ತಿದೆ.
Published by:Mahmadrafik K
First published: