• Home
  • »
  • News
  • »
  • business
  • »
  • Jeff Bezos Loss: ನೋಡನೋಡುತ್ತಿದ್ದಂತೆ ಕರಗಿಹೋಯ್ತು 1.56 ಲಕ್ಷ ಕೋಟಿ! ಜೆಫ್ ಬೆಜೋಸ್​ಗೆ ಶಾಕ್

Jeff Bezos Loss: ನೋಡನೋಡುತ್ತಿದ್ದಂತೆ ಕರಗಿಹೋಯ್ತು 1.56 ಲಕ್ಷ ಕೋಟಿ! ಜೆಫ್ ಬೆಜೋಸ್​ಗೆ ಶಾಕ್

ಜೆಫ್ ಬೆಜೋಸ್

ಜೆಫ್ ಬೆಜೋಸ್

ಎಲೋನ್ ಮಸ್ಕ್ ನಂತರ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ 58 ವರ್ಷದ ಬೆಜೋಸ್ ಈ ವರ್ಷದ ಮೂರನೇ ಅತಿ ದೊಡ್ಡ ಸಂಪತ್ತು ಕಳೆದುಕೊಂಡವರಾಗಿದ್ದಾರೆ.

  • Share this:

ಅಮೆಜಾನ್ ಸಂಸ್ಥಾಪಕ ಮತ್ತು ಅಧ್ಯಕ್ಷ ಜೆಫ್ ಬೆಜೋಸ್ (Jeff Bezos) ಅವರು ಸುಮಾರು $20 ಬಿಲಿಯನ್ ಅಥವಾ ಭಾರತೀಯ ರೂಪಾಯಿ ಲೆಕ್ಕದಲ್ಲಿ 1.56 ಲಕ್ಷ ಕೋಟಿ ರೂಪಾಯಿ ಹಣವನ್ನು ಕೆಲವೇ ಕೆಲವು ಗಂಟೆಗಳಲ್ಲಿ ಕಳೆದುಕೊಂಡಿದ್ದಾರೆ. ಇತ್ತೀಚಿಗೆ ಅಮೆಜಾನ್ ಕಂಪನಿಯ ಷೇರುಗಳು (Amazon Stocks) ಕಳೆದ ಎಂಟು ವರ್ಷಗಳಲ್ಲಿಯೇ ಕಳಪೆ ಸಾಧನೆ ಮಾಡುತ್ತಿದ್ದು ಇದರಿಂದ ಜೆಫ್ ಬೆಜೋಸ್ ಲಾಸ್ (Jeff Bezos Loss) ಅನುಭವಿಸುವಂತಾಗಿದೆ. ಅಮೆಜಾನ್ ಕಂಪನಿಯು ತನ್ನ ಮೊದಲ ತ್ರೈಮಾಸಿಕ ನಷ್ಟವನ್ನು ಘೋಷಿಸಿದ ನಂತರ ಮತ್ತು 21 ವರ್ಷಗಳಲ್ಲಿ ಮೊದಲ ಬಾರಿಗೆ ಮಾರಾಟದ ಬೆಳವಣಿಗೆಯನ್ನು ನಿಧಾನಗೊಂಡಿದೆ. ಈ ಎಲ್ಲದರ ಪರಿಣಾಮವಾಗಿ ಅಮೆಜಾನ್ ಷೇರುಗಳು ಶುಕ್ರವಾರ ಮಧ್ಯಾಹ್ನ 12.6 ಶೇಕಡಾ ಕಡಿಮೆಯಾಗಿ $2,527.64 ಕ್ಕೆ ತಲುಪಿವೆ.


ಬೆಜೋಸ್ ಕಂಪನಿಯಲ್ಲಿ 11.1 ಪ್ರತಿಶತ ಪಾಲನ್ನು ಹೊಂದಿದ್ದಾರೆ. ಅವರ ಸಂಪತ್ತಿನ ಬಹುಪಾಲು ಅಮೆಜಾನ್ ಷೇರುಗಳನ್ನು ಒಳಗೊಂಡಿದೆ. ಅಂದರೆ ಅಮೆಜಾನ್ ಷೇರುಗಳು ಕುಸಿದಂತೆ ಬಿಲಿಯನೇರ್ ಜೆಫ್ ಬೆಜೋಸ್ ಹಣವೂ ಹಂತ ಹಂತವಾಗಿ ಕುಸಿತ ಕಂಡಿದೆ. ಅವರು ಭಾರೀ ನಷ್ಟ ಅನುಭವಿಸುವಂತಾಗಿದೆ.


ನಷ್ಟ ಅನುಭವಿಸುತ್ತಿದೆ ದೈತ್ಯ ಕಂಪನಿ
ಪ್ರಮುಖ ಇ-ಕಾಮರ್ಸ್ ಕಂಪನಿಯಾದ ಅಮೆಜಾನ್​ನ ವ್ಯವಹಾರವು ಉತ್ತರ ಅಮೆರಿಕಾದಲ್ಲಿ $ 1.57 ಶತಕೋಟಿಯ ಕಾರ್ಯನಿರ್ವಹಣೆಯ ನಷ್ಟವನ್ನು ವರದಿ ಮಾಡಿದೆ. ಸಾಂಕ್ರಾಮಿಕ ಕೊವಿಡ್ 19 ಹೆಚ್ಚಿದ ನಂತರ ಮಾರಾಟವು ಕುಸಿತಗೊಂಡಿದೆ. ಇದರಿಂದ ಅಮೆಜಾನ್ ಕಂಪನಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ $ 1.28 ಶತಕೋಟಿ ನಷ್ಟವಾಗಿದೆ.


ಗುರುವಾರದ ಮಾರುಕಟ್ಟೆಯ ಕೊನೆಯಲ್ಲಿ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಬೆಜೋಸ್ ಸುಮಾರು $169 ಶತಕೋಟಿ ಮೌಲ್ಯವನ್ನು ಹೊಂದಿದ್ದರು.


ಇದನ್ನೂ ಓದಿ: Future Of Internet: ಭವಿಷ್ಯದ ಅಂತರ್ಜಾಲಕ್ಕಾಗಿ 60 ದೇಶಗಳು ಸಹಿ, ಭಾರತ ಸಹಿ ಹಾಕಿಲ್ಲ ಏಕೆ?


ಆದರೆ ದುದೃಷ್ಟವಷಾತ್ ಅಮೆಜಾನ್ ಷೇರುಗಳು ಶುಕ್ರವಾರ ಮಧ್ಯಾಹ್ನ 12.6 ಶೇಕಡಾ ಕಡಿಮೆಯಾಗಿ $2,527.64 ಕ್ಕೆ ತಲುಪಿವೆ. ಇದರಿಂದ ಅಮೆಜಾನ್ ಸಂಸ್ಥಾಪಕ ಮತ್ತು ಅಧ್ಯಕ್ಷ ಜೆಫ್ ಬೆಜೋಸ್ ಅವರು ಸುಮಾರು $20 ಬಿಲಿಯನ್ ಅಥವಾ ಭಾರತೀಯ ರೂಪಾಯಿ ಲೆಕ್ಕದಲ್ಲಿ 1.56 ಲಕ್ಷ ಕೋಟಿ ರೂಪಾಯಿ ಹಣವನ್ನು ಕೆಲವೇ ಕೆಲವು ಗಂಟೆಗಳಲ್ಲಿ ಕಳೆದುಕೊಂಡಿದ್ದಾರೆ.


ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿ
ಎಲೋನ್ ಮಸ್ಕ್ ನಂತರ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ 58 ವರ್ಷದ ಬೆಜೋಸ್ ಈ ವರ್ಷದ ಮೂರನೇ ಅತಿ ದೊಡ್ಡ ಸಂಪತ್ತು ಕಳೆದುಕೊಂಡವರಾಗಿದ್ದಾರೆ. ಜನವರಿ 1 ರಿಂದ ಅವರ ಸಂಪತ್ತು ಸುಮಾರು $44 ಬಿಲಿಯನ್ ಕುಸಿದಿದೆ.


ಕಾರ್ಮಿಕ ವೆಚ್ಚ ಹೆಚ್ಚಿದೆ
ಸಾಂಕ್ರಾಮಿಕ ಸಮಯದಲ್ಲಿ ನೇಮಕಾತಿ ಬಿಂಜ್ ಮತ್ತು ಮಾರಾಟವನ್ನು ತಡೆಹಿಡಿಯುವ ಹಣದುಬ್ಬರದ ಉಲ್ಬಣದ ನಂತರ ಅಮೆಜಾನ್ ಹೆಚ್ಚಿನ ಕಾರ್ಮಿಕ ವೆಚ್ಚಗಳೊಂದಿಗೆ ಹೋರಾಡುತ್ತಿದೆ.


ಅಮೆಜಾನ್ ಕಂಪನಿಯು ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಳೆದ ವರ್ಷದ ಇದೇ ಅವಧಿಯಲ್ಲಿ $8.1 ಶತಕೋಟಿಯ ಲಾಭದೊಂದಿಗೆ ಹೋಲಿಸಿದರ  $3.8 ಶತಕೋಟಿ ನಿವ್ವಳ ನಷ್ಟವನ್ನು ದಾಖಲಿಸಿದೆ.


ಇದನ್ನೂ ಓದಿ: PM Kisan: ಸರ್ಕಾರಕ್ಕೇ ಟೋಪಿ ಹಾಕಿ ಡಬಲ್ ಧಮಾಕಾ! ಇನ್ಮೇಲೆ ಈ ಆಟ ನಡೆಯಲ್ಲ!


Amazon.com Inc. ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಬೆಜೋಸ್, ಸೆಪ್ಟೆಂಬರ್ 19, 2019 ರಂದು ಅಮೆರಿಕ ವಾಷಿಂಗ್ಟನ್ ಡಿಸಿಯಲ್ಲಿರುವ  ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಲಾಸ್ ಆಗುವ ಒಂದು ದಿನದ ಮುನ್ನವಷ್ಟೇ ಅಮೆಜಾನ್ ಬಗ್ಗೆ ತಮ್ಮ ಯೋಚನೆಗಳನ್ನು ಹಂಚಿಕೊಂಡಿದ್ದರು.  Amazon ಭವಿಷ್ಯದಲ್ಲಿ ಕೈಗೊಳ್ಳಲಿರುವ ಸಮರ್ಥನೀಯ ಪ್ರಯತ್ನಗಳ ಕುರಿತು ಅವರು ಮನದಾಳ ತೆರೆದಿಟ್ಟಿದ್ದರು. ಆದೆ ಅದರ ಮರುದಿನವೇ ಅವರಿಗೆ ಭಾರಿ ಶಾಕ್ ಬಂದೊದಗಿದೆ.

Published by:ಗುರುಗಣೇಶ ಡಬ್ಗುಳಿ
First published: