Jet Airways: ಏಪ್ರಿಲ್ 17, 2019 ರಂದು ಕೊನೆಯ ಬಾರಿಗೆ ವಿಮಾನ ಹಾರಾಟ ನಡೆಸಿದ್ದ ಸಂಸ್ಥೆಯ ವಿಮಾನ ಮತ್ತೆ ಹಾರಲಿದೆ!

ನಾಗರಿಕ ವಿಮಾನಯಾನ ನಿರ್ದೇಶನಾಲಯ ಕೈಗೊಂಡ ಈ ಮಹತ್ವದ ನಿರ್ಧಾರದಿಂದ ವಾಣಿಜ್ಯ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಗಾಳಿ ಬೀಸುವ ಸಾಧ್ಯತೆಗಳು ತೆರೆದುಕೊಂಡಿವೆ ಎಂಬ ವಿಶ್ಲೇಷಣೆ ಕೇಳಿಬಂದಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜೆಟ್ ಏರ್‌ವೇಸ್‌ ವಿಮಾನಯಾನ ಸಂಸ್ಥೆಗೆ (Jet Airways) ಏರ್ ಆಪರೇಟರ್ ಪ್ರಮಾಣಪತ್ರ (AOC) ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (Civil Aviation) ಮುಖ್ಯಸ್ಥರು ಶುಕ್ರವಾರ ಮಾಹಿತಿ ನೀಡಿದ್ದಾರೆ. ಈ ಅನುಮತಿಯ ಮೂಲಕ ಜೆಟ್ ಏರ್​ಲೈನ್ಸ್ ಸಂಸ್ಥೆಗೆ ವಾಣಿಜ್ಯ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ಸಿಕ್ಕಂತಾಗಿದೆ. ಹೀಗಾಗಿ ಇನ್ನುಮುಂದೆ ಭಾರತದಲ್ಲಿ ತನ್ನ ನಿಗದಿತ ವಾಣಿಜ್ಯ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಜೆಟ್ ಏರ್​ವೆಸ್ ಯೋಜನೆಗಳನ್ನು ರೂಪಿಸಬಹುದಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ಕೈಗೊಂಡ ಈ ಮಹತ್ವದ ನಿರ್ಧಾರದಿಂದ (Air Operator Certificate) ವಾಣಿಜ್ಯ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಗಾಳಿ ಬೀಸುವ ಸಾಧ್ಯತೆಗಳು ತೆರೆದುಕೊಂಡಿವೆ ಎಂಬ ವಿಶ್ಲೇಷಣೆ ಕೇಳಿಬಂದಿವೆ.

  2022ರ ಮುಂದಿನ ತ್ರೈಮಾಸಿಕದಲ್ಲಿ ಅಂದರೆ ಜುಲೈನಿಂದ ಸೆಪ್ಟೆಂಬರ್ ತಿಂಗಳ ಒಳಗೆ ವಾಣಿಜ್ಯ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಉದ್ದೇಶಿಸಿದೆ ಎಂದು ವಿಮಾನಯಾನ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ.

  ಏಪ್ರಿಲ್ 17, 2019 ರಂದು ಕೊನೆಯ ಬಾರಿಗೆ ಹಾರಾಟ!
  ಜೆಟ್ ಏರ್‌ಲೈನ್ ನರೇಶ್ ಗೋಯಲ್ ಒಡೆತನದಲ್ಲಿದೆ.  ಏಪ್ರಿಲ್ 17, 2019 ರಂದು ತನ್ನ ಕೊನೆಯ ಹಾರಾಟವನ್ನು ನಡೆಸಿತ್ತು. ಜಲನ್-ಕಾಲ್‌ರಾಕ್ ಒಕ್ಕೂಟವು ಪ್ರಸ್ತುತ ಜೆಟ್ ಏರ್‌ವೇಸ್‌ ವಿಮಾನಯಾನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವಾಣಿಜ್ಯ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಲು ಜೆಟ್ ಏರ್​ಲೈನ್ ಸಂಸ್ಥೆ ​​ಉದ್ದೇಶಿಸಿದೆ.

  DGCA ಅಧಿಕಾರಿಗಳೊಂದಿಗೆ ವಿಮಾನಯಾನ ಸಂಸ್ಥೆಯು ಮೇ 15 ಮತ್ತು 17 ರಂದು ಐದು ಸಾಬೀತಾದ ವಿಮಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.

  ಜೆಟ್ ಏರ್‌ವೇಸ್‌ ಏನಂತ ಪ್ರತಿಕ್ರಿಯಿಸಿದೆ?
  ಯಶಸ್ಸಿನ ಕುರಿತು ಪ್ರತಿಕ್ರಿಯಿಸಿದ ಜೆಟ್​ ಏರ್​ವೇಸ್​ಗೆ ಸಂಬಂಧಿಸಿದ ಜಲನ್-ಕಾಲ್ರಾಕ್ ಒಕ್ಕೂಟದ ಪ್ರಮುಖ ಸದಸ್ಯ ಮುರಾರಿ ಲಾಲ್ ಜಲನ್, “ಇಂದು ಕೇವಲ ಜೆಟ್ ಏರ್‌ವೇಸ್‌ಗೆ ಮಾತ್ರವಲ್ಲದೆ ಭಾರತೀಯ ವಾಯುಯಾನ ಉದ್ಯಮಕ್ಕೂ ಹೊಸ ಉದಯವನ್ನು ಸೂಚಿಸುತ್ತದೆ. ನಾವು ಈಗ ಭಾರತದ ಅತ್ಯಂತ ಪ್ರೀತಿಯ ವಿಮಾನಯಾನವನ್ನು ಮತ್ತೆ ಆಕಾಶದಲ್ಲಿ ಹಾರಿಸುವ ಮೂಲಕ ಇತಿಹಾಸವನ್ನು ರಚಿಸುವ ಉತ್ಸಾಹದಲ್ಲಿದ್ದೇವೆ. ನಾವು ಬ್ರ್ಯಾಂಡ್ ಜೆಟ್ ಏರ್‌ವೇಸ್‌ನಿಂದ ಉತ್ತಮ ನಿರೀಕ್ಷೆಗಳಿಗೆ ತಕ್ಕಂತೆ ಜೀವಿಸುತ್ತೇವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

  ಇದನ್ನೂ ಓದಿ: RBI: ಕೇಂದ್ರ ಸರ್ಕಾರಕ್ಕೆ 30,307 ಕೋಟಿ ನೀಡಲಿದೆ ರಿಸರ್ವ್ ಬ್ಯಾಂಕ್! ಏನು ಕಾರಣ?

  ಭಾರತೀಯ ವಾಯುಯಾನ ಮತ್ತು ಭಾರತೀಯ ವ್ಯವಹಾರದಲ್ಲಿ ಇದನ್ನು ಅಸಾಮಾನ್ಯ ಯಶಸ್ಸಿನ ಕಥೆಯನ್ನಾಗಿ ರೂಪಿಸಲು ನಾವು ಬದ್ಧರಾಗಿದ್ದೇವೆ. ವಿಮಾನಯಾನ ಸಂಸ್ಥೆಯನ್ನು ಪುನರುಜ್ಜೀವನಗೊಳಿಸುವ ನಮ್ಮ ಪ್ರಯತ್ನಗಳ ಪ್ರತಿ ಹಂತದಲ್ಲೂ ನಮಗೆ ಬೆಂಬಲ ನೀಡಿದ NCLT, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು DGCA ಗೆ ನಾವು ಕೃತಜ್ಞರಾಗಿರುತ್ತೇವೆ” ಎಂದು ಧನ್ಯವಾದ ಅರ್ಪಿಸಿದ್ದಾರೆ.

  ಸಂಸ್ಥೆಯ ಬಳಿ ಎಷ್ಟು ವಿಮಾನಗಳಿವೆ?
  ಜೆಟ್ ಏರ್‌ವೇಸ್ ಪ್ರಸ್ತುತ ಒಂಬತ್ತು ವಿಮಾನಗಳ ಸಮೂಹವನ್ನು ಹೊಂದಿದೆ. ಇವುಗಳ ಪೈಕಿ ಐದು ಬೋಯಿಂಗ್ 777 ಮತ್ತು ನಾಲ್ಕು ಬೋಯಿಂಗ್ 737 ವಿಮಾನಗಳಾಗಿವೆ. ಜುಲೈ-ಸೆಪ್ಟೆಂಬರ್‌ನಿಂದ ಆಯ್ದ ವಿಮಾನಗಳನ್ನು ನಿರ್ವಹಿಸಲು ಏರ್‌ಲೈನ್ ನೋಡುತ್ತಿದೆ.  2022-23 ರಲ್ಲಿ ಪ್ರಾರಂಭವಾಗುವ ದೀರ್ಘ ಪ್ರಯಾಣದ ಮಾರ್ಗಗಳಿಗೆ ಸುಗಮ ಬದಲಾವಣೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆಯನ್ನು ಕ್ರಮೇಣ ಹೆಚ್ಚಿಸುತ್ತಿದೆ ಎಂದು ಹಿರಿಯ ಏರ್‌ಲೈನ್ ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ.

  ಇದನ್ನೂ ಓದಿ: Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

  ಜೆಟ್ ಏರ್‌ವೇಸ್ ಜುಲೈ-ಸೆಪ್ಟೆಂಬರ್‌ನಿಂದ ದೆಹಲಿ ಮತ್ತು ಮುಂಬೈ ನಡುವೆ ದೈನಂದಿನ ವಿಮಾನಯಾನವನ್ನು ಪ್ರಾರಂಭಿಸಬಹುದು. ಬೆಂಗಳೂರಿಗೆ ಐದು ಮತ್ತು ಚೆನ್ನೈಗೆ ಮೂರು ವಾರಕ್ಕೊಂದು ವಿಮಾನಗಳನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ. ಇದರ ನಂತರ, ವಿಮಾನಯಾನ ಸಂಸ್ಥೆಯು ಹೈದರಾಬಾದ್ ಮತ್ತು ಜೈಪುರಕ್ಕೂ ವಾರಕ್ಕೆ ಮೂರು ವಿಮಾನಗಳನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  Published by:guruganesh bhat
  First published: